Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಮ್ಮ ……… ನನ್ನಮ್ಮ

ವರ್ಣಿಸಲಾಗದ ಪದ
ಪೂಜೆಗೆ ನಿಲುಕದ ದೇವತೆ
ಕಣ್ಣಿಗೆ ಕಾಣುವ ದೇವತೆ
ಸಹನಾಮಯಿ
ತ್ಯಾಗಮಯಿ
ಎಲ್ಲರ ಕಣ್ಮಯಿ
ಅಮ್ಮ.…………
ನನ್ನಮ್ಮ …………

- ರಾಜು ಹಗ್ಗದ

21 Dec 2016, 10:25 am

ದೇಹದ ಗಿರಾಕಿ

ಕಾದಿರುವೇ ನಾ
ಮನದ ಆಸೆಗಳಿಲ್ಲದೇ
ಹೃದಯದಲ್ಲಿ ನಿನ್ನ ತುಂಬದೇ
ನೀ ಬಂದೇ ಬರುವೆ ಎಂದು

ಮೂರ್ನಾಲ್ಕು ದಿನವಾಯಿತು
ಯಾರು ಬರದೇ ಅಲ್ಲಲ್ಲ ನೀ ಬರದೇ
ಯಾರೋ ದೂಡಿದ ಮೋಹ ಕೂಟಕೆ
ಒಬ್ಬಂಟಿ ರಾಣಿ ನಾ

ಎನ್ನ ರೂಪ ಮಾಸಿಹುದೇ
ಕಣ್ ಕಾಂತಿ ಇಲ್ಲವೇ
ಎದೆ ಉಬ್ಬಿಲ್ಲವೇ
ನಿನಗೆ ನಾ ಹಿಡಿಸಿಲ್ಲವೇ

ಮನೆಯಲ್ಲಿ ಮುದಿ ಅಮ್ಮ
ಬುದ್ಧಿಮಾಂದ್ಯ ತಮ್ಮ
ಯಾರೋ ಕೊಟ್ಟ ಕಂದಮ್ಮ
ಕಾದಿರುವರು ಎನ್ನ ಕೈ ಆಸರೆಗಾಗಿ

ವೆಂಕಿ 9141611112

- ವೆಂಕಟೇಶ್ ದೈಶಿ ವೇಮಗಲ್

21 Dec 2016, 09:05 am

ನಾನಲ್ಲ ವ್ಯೆಶ್ಯೆ

ನನ್ನ ಇಂದು ವೇಶ್ಯೆ ಎಂದವರೆಲ್ಲರೂ
ರಾತ್ರಿಯ ಕತ್ತೆಯಲೆಯಲ್ಲಿ ಬೆತ್ತಲಾದವರೆ
ಬಿರಿದು ದಕ್ಕಿದ್ದು ಮಾತ್ರ ನನಗೊಬ್ಬಳಿಗೆ
ಪಟ್ಟಕಟ್ಟಿದವರೆಲ್ಲಾ ವ್ಯೆಶ್ಯೆಯ ತೆಕ್ಕೆಯಲಿ
ಮಗ್ಗಲು ಬದಲಿಸಿ ಹೋದವರೇ...,

-ಸಿದ್ದುಯಾದವ್ ಚಿರಿಬಿ...,

- ಸಿದ್ದುಯಾದವ್ ಚಿರಿಬಿ

20 Dec 2016, 09:56 pm

ಅಮರ ಪ್ರೇಮ

ಸಾವಿರ ಗುಡುಗು ಬರಲಿ
ಸಾವಿರ ಮಿಂಚು ಬರಲಿ
ಕಾರ್ಮೋಡವೇ ಕವಿಯಲಿ
ಅರಳುವ ಹೂವು ಅರಳಿಯೇ ತೀರುವವು

ಸಾವಿರ ಕಷ್ಟಗಳು ಬರಲಿ
ಸಾವಿರ ಅಡೆ ತಡೆ ಬರಲಿ
ಪ್ರಳಯವೇ ಬರಲಿ
ನಮ್ಮ ಪ್ರೇಮ ಅಮರವಾಗಿರುವುದು

- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)

20 Dec 2016, 09:40 pm

ಮೌನರಾಗ

ನದಿಗೆ ಸಾಗರವು ಹೇಳುತಿದೆ
ಯಾರು ಎಷ್ಟು ಆಳವೋ ಅವರು ಅಷ್ಟೇ ಮೌನ
ನನ್ನ ಪ್ರೀತಿಯೂ ಸಾಗರದಷ್ಟೇ ಆಳ
ಆದರೆ ಅದು ಮೌನ!

ನಾನು ಹೇಗೆ ವ್ಯಕ್ತಪಡಿಸಲಿ ಕಡಲಿನಂಥ ಭೋರ್ಗರೆತ
ಹೇಗೆ ಸಾದರಪಡಿಸಲಿ ಕೋಲ್ಮಿಂಚಿನಂತಹ ಸೆಳೆತ
ಹೇಗೆ ತೋರಿಸಲಿ ಹೃದಯದ ಗುಡುಗು
ಅದುವೇ ಈ ಮೌನರಾಗದ ಅನುರಾಗ

- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)

20 Dec 2016, 09:13 pm

ತಾಯಿ

ಜನ್ಮವಿಟ್ಟಳು ಮಾಯಿ
ಲೋಕದ ಕಷ್ಟವನ್ನು ಸಹಿಸಿ
ಪ್ರೇಮ ನೀಡಿದಳು ಮಾಯಿ
ಮನುಷ್ಯನ್ನಾಗಿ ಮಾಡಿ
ತ್ಯಾಗವಿಹ ಬದುಕಿನ
ದೇವ ರೂಪ
ಮಾನವತೇಯ ಸಾಕಾರ
ನನ್ನವ್ವ ನೀ ಮಹಾ ತಾಯಿ
** ಗೌಡ್ರುಸರ್ಕಾರ್**

- ಗೌಡ್ರುಸರ್ಕಾರ್

20 Dec 2016, 09:04 pm

ಕನಸಲಿ ನಕ್ಕವಳು

ಎಂದೂ ಪರಿಚಯವಿರದ ನಿನ್ನ
ನಗು ಕಂಡಾಗಲೆಲ್ಲ ಸಂಶಯ
ಕನಸಲಿ ನಕ್ಕವಳು ನೀನೇನಾ?
ನಿದ್ದೆ ಕದ್ದವಳು ಇವಳೇನಾ?.....

- PSK

20 Dec 2016, 08:53 pm

ಉಯ್ಯಾಲೆ

ಜೀವನ ಒಂದು ಉಯ್ಯಾಲೆ
ಯಾರು? ಯಾವಾಗ? ತೂಗುವ ರೋ ಗೊತ್ತಿಲ್ಲ!
ಬಾಲ್ಯದಲ್ಲಿ ತಾಯಿ ತೂಗುವಳು
ಬೆಳೆದಂತೆ ಸ್ನೇಹಿತರು ತೂಗುವರು
ವಿದ್ಯಾರ್ಥಿಯಾಗಿದ್ದಾಗ ಗುರುಗಳು ತೂಗುವರು
ಗುರುಗಳು ಒಳ್ಳೆಯ ದಿಕ್ಕಿನೆಡೆಗೆ ತೂಗುವರು
ವಿಧಿಯು ತನಗಿಷ್ಟ ಬಂದಂತೆ ತೂಗುವುದು

- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)

20 Dec 2016, 08:38 pm

ಶೂನ್ಯ

ಶೂನ್ಯವಿಹ ಜೀವನದಲ್ಲಿ ಎಲ್ಲ ಖಾಲಿ ಖಾಲಿ
ಆಕಾಶದಂತೆ ಜೀವನ ಎಲ್ಲ ನೀಲಿ.ಕಪ್ಪು.ಬಿಳಿ
ಹಣ್ಣು ತಿನ್ನುವ.ಜೀವನ ಆಗಿದೆ ಗಿಳಿ
ಬದುಕೊಂದು ಚೆಂದ ಎಲ್ಲ ನೀ ತಿಳಿ
**ಗೌಡ್ರುಸರ್ಕಾರ್**

- ಗೌಡ್ರುಸರ್ಕಾರ್

20 Dec 2016, 07:48 pm

ವರನಾಡು

ಶ್ರೀ ಗಂಧದನಾಡು, ಕವಿಋಷಿಗಳ ಬೀಡು
ಸಾಂಸೃತಿಕ ಶ್ರೀಮಂತೆ ನೀ ತಾಯಿ ಕನ್ನಡತಿ
ಶಿಲ್ಪಕಲೆಗಳ ಸಿಂಗಾರಿ
ಸಂಸ್ಕೃತಿಯ ಭಂಡಾರಿ ,
ವರನಾಡು ಭಾರತಿಗೆ
ನೀ ತಾಯಿ ಕರಿಮಾಯಿ.
ಬೇಲೂರು ಹಳೇಬೀಡು ಕಲೆಶಿಖರದ ಒಡತಿ
ನೀನಾದೆ ರಮ್ಯೆ ಸುಂದರೌತಣದ ಬೆಡಗಿ
ಸಂಗೀತ ಚಿತ್ರಕಲೆ ಸೊಗಸುಣಿಸಿ, ಮೈ ನವೀರೆಳಸಿ ,
ಸಾಹಿತ್ಯ ಶ್ರೀಮಂತ ಕೊಡಚಾದ್ರಿ ಶಿಖರಗಳಲಿ
ಸಮೃದ್ಧಿಯ ಬಾಳೆಸದು ನೀ ಬೆಳಗಿದೆ ನದಿಮಣಿಗಳ.
ಗಂಗ ಕದಂಬ ಚಾಲುಕ್ಯವಿರೂಪಾಕ್ಷಗಳದಿ
ವೈಭವದ ಕಮ್ಮಿತ್ತುನಾಡಾಗಿ ನೀನಿರಲು
ಹಾರಿಸಿದರು ನಿನ್ನ ಕೀರ್ತಿ ಪತಾಕೆಯನ್ನು..
ಕಣ-ಕಣವು ಬೆಳ್ಳಿ
ಸಿರಿಕವಿಗಳ ಸರಪಳಿ.

- ಆರ್.ಎಸ್.ಕೆ

20 Dec 2016, 07:17 pm