Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಜಾತಿ ಮತ

ಜಾತಿ ಮತ ನೀತಿ ಧರ್ಮ
ನಿನಗೆ ತಿಳಿದಿರಲಿ ಇವುಗಳ ಮರ್ಮ
ಇವುಗಳಿಂದ ಹಿಡಿದಿರುವುದು ನಮಗೆ ಹುಚ್ಚು
ನಮ್ಮ ನಿಮ್ಮಲಿ ಹಬ್ಬಿರುವುದು ಬರೀ ಕಿಚ್ಚು

-ಗಿರೀಶ್ ರಾಮಕೃಷ್ಣ

- girish r

04 Jan 2017, 12:09 am

ಹುಟ್ಟಿದ ದಿನ

ದಿನ‌‌‍‌‌‌‍‌‍
ಹುಟ್ಟಿದ ದಿನ
ನಾನು ಅತ್ತಿದ ದಿನ
ತಾಯಿ ಗರ್ಭ ಸೀಳಿಬಂದ ದಿನ
ತಾಯಿಗೆ ನೋವು ಕೊಟ್ಟ ದಿನ
ಆ ನೋವು ಮೀರಿ ಖುಷಿಪಟ್ಟ ದಿನ
ನನ್ನ ತಾಯಿ ಹೊಸ ಜಗತ್ತು ಕಂಡ ದಿನ
ಅದು ಈ ದಿನ, ನನ್ನ ದಿನ, ನಾನು ಜನಿಸಿದ ದಿನ
-ಸಾಗರ್

- sagar chamali

03 Jan 2017, 10:08 pm

"ನೆನಪುಗಳು" ________

ನೆನಪುಗಳು ಬರುತ್ತಾವೋ ಗೆಳೆಯ
ನೆನಪುಗಳು ಕಾಡುತ್ತಾವೋ!
ಬಾಲ್ಯದ ಆಡಿದ ಆಟ
ಗೆಳೆಯರೊಡನೆಯ ಊಟ
ಮನದಲ್ಲಿ ಚಿಮ್ಮುತ್ತಾವೋ ಗೆಳೆಯ
ಮನವನ್ನು ಕಲುಕುತ್ತಾವೋ!
ಬಾಲ್ಯದ ಗೆಳತಿಯ ನೆನಪು
ಅವಳು ಕೊಟ್ಟ ಜೇನುತುಪ್ಪ
ಭಾವನೆಯ ಅರಳಿಸ್ಯಾವೋ ಗೆಳೆಯ
ವಿವರವಾಗಿ ಕಾಡುತ್ತಾವೋ!
ಅಪ್ಪ ಹೇಳಿದ ಮಾತು
ಅಮ್ಮನ ಪ್ರೀತಿಯ ತುತ್ತು
ಮತ್ತೆ ಮತ್ತೆ ಬರುತ್ತಾವೋ ಗೆಳೆಯ
ನೆಮ್ಮದಿಯ ತರುತ್ತಾವೋ
ಗುರುಗಳು ಹೇಳಿದ ಪಾಠ
ಸಹಪಾಠಿಗಳ ಕೂಟ
ಎದ್ದೇದ್ದು ಬರುತ್ತಾವೋ ಗೆಳೆಯ
ಬದುಕನ್ನು ಅರಳಿಸ್ಯಾವೋ !ನೆನಪು!
_____________________________
" ಬಸವಪ್ರಿಯ"

- ಬಲವಂತ ಮೋರಟಗಿ(ಬಸವಪ್ರಿಯ)

03 Jan 2017, 09:38 pm

ಪ್ರೀತಿ ಬಯಸೋ ಮನ

ಪ್ರೀತಿ ಬಯಸೋ ಮನಕ್ಕೆ ಸದಾ ಪ್ರೀತಿ
ಸಿಗಲಿ
ಸ್ನೇಹ ಬಯಸೋ ಹೃದಯಕ್ಕೆ ಸದಾ ಸ್ನೇಹ
ಸಿಗಲಿ
ಆದರೆ, ಯಾವುದೂ ಸಿಗದ
ಮನಸ್ಸಿಗೆ.ಯಾವತ್ತೂ ನೋವಾಗದಿರಲಿ...

- mahesh

03 Jan 2017, 08:37 pm

ನಕ್ಷತ್ರಗಳು-೭

ಎಣ್ಣೆಯಿಲ್ಲದೆ
ಹಚ್ಚುವವರಿಲ್ಲದೆ
ನಿತ್ಯ ಉರಿವ
ಮಿಣುಕು ದೀಪಗಳು
ತಂಪು ಬೆಳಕಿನ
ಮೌನ
ನಕ್ಷತ್ರಗಳು

******* ಪದ್ಯಾಣ.

- padyana

03 Jan 2017, 05:42 pm

ಹಾಡುವ ಕೋಗಿಲೆಗೆ ಕಂಠವೆ ಸ್ಪೂ

ಹಾಡುವ ಕೋಗಿಲೆಗೆ ಕಂಠವೆ ಸ್ಪೂರ್ತಿ
..!!
ನರ್ತಿಸುವ ನವಿಲಿಗೆ ತುಂತುರು ಹನಿಯೆ ಸ್ಪೂರ್ತಿ...!

ಹಾರುವ ಚಿಟ್ಟೆಗೆ ಹೂಗಳೆ ಸ್ಪೂರ್ತಿ..!!
ಅರಳುವ ಹೂಗಳಿಗೆ ಹೊಂಬಿಸಿಲೆ ಸ್ಪೂರ್ತಿ...!!

ಈಜುವ ಮೀನಿಗೆ ರೆಕ್ಕೆಯೆ ಸ್ಪೂರ್ತಿ..!!
ನಾಚುವ ಗಿಳಿಗೆ ಮೈಬಣ್ಣವೆ ಸ್ಪೂರ್ತಿ...!!

ಸುರಿವ ಮಳೆ ಹನಿಗೆ ಮೋಡವೆ ಸ್ಪೂರ್ತಿ..!!
ಚಿತ್ತಾರ ಬಿಡಿಸಿರುವ ಕಾಮನ ಬಿಲ್ಲಿಗೆ ಬಿಸುಲು ಮಳೆಯೆ ಸ್ಪೂರ್ತಿ...!!

ಹವಳವು ಸೃಶ್ಟಿಯಾಗಲು ಸಾಗರವೆ ಸ್ಪೂರ್ತಿ..!!
ಪದಗಳು ಕವಿತೆಯಾಗಲು ಭಾವನೆಯೆ ಸ್ಪೂರ್ತಿ...!!


Kiru shruthi

- kiru

03 Jan 2017, 01:56 pm

ಮತ್ತೆ ಬಾರದ ಪಯಣ

ಸುಡುಗಾಡ ಹಾದಿಯಲ್ಲಿ
ನಾ ಒಬ್ಬನೆ ಅಲೆವಾಗ
ಬೆಳ್ಳನೆಯ ಕುದುರೆಯೊಂದು
ಬಂದು ಎದುರು ನಿಂತಾಗ!!

ಹತ್ತಿ ಹೊರಟರೆ ಕುದುರೆ
ಮತ್ತೆ ಬಾರದ ಪಯಣ
ಇಂದು ಬರಲೇ ಬೇಕು ಎಂದು
ಕೂಗಿ ಕರೆಯುತಲಿ ಮರಣ!!

ಹೋಗಿ ತೀರಲೇ ಬೇಕು
ಮತ್ತೆ ಮರಳದ ಕಡೆಗೆ
ಹಿಂತಿರುಗಿ ನೋಡದೇನೆ
ಸಾಗಿ ದೂರದ ಗಡಿಗೆ!!

- ಪಿ.ಜಿ.ಜ್ಯೋತಿ

03 Jan 2017, 12:14 pm

ಓ ಹೃದಯಾ ♡ ಕೇಳಿದೆಯಾ

ನೀ ಹೇಳುತಿರುವೆ ನೆನಸದೆ
ಎಲ್ಲರ ಜೊತೆ ಬೆರೆತು
ಹಾಯಾಗಿರು ಎಂದು ...
ನಿನ್ನ ಮರೆಯಬಹುದು
ನಾ ಆದರೆ, ನಿನ್ನ ನೆನಪು
ಹೇಗೆ ಮರೆಯಲಿ ನಾ?
ನಿನ್ನ ಕಣ್ಣಗಳ ಮರೆಯಬಹುದು
ನಾ ಆದರೆ, ನಿನ್ನ ಕನಸು
ಹೇಗೆ ಮರೆಯಲಿ ನಾ?
ನಿನ್ನ ಮಾತು ಮರೆಯಬಹುದು
ನಾ ಆದರೆ, ನಿನ್ನ ದ್ವನಿ
ಹೇಗೆ ಮರೆಯಲಿ ನಾ?
ಮರೆತರು ಮರೆಯಲಾಗದ
ನೆನಪು ನೀನು....
ಅರಿತರು ಅರೆಯಲಾಗದ
ಒಲವು ನೀನು.......
ನಿನ್ನ ಹೇಗೆ ಮರೆಯಲಿ
ಹೇಳು ನಾನು...
ಮತ್ತೆ ನೆನಪಾಗಿ ಕಾಡದಿರು ನೀನು...
ಎಂದು ಹೇಳಿದರು...
ನನ್ನ ಹೃದಯದ ಪ್ರತಿ ಉಸಿರು
ನಿನ್ನ ಹೆಸರನೆ ಕನವರಿಸುತಿದೆ..
ನೀನು ಈ ಹೃದಯದ ಎಂದೂ
ಮರೆಯದಂತ ಉಸಿರಲಿ
ಉಸಿರಾಗಿ ಬೆರೆತಿರುವೆ...
ಹೇಳು ಒಲವೆ ನಿನ್ನ ನೆನಸದೆ
ಹೇಗೆ ಕಳೆಯಲಿ ಕಾಲ...
ಆಗದು ನನಗೆ ಬದುಕಲು
ಮರೆತು ನಿನ್ನ....

- Pb

03 Jan 2017, 11:55 am

ಪ್ರೀತಿಯ ಬೀತ್ತೋಣ....

ಪ್ರೀತಿಯ ಬಿತ್ತನೆ ಮಾಡೋಣ ಬನ್ನಿ
ಪ್ರೀತಿಯ ಬೀಜಗಳ ಮುಷ್ಠಿಯಲ್ಲಿ ಬಚ್ಚಿಟ್ಟು ತನ್ನಿ
ಕಳೆ ಬೆಳೆಯದಂತೆ
ಬರ ಬೀಳದಂತೆ
ಮಳೆಗೆ ಜೋಗು ಹಿಡಿಯದಂತೆ
ಕಾಪಾಡ ಬೇಕಿದೆ
ಎಲ್ಲರು ಸೇರಿ ದುಡಿಯೋಣ ಬನ್ನಿ
ಸುಗ್ಗಿಯ ಹಬ್ಬಕ್ಕೆ ಮನೆಯವರನ್ನೆಲ್ಲಾ
ಮರೆಯದೆ ಕರೆತನ್ನಿ
ಪ್ರೀತಿಯ ಬಿತ್ತನೆ ಮಾಡೋಣ ಬನ್ನಿ
ಪ್ರೀತಿಯ ಜಗಕೆಲ್ಲಾ ಹಂಚೋಣ
ಮರೆಯದೆ ಪ್ರತಿ ಒಬ್ಬರನ್ನು ಕರೆತನ್ನಿ....

- HarshaHL

03 Jan 2017, 10:23 am

ಅಜಯ್

ಸುಂದರವಾದ ಮುಂಜಾನೆಯಲಿ ......ಸೂರ್ಯನ ಕಿರಣಗಳು......ಚಲುತ್ತಿವೆ.......
ಸುಂದರವಾದ ನಿನ್ನ ಮುಗದಲೀ ನಗೆಯ
ನದಿ ಹರಿಯುತ್ತಿದೆ......

- Ajay

03 Jan 2017, 10:20 am