ಮುಂಜಾನೆ ಬೆಳಗೆದ್ದು ಹೊರಟೆ ಮನೆಯಿಂದ ,
ಕೈ ನಡುಗಿತು ಹೆಚ್ಚಾದ ಚಳಿಯಿಂದ
ಮೌನ ಮಾತಾಯಿತು ಚಳಿಯೊಳಗೆ
ಚಳಿ ಚಳಿ ಚಳಿ ಚಳಿ ಚಳಿ ಹ..ಹಹ..ಹ..ಹಹಹಹ
ಬೆಚ್ಚಗೆ ಕೈಗಳ ದೇಹಕೆ ಒತ್ತಿರಲು ಸ್ಪರ್ಶಿಸಿತು
ಡವ-ಡವನೆ ಬಡಿಯುತಿಹ ಹೆಚ್ಚಾದ ಬಡಿತ,
ಎನ್ನ ಬಲಹಸ್ತ ನೋಡಿತು ಕೋಪದಿಂದ
ತನ್ನ ಬಿಡಾರದಲ್ಲಿ ಪೋನ ಕೂರಿಸಿದರಿಂದ,
ಯಾಕೋ ಮೂಡಿತು ಮೊಗದಲ್ಲಿ ಮಂದಹಾಸ
ಎಂದೂ ಅಳಿಯದ ನೆನಪುಗಳ ನೆನೆದು.
ಆದರೂ ನಡೆದುಬಂದೆ ನಾನ್ ಸ್ಟಾಪಾಗಿ
ಬಸ್ ಸ್ಟಾಂಡ್ ಸೇರಲು ,ಕಾಲೇಜಿಗೆ ಬರಲು
ಅದಕೂ ಮುನ್ನ ಪಿಲಮ್ ಗೆ ಹೋಗಲು.
ಸ್ನೇಹವೆಂಬ ಸಿಹಿ ನೀಡಿದ ಸಿಹಿಜೇನು,
ನನ್ನ ಸ್ನೇಹಕೆ ದೇವತೆಯು ನೀನು..
ಒಳ್ಳೆಯ ಗೆಳತಿಯು ನೀ ನನಗೆ ಹಲವು ವರುಷಗಳಿಂದ,
ಹೀಗೆಯೇ ಜೀವನಪೂರ್ತಿ ಇರಬಹುದೆ ನಮ್ಮ ಸಂಬಂಧ..
ಇಲ್ಲವೆನ್ನುತಿದೆ ಒಳ ಮನಸು,
ಅದಕಾಗೆ ನನಗದರ ಮೇಲಿದೆ ಮುನಿಸು..
ಕಾಡುತಿದೆ ನನಗೆ, ನೀ ನನ್ನಿಂದ ದೂರವಾಗುವೆ ಎಂಬ ಭಯ,
ನೀನೆ ನೀಡಬೇಕಿದೆ, ದೂರವಾಗುವುದಿಲ್ಲ ಎಂಬ ಅಭಯ..
ಆದರೂ ಮನದಲ್ಲಿ ಆ ಭಯವು ಬೆಳೆಯುತಿದೆ,
ನಮ್ಮ ಸ್ನೇಹ ಉಳಿಸಲು ಬೇರೆ ದಾರಿ ಕಾಣದಾಗಿದೆ...
ಭಯಗೊಂಡ ಮನವೀಗ ಬೇರೆ ಯೋಚನೆ ಮಾಡಿದೆ,
ಕೊನೆವರೆಗು ನಿನ್ನ ಜೊತೆಗಿರುವ ಉಪಾಯವೊಂದನ್ನು ಹೇಳಿದೆ..
ನಿನ್ನ ಪ್ರೀತಿಸು ಎಂದು ಮನ ಹೇಳುತಿದೆ,
ಅದು ಸರಿ ಎಂದು ಹೃದಯ ಮಿಡಿಯುತಿದೆ..
ನಾನೀಗ ನಿನ್ನ ಪ್ರೀತಿಯಲಿ ಬಿದ್ದಿರುವೆ,
ಅದ ನಿನ್ನಲ್ಲಿ ಹೇಳಲು ಒಳಗೊಳಗೆ ಹೆದರಿರುವೆ..
ನೀ ಒಪ್ಪದೇ ಹೋದರೆ ಎಂಬ ಪ್ರಶ್ನೆ ಕಾಡುತಿದೆ,
ಆ ಪ್ರಶ್ನೆಗೆ ಉತ್ತರ ನಿನ್ನ ಬಳಿಯಿದೆ..
ದಯಮಾಡಿ ಬಾ ಗೆಳತಿ ನನ್ನ ಮನದೊಳಗೆ,
ನಿನ್ನ ಕೈ ಬಿಡದೆ ಕಾಪಾಡುವೆ ನನ್ನ ಜೀವ ಇರೊವರೆಗೆ..
ನೀ ನನ್ನ ಜೊತೆ ಇರಬೇಕು ಕೊನೆವರೆಗು,
ನಾ ಸತ್ತು ಮಣ್ಣಲ್ಲಿ ಮಣ್ಣಾಗೊವರೆಗು........