Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಹೊಸ ವರುಷವು ಬರುತಿದೆ
ಹೊಸ ಹರುಷವ ತರುತಿದೆ
ಹಲವು ವಸಂತಗಳನ್ನು ದಾಟಿ
ಹಲವು ಋತುಗಳನ್ನು ದಾಟಿ
ಹೊಸ ವರುಷ ವು ಬರುತಿದೆ
ಹೊಸ ಹರುಷವ ತರುತಿದೆ
ಜ್ಞಾನದ ಜ್ಯೋತಿ ಬೆಳಗಲಿ
ಆಜ್ಞಾನದ ಅಂಧಕಾರ ತೋಲಗಲಿ
ಒಡೆದ ಮನಸ್ಸುಗಳು ಒಂದಾಗಲಿ
ಅನೇಕತೆಯಲಿ ಏಕತೆಯು ಮೂಡಲಿ
ಹೊಸ ವರುಷ ವು ಬರುತಿದ
ಹೊಸ ಹರುಷವ ತರುತಿದೆ
ತಾರ್ಕಿಕತೆಯು ಮನೆ ಮಾಡಲಿ
ಮೂಢ ನಂಬಿಕೆಯು ತೊಲ ಗಲಿ
ಬಡತನ ದಾರಿದ್ರ್ಯ ಅಳಿಯಲಿ
ಸಮೃದ್ಧಿ ಸಿರಿವಂತಿಕೆ ಮನೆಮಾಡಲಿ
ಹೊಸ ವರುಷವು ಬರುತಿದೆ
ಹೊಸ ಹರುಷವ ತರುತಿದೆ
ಮನುಕುಲದ ಕಷ್ಟಗಳು ದೂರಾಗಲಿ
ಮನೆ-ಮನಗಳಲ್ಲಿ ಶಾಂತಿ ನೆಲೆಸಲಿ
ವಿಶ್ವಾಸಹೋದರತೆಯು ಬೆಳೆಯಲಿ
ಪ್ರೀತಿ ವಿಶ್ವಾಸ ಸರ್ವ ಮನಗಳಲ್ಲಿ ನೆಲೆಸಲಿ
ವಿಶ್ವಶಾಂತಿಯು ಮೂಡಲಿ
ಹೊಸ ವರುಷವು ಬರುತಿದೆ
ಹೊಸ ಹರುಷವ ತರುತಿದೆ
- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)
19 Dec 2016, 02:47 pm
ಇಳೆಯ ಕೊಳೆಯ ತೊಳೆಯುತಿರುವ ಮಳೆಯೇ,
ನೀ ಸುರಿಯಲು ಶುಭ್ರವೂ ಆಕಾಶವು,
ಕೊಳೆಯ ತೊಳೆದು ಕಳೆಯ ಪಡೆದು ನಲಿಯುತಿಹುದು ಪ್ರಕೃತಿಯೂ.
ನೋಡಲೋಂದು ಸೊಬಗು ನೀ ಸುರಿದು ತೊಳೆದ ಭೂಗಗನ,
ನೋಡಿ ನಲಿಯುತಿಹುದು ಈ ನನ್ನ ಮನ.
ಸುರಿದು ಮನುವಿನ ತನುವ ತೊಯ್ವ ಮಳೆಯೇ,
ಮನದ ಕೊಳೆಯನು ತೊಳೆಯಲಾರೆಯೆ!?
ರಕ್ತ ಸಂಬಂದಿಗಳೆ ದ್ವೇಷಿಗಳಿಲ್ಲಿ,
ಸ್ನೇಹಿತರೆ ಬೆನ್ನ ಹಿಂದೆ ಇರಿಯುವರಿಲ್ಲಿ,
ಕಂಡವರೇ ಹೀಗಾದರೆ ಕಾಣದವರ ಕಥೆ ಇನ್ನೆಲ್ಲಿ.
ಕಾಮ, ಕ್ರೋಧ, ಮದ, ಮಾತ್ಸರ್ಯ, ಲೋಭ, ಮೋಹಗಳೇ ಮನುಷ್ಯನ ಆಳುತಿರಲು
ನಿಜವೇ ಪ್ರೀತಿ, ಮಮತೆ, ಕರುಣೆಗಳಿಗೆ ಇನ್ನೂ ಜಾಗವಿರಲು ಜಗದಲಿ,
ಮನುಜನೇ ಮನುಜನ ಕೊಂದು ಬದುಕುತಿರಲು,
ಸಾಧ್ಯವೇ "ಬದುಕಿ ಬದುಕಲು ಬಿಡಿ " ಎನ್ನುವ ಮಾನವತವಾದವಿರಲು.
ಮನಸ್ಸೆಂಬುದೇ ಇಲ್ಲದೇ ಬದುಕುವವ ಮನಸಾಕ್ಷಿಗೆಂದಿಗೂ ತಲೆಬಾಗುವುದಿಲ್ಲವೆಂಬುದೂ ನಿಜ.
ಮಳೆಯೇ,
ಈ ಪವಿತ್ರ ಭೂತಾಯಿಯ ತೊಳೆದರೇನು ಬಂತು ಫಲ ,
ಮನುಷ್ಯನ ಕಲ್ಮಶ ಮನಸ ತೊಳೆದು ತೋರಿಸು, ನೀನು ಆಗ ಸಫಲ.
ಮನದ ಕೊಳೆಯ ತೊಳೆದು ನೋಡು ಇಳೆಯ,
ಆಗ ನೀನು ಕಾಣುವೆ ಅತಿ ಸುಂದರ ಸೊಬಗಿನ ಭೂತಾಯಿಯ.
- ಶ್ರೀಕಾವ್ಯ
19 Dec 2016, 11:02 am
ಮನದ ತೋಟದಲೊಂದು
ವಿಫಲಪ್ರೇಮದ ಗುಲಾಬಿಗಿಡ.
ಹೂವೇ ಬಿಡಲಿಲ್ಲ.
ಭಾವಝರಿಯ ಸೆಲೆ ಬತ್ತಿಹೋಗಿ,
ಹಸಿರು ಸವಿಕ್ಷಣಗಳು ಒಣಗಿ
ಉದುರಿ ಹೋದವು.
ಕಹಿನೆನಪುಗಳು ಮಾತ್ರ ಇವೆ.
ಒಣಗಿದರೂ;
ಉದುರದೇ ಉಳಿವ
ಮುಳ್ಳುಗಳಂತೆ....
ಮುಟ್ಟಿದರೆ ಚುಚ್ಚುತ.
ನೋವ ನೀಡುತ.
- Ugnil
19 Dec 2016, 10:55 am
ಮನಸ್ಸು ಮಲ್ಲಿಗೆ,
ಮಗುವಿನ ನಗು,
ಚಂದ್ರನಂತೆ ಹೊಳಪು,
ಸೂರ್ಯನಂತೆ ಪ್ರಜ್ವಲತೆ,
ವಿಧ್ಯಾದೇವತೆ,
ಕನಸಿನ ಕುವರಿ,
ಸಹೃದಯಿ ಸಂಪನ್ನೆ,
ಹೃದಯದೈಸಿರಿ,
ನನ್ನ ಮನದರಸಿ,
ನನ್ನ ಬಾಳಸಂಗಾತಿ,
ಅವಳೆ ನನ್ನ
ಧರ್ಮಪತ್ನಿ
ನನ್ನೊಡತಿ ಕಾವೇರಿ.
- ರಾಜು ಹಗ್ಗದ
19 Dec 2016, 10:51 am
ನಾ ಮಾಡಿದ ತಪ್ಪಿಗೆ,
ನನಗರಿವಾಗುವ ಹೂತ್ತಿಗೆ,
ನಾ ಹೂತ್ತಿದ್ದೆ,ಪಾಪಗಳ ಪೆಟ್ಟಿಗೆ,
ಬಂದಿತ್ತು,ಸಾವೆಂಬ ಕರಿನೆರಳು ಕುತ್ತಿಗೆಗೆ,
ನಾ ಶರಣಾದೆ ನೇಣಿಗೆ!
- ರಾಜೇಶ್ ಎ.ಎಸ್
19 Dec 2016, 10:38 am
ದೇವ ನಿನ್ನ ನಂಬಿ ಬಂದೆ
ನಾನು ಇಲ್ಲಿಗೆ!!
ಅದೇಕೆ ನೀನು ಕಾಣದಾದೆ
ನನ್ನ ಕಣ್ಣಿಗೆ!!
ನಿನ್ನ ಅರಸಿ ಹೊರಡಲೀಗ
ನಾನು ಎಲ್ಲಿಗೆ!!
ಹೇಳು ದೇವ ನನ್ನ ಮೇಲೆ
ಕೋಪ ಏತಕೆ!!
ಭಕ್ತಿಯಿಂದ ವರವ ಬೇಡ
ಬಂದೆ ಇಲ್ಲಿಗೆ!!
ನಾ ಬರುವ ಮೊದಲೇ ದೇವ
ನೀನು ಹೋದೆ ಎಲ್ಲಿಗೆ!!
ಕಾಯುತಿರುವೆ ನಿನ್ನ ಗುಡಿಯ
ದ್ವಾರದ ಎದುರಿಗೆ!!
ಹಿಂದಿರುಗಿ ನೀನು ಬರಲೇ ಬೇಕು
ದೇವ ಇಲ್ಲಿಗೆ!!
- ಪಿ.ಜಿ.ಜ್ಯೋತಿ
19 Dec 2016, 10:30 am
ಕೇಳದೇ ಬರುವುದು,
ಕಣ್ಣೀರ ತರುವುದು,
ನೆಮ್ಮದಿ ಕೆಡಿಸುವುದು,
ಸಂತಸ ಹಾಳಾಗುವುದು,
ಸುನಾಮಿಯಂತೆ ಬರುವುದು,
ಸಮುದ್ರದಂತೆ ಪ್ರಶಾಂತವಾಗುವುದು.
- ರಾಜು ಹಗ್ಗದ
19 Dec 2016, 08:52 am
ಬಹು ದಿನದ ಬೇಡಿಕೆಯಂತೆ
ಮುರಟಿ ಹೋದ ಗಿಡದಲೆ
ಹುಟ್ಟಿದೊಂದು ಮೊಗ್ಗಿನ ಕಂತೆ ...
ಮೊಳಕೆಯೊಡೆದ ಆಸೆಗೆ ಬೆಟ್ಟದಷ್ಟು ನಿರೀಕ್ಷೆ
ಆದರೆ ಅರಳಿದೊಂದು ಚಿಕ್ಕ ಗುಲಾಬಿಯಷ್ಟೆ ..
ಮರೆಮಾಚಲಾರದ ಪೆಚ್ಚು ನಗೆ , ನಿರಾಸೆ ಛಾಯೆ
ಅನಿಸಿದ್ದು ಅಯ್ಯೋ ಮನಸೇ ನೀನೇಕೆ ಹೀಗೆ
ಭಾರತಿ
- Bharavi
19 Dec 2016, 07:47 am
ಪಕ್ಷಿಗಳ ಮಂಜುಳನಾದ
ಸ್ವಪ್ನ ಲೋಕದಿ ವಿಹರಿಸುವ
ವಸುಂಧರೆಗೆ ,
ಇಹದರಿವು ಮೂಡಿಸುವ
ಬೆಳಗು...
- Indushekar Chinivar
19 Dec 2016, 06:36 am
ಪಾಟಿಯ ಚೀಲ ಹೆಗಲಿಗೆ ಏರಿಸಿ
ನಡೆದಿದೆ ಮಗುವು ಠೀವಿಯಲಿ
ಕಂದಗು ಅಮ್ಮಗು ಒಳಗೇ ಕಸಿವಿಸಿ
ಹೇಗೋ ಏನೋ ಶಾಲೆಯಲಿ ||ಪ||
ಕಂದರದೆಲ್ಲಾ ಒಂದೇ ಅಳುಮುಖ
ಅಕ್ಕಪಕ್ಕದಾ ಬೆಂಚಿನಲಿ
ಟೀಚರಿಗಂತೂ ಹಿಡಿದಿಡಲಾಗದು
ಎಲ್ಲರ ಒಂದೇ ನೋಟದಲಿ
||ಪಾಟಿಯ ಚೀಲ ಹೆಗಲಿಗೆ ಏರಿಸಿ
ನಡೆದಿದೆ ಮಗುವು ಠೀವಿಯಲಿ||
ಕಣ್ಣಾಲಿಗಳು ತುಂಬಿ ಬಂದರೂ
ಅಳಲಾರದೆ ಮಗು ಕುಳಿತಿಹುದು
ಬಣ್ಣಬಣ್ಣದಾ ಆಟಿಕೆ ಕೈಯಲಿ
ಆಡಿಸಲಮ್ಮನು ಎಲ್ಲಿಹಳು
||ಪಾಟಿಯ ಚೀಲ ಹೆಗಲಿಗೆ ಏರಿಸಿ
ನಡೆದಿದೆ ಮಗುವು ಠೀವಿಯಲಿ||
ಗಂಟೆಯ ಸದ್ದಿಗೆ ಕೂಗುತ ಓಡಲು
ಗೇಟಲಿ ಅಮ್ಮನು ಕಂಡಿಹಳು
ಪುಟುಪುಟು ಹೆಜ್ಜೆಗೆ ಗೆಜ್ಜೆಯ ಸದ್ದಿಗೆ
ಅಮ್ಮನು ಮನದೇ ನಲಿದಿಹಳು
||ಪಾಟಿಯ ಚೀಲ ಹೆಗಲಿಗೆ ಏರಿಸಿ
ನಡೆದಿದೆ ಮಗುವು ಠೀವಿಯಲಿ||
- ಗುರುಮೂರ್ತಿ ಬಾಲಚಂದ್ರ ಮೆಹೆಂದಳೆ
19 Dec 2016, 03:53 am