Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸಖಿ....

ಸಖಿ...

ಸನಿಯ ನೀನಿರಲು ಮನವೆಲ್ಲ ಕಾವ್ಯದ ಹೂರಣ
ಮರೆಯಾದಂತೆಲ್ಲ ಮನಸ್ಸಿಗೆ ಮೌನದ ತೋರಣ.

ಸಂದೀಪ್ ಬಿ ಶೆಟ್ಟಿ(ಸ್ಯಾಂಡೀ.‌‌...)

- Sandeep B Shetty (ಸ್ಯಾಂಡೀ....)

22 Dec 2016, 12:17 pm

ಎಲ್ಲಿದೆ ಜಾತಿ.....??!

ಎಲ್ಲಿದೆ ಜಾತಿ?...

ತಿನ್ನುವ ಅನ್ನಕ್ಕಿಲ್ಲದ
ಜಾತಿ. ..
ಕುಡಿಯುವ ನೀರಿಗಿಲ್ಲದ
ಜಾತಿ. ..
ಉಸಿರು ನೀಡುವ
ಗಾಳಿಗಿಲ್ಲದ ಜಾತಿ
ಸುಡುವ ಬೆಂಕಿಗಿಲ್ಲದ
ಜಾತಿ. ..
ಉಡುವ ಬಟ್ಟೆಗಿಲ್ಲದ
ಜಾತಿ. ..
ನೀಡುವ ಕೈಗಳಿಗಿಲ್ಲದ
ಜಾತಿ....
ಪ್ರಾಣಿ ಪಕ್ಷಿಗಳಿಗಿಲ್ಲದ
ಜಾತಿ. ..

ಹುಲು ಮಾನವರಿಗೇಕೆ

ತಿನ್ನುವ ಅನ್ನವನ್ನು
ಕೇಳುವಿರಾ ನೀನು
ಯಾವ ಜಾತಿಯ ರೈತ
ಬೆಳೆದಿರುವನೆಂದು. .

ಬೀಸುವ ಗಾಳಿಗೆ
ಕೇಳುವಿರಾ ನಿನ್ನದು
ಯಾವ ಜಾತಿ ಎಂದು

ಕುಡಿವ ನೀರಿಗೆ
ಕೇಳುವಿರಾ ನೀನು
ಯಾವ ಜಾತಿಯ ರೈತನ
ಭಾವಿಯ ನೀರೆಂದು. ..

ಉಡುವ ಬಟ್ಟೆಯನು
ಕೇಳುವಿರಾ ನೀನು
ಯಾವ ಜಾತಿಯ
ಕಾರ್ಮಿಕನ ಕಲೆಯೆಂದು

ಹಸಿವು ನೀಗಿದರೇ
ಸಾಕು. ..
ದಾಹ ತೀರಿದರೇ
ಸಾಕು. ..
ಮಾನ ಮುಚ್ಚಿದರೇ
ಸಾಕು. ..
ಕಷ್ಟಕ್ಕೆ ದಾರಿ ಸಿಕ್ಕರೆ
ಸಾಕು. .
ಬೆಚ್ಚಗಿದ್ದರೆ
ಸಾಕು. ....

ಮತ್ತೇಕೆ ನಮಗೆ
ಜಾತಿಯೆಂಬ ಪದ ಬೇಕು....??!!

- Rashmi

22 Dec 2016, 12:06 pm

,,ಕರ್ಪೂರ,,


ನಾನಿಲ್ಲದೆ ನಿನಗೆ ಪೂಜೆ ಪುರಸ್ಕಾರವೂ ಇಲ್ಲ
ಉಪವಾಸದ ಬಿಡುವಿಗೂ ಆ ಭೋಜನದ ನಂಟಿರುವಂತೆ
ರಬ್ಬರಿನ ಚೀಲದಲ್ಲಿ ಬಂಧಿಯಾಗುವೆ ಒಂದಿಷ್ಟು ದಿನ
ಮತ್ಯಾರೋ ಭಕ್ತರ ಹಾದಿಯನ್ನು ಕಾಣುವಂತೆ....

ನನ್ನ ಬಾಳಲಿ ಯಾವ ಮೋಹ ಮೋಸಗಳಿಲ್ಲ ನಿಮ್ಮಂತೆ
ನಿಮ್ಮ ಕಾಮನೆಯ ಸಾಕ್ಷಿಗೆ ನನ್ನ ಸುಡುವವರು ನೀವೆಲ್ಲ
ಆದರೂ ನಲಿವಿದೆ ಆ ನೋವಿನಲೆ ತ್ಯಾಗದ ಬೆವರು ಇದೆ
ಆದರೂ ಅವರ ಕಷ್ಟಗಳ ಸುಟ್ಟೆನೆಂಬ ಸಂತಸವಿದೆ ಮನದಲ್ಲಿ....

ಸುಡುವ ಬೆಂಕಿಯಲ್ಲಿ ಸುಟ್ಟು ಧಗಧಗನೆ ಉರಿಯುತಿರೆ
ನೀವ್ ಮಾತ್ರ ಕಣ್ಮುಚ್ಚಿ ನಿಲ್ಲುವಿರಿ ಮೌನಿಯಂತೆ
ಮತ್ತೆ ನನ್ನೊಡಲ ಕಾವಿಗೆ ಕೈಯಿಟ್ಟು ಮುಗಿಯುತಿರೆ
ಮಂದಹಾಸವಿದೆ ಈ ಕರಕಲು ಘಮವೇ ನಿನ್ನ ಉಸಿರು ಎಂಬಂತೆ....

ಓ ಢಾಂಬಿಕ ಭಕ್ತನೆ ನಿನ್ನೊಳಿರುವ ದೇವನ ನೀಕಾಣೇ
ಕಲ್ಲು ಮಣ್ಣುಗಳ ಪೂಜಿಸುವ ಹುಂಬನಂತಾದೆಯೆ
ಅರಳಿದ ಹೂವುಗಳ ಕಿತ್ತು ನೀ ಸದ್ಭಕ್ತನಾಗುವೆಯೆ
ಮನದ ಅರಿಷಡ್ವರ್ಗಗಳ ಮೆಟ್ಟಿ ನಿಲ್ಲು ನೀ ನೋಡು ಎಲ್ಲವೂ ದೇವನೇ....

ಸಂದೀಪ್ ಬಿ ಶೆಟ್ಟಿ(ಸ್ಯಾಂಡೀ....).

- Sandeep B Shetty (ಸ್ಯಾಂಡೀ....)

22 Dec 2016, 10:42 am

ಕಣ್ಣು , ರೆಪ್ಪೆ

ಮೈ ಮರೆತು ಹೂವ ಚೆಲುವ
ನೋಡಿದ ಕಣ್ಣುಗಳು
ಹಾಗೆ ರೆಪ್ಪೆ ಮುಚ್ಚಿದವು
ಹೂವ ಚಿತ್ರವ ಸೆರೆಹಿಡಿಯಲು ...
ರೆಪ್ಪೆ ತೆರೆಯೆ ಅರಿಯಿತು
ಮನಸು ಕಳೆದುಹೋಗಿ
ಹೂವಲಿ ಅಡಗಿ ಕುಳಿತದು,,,,
ಅರಳಿದ ಕಣ್ಣುಗಳು
ಹೂವೊಳಗಿ ಹುದುಗಿದ ಮನಸ
ಸೊಬಗ ಸವಿಯಲು
ರೆಪ್ಪೆ ಬಡಿಯದೆ ನೋಡಿ ನಲಿಯಿತು ..

----ಭಾರತಿ .

- Bharavi

22 Dec 2016, 09:23 am

~~~¶ಹೊಡೆದ ಕೊಳಲು ನಾನು¶~~~

ಹೊಡೆದ ಹೊದ ಕೊಳಲು ನಾನು
ಸೇರಿಸಿ ನುಡಿಸಲಾಗದಿನ್ನು
ಹರಿದ ತಂತಿಯ ವೀಣೆಯನೆಂದು
ನುಡಿಸಬಾರದು ಹೊಮ್ಮದು ರಾಗವು
ಪ್ರೇಮದ ಉಸಿರನಿತ್ತು ಭಾವನೆಗಳ ತುತ್ತನಿತ್ತು
ನುಡಿಸಿದಳಂದು ಕೊಳಲನು
ಬಿರುಸು ನುಡಿಯ ಬಂಡೆಗಿಂದು ಎಸೆದು ಎಲ್ಲೊ ಹೋದಳು

ಮಾತು ಮಧುರ, ಮನಸು ಸುಮಧುರ
ನಯನಗಳಲೆ ಕವಿತೆ ಬರೆದು
ಕೆಂದುಟಿಗಳ ನಡುವೆ ಬೀಗಿದು
ನುಣುಪು ಬೆರಳು ಕೊಳಲಿಗೊತ್ತಿ
ಪ್ರೇಮಗಾನ ಹೊಮ್ಮಿಸಿ ಮನಸು ತಣಿಸಿ ನಲಿದಳು
ಮಡಿಲ ಮಗುವು ನಾನಾಗಿರಲು
ಕೊಡವಿ ಎದ್ದು ಹೋರಟಳು
ಕಾರಣವಿಲ್ಲ, ಕಾಣಲೆ ಇಲ್ಲ
ಅವಳು ಹೋದ ದಿಕ್ಕಲಿ

ಎಸೆದು ಹೋದ ಕೊಳಲು ನಾನು
ಒಡೆದ ಕೊಳಲು ಕೊಳುವರಿಲ್ಲ ಜಗದಲಿ
ಭಾವನೆಗಳ ಹೂಗಳೆಲ್ಲ ನಲುಗಿ ಹಸುನಿಗಲು
ಅವಳ ಪಾದದಿಂದ ಬಿಡುಗಡೆಯ ಪಡೆಯದಾದವು
ಒಡೆದ ಕೊಳಲನು ಕಣ್ಣ ಹನೀಯು ತೊಳೆಯಲು
ಮತ್ತೆ ಹಸಿರಾಗಿ ಚಿಗುರುವುದೇನು ಬೀದಿರು

ಅವಳು ಹೋದ ದಾರಿಯಲ್ಲಿ ಎಲ್ಲವು ಹಸಿರ ಹೊನಲು
ನಾನು ಇದ್ದ ಜಾಗವೆಲ್ಲ ಮುರಿದ ಗುಡಿಸಲಿನ ಕಾವಲು
ಮರೆತಳಿಂದು ಇತ್ತ ಚುಂಭನದ ಲೆಕ್ಕವನ್ನು ಚುಕ್ತಮಾಡದೋದಳು
ಬಳಸಿದ ಕೊಳಲ ಕೊರಳ ಸೀಳಿ ಮರಳಿ ಬಾರದೋದಳು....,

-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

22 Dec 2016, 07:54 am

ಬಾನಾಡಿ(ಜನಪದ ಶೈಲಿ)

ಹಸುರಾದ ಮರವೊಂದ
ನೆಟ್ಟಿಕೋ ಎದೆಯಾಗ
ಬಾನಾಡಿ ಬಂದೇ ಬರುತೈತಿ!
ಬಾನಾಡಿ ಬಂದೇ ಬರುತೈತಿ
ಗೂಡೊಂದ
ಕಟ್ಟಿ , ಹಾಡೊಂದಾ ಹಾಡ್ತೈತಿ!!

✍ಮಲ್ಲಿಭಾಗವತ ಗುಡಿಬಂಡೆ✍

- ಮಲ್ಲಿಭಾಗವತ್ ಗುಡಿಬಂಡೆ

22 Dec 2016, 12:33 am

ನಗು-ಮಗು

ನಿನ್ನ ಪ್ರೀತಿಯ ನಗು
ನನ್ನ ಮನಸ್ಸಿನ ನಗು
ನನ್ನವಳು ಚಲುವೆ ನೀನು
ಕನಸಲಿ ಬಂದವಳು
ಮನಸನು ಕದ್ದವಳು
ನನ್ನ ಹೃದಯದ ಬಡಿತ ನೀನು
ನಿನ್ನ ಮನಸಿನ ರಾಜ ನಾನು
ನೀನೆ ನನ್ನ ನಗು-ಮಗು.
✍ರಾಜು ಹಗ್ಗದ✍

- ರಾಜು ಹಗ್ಗದ

22 Dec 2016, 12:07 am

ಕ್ಷಮೆ

ನಿನ್ನ ಮನಸ್ಸು ನೋಯಿಸಿದ್ದಕ್ಕೆ
ನಿನ್ನ ಮೇಲೆ ಕೋಪಿಸಿಕೊಂಡಿದ್ದಕ್ಕ
ನಿನ್ನೊಂದಿಗೆ ಸರಿಯಾಗಿ ಮಾತನಾಡದ್ದಕ್ಕೆ
ನಿನಗೆ ಬೇಸರಿಸದ್ದಕ್ಕೆ
ಈ ಪುಟ್ಟ ಹೃದಯದ
ಕ್ಷಮೆ ಇರಲಿ.


✍ರಾಜು ಹಗ್ಗದ✍

- ರಾಜು ಹಗ್ಗದ

21 Dec 2016, 10:25 pm

"ನಾನು-ನೀನು" ____________

ಮನಸ್ಸು ಗೆದ್ದವಳು ನೀನು
ಮನಸ್ಸು ಸೋತವನು ನಾನು
ಕನಸ್ಸು ಕೊಟ್ಟವಳು ನೀನು
ಕನಸ್ಸು ಕಂಡವನು ನಾನು!
ದೇಹ ನನ್ನದು
‌‌‌ ಆತ್ಮ ನಿನ್ನದು
ಹಾಡು ನನ್ನದು
ಭಾವ ನಿನ್ನದು!
ಭತ್ತಿ ನಾನು
ಜ್ಯೋತಿ ನೀನು
ಕತ್ತಲೆ ನಾನು
ಬೆಳಕು ನೀನು!
ನೀನಿಲ್ಲದೆ ನಾನಿಲ್ಲ
ನಾನಿಲ್ಲದೆ ನೀನಿಲ್ಲ
ನಾವಿಬ್ಬರೂ ಒಂದೂಗೂಡದ್ದರೆ
ಬದುಕಿಗೆ ಅರ್ಥವಿಲ್ಲಾ!
_____________________________
*ಬಸವಪ್ರಿಯ*

- ಬಲವಂತ ಮೋರಟಗಿ(ಬಸವಪ್ರಿಯ)

21 Dec 2016, 08:31 pm

ಮಾಯಾಲೋಕ

ಮಾಯಾಲೋಕವಿದು
ಬಡವರಿಗೆ ಒಂದು
ಶ್ರೀಮಂತರಿಗೆ ಇನ್ನೊಂದು
ಬಲ್ಲೆನೆಂದರೆ ಒಂದು
ಗೊತ್ತಿಲ್ಲ ಎಂದರೆ ಒಂದು
ಆಹಾರವಿಲ್ಲದೆ ಉಪವಾಸ ಹಲವರದು
ಆಹಾರವಿದ್ದರೂ ಉಪವಾಸ ಕೆಲವರದು
ಜೇಬುಗಳು ಭರ್ತಿ
ಮನಸುಗಳು ಖಾಲೀ
ಇದೊಂದು ರಂಗ ಮಂದಿರ
ಕೆಲವರು ಅತ್ತರೂ ನಗಬೇಕು
ಕೆಲವರು ನಕ್ಕರೂ ಅಳಬೇಕು
ಮಾಯಾಲೋಕವಿದು
ಇದರ ಮರ್ಮ ವಿಧಿಯೇ ಬಲ್ಲದು

- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)

21 Dec 2016, 07:19 pm