Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸೌಂಧರ್ಯದ ಲಹರಿ

ಕಣ್ಣಲ್ಲಿ ಕವನ.
ತಿಳಿಸುವ ಮದುರ ನಯನ.!

ಮನದಲ್ಲಿ ಮನಸ್ಸು!
ಕಾಣುವ ಮುದಾದ ಕನಸು!

ತುಟ್ಟಿಯಲ್ಲಿ ಹೊಳಪು!
ಬಂಗಾರದ ಚುಂಬನಗಳ ಬೆಳಪು!

ಮುಖದಲ್ಲಿ ಮಂದಹಾಸದ ಲಹರಿ!
ನನ್ನ ಎದೆಯಲ್ಲಿ ನೀನಾದೆ ರುವಾರಿ!

ಸೂರ್ಯನಿಗಿಂತ ಹೆಚ್ಚು ನಿನ್ನಲ್ಲಿ ಕಾಂತಿ!
ನನ್ನ ಬಾಳಲ್ಲಿ ಬರುವುದು ನೆಮ್ಮದಿಯ ಶಾಂತಿ!

ನನ್ನ ಮುದಾದ ಮನಸ್ಸಿನ ತುಂಬ!
ನಿನ್ನ ಎದೆಯ ಆಧಾರಾದ ಪ್ರತಿಬಿಂಬ!

ನಿನ್ನ ನಡೆ ನುಡಿಯಲ್ಲಿರುವ ಲಾವಣ್ಯ!
ನನ್ನ ಜೊತೆ ಶುಭಮಸ್ತು ಕಲ್ಯಾಣ!

ನಿನ್ನಲ್ಲಿರುವ ಸೌಂಧರ್ಯ ಸುಮದುರ!
ಸವಿದವನೆ ಬಾಳಲ್ಲಿ ಅಮರ!

ಧರ್ಮ

- Dharma

30 Dec 2016, 05:30 pm

*ಕಳೆದು ಹೋದ ಕ್ಷಣ ಮತ್ತೆ ಬರು

ಕಳೆದು ಹೋದವು ಅನುಭವದ ಹಳೆಯ ದಿವಸ!
ಬರಲಾರಂಭಿಸಿದವು ಹೋಸ ವರ್ಷಗಳ ವಸಂತ!

ಏಳುಬೀಳುಗಳನ್ನು ಕಂಡೆವು ದಿನನಿತ್ಯ!
ಇನ್ನಾದರು ದೂರವಾಗಲ್ಲಿ ಕಷ್ಟಕಾರ್ಪುಣ್ಯ ಪ್ರತಿನಿತ್ಯ!

ದೇಶದಲ್ಲಿ ಆನೇಕ ಸಂಪನ್ಮೂಲಗಳನ್ನು ಕಳೆದುಕೊಂಡು ಮನದಲ್ಲಿ ಕಹಿ!
ಇನ್ನಾದರು ಮುಂದಿನ ದಿನಗಳಲ್ಲಿ ಈ ಘಟನೆ ಬಾರದೆ ಇರಲ್ಲಿ ಮನದಲ್ಲಿ ಸಿಹಿ!

ಹಿಂದೆ ಎದುರಿಸಿದ ಆನೇಕ ತರಹದ ನೋವು!
ಮುಂದೆ ಮರುಕಳೆಸದೆ ಬಾಳಲ್ಲಿ ಇರಲ್ಲಿ ಸಂತೋಷದ ನಲಿವು!

ಹಳೆಯ ಅನುಭವದ ಸೋಲಿನ ಮೇಟ್ಟಿಲು!
ಹೊಸ ದಿನಗಳಲ್ಲಿ ನಿಧಾನವಾಗಿ ಏರುತ್ತೀರು
ಗೆಲುವನ್ನು ಮುಟ್ಟಲು!

ಎಲ್ಲರ ಬಾಳಲ್ಲಿ ಬರಲ್ಲಿ ಸಂತೋಷದ ಹೊಂಗೀರಣದ ಕಿರಣಗಳು!
ನಿಮ್ಮ ಬದುಕಿನಲ್ಲಿ ಬರಲ್ಲಿ ಸಂತೋಷದ ಹೊಸ ತಿರುವುಗಳು!

ಧರ್ಮ

- Dharma

30 Dec 2016, 04:56 pm

ಮಧುರ ಪ್ರೀತಿ

ಎನ್ನ ಮನ ಮಿಡಿದ ಮಾತು
ಎದೆ ತುಂಬಿ ಬಂದಾಗ ಹಿಂದೆಂದೂ ನಾ
ಕಾಣದ ಭಾವನೆ ಪ್ರೀತಿಯೆಂದು ತಿಳಿದಾಗ
ಕಣ್ಣ ಮುಚ್ಚಿ ಕಂಡೆ ಹೊಸ ಲೋಕವ,ಸಖಿ.
ಕತ್ತಲೆಯ ಹುಡುಕಿ ಮಂಕಾದೆ
ಎಲ್ಲೆಲ್ಲೂ ಬೆಳಕು.
ಅಪರವ ಗೆಲ್ಲುವ ಶಕ್ತಿ ಮಿತಿಮೀರಿತ್ತು,
ಮನಸ ಪೋಣಿಸಿ ಹುಡಕಿದೆ
ಮುಗ್ಧನಾಗಿ....ಸಖಿ

ವಿ.ಸಿ

- śsș

30 Dec 2016, 10:05 am

ಸಿನಿಮಾ

ಮನರಂಜಕ ಮಸಾಲೆ ಚಹಾ ಇದು
ಸುಮದುರ ಸಂಗಿತದ ಸಮ್ಮಿಲನವಿದು
ಮನ ಮೆಚ್ಚಿದ ನಟಿ ನಟರ ಅಭಿನಯವಿದು
ನಮ್ಮೆಲ್ಲರ ನೆಚ್ಚಿನ ಸಿನಿಮಾ ಇದು
.......ಭವ್ಯಶ್ರೀ

- ಚುಕ್ಕಿ

30 Dec 2016, 09:09 am

ತಾಯಿ ...,ಭೂ..ತಾಯಿ

ಅಂಬರದಷ್ಟು ಪ್ರೀತಿ ಇದೆ,
ಚಂದಿರನಂತೆ ಮಮತೆ ಇದೆ,
ಅರಸನಷ್ಟು ಆವೇಶವೂ ಇದೆ,
ಎಲ್ಲ ಒಪ್ಪುವಳಲ್ಲ ,ಎಲ್ಲದಕ್ಕೂ
ಹಿಂದೆ ನಿಂತಿರುವವಳು
ನಮ್ಮ ಜನನಿ.

ಕಷ್ಟಕ್ಕೆ ಹೆದರಿದವಳಲ್ಲ,
ನಷ್ಟಕ್ಕೆ ಬೆದರಿದವಳಲ್ಲ,
ನೋವ ನೀರಾಗಿಸಿ ಗಡ-ಗಡನೆ ಕುಡಿದವಳು.
ಬೆಂದ ಮನಸ್ಸನ್ನು ಬಿಚ್ಚಿಡದೆ ದುಡಿದವಳು.
ಕಾಲ ಕಾಲವ ದಾಟಿ,ಊರ-ನೂರವ ನೋಡಿ
ಕಟ್ಟಿದವಳು ಮನೆಯ.
ತಾನಾಗಿ ಶಪಿಸುವುದಿಲ್ಲ,
ತಾವಾಗಿ ಪಡೆದದ್ದೇ ಪ್ರಸ್ತುತ ಪ್ರಕ್ರತಿ ವಿಕೋಪಗಳು

- śsș

30 Dec 2016, 08:09 am

ಅಮ್ಮ.

ತಾನೇ ಸೋತು ತನ್ನವರನ್ನ ಗೆಲ್ಲಿಸಿ ನಗುವ ಸೋತುಗೆಲ್ಲುವ ಆಟ ಹೇಳಿಕೊಟ್ಟವಳು ... ಅಮ್ಮ.

- Koushik

30 Dec 2016, 01:49 am

ಕೊನೇ ಸಮಯ

ನನ್ನ ಕೊನೆಯ ಸಮಯ ಬಂದಿದೆ! ಎಂದೇ
ಇಚ್ಛೆಗೊಂಡು.....
ನಿನ್ಡೊಡನಿರುವೆ!
ಏನೂ ಮಾಡದೆ ಸುಮ್ಮನಿರು.

ಈ ಸಮಯದ ನಿನ್ನ ಸಂಗ
ನಿನ್ನ ಸನಿಹತೆ
ನನಗಿದೊಂದು ಯೋಗ
ಒಲವ ಸಾನಿಧ್ಯತೆ


ಅದೊಂದು ದಿನ
ನಮ್ಮಿಬ್ಬರ ಮಾತಿತ್ತು
ಎಲ್ಲಿಗಾದರೂ ಸರಿ
ಒಟ್ಟಿಗೆ ಹೆಜ್ಜೆಗಳನಿಡುವೆವೆಂದು

ಆದರಿಂದು ನನ್ನದೊಂದು ಬಿನ್ನಹ
ಕಾಲವಶಾತ್ ನನ್ನ ಸಮಯ ಬಂದಿದೆ
ಮುಂದಕ್ಕೆ ಎನ್ನನೊಬ್ಬನನೇ
"ನಗುತ ಕಳಿಸು; ನಿನಗಿನ್ನೂ ಸಮಯವಿದೆ"

ನಿನ್ನೊಡನಿದ್ದ ಸಂಸ್ಮರಣೆ
ಆ ಒಡನಾಟ
ಮುಚ್ಚಲಿರುವ ಈ ನನ್ನ
ಕಣ್ಣುಗಳಲಿನ್ನೂ ಹಸಿ-ಹಸಿಯಾಗೇ ಇದೆಯೋ.

ಆ ಮಧುರತೆ..
ಆ ನಿನ್ನ ಆರೈಕೆ...
ನಾ ಧನ್ಯನೋ-ಇಂತಹದು
ಅತಿ ವಿರಳರಿಗೆ ಸಿಗುವುದೋ

ಬಿಟ್ಟು ಹೊರಟೆನೆಂದು
ಧೃತಿಗೆಡದಿರು,
ನಿನ್ನ ಹೃದಯದಲಿ
ನಾನೆಂದೂ ಮಿಡಿಯುತಿರುವೆನೋ

ನನ್ನ ಅಗಲಿಕೆ
ಬರೀ ದೇಹ ವಿಚಾರದಿ
ಆದರೆ ನಾ ಅಮರನು
ನಿನ್ನೊಳಿರುವೆ, ನಿತ್ಯನಾಗಿ

ಈ ನಿನ್ನ ಅಳು-ರೋದನ,
ಈ ಬಿಕ್ಕಳಿಕೆಗಳ ತಡೆಯೋ
ಉಸಿರುಗಟ್ಟದಿರು
ನಿನ್ನ ಪ್ರತಿ ಉಸಿರಲೂ ನಾನಿರುವೆನೋ

ಆರನೂ ಕರೆಯದಿರು
ನೀನೊಬ್ಬಳೇ ಸಾಕು...
ಎನ್ನ ಭಾವೋತ್ಕರ್ಷಕೆ!
ನನ್ನ ಚಿರಮೌನಕೆ....

ನಿನ್ನೀ ಹೃನ್ಮನ,ತೊಡೆಗಳೇ ಇಂದು ವೈಕುಂಠ;
ಹೋಗಿ ಮತ್ತೆ ಬರುವೆ ನಾನು
ಅನುಕ್ಷಣ, ನಿನ್ನೊಲವ ಕಾತರದಲಿ.....
ನಿನ್ನ ಸಹಯೋಗ ನಿರೀಕ್ಷೆಯಲಿ.....

.............ಗರಿಮಾಮ'

- Prasanna kumar K S

30 Dec 2016, 12:44 am

ಓ ಜಾನು

ಅಮೃತದ ಬಿಂದು
ಎದೆಗೆ ಇಳಿದಿದೆ
ಎಲ್ಲವು ಹೊಚ್ಚ ಹೊಸ
ಜೊತೆಗೆ ನೀ ಇರಲು
ಬಲು ಹರುಷ
ಗಳಿಗೆಯಾಗಿ ಸಂದುವವು
ವರುಷ ವರುಷ
ನಿಜ ಹೇಳಲೆ ನಾನು
ಓ ಜಾನು
ನನ್ನೋಳು ನೀನು
ಸದಾ
ಜಿನುಗುವ ಜೇನು.....

- bharatakumar

29 Dec 2016, 09:41 pm

"ಮಲೆನಾಡು ಮಲ್ಲಿಗೆ" _______

ನಾಡಿನ ತುಂಬೆಲ್ಲಾ ಕನ್ನಡದ ಕಂಪು
ಕಾವ್ಯಧಾರೆಯಿಂದ ಮನಕ್ಕೆ ತಂಪು
ಕೇಳುವ ಕರ್ಣಕ್ಕೆ ಬಲು ಇಂಪು
ಸಾಹಿತ್ಯಧಾರೆ ಹರಿಸಿದರು
ರಾಷ್ಟ್ರಕವಿ ಕುವೆಂಪು!
ಪಾಂಚಜನ್ಯ ಮೊಳಗಿತು
ಶೂನ್ಯಮನ ಅರಳಿತು
ಯುವಶಕ್ತಿ ಗುಡುಗಿತು
ಶತೃಪಡೆ ನಡುಗಿತು!
ಮಲೆನಾಡಿನ ಮಣಿನಲ್ಲಿ
ಸಹಾದ್ರಿಯ ಶ್ರೇಣಿಯಲ್ಲಿ
ಜನ್ಮವೆತ್ತಿದ ಕುವರ
ಭಕ್ತಿಯಿಂದ ಎಳೆದರು
ಕನ್ನಡಾಂಬೆಯ ಥೇರ!
ರಾಷ್ಟ್ರಕವಿಯ ಸಾಹಿತ್ಯದ ರೀತಿ
ವಿಶ್ವಕ್ಕೆ ನೀಡಿತು
ಮಾನವ ಪ್ರೀತಿ
ಅಡಗಿದೆಯಲ್ಲಿ ಕನ್ನಡ ಸಂಸ್ಕ್ರತಿ
ಹೊಳೆಯಿತು ಬೆಳೆಗಿತು
ಕನ್ನಡದ‌ ಜ್ಯೋತಿ!
ನಾಡಿನಲ್ಲಿ ಕಟ್ಟಿದ್ದೀರಿ
ಕನ್ನಡ ಸಾಹಿತ್ಯ ಕೂಟ
ಹುಡುಕಿ ಬಂತು ಕನ್ನಡಕ್ಕೆ
ಪ್ರಥಮ ಜ್ಞಾನಪೀಠ!
ಮಲೆನಾಡು ಕಾನನದಲ್ಲಿ
ಮಲ್ಲಿಗೆಯ ಕುಸುಮವಾಗಿ
‌ಹೊಳಪನಿತ್ತೀರಿ ಸಾಹಿತ್ಯ ಶಿಖರಕ್ಕೆ
ಹೊನ್ನಿನ ಕಳಸವಾಗಿ!
_____________________________
(ಕುವೆಂಪು ಜನ್ಮ ದಿನಾಚರಣೆಯ ಶುಭಾಶಯಗಳು)"ಬಸವಪ್ರಿಯ"

- ಬಲವಂತ ಮೋರಟಗಿ(ಬಸವಪ್ರಿಯ)

29 Dec 2016, 09:28 pm

ಪ್ರೀತಿಯ ಸೆಳೆತ

ಕೆಣಕುತ್ತಿದೆ ನಿನ್ನ ಹ್ರದಯ
ಸೆಳೆಯುತ್ತಿದೆ ನನ್ನ. ನಿನ್ನ ಸನಿಹ!

ಬರೆಯಲಾರಂಭಿಸಿದೆ ನಿನ್ನ ಮೇಲೆ ಕವಿತೆ
ಪದಪುಂಜಗಳು ಸಿಗದೆ ನಾನು ಸೋತೆ!

ಧರ್ಮ

- Dharma

29 Dec 2016, 08:58 pm