ಹೇಳಬೇಕಾಗಿದ್ದ ಮಾತು
ಮನದಲ್ಲೇ ಉಳಿದಿತ್ತು ...
ಈಗ ತಾನೇ ಅರಳಿದ ಪ್ರೀತಿ
ಮೊಳಕೆಯೊಡೆಯುವ ಮುಂಚೆ
ಸತ್ತು ಹೋಗಿತ್ತು ....
ಮಾತು ಮೌನಕ್ಕೆ ತಿರುಗಿತ್ತು
ಅರಿವೇ ಇಲ್ಲದಂತೆ
ಮನದಲಿ ಏನೊ ದುಗುಡ
ಹೇಳಲಾಗದ ತಳಮಳ ... !!!
ಕೈಗೆ ಸಿಗುವ ಮೊದಲೇ
ಹಾರಿ ಹೋದ ಗಿಣಿಮರಿಯಂತೆ
ಕಂಡೆ ನೀನು......
ಬರಿದಾದಂತೆ ತೋರುತಿದೆ
ನನ್ನ ಕೈಗಳು
ಖಾಲಿ ಕೈಯನ್ನೇ
ನೋಡುತ್ತಾ ಕುಳಿತೆ ...
ಅದು ನಿನಗಾಗಿ ಬರೆದಿತ್ತು
ಈ ಕೊನೆಯ ಕವನ .........
ನಮ್ಮ ಹೆತ್ತು ಹೊತ್ತು ಬೆಳೆಸಿದ ಮಾತಾಪಿತೃಗಳಿಗೆ,
ನಮ್ಮೊಂದಿಗೆ ಸಂತಸದಿಂದಿದ್ದ ಸಹೋದರ ಸಹೋದರಿಯರಿಗೆ,
ನಮ್ಮ ಬದುಕಿಗೆ ಆಸರೆಯಾದ ಬಂಧುಗಳಿಗೆ,
ನಮ್ಮ ಸಂತಸಕ್ಕೆ ಕಾರಣರಾದ ಬಾಲ್ಯದ ಸ್ನೇಹಿತರಿಗೆ,
ನಮಗೆ ತಿದ್ದಿ ಬುದ್ದಿ ಹೆಳಿದ ಸಮಸ್ತ ಗುರುವೃಂದಕ್ಕೆ,
ಹೊಸ ಪರಿಚಯವಾಗಿ ಚಿರಪರಿಚಿತರಾಗಿ ಉಳಿದ ಎಲ್ಲ ಸಹೃದಯಿ ಜೀವಗಳಿಗೆ,
ನಮ್ಮ ನಗುವಿಗೆ ಕಾರಣರಾದವರಿಗೆ,
ನಮಗೆ ಕಷ್ಟ ಕೊಟ್ಟ ಪುಣ್ಯವಂತರಿಗೆ,
ಕಣ್ಣೀರು ತರಿಸಿದ ಜೀವಗಳಿಗೆ,
ನಗು ತರಿಸಿದ ಮುಗ್ದ ಜೀವಗಳಿಗೆ,
ನಮ್ಮೊಂದಿಗೆ ಬಾಳಿನುದ್ದಕ್ಕೂ ಸಾಗುವ ನನ್ನ ಹೆಂಡತಿಗೆ,
ನಮ್ಮ ಜೀವನದ ಪ್ರತೀಘಳಿಗೆಗೂ ಸಹಾಯ ಮಾಡಿದ ಸಮಸ್ಥ ಪ್ರೀತಿಯ ಸಹೃದಯಿ ಸ್ನೇಹಜೀವಿಗಳಿಗೆಲ್ಲ
ತಿರುಗಿ ತಿರುಗಿ ನೋಡಿದಳು ಅವಳು ನನ್ನನ್ನು
ಅಲ್ಲೋಲ ಕಲ್ಲೋಲವಾಯಿತು ಮನಸು ನೋಡಿ ಅವಳನ್ನು..
ಚಿಗುರೊಡೆಯಿತು ಪ್ರೀತಿ ಮನದಲ್ಲಿ ನೋಡಿ ಇವಳನ್ನು
ಆದರೆಲ್ಲೋ ಅನಿಸಿತು ಪ್ರೀತಿಸಿ ತಿನ್ನಬೇಕಾ ಮಣ್ಣನ್ನು.....