Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಓ ಹೃದಯ

ನನ್ನ ಕನಸಿನ ಹಾಳೆಕೋ
ಅಳುತ್ತಾ ಅಪ್ಪಸ್ವರವ ನುಡಿಯುತ್ತಿದ್ದೆ
ನೋಡ ಬಾರದೆ ನನ್ನ ಒಲವೇ
ನನ್ನ ಹೃದಯವು ನರಳುತ್ತಿದ್ದೆ
ಲೋಕದಲ್ಲಿ ಪ್ರೇಮಿಗಳು ನಂಬಿದ ಕಥೆ ಬಹಳ ಆ
ಅವರಂತೆಯೇ ನನ್ನ ಕಥೆ ಆಯಿತ್ತೆ .

ಓ ಹೃದಯ ಕೇಳಿದೆಯಾ.

- Ruturaj byatgar

02 Jan 2017, 01:14 pm

ಸಮಯ

ತುಂಬಾ ಹೇಳಬೇಕು ನಾನು
ಸಮಯ ನಿನಗೆ ಸಮಯ ಇಲ್ಲವೇನು
ಸೂರ್ಯ ನಿನಗೆ ಕೆಲಸ ಕೋಡಲೇನು
ಸ್ವಲ್ಪ ನಿಂತು ಹೋಗಬಾರದೇನು.......

ತುಂಬಾ ಕೇಳಬೇಕು ಇನ್ನೂ
ನನ್ನವಳ ಎಲ್ಲ ಮಾತನು
ಹೀಗೆ ನೋಡುತಿರಬೇಕು ನಾನು
ನನ್ನವಳ ಚೆಂದದ ನಗುವನು
ಸಮಯ ನಿನಗೆ ಸಮಯ ಇಲ್ಲವೇನು
ಸ್ವಲ್ಪ ನಿಂತು ಹೋಗಬಾರದೇನು

ಎಣಿಕೆ ಇಲ್ಲದ ಅವಳೆಲ್ಲ ಕನಸುಗಳ
ಪೋಣಿಸಿ ಪೋಣಿಸಿ ಬಚ್ಚಿಡಬೇಕು ನಾನು
ತಂಪು ತಂಗಾಳಿಯಲಿ ಕೂತು
ಒಲವಿನ ಹೊಳೆ ಹರಿಸಬೇಕು ಇನ್ನೂ
ಸಮಯ ನಿನಗೆ ಸಮಯ ಇಲ್ಲವೇನು
ಸ್ವಲ್ಪ ನಿಂತು ಹೋಗಬಾರದೇನು....

- PSK

02 Jan 2017, 01:13 pm

ನಿಧಾನ ನಡಿಗೆಯ ನೀರೆ..

ನಿಧಾನ ನಡಿಗೆಯ ನೀರೆ,
ನಿನ್ನ ಪ್ರೀತಿ ಮಾಡಿದನು ಮನಸಾರೆ..
ಕಾಲೇಜಿನಲಿ ನನ್ನ ಸೆಳೆದ ಮೊದಲಿಗಳು ನೀನು,
ನೀ ಕಂಡಾಗಲೆಲ್ಲ ನಿನ್ನನೇ ನೋಡುತ್ತ ನಿಂತಿದ್ದೆ ನಾನು..
ಓದುವವರ ಸಾಲಿನಲಿ ಮೊದಲಿಗಳು ನೀನು,
ಅತಿಥಿಯಂತೆ ಕಾಲೇಜಿಗೆ ಬಂದವನು ನಾನು..
ನಾನಿದ್ದ ಕೆಲಗಳಿಗೆಯಲ್ಲೆ ನೀ ನನ್ನ ಆಕರ್ಷಿಸಿದೆ,
ಆದರೂ ನಿನ್ನ ನೋಡಲು ನಾ ದಿನವೂ ಬರದೆ ಹೋದೆ..
ನಿನ್ನ ಮೇಲಿನ ಆಕರ್ಷಣೆ ಪ್ರೀತಿಯಾದಂತಿತ್ತು,
ಆ ಪ್ರೀತಿ ತಿಳಿಸಲು ನನಗೆ ಧೈರ್ಯ ಸಾಲದಂತಿತ್ತು..
ನಿನ್ನ ಮೇಲಿನ ಪ್ರೀತಿ ನನ್ನ ಚೌಕಟ್ಟನ್ನು ಮೀರಿ ನಿಂತಿತ್ತು,
ಶುದ್ಧ ಪ್ರೀತಿಯ ಜಾಗದಲ್ಲಿ ಬೇರೆ ಕನಸು ಮೂಡಿ ಬಂದಿತ್ತು..
ನಿನ್ನ ಮೇಲಿನ ಪ್ರೀತಿ, ಪ್ರೀತಿಯೋ ಆಕರ್ಷಣೆಯೋ ಎಂಬುದ ತಿಳಿಯ ಹೊರಟೆ,
ಅದ ತಿಳಿಯುವ ಮೊದಲೇ ನೀ ನನ್ನಿಂದ ದೂರ ಹೊರಟೆ..
ಇಂದಿಗೂ ನನ್ನಲ್ಲಿ ಆ ಪ್ರಶ್ನೆ ಉಳಿದಿದೆ,
ಅದು ಪ್ರೀತಿಯೋ, ಆಕರ್ಷಣೆಯೋ ಎಂದು ತಿಳಿಯದೆ.....

- jp R

02 Jan 2017, 10:55 am

ನಕ್ಷತ್ರಗಳು-೬.

ಚಂದ್ರನ ಅಧ್ಯಕ್ಷತೆಯಲ್ಲಿ
ನಕ್ಷತ್ರಗಳು
ಸಭೆ ಸೇರಿದ್ದಾವೆ.
ಅಧ್ಯಕ್ಷನ ಹಾಲಿನಂತಹ
ನಗುಮುಖದ ಮೋಡಿಗೆ
ಮೌನವಾಗಿದ್ದಾವೆ.
ಸಭಿಕರ ದೀರ್ಘ ಮೌನಕ್ಕೆ
ಅಧ್ಯಕ್ಷ ಬೆರಗಾಗುತ್ತಲೆ
ಬೆಳಗಾಯಿತು.
******ಪದ್ಯಾಣ.

- padyana

02 Jan 2017, 09:39 am

ಹನಿ...

ಕತ್ತಲ ಅಂಕಪರದೆ ಸರಿಸಿ ,
ಬಾಳಲ್ಲಿ ರವಿ‌
ಹೊಸ ದೃಶ್ಯವ
ಮೊದಲಿಟ್ಟ
ಬೆಳಗು ...

- Indushekar Chinivar

02 Jan 2017, 06:42 am

ಕನಸಿನ ಕೊಲೆ.....

ದೊಡ್ದ ದೊಡ್ದ ಕನಸು ಕಂಡ ಕನಸುಗಾರ ನಾನು,
ಕಂಡ ಕನಸು ಕನಸಾಗಿರುವಂತೇ ಜೀವಿಸುತಿರುವ ಪಾಪಿ ನಾನು..
ಕನಸಲೇ ಖುಷಿ ಕಾಣುತಿರುವೆ,
ಏನೂ ಮಾಡದೆ ಕೈಕಟ್ಟಿ ಕುಳಿತಿರುವೆ..
ಜವಾಬ್ದಾರಿಯಿರದ ದಡ್ಡನಂತೆ ಬದುಕುತಿರುವೆ,
ಹುಟ್ಟಿರುವುದೇಕೆ ಎಂಬ ಪ್ರಶ್ನೆಯನ್ನೇ ಹುಟ್ಟುಹಾಕಿರುವೆ..
ಸಾಧಿಸದೆ ಸಾಯಲು ಮನಸಾಗುತಿಲ್ಲ,
ಸಾಧನೆ ಎಂಬುದು ಕೈಗೆಟುಕುತಿಲ್ಲ..

- jp R

02 Jan 2017, 01:01 am

ಹೊಸವರ್ಷವೇ?

ಹೊಸ ದಿರಿಸು ಧರಿಸಿಲ್ಲ
ತರು ಲತೆಗಳಾವುವೂ,
ಕಳಕಂಠದಿನಿ ದನಿಯೋ,
ಮೌನ ಮುರಿದಿಲ್ಲ!

ತಣ್ಪುದನ ಬಿಡಲಿಲ್ಲ
ಹೇಮಂತನಿನ್ನೂ,
ಕಚಗುಳಿಯು ಬಿಟ್ಟಿಲ್ಲ
ಸೂರ್ಯನನ್ನೂ!

ಹೊದ್ದು ಮಲಗಿಹನೆಲ್ಲೋ,
ಆ ವಸಂತನು ಸುಖದಿ,
ಹೊತ್ತಿನ್ನೂ ಆಗಿಲ್ಲ ,
ಅವ ಬರಲು ಜಗದಿ!

ಎಲ್ಲೂ,ಸೃಷ್ಟಿಯೊಳಿಲ್ಲ,
ಹೊಸತನವು....ನೋಡೀ!
ಎಲ್ಲಿಂದ ಬಂದಿತೀ.....
ಹೊಸ ವರ್ಷವೋಡಿ!!??!!

ಪಶ್ಚಿಮದ ಬಿರುಗಾಳಿ,
ತಂಗಾಳಿಯಂತಿದೆ,
ಈ ಭ್ರಾಂತ ಚಿತ್ತರಿಗೆ,
ನಮ್ಮ ಪ್ರಜೆಗಳಿಗೆ!!

ಇನಿತಾದರೂ ಸಡ್ಡೆ,
ನಮ್ಮತನಕಿಲ್ಲ,
ಹೊಸವರ್ಷ ನೆಪವಾಯ್ತು,
ಕುಡುಕರಿಗೆ ಎಲ್ಲ!!

ಪಕ್ಕದೂರಲಿ ನಡೆವ,
ಯಾರದೋ ಮದುವೆಗೆ,
ನಮ್ಮ ಮನೆಯಲ್ಲೇಕೆ,
ಹಬ್ಬದಡಿಗೆ??!!??
ಮುಂಜಾನೆಗೂ ಮುನ್ನ,
ಕೋಳಿ ಕೂಗಿದರೇನು!?!
ಬಂದುಬಿಡುವನೇ ಸೂರ್ಯ,
ಆ ಮುಗಿಲಿಗೆ ???

ಸೃಷ್ಟಿ ತಾ ಚಿಗುರೊಡೆದು,
ಹಸಿರು ನಗೆ ಚೆಲ್ಲುತಿರೆ,
ಅದು ಕಾಣಿರೈ ನಮಗೆ
ಹೊಸ ವರ್ಷವು!
ಬಿಟ್ಟು ಬಿಡಿ ವ್ಯಾಮೋಹ,
ಸಲ್ಲ ...ಈ... ಆವೇಶ,
ಹೊಸವರ್ಷವಲ್ಲವಿದು,
ಹುಸಿ ಹರ್ಷವೈ!!!

- ಮಲ್ಲಿಭಾಗವತ್ ಗುಡಿಬಂಡೆ

01 Jan 2017, 10:57 pm

ಕವಿಯಗಬೇಕೆಂದಾಗ

ಕವಿಯಗಬೇಕೆಂದಾಗ, ನೀ ಕಾಣದೇ ಹೋದೆ
ಪ್ರೀತಿಸಬೇಕೆಂದಾಗ ನೀ ದೂರವದೆ
ಮನಸ್ಸಿನ ಮಾತಲಿ, ನೀ ಕನಸಾಗಿ ಹೋದೆ
ಕಾದಂಬರಿಕಾರ ನಾನಾದಾಗ, ನನ್ನಿಂದಲೆ ಮರೆಯಾದೆ......
ಲಿಂಗರಾಜ.ಬಿ.ಬಡಿಗೇರ್.

- lingaraj

01 Jan 2017, 10:49 pm

ಬಳ್ಳಿಯಿರಬೇಕು...

ಬಳ್ಳಿಯಿರಬೇಕು ಮರವೊಂದಕೆ
ದುಃಖ ದುಮ್ಮಾನ ತೋಡಿಕೊಳ್ಳಲು.
ಬಳ್ಳಿಯಲಿ ಅರಳಿದ ಹೂವೆ ಕನ್ನಡಿ,
ತನ್ನ ಮುಖವ ತಾನೇ ನೋಡಿಕೊಳ್ಳಲು

ಬೇಸರದಲಿ ಮರ ಎಲೆಯುದುರಿ,
ಮನಸು ಮುದುರಿ ಮರುಗುವ ಹೊತ್ತಲಿ
ಬಳ್ಳಿ ತಾ ಬಳಸಿ ನಲ್ಲನ ಎದೆಗಾನಿಸಿ ತಂಪೆಲೆಯ
ಹಿತ ಮುದ್ದಿನ ಮುದ್ರೆಯೊತ್ತಿ
ನೋವ ಮರೆಸಲು.

ಬುಜಕೆ ಆನಿಸಿ ತರು ಲತೆಯ
ಸ್ಪುರಿಸಿ ಬಿಸಿಯುಸಿರ ಚಿತೆಯ
ಚೆಲ್ಲುವಳಿರಬೇಕು ಮರವೊಂದಕೆ
ತನ್ನ ಬದುಕು ಅಮರವಾಗಲು.

- ಶ್ರೀಗೋ.

01 Jan 2017, 10:32 pm

ನೀನಿಲ್ಲದೆ... (ಓ ಹೃದಯಾ ♡ ಕ

ನೀನಿಲ್ಲದೆ ನನಗೇನಿದೆ
ಮನಸೆಲ್ಲ ನಿನ್ನಲ್ಲೇ ನೆಲೆಯಾಗಿದೆ
ಕನಸೆಲ್ಲ ಕಣ್ಣಲ್ಲೇ ಸೆರೆಯಾಗಿದೆ
ನಿನಗಾಗಿ ಕಾದು ಕಾದು
ಪರಿತಪಿಸಿ ನೊಂದೆ ನಾನು
ಕಹಿಯಾದ ವಿರಹದ ನೋವು
ಹಗಲಿರುಳು ತಂದೆ ನೀನು
ಎದೆಯಾಸೆ ಏನು ಎಂದು
ನೀ ಕಾಣದಾದೆ
ನಿಶೆಯೊಂದೆ ನನ್ನಲ್ಲಿ
ನೀ ತುಂಬಿದೆ
ಬೆಳಕೊಂದೆ ನಿನ್ನಿಂದ
ನಾ ಬಯಸಿದೆ
ಎಲ್ಲಾ ಕಳೆದುಕೊಂಡರು 
ಇನ್ನೂ ಏನೋ
ನನ್ನ ಜೊತೆ ಇರುವಂತೆ 
ಕಣ್ಣುಗಳ ಮುಚ್ಚಿ ಕೇಳಲು 
ಬಡಿತವು ಪಿಸುಗುಟ್ಟಿತು 
ಅದು ನಿನ್ನ ಉಸಿರೆಂದು
ಹಸಿರಾಗಿ ಇನ್ನೂ ಈ ಕಣ್ಣೊಳಗೆ 
ಕಾರಂಜಿಯಾಗಿ ಕಂಡಿದೆ ಇಂದು....
ನೂರಾರು ಭಾರಿ 
ಸಾವಿರ ದಾರಿ ಹುಡುಕಿದರೂ 
ಮತ್ತೆ ಕಂಡಿಲ್ಲ ನಿನ್ನನು
ನೀನು ಬರುವೆ ಎಂಬ
ಸಣ್ಣ ಆಸೆಯಿಂದ
ಬಡಿಯುವ ಈ ಹೃದಯದ ಜೊತೆ
ದಾರಿ ಕಾಯುತ ಕುಳಿತಿರುವೆ 
ನಿನ್ನ ಸವಿಗನಸಲ್ಲಿ ಇಂದು.... 

- Pb

01 Jan 2017, 07:02 pm