Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೃದಯ ಪುಷ್ಪ!

ಅದೊಂದು....ಪರಿಮಳವಿಲ್ಲದ
ಹೃದಯ ಪುಷ್ಪ!
ಅದರ ಕಣ್ಣು ಕಂಡೇ ಇಲ್ಲ
ಯಾವುದೇ ಬಾಷ್ಪ!!

- ಮಲ್ಲಿಭಾಗವತ್ ಗುಡಿಬಂಡೆ

05 Jan 2017, 12:31 am

ಮೊದಲ ನೋಟ

ನಿನ್ನ ಕಂಡು ನಾನು
ಕಾಣಿಸದ ಭಾವನೆ ಮೂಡಿದೆ ಇನ್ನು
ತಿಳಿಸಬೇಕು ಇನ್ನು ಅದನು
ಕೇಳದೆ ಹೋಗುವೆ ಏನು
ನಾನೆಲ್ಲಿ ದೂರಲಿ ಇನ್ನು
ಬೇಗ ಬಾ ಬೇಗ ಬಾ ನೀನು
-ಸಾಗರ್

- sagar chamali

04 Jan 2017, 11:48 pm

ನಿನ್ನಂದ

ಅವಳೊಂದು ಮುತ್ತು, ರತ್ನ,
ವೈಡೂರ್ಯಗಳುಳ್ಳ ತಿಜೋರಿ
ಅದರ ಕೀಲಿ ಕೈ ಮದುವೆ
ಆದ ಮೇಲೆ ತಾನೆ ನನ್ನ ಕೈಲಿ

- gbp

04 Jan 2017, 11:01 pm

ಕತ್ತಲೇ

ಕತ್ತಲೇ....ನಿನ್ ನೋಡಿದ್ರೆ.ಭಯವೇಕೆ.....
ನಿನ್ನಿಂದತಾನೇ .....ಬೆಳಕಿನ ಬೆಲೆ ಗೋತಾಗುವದು......
ಕತ್ತಲೇ... ನಿನ್ನ ಮನಸ್ಸಲ್ಲಿ ಏನಿದೆ ಯಂಬುದು ತಿಳಿದಿಕೊಳ್ಳುವ ಆತುರ ನಂಗಿದೆ.......

- Ajay

04 Jan 2017, 11:00 pm

ಓ ಗೆಳಯ

ಬೆದರಿದೆ ಓ ಗೆಳೆಯ ಆ ನಿನ್ನ ಪ್ರಿತಿಯ ಹುಚ್ಚಿಗೆ...
ಬಿಡಿಸಲಾರದ ಒಗಟಾಗಿಯೆ ಹೊದೆ ನೀ ಕೊನೆಗೆ...
ಕೆಳಬೆಕೆಂದೆ ನೀ ಸಾವಿರ ಪ್ರಶ್ನೆಗಳ ಸಾಲು ನನಗೆ...
ನಿಡಲಾಗದೆ ಆ ಉತ್ತರಗಳ ಮೌನ ತಾಳಿದೆ ನಾ ಕೋನೆಗೆ....
ಪ್ರತಿ ಕ್ಷಣವು ದಾರೆ ಎರೆಯುವ ಆ ನಿನ್ನ ಪ್ರಿತಿಯ ಬಲೆಗೆ...
ಸಿಕ್ಕರು ಸಿಕ್ಕದಿಂದಂತೆ ಒದ್ದಾಡಿದೆ ನಾ ಅದು ನಿನಗೆ ತಿಳಿಯದೆ.....

ರೂಪಾ.
ಬಾವನೆಗಳಿಗೆ ನಿಡಿದೆ ಬರವಣಿಗೆಯ ರೂಪ

- Roopa

04 Jan 2017, 10:46 pm

ನನ್ನಾಕೆ

ಹುಟ್ಟಿರಬೇಕವಳು ಆ ಚಂದಿರನ ಬೆಳಕನು ಕದ್ದು

ಅನಿಸುತಿದೆ ಆ ದಿನ ಏಕಾಂತ ಬಾನದ್ದು
ತೆಗೆಸಿದೆನು ಜಾತಕವ ಮದುವೆಗೆಂದು

ಅರಿವಾಯಿತು ಆ ರಾತ್ರಿ ಅಮಾವಾಸ್ಯೆಯೆಂದು

- chethan

04 Jan 2017, 10:39 pm

ನಕ್ಷತ್ರಗಳು-೮

ಗಗನದಗಾಧ
ಶಬ್ದ ತತ್ತ್ವದೋಂಕಾರಕ್ಕೆ
ನಕ್ಷತ್ರಗಳು
ಮೌನ ವ್ಯಾಖ್ಯಾನದ
ತುಣುಕು
ಹೊಳಹುಗಳು.

********ಪದ್ಯಾಣ.

- padyana

04 Jan 2017, 10:27 pm

ಮೂಗುತಿ

ಮೂಗುತಿಯ ಮುಂಬಾರಕೆ ನೀ
ನಸು ನಕ್ಕು ತಲೆ ಬಾಗಿಸುತಿರೆ
ಹುಣ್ಣಿಮ ಚಂದ್ರನು ನಿನ್ನ
ಮೂಗನೇರಿ ಕುಳಿತಂತಿದೆ....

- PSK

04 Jan 2017, 09:11 pm

ರಾಗ ರತಿ

ತೀಡುವ ತಂಗಾಳಿಗೆ ತರು ಲತೆಗಳು
ತರುಣಿಯ ಹಾಗೆ ಬಳುಕುತ
ಶಿಂಗರಿಕೊಂಡು ಚೆಲುವ ಗೆಳೆಯನಿಗೆ
ನಳನಳಿಸುತ ಹಸಿರ ಹೊದ್ದು
ನಗೆಮೊಗದಾರತಿ ಹಿಡಿದ ರತಿ ಇವಳು

- kasturi pattar

04 Jan 2017, 08:56 pm

ಕಾಗಕ್ಕ ಧ್ವನಿ ಒಡೆದೋಯಿತು

ನಾನೊಂದು ಕಾಗಕ್ಕ
ನಮಸ್ತೆ ಹೇಳಿರಿ ಅಕ್ಕಾ
ದುಡಿಯುತ್ತಿರುವ ವರ್ಷದ ಲೆಕ್ಕ
ಮನ್ನಣೆ ನೀಡಿರಿ ಅಕ್ಕಾ

ಕೋಗಿಲೆ ಧ್ವನಿಗೆ ಮಾರುಹೋಗ ಬೇಡಿ
ಅದು ವಸಂತ ಮಾಸದ ಗಾನ
ನನ್ನ ಧ್ವನಿಗೆ ದೂರು ಸಲ್ಲಿಸ ಬೇಡಿ
ಇದು ವರ್ಷದ ಸೃಜನ

ಜಾತಿಗೆಟ್ಟವನು ನಾನು
ಧರ್ಮ ಮೀರಿದವನು ನಾನು
ಹಾಗಾದರೆ ಯಾರವನು ನಾನು?
ವಿಶ್ವಮಾನವತೆಯ ಜೇನು!

ವಿಶ್ವ ಪಥದ ದಾರಿಗೆ
ಶಾಂತಿಯ ಜೀವಿಗೆ
ಕರುಣೆಯ ಮಾತೆಗೆ
ಶರಣು ಶರಣು ಎನ್ನವೆ
ನನ್ನ ಮನದಲ್ಲಿ ಕಾಣವೆ

ಬದಲಾವಣೆ ಕಾಲ ಬಂದಿದೆ
ಪ್ರಚಂಡ ಪ್ರಕಾಶದಲ್ಲಿ ಕರಿ ನೆರಳನುಂಗಿದೆ
ಚಿಗುರಿಸ ಬೇಡಿ ಜಾತಿ ಭೇದ ಭೀತಿ
ಭರವಸೆಯ ಸುವಾಸನೆ ಮೂಡಿದ ಶಾಂತಿ.

- Shinan

04 Jan 2017, 04:10 pm