Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಸಮಯವ ಕಳೆಯಲು
ಸಮಯದ ಹಿಂದೆಯೆ ಸಾಗಬೇಕು
ಜೀವನ ಕಳೆಯಲು
ಜೀವನದ ಹಿಂದೆಯೆ ನಡೆಯಬೇಕು
ಪ್ರೀತಿಯ ಪಡೆಯಲು
ಪ್ರೀತಿಯ ಹಿಂದೆಯೆ ಹೋಗಬೇಕು
ಮುಕ್ತಿಯ ಪಡೆಯಲು
ಭಕ್ತಿಯ ಮಾರ್ಗದಲ್ಲೆ ಹೊಂದಬೇಕು
ಕನ್ನಡಿಗ ಅರುಣ್
- ಕನ್ನಡಿಗ ಅರುಣ್
26 Dec 2016, 05:22 pm
ಮಾಘಿಯ ಮಂಜು
ಬುವಿಯ ಹೊದ್ದಿರಲು
ಗೂಡು ಹೊಕ್ಕ ಹಕ್ಕಿ
ರೆಕ್ಕೆ ಹೊದ್ದು ಕುಳಿತಿರಲು
ತರು ಲತೆ ಇಬ್ಬನಿಯ
ಕೂಡಿರಲು
ಜಗವು ಚಳಿಯಲಿ
ಮಿಂದಿರಲು
ಮುಸುಕಿದ ಮಂಜಿನ
ಅಪ್ಪುಗೆಯ ಮುತ್ತಿಗೆ
ಸೂರ್ಯನು
ಚಂದ್ರನಾಗಿ
ತಂಪಾಗಿ ಹೋದ
- ಸಂತೋಷ್ ( ರಾದೇ)
26 Dec 2016, 12:17 pm
ಸಂಜೆ ಮುಗಿಲು ಕೆಂಪಾದಗ
ನಿನ್ನ ನೆನಪು ಗೆಳತೀ
ನಾಚಿ ರಂಗೇರಿದ ನಿನ್ನ
ಮೊಗದ ನೆನಪು ಗೆಳತೀ
ಬಾನ ರವಿ ಜಾರೋ ವೇಳೆ
ಇರುಳ ಶಶಿ ತೇಲೋ ವೇಳೆ
ಬಾನ ಹಕ್ಕಿ ಹಾಡಲ್ಲಿ ನಿನ್ನ
ಹೆಸರೇ ಹಾಡ್ಯವೇ
ಗೋಧೂಳಿ ವೇಳೆ
ಕರುವು ನಿನ್ನ ಕೂಗಿರಲು
ಇರುಳ ತಾರೆ ಬಂದು ಸೇರಾವ
ನಿನ್ನ ಮೊಗವ ನೋಡಲೆಂದು
ನಿನ್ನುಸಿರ ನೆನಪು
ಬೀಸೋ ತಂಗಾಳಿಯಲಿ
ನಿನ್ನದೇ ಸುಧೆ
ಪಸರಿಸಿದ ಪರಿಮಳದಲಿ
ನಿನ್ನ ನೆನಪು ಗೆಳತೀ
- ಸಂತೋಷ್ ( ರಾದೇ)
26 Dec 2016, 11:31 am
ಒಮ್ಮೆ ಅರಳಿದ ಹೊ
ಬಾಡುವದಂತೊ ನಿಜ, ಹಾಗೆಯೇ
ಒಮ್ಮೊಮ್ಮೆ ಅರಳಿದ ನಮ್ಮ ಭಾವನೆ,
ಅಳಿಯದ ಮುನ್ನ ಸಾರ್ಥಕ
ಮಾಡಿಕೊಳ್ಲಬೇಕು ಮುಂದಿಟ್ಟ ಹಜ್ಜೆ
ಹಿಂದಕ್ಕೆ ಇಡದಂತೆ ನಡೆದು
ಕೊಳ್ಳಬೇಕಬೇಕವೇ
- kasturi pattar
25 Dec 2016, 11:27 pm
ಪ್ರತಿ ನೋವು ನಮದೇನೆ
ಪ್ರತಿ ನಲಿವು ನಮಗೇನೇ
ನೋವು ನಲಿವು ಇರದೆನೇ
ಯಾವ ಜೀವಿ ಇರುತಾನೇ...!
- ಭರತ್
25 Dec 2016, 11:23 pm
ಮನಸ್ಸು ಮಲ್ಲಿಗೆ
ಅರಳು ಮಲ್ಲಿಗೆ
ನನ್ನದೆಯ ಬಾನಿನಲ್ಲಿ
ನಲುಗಿರುವ ಜೀವನದಲ್ಲಿ!
ಕಷ್ಟದ ಬಾಳಿನಲ್ಲಿ
ಕಲ್ಪನೆಯ ಕಾನನದಲ್ಲಿ
ಚೈತನ್ಯದ ಚಿಲುಮೆಯಾಗಿ
ಮಿನುಗುವ ತಾರೆಯಂತೆ!
ನೊವುಂಡ ಜೀವನದಲ್ಲಿ
ಕಮರಿದ ಕಂಗಳಲ್ಲಿ
ಭರವಸೆಯ ಶಿಖರವಾಗಿ
ಹುಣ್ಣಿಮೆಯ ಚಂದ್ರನಂತೆ!
ಕಳವಳದ ಬಾಳಿನಲ್ಲಿ
ಹೊಂದಿರುವ ಜೀವನದಲ್ಲಿ
ಪ್ರೀತಿಯ ಸೆಲೆಯಾಗಿ
ಭರವಸೆಯ ಭಾವವಾಗಿ!
___________________________
"ಬಸವಪ್ರಿಯ"
- ಬಲವಂತ ಮೋರಟಗಿ(ಬಸವಪ್ರಿಯ)
25 Dec 2016, 03:50 pm
ಪ್ರಪಂಚದ ಭೂಪಟದಲ್ಲಿ
ಭಾರತಂಭೆಯ ಮೆರಗು
ಭಾರತಂಭೆಯ ಮಡಿಲ್ಲಲ್ಲಿ
ಕನ್ನಡಂಭೆಯ ಸೊಬಗು
ಕನ್ನಡಂಭೆಯ ನೆಲದಲ್ಲಿ
ಕಾವೇರಿ ಕಪಿಲಾರ ಗುಂಗು
ಕಾವೇರಿ ಹರಿದು
ಕನ್ನಡಿಗರ ಧನಿವು ಥನಿಸಿ
ಜೋಗುಪಾಲ್ಸ್ ದುಮ್ಮುಕಿ
ಕನ್ನಡದ ಭಾವನೆಗಳು ಬೆಳಗಿಸಿ
Dharma
- Dharma
25 Dec 2016, 02:56 pm
ಸ್ನೇಹವೆಂಬುದು ಶುಭ್ರವಾದ
ನೀಲಿ ಅಗಸದಂತೆ
ಹರಿಯುವ ತಿಳಿ ನೀರಿನ ಕಲರವದಂತೆ
ಇಲ್ಲಿ ಕೊಂಕು ಬಿಂಕಗಳಿಲ್ಲ .
ಜಾತಿ ಮತಗಳಿಲ್ಲ
ನಾನು ತಾನು ಎಂಬುದಿಲ್ಲ.
ನವ ಚೇತನ ನಿತ್ಯ ನೂತನ
ಅನುದಿನ ವಸಂತಮಯ ಈ ಗೆಳೆತನ.
ಈ ಸ್ನೇಹಕ್ಕೆ ಎಲ್ಲೇ ಇಲ್ಲ
ಎರಡು ಜೀವಗಳ ಆತ್ಮ ಸಂಬಂಧವಿದು
ಎಲ್ಲೋ ಇರುವ ಒಂದು ಜೀವ
ಇನ್ನೆಲ್ಲೋ ಇರುವ ಇನ್ನೊ೦ದು ಜೀವದ
ನಡುವೆ ಬೆಸೆಯುವ ಆತ್ಮ ಸಂಯಮವಿದು
ಸುವರ್ಣ ಸೇತುವೆಯಿದು.
ನೋವು ನಲಿವಿಗೂ ಸ್ಪಂದಿಸುತ
ದಿಕ್ಕು ತಪ್ಪಿದಾಗ ದಾರಿ ತೋರುತ ನಿನ್ನ ಏಳ್ಗೆಯೇ ನನ್ನ ಏಳ್ಗೆ ಎಂಬುದೇ ನಿಜವಾದ ಸ್ನೇಹ
ಈ ಸ್ನೇಹ ಅಮೃತ ಜಲದಂತೆ ಸದಾ ಜೀವಂತಧಾರೆ.
- veda
25 Dec 2016, 02:42 pm
ಜೀವಕ್ಕೆ ಜೀವವು ಕನ್ನಡ ಬಾವವು
ರಾಗಕ್ಕೆ ರಾಗವು ಕನ್ನಡದ ಅಕ್ಷರ ಸಾರವು
ಅ ಎಂಬ ಅಕ್ಷರ ಅಪ್ಪ ಅಮ್ಮ ಮಮ್ಮಕರ
ಅಪ್ಪ ಅಮ್ಮ ಎನ್ನುವ ಎಲ್ಲ ಜನರಿಗೆ ನಮಸ್ಕರ
ಸ್ವಥ೯ ಇಲ್ಲದ ಸ್ವಗಾ೯ವು ನಮ್ಮ ಕನ್ನಡ ಬಳಗವು
ಯಾರಿಗೂ ದ್ರೋಹ ಬಗೆಯುವ
ಚಿಂತೆ ಇಲ್ಲದೆ ಮಲಗುವ
Dharma
- Dharma
25 Dec 2016, 01:51 pm
ಹಸಿರು ನಕ್ಷತ್ರಗಳಿಗಾಗಿ
ನೀವು ನೀಲ ಗಗನದಲ್ಲಿ
ಹುಡುಕಬೇಡಿ!
ಅವುಗಳು ನೀವೆ
ಮೆಟ್ಟಿರುವ
ಕೆಂಪೊ ಕಪ್ಪೊ
ಮಣ್ಣಿನಲ್ಲಿ ಚಿಗರಿ
ಮಿನುಗುತ್ತಿರುತ್ತವೆ!
-------ಪದ್ಯಾಣ.
- padyana
25 Dec 2016, 10:46 am