Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಕ್ಷತ್ರಗಳು-೫.

ನಕ್ಷತ್ರಗಳು ರಾತ್ರಿಯಲ್ಲಿ
ಭೂಮಿಯ ಗಾಢ ನೀರವತೆಯ
ಅಗಾಧ ಚಟುವಟಿಕೆಗೆ
ಮೌನ ಸಾಕ್ಷಿ ಗಳಾಗಿ -ಅದರ
ಹುಮ್ಮಸ್ಸು-ರಭಸಗಳನ್ನು,
ಮೋಜು-ಮಿಲನಗಳನ್ನು,
ಕುತೂಹಲದಿಂದ ನೋಡುತ್ತಾ
ಕಣ್ಣ ಮಿಟುಕಿಸುತ್ತಾ,
ಲಕ್ಷ ಕೋಟಿಗಳಾಗಿ
ನೆರೆದು-ಮೈ
ಮರೆತು,ಮೇಳೈಸಿದೆ
ಗಗನಪರದೆಯ ಹಿಂದೆ.

*****ಪದ್ಯಾಣ.

- padyana

31 Dec 2016, 05:40 pm

ಹೊಸ ವರಷ

ವರುಷ ವರಷವು
ಹರುಷ ತರಲಿ

ನವ ಬಯಕೆಗಳು
ಅರಳಿ ನಗುತಿರಲಿ

ಹಳೆ ನೆನಪುಗಳು
ದಾರಿ ತೋರುತಿರಲಿ

ಹೊಸ ವರುಷವು
ಮರಳಿ ಬರುತಿರಲಿ

- ಪಿ.ಜಿ.ಜ್ಯೋತಿ

31 Dec 2016, 05:18 pm

ಹೊಸ ವರುಷ ಹೊಸ ಹರುಷ ಹೊಸ ಹುಮ

ನಿತ್ಯ ರವಿ ಕಾಂತಿಯಂತೆ ಹೊಸ ಬೆಳಕು ಮೂಡಲಿ
ಹೊಸ ವರುಷದಂತೆ ,ಹೊಸ ಹರುಷದಂತೆ
ಪ್ರತಿನಿತ್ಯ.

ಆಗಿ ಹೋದವುಗಳು ಬೇಡ, ಆಗು ಹೋಗುಗಳು ಬೇಡ
ವರ್ತಮಾನವ ಕಳಿ ಹೊಸ ಹರುಷದಿ,
ಪ್ರತಿ ದಿನ ಹೊಸ ಉದಯವಾಗಲಿ,
ಕಲ್ಲು- ಮುಳ್ಳಿನ ಬಾಳೊಳಗೆ ,ನೆಮ್ಮದಿಯ ಹೂವೊಂದು ಸಾಕು,
ಜಗಕೆ ಪಸರಿಸು ನಿನ್ನಿಸುಗಂಧವ
ವ್ಯರ್ಥವಾಗುವ ಮೊದಲು,
ಪಾವನವಾಗುವುದು ನಮ್ಮೀ ಜೀವನ.
ಬೆಳಕ ನೀ ಬಯಸುವ ಮುನ್ನ
ಪ್ರಯತ್ನವ ನೀ ಗೆದ್ದಿರಬೇಕು.
ಹೊಸ ವರುಷ ಹೊಸ ಹರುಷ ಹೊಸ ಬೆಳಕು
ತಂದೀತು ಹೊಸ ಬಾಳು.

ವಿ.ಸಿ.

- śsș

31 Dec 2016, 12:50 pm

"ಹದಿನೇಳರ ಸೋಗೆ"

ಹಳತಾದ ಹುಸಿ
ಮನಸ್ತಾಪಕೆ ಹೇಳಿ ವಿದಾಯ.
ಹೊಸ ಭರವಸೆಯ ಬಯಸಿ
ಮನ ರಸಮಯವಾಗಿಸುವ ಈ ಸಮಯ
ಹೂವು ಕಾಯಾಗಿ ,ಹಣ್ಣಾಗಿ
ಮಣ್ಣಾಗಿ,ಹಳತು ಹೊಸದಾಗುವ ರೀತಿ
ನಿನ್ನೆ ಮೊನ್ನೆಗಳ ನಿರೀಕ್ಷೆ ಪೇಲಾಗಿ
ಇಂದು ನಾಳೆಗಳು ಯಶಸ್ಸಾಗುವ ನೀತಿ
ಮರೆಯಾಗಲಿದೆ "ಹದಿನಾರು"ಕನಸಿನ ಹಾಗೆ
ನಾಳೆ ಬರುತಿದೆ "ಹದಿನೇಳು"ನನಸಿನ ಸೋಗೆ
ಹೊಸ ವರುಷದ ಆರಂಭ
ಯಶಸ್ಸಿನ ಕಾಯ೯ದಿಂದಾಗಲಿ ಆರಂಭ.

ರಚನೆ,- ಎ.ಜಿ.ಕಮತಗಿ(ಶಾಂತಿಪ್ರಿಯ)

- "ಶಾಂತಿಪ್ರಿಯ"

31 Dec 2016, 12:42 pm

ಈ ಬಂಧ (ಓ ಹೃದಯಾ ♡ ಕೇಳಿದೆಯಾ

ನಿನ್ನ ಉಸಿರಲಿ ನಾ ಉಸಿರಾಗಿ
ಬೆರೆತು ಹೋದ ಆ ಮಧುರ ಕ್ಷಣ
ನೆನಪಾದಾಗ ಹೇಗೆ ಇರಲಿ
ನಿನ್ನ ಬಿಟ್ಟು ಒಂದು ಕ್ಷಣವೂ ಹೇಗೆ ಇರಲಿ

ಕತ್ತಲಾಗಿರುವ ಬದುಕಿಗೆ ನೀನು ಬಂದು
ನಿನ್ನ ಕೈಗಳಿಂದ ಆಲಂಗಿಸಿ ನನ್ನನ್ನು
ಅಪ್ಪಿಕೊಂಡೆಯಾ ನನ್ನ ತನುಮನದಿಂದಲೆ
ನಿನ್ನವಳಾ/ನಾದೆ ನಾ ಆ ಕ್ಷಣದಿಂದಲೆ

ನಾಚಿ ಮುದುಡಿದೆ ನೀ ನನ್ನ ತೋಳತಕ್ಕೆಯಲಿ
ಪ್ರೀತಿ ಪುಟಿಯಿತು ನನ್ನ ಎದೆಯಾಳದಲಿ
ನಿಂತು ಹೋದ ಈ ಹೃದಯಕೆ ಬಡಿತ ನೀನಾದೆ
ಕರಗಿ ಹೋದ ಭಾವಗಳಿಗೆ ಜೀವ ತುಂಬಿದೆ

ಯಾವ ಜನ್ಮದ ಬಂಧನವೊ ಅರಿಯದಾದೆನೆ
ಉಸಿರು ಬೆರೆತ ಆ ಕ್ಷಣವನು
ಮನಸೆರಡು ಸೇರಿದ ಆ ದಿನವನು
ಮರೆಯಲಾರೆನು ಎಂದಿಗೂ
ಇರಲಿ ನಮ್ಮ ಈ ಬಂಧ ಎಂದೆಂದಿಗೂ.....

- Pb

31 Dec 2016, 11:00 am

ಪ್ರೀತಿಯ ವನಾವಾಸ

ಒಂದು ಬಾರಿ ಬೇಡಿದೆ
ಪ್ರೇಮದ ಬಿಕ್ಷೆ!

ಎದುರಾಗಿತ್ತು ಜೀವನ
ಪುರ್ತಿಯ ಶಿಕ್ಷೆ!

ಬವುಕಾಲ ತಪಗ್ಯೇದೆ
ಅವಳನ್ನು ಪಡಿಯಲ್ಲು!

ಅದರು ಸಿಗಲಿಲ್ಲ
ಬಾಳ ಸಂಗಾತಿಯಾಗಳು!
ಧರ್ಮ

- Dharma

31 Dec 2016, 08:35 am

ಪ್ರೀತಿಯ ಸೆರೆಮನೆ..........

ಸೇರಿದೆ ನಾ ನಿನ್ನ ಪ್ರೀತಿಯ ಸೆರೆಮನೆ
ಆದರೂ ನನಗೆ ಅದೇ ಅರಮನೆ
ಬಂದಿಯಾದೆ ನಾ ನಿನ್ನ ಹೃದಯದಲ್ಲಿ ಸುಮ್ಮನೆ.‌‌‌....

ಯಾರು ಕೊಡುತ್ತಾರೋ ನನಗೆ ಜಾಮೀನು
ಗೊತ್ತಿಲ್ಲ ನನಗೆ ಯಾವುದೇ ಕಾನೂನು
ಕಾಯಬೇಕು ಅಲ್ಲಿಯವರಗೂ ನಾನು.....

-- ನಿಮ್ಮನೆ ಹುಡ್ಗ Maruthish

- ನಿಮ್ಮನೆ ಹುಡ್ಗ ಮಾರುತೀಶ್

31 Dec 2016, 08:16 am

ಇಳಿ ಸಂಜೆಯಾ ಹೊತ್ತು.....

ಮಧುರವಾದ ಈ ಇಳಿ ಸಂಜೆಯಾ ಹೊತ್ತು
ಆಕಸ್ಮಿಕವಾಗಿ ಹಳೇ ಹುಡುಗಿಯಾ ನಂಬರ್ ಸಿಕ್ತು
ನನಗೆ ಯಾಕೋ ಏರಿದಂಗಾಯ್ತು ಒಂಥರಾ ಮತ್ತು....

ಮಾತನಾಡಿಸಲು ಫೋನು ಮಾಡಿದೆ ನಾನು
ನೆನಪಾಯ್ತು ಜೊತೆಯಲ್ಲಿ ತಿಂದಿದ್ದ ಮೀನು
ಅಂತು ಇಂತೂ ರಿಂಗಾಯ್ತು ಅವಳ ಫೋನು...

ಮಾತನಾಡಿದ ಯಾರೋ ಹುಡುಗ ಆ ಕಡೆಯಿಂದ
ತಲೇಗೆ ಹುಳು ಬಿಟ್ಟಂಗಾಯ್ತು ನನಗೆ ಈ ಕಡೆಯಿಂದ
ಕೊನೆಗೂ ಹೊರ ಬಂದೆ ನಾನು ನನ್ನ ಕನಸಿನಿಂದ....

-- ನಿಮ್ಮನೆ ಹುಡ್ಗ Maruthish

- ನಿಮ್ಮನೆ ಹುಡ್ಗ ಮಾರುತೀಶ್

31 Dec 2016, 08:16 am

ಮುಳ್ಳುಗಳ ಹಾದಿಯಲ್ಲಿ....

ನನ್ನ ಪಯಣ ಸಾಗುತಿದೆ ಕಲ್ಲು ಮುಳ್ಳುಗಳ ಹಾದಿಯಲ್ಲಿ
ಹೆಜ್ಜೆ ಹೆಜ್ಜೆಗೂ ನೆನಪಾಗುತಿದೆ ಮುಂದಿನ ಗುರಿ ಮನದಲ್ಲಿ

ನಂಬಿಕೆಯೇ ನನಗೆ ಆ ದಾರಿಯಲ್ಲಿ ಪಾದರಕ್ಷೆ
ಗೊತ್ತಿಲ್ಲ ನನಗೆ ಇದು ಯಾವ ಜನುಮದ ಶಿಕ್ಷೆ
ಎಂದೆಂದೂ ಇರಲಿ ನನಗೆ ಆ ದೇವರ ಶ್ರೀರಕ್ಷೆ

-- ನಿಮ್ಮನೆ ಹುಡ್ಗ Maruthish

- ನಿಮ್ಮನೆ ಹುಡ್ಗ ಮಾರುತೀಶ್

31 Dec 2016, 08:15 am

ವಿನಂತಿ.....

ಜೀವನಕ್ಕೆ ಅತೀ ಮುಖ್ಯ ಶಾಂತಿ
ಮಾಡಬೇಕು ಏನಾದರು ಕ್ರಾಂತಿ
ಇದು ನನ್ನ ಮನದಾಳದ ವಿನಂತಿ....!!!

-- ನಿಮ್ಮನೆ ಹುಡ್ಗ Maruthish

- ನಿಮ್ಮನೆ ಹುಡ್ಗ ಮಾರುತೀಶ್

31 Dec 2016, 08:15 am