Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬರುವಳು ರಾಣಿ

ಸಮೂದ್ರ ರಾಜನ ರಾಣಿ ಬರಲಿದ್ದಾಳಂತೆ

ಅಲೆಗಳು ಬಂದು ಬಂದು ದಾರಿ ನೋಡಿ ಹೋಗುತಿವೆ

- Ka6thi...

28 Dec 2016, 04:41 pm

ಸರ್ವವೂ ಅಮ್ಮನಿಂದ

ಅಳುವುದ ಕಲಿತೆ ಅಮ್ಮನಿಂದ
ನಗುವುದ ಕಲಿತೆ ಅಮ್ಮನಿಂದ
ಮಾತು ಕಲಿತೆ ಅಮ್ಮನಿಂದ
ಪ್ರೀತಿಸುವುದ ಕಲಿತೆ ಅಮ್ಮನಿಂದ
ಜೀವನ ನಡೆಸುವುದ ಕಲಿತೆ ಅಮ್ಮನಿಂದ
ತಾಳ್ಮೆಯ ಕಲಿತೆ ಅಮ್ಮನಿಂದ
ಸರ್ವವೂ ಅಮ್ಮನಿಂದ
ಸಕಲವೂ ಅಮ್ಮನಿಂದ
ಸರ್ವಸ್ವವೂ ಅಮ್ಮನಿಂದ

✍ಕನ್ನಡಿಗ ಅರುಣ್

- ಕನ್ನಡಿಗ ಅರುಣ್

28 Dec 2016, 02:02 pm

ಕವಿತೆ

ಕವನ ಓದುವ ಕಣ್ಣು
ಕವನ ಕೇಳುವ ಕಿವಿ
ಕವನ ಬರೆಯುವ ಕೈ
ಕೇಳುತಿರುಹುದು ನಿನ್ನನು
ಬಹು ಮದುರ ನಾನು ಬರೇಯುವೆಯ ಎಂದು!!!

- ಚುಕ್ಕಿ

28 Dec 2016, 01:57 pm

ನೀನು

ನಿನ್ ಜೊತೆ ನಗ್ತೀನಿ
ನಿನ್ ಜೊತೆ ಅಳುತಿನಿ
ನಿನ್ ಜೊತೆ ಜಗಳ ಮಾಡ್ತೀನಿ
ನಿನ್ ಜೊತೆ ನನ್ ನನಾಗಿರ್ತಿನಿ.

- ಚುಕ್ಕಿ

28 Dec 2016, 10:44 am

ನೆನ್ನೆ

ನೆನ್ನೆ ನೆನಪಾಗಿ ಹೋಗಲಿ
ನಾಳೆ ಕನಸಾಗಿ ಬರಲಿ
ನಿನ್ನ ಪ್ರೀತಿ ನನಲ್ಲಿ ಅಡಗಿ
ಕುಳಿತಿರಲಿ.

- ಚುಕ್ಕಿ

28 Dec 2016, 09:07 am

ಆಕಾಶದಲ್ಲಿ...

ಹುಣ್ಣಿಮೆ.

ತಾರೆಗಳ ಹಿಂಡನ್ನು
ಮೇಯಿಸುತ್ತ ಹೊರಟ ಚಂದ್ರ.

***
ಅಮವಾಸೆ.

ಕಾಯುವವ ಇಲ್ಲದೇ
ಚದುರಿದ ತಾರೆಗಳ ಹಿಂಡು.

- ಶ್ರೀಗೋ.

28 Dec 2016, 07:04 am

ನನ್ನನಿಸಿಕೆ...

ಚಳಿಗಾಲದ ಕುಳಿರ್ಗಾಳಿ,ಮುಂಜಾವಿನ ಚಿಲಿಪಿಲಿ
ಇಬ್ಬನಿಯ ಬಿಂಬ,ತುಂತುರು ನಿನಾದ
ಚುರುಕು ಬಿಸಿಲು,ತಂಪು ವರ್ಷಧಾರೆ
ಮುಸ್ಸಂಜೆಯ ತಂಗಾಳಿ,ಚಿಗುರೊಡೆದ ಹಸಿರು
ನೀಲಾಕಾಶದ ಬಾನಾಡಿಗಳು,
ರಂಗುರಂಗಿನ ಕಾಮನಬಿಲ್ಲಿನ ನಿಸರ್ಗ ಸಹಜ,ಸ್ವಾಭಾವಿಕ..

ಆದರೆ ..................ಮನುಷ್ಯ...?
☠ಆಸೆಬುರುಕ☠.!!!

~: special ಸುಬ್ಬು :~

- SUBRAMANYA N

27 Dec 2016, 10:54 pm

ಸ್ನೇಹಿತರು

ಮನುಕುಲದಿ ಭೇದವಿರದ ಬಂಧವಿದು
ಕುಲದ ಹೆಸರ ಈ ಸ್ನೇಹ ಬಯಸದು
ಬದುಕ ಬಂಧನವ ಬಿಡಿಸಿ ಮನಕೆ ಬಂಧವ ಬೆಸೆಯುತಿಹುದು

ದೂರಾಗಲು ಬಾಳ ಪಯಣಕೆ ದಾರಿ ತೋರುವ ರವಿಯು
ಕತ್ತಲ ಸರಿಸಿ ಬೆಳಕ ಚೆಲ್ಲುತ ಕೈ ಹಿಡಿದು ನಡೆಸುವ ಚಂದಿರರಿವರು

ಗಾಳಿ ಗೋಪುರಗಳಂತೆ ಕನಸು ಹೊತ್ತು ನಿಂತ ಮನಕೆ
ಸ್ತಂಭರಿವರು ಕನಸುಗಳು ನನಸಿನ ಗೋಪುರವಾಗಲು

ಬದುಕ ಹಾದಿಯಲಿ ಸೋತು ನಿಂತ ಜೀವಕೆ
ಸ್ಥೈರ್ಯ ತುಂಬಿ ಕನಸ ಚಿಲುಮೆಯ ಅರಳಿಸುವವರು

ನೊಂದು ನಿಂತಿರಲು ಮನವು ಜೀವನದ ಏಳು ಬೀಳುಗಳ ನಡುವೆ
ಸಂತೈಸಿ ಕೈ ಹಿಡಿದು ಹರ್ಷದ ಹೊನಲ ಹರಿಸುವವರು

ಸೋತಿರಲು ಜಗದೊಳು, ಕೈ ಬಿಡಲು ಬಂದು ಬಳಗವು
ಬದುಕ ಪ್ರತಿ ಹೆಜ್ಜೆಯ ಜೊತೆಗಿನ ಪಯಣಿಗರಿವರು

ನಗುತಿರಲು ಕಾಲೆಳೆದು ಅಳಿಸಿ ನಗಿಸಿ, ಅಳುತಿರಲು ಕಣ್ಣೀರು ಒರೆಸಿ
ಮೂಡಿರಲು ತುಂಟತನವು ಮನದಲಿ, ಹಾರುತಿರಲು ಮನವು ರೆಕ್ಕೆ ಬಿಚ್ಚಿ
ಒಡಗೂಡಿ ಬರುವವರು ಈ ಒಡನಾಡಿ ಸ್ನೇಹಿತರಿವವರು

- ಶ್ರೀಕಾವ್ಯ

27 Dec 2016, 10:08 pm

ಸಂತೋಷ

ನನ್ನಂತರಂಗದಲಿ ಪುಟಿದಾಗ
ಆತ್ಮ ವಿಶ್ವಾಸ ...

ನನ್ನ ನಾನು ಪ್ರೀತಿಸಲಾರಂಭಿಸಿದಾಗ
ನವೋಲ್ಲಾಸ...

ಸಂತಸದ ಕಂಬನಿ ಸುರಿಸಿದಾಗ
ಸುಖದಾಭಾಸ...

ಬಂದ ಕಷ್ಟವನೆದುರಿಸಿದಾಗ
ಏರಿದಂತೆ ಆಗಸ...

ಸಂಭ್ರಮ ನನ್ನಲಿ ಇರುವಾಗ
ಬೇರೆಲ್ಲಿ ಅರಸಲಿ ಸಂತೋಷ
ಬೇರೆಲ್ಲಿ ಅರಸಲಿ ಸಂತೋಷ...

ಕವಿ ರಾಜ

- kavita Rajesh

27 Dec 2016, 07:57 pm

ಇಂದು

ಕಣ್ಣಲ್ಲಿ ಕಂಡು
ಕನಸಲ್ಲಿ ನಿಂದು
ಮನದಾಳದ ಮೌನವ ತೊರೆದು
ಬರುವೆಯ ನನ್ನ ಹೃದಯಕೆ ಇಂದು
... ವೀರು

- ವೀರು

27 Dec 2016, 06:44 pm