Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮನುಕುಲದಿ ಭೇದವಿರದ ಬಂಧವಿದು
ಕುಲದ ಹೆಸರ ಈ ಸ್ನೇಹ ಬಯಸದು
ಬದುಕ ಬಂಧನವ ಬಿಡಿಸಿ ಮನಕೆ ಬಂಧವ ಬೆಸೆಯುತಿಹುದು
ದೂರಾಗಲು ಬಾಳ ಪಯಣಕೆ ದಾರಿ ತೋರುವ ರವಿಯು
ಕತ್ತಲ ಸರಿಸಿ ಬೆಳಕ ಚೆಲ್ಲುತ ಕೈ ಹಿಡಿದು ನಡೆಸುವ ಚಂದಿರರಿವರು
ಗಾಳಿ ಗೋಪುರಗಳಂತೆ ಕನಸು ಹೊತ್ತು ನಿಂತ ಮನಕೆ
ಸ್ತಂಭರಿವರು ಕನಸುಗಳು ನನಸಿನ ಗೋಪುರವಾಗಲು
ಬದುಕ ಹಾದಿಯಲಿ ಸೋತು ನಿಂತ ಜೀವಕೆ
ಸ್ಥೈರ್ಯ ತುಂಬಿ ಕನಸ ಚಿಲುಮೆಯ ಅರಳಿಸುವವರು
ನೊಂದು ನಿಂತಿರಲು ಮನವು ಜೀವನದ ಏಳು ಬೀಳುಗಳ ನಡುವೆ
ಸಂತೈಸಿ ಕೈ ಹಿಡಿದು ಹರ್ಷದ ಹೊನಲ ಹರಿಸುವವರು
ಸೋತಿರಲು ಜಗದೊಳು, ಕೈ ಬಿಡಲು ಬಂದು ಬಳಗವು
ಬದುಕ ಪ್ರತಿ ಹೆಜ್ಜೆಯ ಜೊತೆಗಿನ ಪಯಣಿಗರಿವರು
ನಗುತಿರಲು ಕಾಲೆಳೆದು ಅಳಿಸಿ ನಗಿಸಿ, ಅಳುತಿರಲು ಕಣ್ಣೀರು ಒರೆಸಿ
ಮೂಡಿರಲು ತುಂಟತನವು ಮನದಲಿ, ಹಾರುತಿರಲು ಮನವು ರೆಕ್ಕೆ ಬಿಚ್ಚಿ
ಒಡಗೂಡಿ ಬರುವವರು ಈ ಒಡನಾಡಿ ಸ್ನೇಹಿತರಿವವರು
- ಶ್ರೀಕಾವ್ಯ
27 Dec 2016, 10:08 pm
ನನ್ನಂತರಂಗದಲಿ ಪುಟಿದಾಗ
ಆತ್ಮ ವಿಶ್ವಾಸ ...
ನನ್ನ ನಾನು ಪ್ರೀತಿಸಲಾರಂಭಿಸಿದಾಗ
ನವೋಲ್ಲಾಸ...
ಸಂತಸದ ಕಂಬನಿ ಸುರಿಸಿದಾಗ
ಸುಖದಾಭಾಸ...
ಬಂದ ಕಷ್ಟವನೆದುರಿಸಿದಾಗ
ಏರಿದಂತೆ ಆಗಸ...
ಸಂಭ್ರಮ ನನ್ನಲಿ ಇರುವಾಗ
ಬೇರೆಲ್ಲಿ ಅರಸಲಿ ಸಂತೋಷ
ಬೇರೆಲ್ಲಿ ಅರಸಲಿ ಸಂತೋಷ...
ಕವಿ ರಾಜ
- kavita Rajesh
27 Dec 2016, 07:57 pm
ಕಣ್ಣಲ್ಲಿ ಕಂಡು
ಕನಸಲ್ಲಿ ನಿಂದು
ಮನದಾಳದ ಮೌನವ ತೊರೆದು
ಬರುವೆಯ ನನ್ನ ಹೃದಯಕೆ ಇಂದು
... ವೀರು
- ವೀರು
27 Dec 2016, 06:44 pm
ಅಚ್ಚ ಕನ್ನಡಿಗನ
ಸ್ವಚ್ಚ ಮನಸ್ಸನ್ನು
ಹುಚ್ಚಾಗಿ ಪೀತಿಸಿ
ಬಚ್ಚಿಟ್ಟಳು ಹೃದಯದಲಿ
... ವೀರು
- ವೀರು
27 Dec 2016, 06:33 pm
ಮನೆ ಸಣ್ಣದಾದರೂ ಮನಸ್ಸು
ದೊಡ್ಡದಿರಲಿ.
ಹೃದಯ ಮುಷ್ಠಿಯಷ್ಟಿದ್ದರೂ ಪ್ರೀತಿ,
ಸ್ನೇಹ ಬೆಟ್ಟದಷ್ಟಿರಲಿ.
ಹಣದಲ್ಲಿ ಬಡತನ ಇದ್ದರೂ
ಗುಣದಲ್ಲಿ ಶ್ರೀಮಂತಿಕೆ ಇರಲಿ.
ದಾರಿಗಳಲ್ಲಿ ಸಾವಿರಾರು ಅಡೆತಡೆಗಳಿದ್ದರೂ
ಚಿಮ್ಮುವ ಆತ್ಮವಿಶ್ವಾಸ ಇರಲಿ
- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)
27 Dec 2016, 03:34 pm
ಎಷ್ಟು ದೂರ ಇದ್ದರೇನು...
ನೀನಿರುವ ಊರು...??? ✈
ನನ್ನ ಜೊತೆಯಿಲ್ಲವೇನು
ನಿನ್ನ ನೆನಪುಗಳು ನೂರು...!!!!
ನಿದ್ರೆಗೆ ಜಾರಿದರೆ ನಿನ್ನ ಕನಸುಗಳದೇ
ಜಾತ್ರೆ ಬಲು ಜೋರು..
ಮನದ ಬೀದಿಯುದ್ದಕೂ ಸಾಗಿದೆ
ನಿನ್ನ ನೆನಪಿನದೇ ತೇರು..
- Ugnil
27 Dec 2016, 02:04 pm
ಬಿರುಕು ಬಿಡುತಿದೆ ಮಡಿಲಿಗೆ,
ಕೊಡಲಿ ತಗಲುತಿದೆ ಒಡಲಿಗೆ,
ದುಃಖ ದುಮ್ಮಾಲೆಗಳು ಬಡವರಿಗೆ,
ಸವಿಜೇನ ಸಿಹಿ ಸಿರಿವಂತರಿಗೆ..
ಕೊರಗುವಾ ದನಿಯೆಲ್ಲಾ
ನರಳಿ ನರಳಿ ನಶಿಸುತಿದೆ..
ಕುಣಿದು ಕುಪ್ಪಳಿಸುವವರ
ಅಹಂ ಇನ್ನು ಹೆಚ್ಚುತಿದೆ..
ಮನಸಿನ ಸಿರಿ ಹೊಂದವರ ಮನ
ಕುಸಿ ಕುಸಿದು ಬೀಳುತಿದೆ..
ಹಣವಂತರ ತುಳಿದಾಟಕೆ
ಮನ ಚೂರು ಚೂರಾಗುತಿದೆ..
ಬಡತನ-ಸಿರಿತನದ ಬೇಧ
ದಿನ ದಿನವೂ ಬೆಳೆಯುತಿದೆ..
ಎರಡು ತನದ ತೂಕದಲಿ
ಬಡತನವೇ ನೋಯುತಿದೆ..
ಬದುಕಿನುದ್ದ ಹಣೆಬರಹ
ಬಡವರ ಕಿತ್ತು ತಿನ್ನುತಿದೆ..
ಅನ್ನ ನೀಡೊ ರೈತರ ಬದುಕು
ಸುಟ್ಟು ಕರಕಲಾಗುತಿದೆ..
ಭಾಷಣವಾ ಬಿಗಿಯುವ
ಭಂಡರಿಗೆ ಜಯ ದೊರಕುತಿದೆ..
ಜಯವ ದೊರೆತ ಕ್ರಿಮಿಗಳೆಲ್ಲ
ಬಡವರ ಬಲಿ ಹಾಕುತಿದೆ.
ಬಡವರ ರಕ್ತ ಹೀರುತಿದೆ..
ಇದೇ ದಾರಿ ಹಿಡಿ ಹಿಡಿದು,
ರಾಜಕೀಯ ಬೆಳೆಯುತಿದೆ..
ಕೀಚಕ ಜನರ ಕೈ ಕೆಳಗೆ,
ಬಡವರ ಬದುಕಿದು
ಬಲಿಯಾಗುತಿದೆ...
ಪ್ರಶ್ನೆಗಳ ಸರಪಳಿಯು
ಎಳೆದೆಳೆದು ಸಾಗುತಿದೆ..
ಗೊತ್ತಿದ್ದೂ ಗೊತ್ತಿಲ್ಲದ ಹಾಗೆ
ಉತ್ತರವು ಸಾಯುತಿದೆ..
ನ್ಯಾಯ ಕರಗಿ ನೀರಾಗುತಿದೆ..
ಅನ್ಯಾಯ ಮೆರೆದು ಬೀಗುತಿದೆ..
- ವಿ.ತ್ರಿವೇಣಿ ಪಾಂಡವಪುರ
- ವಿ. ತ್ರಿವೇಣಿ ಪಾಂಡವಪುರ
27 Dec 2016, 01:53 pm
ಹಾಡುವ ಕೋಗಿಲೆಗೆ ಕಂಠವೆ ಸ್ಪೂರ್ತಿ..!!
ನರ್ತಿಸುವ ನವಿಲಿಗೆ ತುಂತುರು ಹನಿಯೆ ಸ್ಪೂರ್ತಿ...!
ಹಾರುವ ಚಿಟ್ಟೆಗೆ ಹೂಗಳೆ ಸ್ಪೂರ್ತಿ..!!
ಅರಳುವ ಹೂಗಳಿಗೆ ಹೊಂಬಿಸಿಲೆ ಸ್ಪೂರ್ತಿ...!!
ಈಜುವ ಮೀನಿಗೆ ರೆಕ್ಕೆಯೆ ಸ್ಪೂರ್ತಿ..!!
ನಾಚುವ ಗಿಳಿಗೆ ಮೈಬಣ್ಣವೆ ಸ್ಪೂರ್ತಿ...!!
ಸುರಿವ ಮಳೆ ಹನಿಗೆ ಮೋಡವೆ ಸ್ಪೂರ್ತಿ..!!
ಚಿತ್ತಾರ ಬಿಡಿಸಿರುವ ಕಾಮನ ಬಿಲ್ಲಿಗೆ ಬಿಸುಲು ಮಳೆಯೆ ಸ್ಪೂರ್ತಿ...!!
ಹವಳವು ಸೃಶ್ಟಿಯಾಗಲು ಸಾಗರವೆ ಸ್ಪೂರ್ತಿ..!!
- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)
27 Dec 2016, 12:59 pm
Novirada Jevana
Naguvirada Manasu
Poorthi halagde poorthi udharanu agde iro manshya
Saddu idrenu ildidrenu
Bhrame ne jeevna anta badutkiro baddentavu
Havanisidarenu Bantu sahiskondre en Bantu
Ellaa soooonya
Jeeevana saaaaaaswata
- BN
27 Dec 2016, 11:36 am
ಸ್ವಾತಂತ್ರ್ಯದ ಹೋರಾಟದಲ್ಲಿ
ಹಿಂಸ/ಅಹಿಂಸೆ ಗೋಳಾಟದಲ್ಲಿ
ಸ್ವಾತಂತ್ರ್ಯ ಕಾಲಿಗೆ ಬಡಿಯಿತು
ಬಾವುಟ ಹಕ್ಕಿಯಂತೆ ಹಾರಾಡಿತು.
ಸಂತೋಷಕ್ಕೆ ಮೂರು ಗೇಣು !!
ನಿತ್ಯ ನೆಡಯುತ್ತದೆ ಜಾತಿಯತೆ ನೇಣು.
ರಾಜಕೀಯ-ಪೊಲೀಸ್-ರೌಡಿ
ರಕ್ತದೋಕಳಿಯಲ್ಲಿ ಮಿಂದು
ನಮ್ಮ ಸ್ವಾತಂತ್ರ್ಯ ಕಿತ್ತು ತಿಂದು
ರಕ್ತ ನಿದ್ರೆಯಲ್ಲಿ ಲಾಲಿ ಹಾಡಿ.
ಹಕ್ಕುಗಳ ಸಂವಿಧಾನದಲ್ಲಿ ಕಮಲನಂತೆ ಅರಳಿದೆ
ನಮ್ಮ ಹೃದಯದಲ್ಲಿ ರಕ್ತದ ಚಿಲುಮೆನಂತೆ ಬತ್ತಿದೆ.
ಒಣಗಿದ ಮರದಂತೆ ಬಡಕಲ ದೇಹ ಮೂಲೆ ಹಿಡಿದಿದೆ
ಪಂಚ ಇಂದ್ರಿಯಗಳ ಒಣಗಿ ಹೋಗಿದೆ.
ಧರ್ಮ- ಜಾತಿ-ಲಿಂಗ ಹೆಸರುನಲ್ಲಿ ಕಿತ್ತಾಟ
ಸಂಸ್ಕೃತಿ- ಉಡುಗೆ-ಹೊಂದಾಣಿಕೆ ಮಾತಿನಲ್ಲಿ ಕೂಗಾಟ.
"ನಿಲ್ಲುವ ಸೂಚನೆ" ಅಶಯ ಕುಗ್ಗಿ ಹೋಗಿದೆ
"ನಾವೇ ಕೊಂದು" ಜೀವನ ಮುಗಿಸ ಬೇಕಿದೆ.
ಶಿವಕುಮಾರ್. ಎನ್
ಸರ್ಕಾರಿ ಪದವಿ ಪೂರ್ವ ಕಾಲೇಜು
ಗಾವಡಗೆರೆ
ಹುಣಸೂರು ತಾಲೂಕು
ಮೈಸೂರು.
7892977584
- Shinan
27 Dec 2016, 11:20 am