Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹರೆಯದ ಹಳಿ ತಪ್ಪಿಸಿದವಳು

***
ಹಸರಗಿಡದಾಗ ಕುಂತ ಗಿಳಿಮರಿಯಹಂಗ
ಹಗಲ್ಯಾಲ ಕತ್ತತಿರುವಿ ನೋಡ್ತಿದ್ದಿ. ನಾ
ಹಾಳಾಗಿಹೋದಮ್ಯಾಲ ನೀನೂ ಹಳ್ಳದಕಡೆ ಹಾಳಾಗಿ
ಹೋಗ್ತಿನಂದಿದ್ದಿ. ಈಗ
ಹಳ್ಳದ ದಂಡಿಮ್ಯಾಲ ನಿಂತು ಮತ್ತ ಮತ್ತ ನನ್ನ ಮಾರಿ
ಹೊಳ್ಳಿ ನೋಡಿದರ ನಾ
ಹೆಂಗ ಮಾಡ್ಲಿ??
ಹೇಳು ನಿನ್ನ ತಿರುಗಿ ನೋಡೋ ನೋಟದಾಗದೇನ
ಹಂತಾ ಮಾಟೈತಿ
ಹಳಿನೆನಪ್ಯಾಕ ಮತ್ತ ಮತ್ತ ಕೆದಕ್ತಿ? ಕೆದ್ಕಬ್ಯಾಡ ನನ ಗೆಳತಿ
ಹೇಳಿದರ ನಿನಗೆಲ್ಲಿ ತಿಳಿತೈತಿ ನನಗ
ಹಳ್ಳದ ಕಡೆಗೆ ಹೊಳ್ಳಿ ಹೊಳ್ಳಿ ನೋಡಾಂಗಾಕ್ಕೈತಿ.

=ಎಲ್ಲಾರ್_ಸೂರ್ಯ*

- ಸುರೇಶ ಎಲ್.ರಾಜಮಾನೆ

21 Dec 2016, 07:16 pm

~~~¶ಬೆಸರದ ಸಂಜೆ¶~~~

ಪ್ರತಿ ದಿನವೂ ಬೆಸರದ ಅದೆ ಸಂಜೆ
ನನ್ನೂರಿನ ದಿಬ್ಬದಲಿ ಅದೆ ಏಕಾಂತ
ಮುಸ್ಸಂಜೆಯ ಕೆಂಬಣ್ಣದೊಕಳಿ
ಬಾನಂಗಳದ ಅಂದರದ ಮೇಲೆ
ಕಿರಣ ಲೀಲೆಯ ಸೊಬಗು
ಭೂ ಮಡಿಲ ಕುಟಿರದ ಒಳಗೆ

ಹಚ್ಚನೆ ಹಸುರಿನ ತಲಿರೆಲೆಯ ಮೇಲೆ
ಮುತ್ತಿಕ್ಕುತಿದೆ ಕಿರಣ ಕಾಂತಿ
ಮಣ್ಣನೆ ಹೊನ್ನಗಿಸುತಿರುವ
ಸಂಜೆಯ ಹೊಳಪಿನ ಕಂಪಿಗೆ
ತರುಲತೆಯ ವಿರಹದಾಟ
ಪ್ರೆಕೃತಿಯ ಮಡಿಲಿನಲಿ ಮೌನದ ಛಾಯೇ

ಓಡುವ ನದಿಯ ಆಲೆಯಲ್ಲಿ
ಯಾಕೋ ಮೌನದ ಚಿತ್ರಣ
ಕಾಣುವೆ ನಾನು ನನ್ನದೇ ಮುಖ
ಕನ್ನಡಿ ತಾನಾಗಿ ತೋರುವದಾಗ
ಹಿಂದೆ ಯಾರೊ ಇಣುಕಿದಂತೆ
ಮಾಯವಾಗುವುದು ಮತ್ತದೆ ಏಕಾಂತ

ತೇಜನು ಜಾರುತಿಹನು
ಮೋಡಣದೂರಿನ ಹಿಳಿಜಾರಿನಲಿ
ಚಂದಿರನು ಇಣುಕುತಿಹನು
ಪಡುವಣ ಬಾನಂಗಳದಲಿ
ಸುಳಿವಿಲ್ಲ ಅಲ್ಲಿ ನಿನ್ನ ಕಾಲ್ಗೆಜ್ಜೆ ನಾದ
ಅನಿಸುವುದು ಒಮ್ಮೊಮ್ಮೆ ಕಿವುಡನೆ ನಾನೆಂದು!

ಅದ ಮಾಡಿ ಕಾಯುತಿರುವೇ ವೀಣೆಯನು
ವೈಣಿಕನಾಗಿ ದಣಿವಿಲ್ಲದೆ ನುಡಿಸಬೇಕಿದೆ ನಾನು
ನರ್ತಿಸಲು ನೀ ಜೊತೆ ಇಲ್ಲದ ಕೊರಗೊಂದೆ
ವಿರಹದ ಕವಿತೆಯ ಬರೆದು ಧ್ವನಿ ಗೂಡಿಸುತಿದೆ
ಮೌನಕೆ ವಶವಾಗುತಿದೆ ಹೃದಯ ವೀಣೆ
ನೀ ಇಲ್ಲದ ಗುಡಿಯಲಿ ನಿಶ್ಯಬ್ಧ ತಬ್ಬುತಿದೆ

ವಿರಹದ ಅಲೆಯು ಧುಮ್ಮಿಕ್ಕಿದೆ ಕಡಲು
ನಿನ್ನ ನೆನಪಿನಲಿ ಸೋರಗುತಿದೆ ಒಡಲು
ಕಾಡುವುವು ಜೊತೆ ಕಳೆದ ನೆನಪುಗಳು
ಒಲವುಕ್ಕುವ ನಿನ್ನ ಪ್ರೇಮದ ಫಸಲು
ಹಸಿರಿನ ಪೊಟರಿನಲಿ ನುಲಿಯುತಿದೆ ಕಘಗಾನ
'ನಲ್ಲೆ ನೀ ಇಲ್ಲದೆ ಭಿಮ್ಮೆನ್ನುತಿದೆ ರಮ್ಮೂಧ್ಯಾನ'

-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

21 Dec 2016, 06:03 pm

ಪ್ರೀತಿ

ಆಸೆಗಳ ಸರಮಾಲೆ
ಕನಸುಗಳ ಸರೆಮನೆ
ಭಾವನೆಗಳ ಭಲೆ
ಮನಸ್ಸುಗಳ ಸೆಲೆ
ಹೃದಯಗಳ ಸಂಗಮ

✍ರಾಜು ಹಗ್ಗದ✍

- ರಾಜು ಹಗ್ಗದ

21 Dec 2016, 05:35 pm

ಕುಸುಮಬಾಲೆ ..

ಕೈಗೆಟುಕಿದ ಮರೀಚಿಕೆ
ಕೈಹಿಡಿದ ಮಾಯಾ ಜಿಂಕೆ..
ಮನದಾಳದ ಆಸೆ
ಮನದೊಳಗಿನ ಒತ್ತಾಸೆ ..
ಹೊಳಪು ಕಣ್ಣಂಚಿಗೆ
ಬೆಳಕು ಕಣ್ಣೊಳಗೆ ...
ಗಗನ ಕುಸುಮವೆ
ಗಿಡದ ಹೂವಾಗಿ ನಗುತಿರುವೆ..
ಎಲ್ಲವೂ ನೀನೇ ಆಗಿಹೆ
ನೀಡಲೇನು ನಿನಗೆ ಎಂದೆ ..
ನನದೊಂದು ಕೋರಿಕೆ
ಬರೆದು ಹಾಡು ಕವಿತೆ
ಮನವಿಟ್ಟು ಕೇಳುವ ಬಯಕೆ
ಎಂದಳು ಕುಸುಮಬಾಲೆ ...

---ಭಾರತಿ

- Bharavi

21 Dec 2016, 02:57 pm

ಶೂನ್ಯ

ಶೂನ್ಯದ ಸುತ್ತ ಸುತ್ತಬಾರದು ಮನಸ್ಸು
ಸುತ್ತಿದರೆ,! ಶೂನ್ಯದಿಂದಲೆ ಸಂಪದಿಸಬೇಕು
ಹೊಸತೊಂದರ ಸೃಷ್ಟಿಗೆ....

- ಈಶ

21 Dec 2016, 02:53 pm

ಅಷ್ಟೇ

ಪದೆ ಪದೆ ಕಾಡುತ್ತಿರುವುದು
ನೀನಲ್ಲ,ನಿನ್ನ ಪ್ರೀತಿ ಅಲ್ಲವೇ ಅಲ್ಲ
ನೀ ನುಣುಚಿಕೊಂಡು ಹೋದ ರೀತಿ ಅಷ್ಟೇ

- prajna

21 Dec 2016, 02:48 pm

ಆ ರಾತ್ರಿ

ನನ್ನ ನೀ ಬಿಟ್ಟು ಹೋದ ಆ ರಾತ್ರಿ
ಚೂರಾದ ಹೃದಯವನು
ಎಲ್ಲಿ ಬಚ್ಚಿಡುವುದು ತಿಳಿಯದೆ
ಕಣ್ಣ ಚೀಲದಡಿಗೆ ಅಡಗಿಸಿಟ್ಟೆ

- prajna

21 Dec 2016, 12:44 pm

ಮಂದಹಾಸ

ಮಂದಾರ ಸುಮದಂಥ,
ಮಂದಹಾಸವ ಬೀರಿ,
ಮಂದಗಾಮಿನಿ ಎನ್ನ
ಮುಂದೆ ಬರಲು.....

ಮುದದಿಂದ ನಾ ತಂದ,
ಕುಂದ ಪುಷ್ಪದ ಮಾಲೆ,
ಕಂದಿ ಹೋಯಿತು, ಪಾಪ!
ಕೀಳರಿಮೆಯೋಳ್!!
✍ಮಲ್ಲಿಭಾಗವತ✍

- ಮಲ್ಲಿಭಾಗವತ್ ಗುಡಿಬಂಡೆ

21 Dec 2016, 11:10 am

ಪುಟ್ಟ ಗೂಡಿನಲ್ಲಿ

ಮೌನರಾಗದಿ ನನ್ನದೇಯ
ಪುಟ್ಟ ಗೂಡಿನಲ್ಲಿ
ಚಿಲಿಪಿಲಿ ಗುಟ್ಟುತ್ತ .ಮುಂಗಾರು ಮಳೆಯಂತೆ
ಹನಿ ಜೇನಿನಂತೆ.ಮುಂಜಾನೆ ಮಂಜಿನಂತೆ
ನನ್ನವಳು.
ನಾಚಿ ನೀರಾದಾಗ
* ಗೌಡ್ರುಸರ್ಕಾರ್ *

- ಗೌಡ್ರುಸರ್ಕಾರ್

21 Dec 2016, 10:53 am

ಸ್ಪಂದನೆ

ಇಳೆಯ ಹಾಳೆಯ ಮೇಲೆ,ಎಳೆಯ ಕಿರಣಗಳಿಂದ,
ನಿತ್ಯ ಬರೆಯುತಲಿಹನು,
ರವಿಯೊಂದು ಕವನ!
೧.ತರುಲತೆಗಳಿಬ್ಬನಿಯ,
ಬಿಂದುಮಾಲೆಗಳಿಂದ,
ಸಂತಸವ ಸೂಸುತಿವೆ,
ಮೆಚ್ಚಿ ರವಿಯ!
೨.ಕಮಲ ನಗೆ ಬೀರುತಿದೆ,
ಕೋಗಿಲೆಯು ಹಾಡುತಿದೆ,
ಕೋಳಿಯೂ ಕೂಗುತಿದೆ,
ಹರುಷ ಮೀರಿ!
೩.ಹಕ್ಕಿ ಪಿಕ್ಕಿಗಳೆಲ್ಲ,
ರೆಕ್ಕೆ ಪುಕ್ಕವ ಕೆದರಿ,
ಉಕ್ಕಿದುತ್ಸಾಹದೊಳು,
ಮುಗಿಲಿಗೆಗರಿ,
ಚಿಲಿಪಿಲಿಯ ಉಲಿಯಿಂದ,
ಕಿಲಕಿಲನೆ ನಗುನಗುತ,
ತಿರೆಗೆ ಹಿಂತಿರುಗುತಿವೆ,
ಸೊಬಗ ತೋರಿ!
೪.ಉದಯ ಗೀತೆಗೆ ತನ್ನ,
ಝೇಂಕಾರ ಶೃತಿ ಬೆರೆಸಿ,
ದುಂಬಿ ನಲಿದಿದೆ ಸುಮದ,
ಮಧುವ ಹೀರಿ!
೫.ರವಿಯೆಂಬ ಕವಿ ಬರೆವ,
ರಮಣೀಯ ಕವನಕ್ಕೆ,
ಇಂತು ಗೈದಿದೆ ಸೃಷ್ಟಿ,ತನ್ನ ನಮನ!
೬.ನಾನೆಂಬ ಭ್ರಮೆ ಸುಳಿಗೆ,
ಸಿಕ್ಕಿರುವ ಮನುಜನಿಗೋ,
ಶೂನ್ಯವಾಗಿಹುದಿಂದು,
ಸ್ಪಂದಿಸುವ ಸುಗುಣ.....
ಉದಯಾಸ್ತದಲೂ ಇವನ
ಹೃದಯಹಾಡುವುದೊಂದೇ
"ನಾನು-ನನ್ನದು" ಎಂಬ ಸವಿಯ ಗಾನ!!
✍ಮಲ್ಲಿಭಾಗವತ ✍

- ಮಲ್ಲಿಭಾಗವತ್ ಗುಡಿಬಂಡೆ

21 Dec 2016, 10:26 am