ಮರಳಿ ಬಾರದಷ್ಟು ದೂರಕ್ಕೆ ಬಂದಿರುವೆ
ಮತ್ತೆ ಕೂಗದಿರು ನಲ್ಮೆಯ ಒಲವೇ
ತಿರುಗು ಬರಲಾರೆ ನಾ ಆ ನಿನ್ನ ತೆಕ್ಕೆಗೆ;
ಮನಸನೊಪ್ಪಿಸಿದೆ ಸಾಕೆನ್ನಲಿಲ್ಲ
ಮೈಯನೊಪ್ಪಿಸಿದೆ ದಾಹ ತಿರಲಿಲ್ಲ
ಬದುಕನ್ನೊಪ್ಪಿಸಿದೆ ಬೇಡವೆಂದು ಎಂದು ಹೇಳಲಿಲ್ಲ
ಎಲ್ಲವು ನಿನಗೊಪ್ಪಿಸಿ ನಿರ್ಲಿಪ್ತ ನೆರಳು
ಮೌನದ ನೋವಿನ ಕಣಿವೆಯಲಿ ಸಾಗುತಿದೆ
ಎಲ್ಲರನು ದೂರವಿರಿಸಿದೆ ಮೊದಲು
ಕೊನೆಗೆ ನಡು ನೀರಿನಲ್ಲಿ ಕೈಬಿಟ್ಟ ಛಲವೇ,
ಮತ್ತೇಂದು ಕೂಗದಿರು ನಲ್ಮೆಯ ಒಲವೇ
ತಿರುಗಿ ಬಾರಲಾರೆ ನಾ ಆ ನಿನ್ನ ತೆಕ್ಕೆಗೆ;
ಏಕಾಂಗಿ ಪಯಣ ಸಾಕೆನಿಗೆ
ನಿನ್ನ ಮಧುರ ನೆನಪಿನ ಗಾನ
ಅಂತರಂಗದ ಕುಲುಮೆಯೋಳಗೆ
ಸೋಲೆಂಬ ಜ್ವಾಲಾಮುಖಿಯ ಸಂಗಮ
ಸಂಗಾತಿ ಸಂಪ್ರಿತಿ ಸಂಕೋಲೆಯ ಸುಪುತ್ರಿ
ಏ ಒಲವೇ ನೀನೆಷ್ಟು ಕ್ರೂರಿ ನನ್ನೊಳಗೆ
ಸಾಕು ಮಾಡಿನ್ನು ಹೃದಯ ಹೊಡೆಯುವ ಪಾಠ
ಮತ್ತೆಂದು ಕೂಗದಿರು ನಲ್ಮೆಯ ಒಲವೇ
ತಿರುಗಿ ಬರಲಾರೆ ನಾ ಆ ನಿನ್ನ ತೆಕ್ಕೆಗೆ;
ಮನದ ಮಹಲನು ಕೊಳ್ಳೆಯೊಡೆದ ಮೂಹಿನಿ
ಬದುಕನ್ನು ನರಕವಾಗಿಸಿದ ಯಾಮಿನಿ
ಪ್ರೇಮದ ಮುಖವಾಡವನೊತ್ತ ಅಂತರ್ಯಾಮಿ
ಯುವ ಮನಸುಗಳ ಕೊಂದ ನೋವಿನ ಧಮನಿ
ಮತ್ತೆ ಹೂ ಅರಳುವುದೆಂದು ಹಂಬಲಿಸದಿರು
ಮರುಭೂಮಿಯಲಿ ಸಿಡಿಲೊಡೆದು ಒಣಗಿ ನಿಂತ
ಏಕಾಂಗಿ ಮರ ನಾನು ಬಯಸದಿರು ಮತ್ತೆಂದು
ಮತ್ತೆಂದು ಕೂಗದಿರು ನಲ್ಮೆಯ ಒಲವೇ
ತಿರುಗಿ ಬರಲಾರೆ ನಾ ಆ ನಿನ್ನ ತೆಕ್ಕೆಗೆ;
ಸಾವಿರ ಕನಸುಗಳನು ಕೂಡಿಸಿಟ್ಟಿ ಅಂದು
ಎಲ್ಲವನು ಕೊಂದು ಹೊರಟೊದೆ ಇಂದು
ಜೀವ ಪಡೆಯಲು ನೀನಗ್ಯಾವ ಅಧಿಕಾರವಿಲ್ಲ
ಇದನ್ನೆಂದು ನಾ ನಿನ್ನ ಪಾಲಾಗಲು ಬಿಡುವುದಿಲ್ಲ
ನೆನಪುಗಳ ಜೋಳಿಗೆಗೆ ದಾಸನಾಗಿರುವೇ ಅಷ್ಟೇ;
ಯುವ ಮನಸುಗಳ ತೆಕ್ಕೆಯಲಿ ಮಗ್ಗಲು ಬದಲಿಸುವ
ವ್ಯೆಬಿಚಾರವನ್ನೆ ಅಧಿಕಾರವೆನ್ನುವ ವ್ಯೆಶ್ಯೆಯೇ
ಮತ್ತೆ ಕೂಗದಿರು ನಲ್ಮೆಯ ಒಲವೇ
ಮತ್ತೆಂದು ತಿರುಗಿ ಬರಲಾರೆ ನಾ ಆ ನಿನ್ನ ತೆಕ್ಕೆಗೆ
ನಿನ್ನಿಂದ ಪಡೆದ ನೆನಪುಗಳನೆ ಹೂತು
ಕವಿತೆಗಳ ಫಲ ಪಡೆದು ನಿನ್ನದೇ ಹೆಸರಿಡುವೇ
ಸ್ತಬ್ಧವಾದ ನನ್ನೆದೆಯ ಹೃದಯ ವೀಣೆಗೆ ಕಲಿಸಿ
ಒಲವೇ ನಿನ್ನ ರಂಗ ಮಂದಿರದ ಲೀಲೆಗಳನು
ಜಗತ್ತಿನ ಮುಂದೆ ವೈಣಿಕನಾಗಿ ಫಲಿಕಿಸುವೆ
ನವಬಾವದಲಿ ನವೂದಯದ ಕಿರಣವನ್ನು
ಮತ್ತೊಮ್ಮೆ ತೆರೆದಿಡುವೆ ಕೆಂಬಣ್ಣದೊಕಳಿಯಲ್ಲಿ
ಕರೆದರು ಕೇಳಿಸದಂತೆ ಸಾಗುವೇನು ಬಿಮ್ಮನೆ
ನಡೆಯಲಾರದು ಇನ್ನು ನಿನ್ನಾಟ ಮುಗಿಸಿಬೀಡು ಸುಮ್ಮನೆ...,
ಹೋಗಿಬಿಟ್ಟಳವಳು ತಿರುಗಿ ನೋಡದೆ
ಕನಸುಗಳ ರಾಶಿಗೆ ಬೆಂಕಿಯ ಸುರಿದು
ಧಗಧಗನೆ ಹತ್ತಿ ಉರಿಯುತಿವೆ ಜ್ವಾಲೆಯಲಿ;
'ನನ್ನ ಅಂತಿಮ ಯಾತ್ರೆಯ ದಾರಿಯಲಿ'
'ಹೂಗಳ ಚಲ್ಲಿರಿ, ಅವಳು ಬಂದರು ಬರಬಹುದು'
ಬೂದಿಯಾಗುವ ಭಾವನೆಗಳ
ಅಂತಿಮ ಸಂಸ್ಕಾರದ
ಕೊನೆಯ ಕಾರ್ಯಕ್ಕೆ...,
ನಾನು ಬರೆಯುವೆ ಒಂದು ಕವಿತೆ
ಹಳೆಯದೇರಡು ಸಾಲು ಸಾಲ ಪಡೆದು
ನವ ಭಾವನೆಯ ಎರಕಹೋಯ್ದು
ಹಳೆತು ಹೊಸತು ಕಲೆತು ಬೆರೆತು
ಸೃಜಿಸುತಿಹುದು ಹೊಸ ಚೈತನ್ಯದ ಕವಿತೆ
ವಸಂತಾಗಮನದ ನವ ಚಿಗುರಿನಂತೆ
ಹಳೆತು ಮುಖಕೆ ನವತು ಬಣ್ಣದಿ ಶೃಂಗರಿ
ಎಣೆಯುವೆ ನನ್ನೆದೆಯ ಹೃದಯದೊಲೆ
ಹಳೆಯ ಹಾಡು ಆದರೇನು? ಹೊಸತು ಪಾಡು ಬೇಡವೇನು?
ನವೂದಯದೊಂಬಣ್ಣ ಬದಲಾಗಲಾರದೆಂದು
ಕವಿಯ ಮನವು ಅಷ್ಟೆ, ಭಾವದ್ವೇತ್ಯಾಸವನ್ನು ನೋಡು
ಅಂದು ಇಂದು ಕವಿತೆಯೊಂದೆ ಭಾವ ಬೇರೆ ಅಲ್ಲವೇನು?
ಯಾರು ಏನೆಂದರು ನನಗೇನು ಮನವೇ
ಓದುವವರಿಹರಲ್ಲ ಸಾಕು ಇಂದೇನಗೇ
ನವತು ಕವಿತೆ ಬರೆಯಲಿಲ್ಲಿ ಬಿಡದೆ ಬರೆದು
ಮುಗಿಸಿದರೆಲ್ಲ ನಮ್ಮ ಹಿರಿಯ ಕವಿಗಳು
ನಾನೆನೆಂದು ಬರೆಯಲಿ? ಅದನೆ ಮತ್ತೆ ಬರೆಯುವೆನು
ನಗುವವರು ನಗಲಿ, ಮುಖ ತಿರುಗಿಸುವವರು ತಿರುಗಿಸಲಿ;
ಹಳೆಯ, ನಡು, ನವೂದಯವನೊಮ್ಮೆ ನೋಡು
ಎಲ್ಲರು ಅದನೆ ಬರೆದರು ಅವರದೇ ಮೋಡಿಯಲ್ಲಿ
ಕನ್ನಡ ಸಾಹಿತ್ಯ ವೀಣೆಯು ಒಂದೆ ಇರಬಹುದು
ವೈಣಿಕರ ಬೆರಳುಗಳು ಒಂದೆ ಅಲ್ಲ ಕೇಳು
ನುಡಿಸುವವನ ಮನವು ಭಾವ ತುಂಬಿ ಹಾಡಲು
ಕೇಳುಗನೆದೆಯಲಿ ನೋವು ತುಂಬಿದರೇಗೆ ಹೇಳು?
ಹಿರಿಯ-ಕಿರಿಯ ಎನ್ನಲೇಕೆ ತಾಯಿ ಒಬ್ಬಳಲ್ಲವೇನು?
ಮಾಡುವೆನು ಸೇವೆಯನು ಹಿರಿಯರು ಮಾಡಿದಂತೆ
ಬೇಡವೇನೆಗೆ ಬಿರುದು ಸನ್ಮಾನಗಳ ಹಿರಿಮೆ
ಬಡವ ನಾನು ದುಡಿದಷ್ಟು ಊಣಬಡಿಸುವೇ
ವಲ್ಲದ ಭೋಜನದಲಿ ಕಲ್ಲು ಹುಡುಕಬೇಡಿರಿ
ಕನ್ನಡಮ್ಮನ ಪಾದದಲ್ಲಿ ನನದೊಂದು ಹೂ ಇರಲಿ ಬೀಡಿ....,
ಒಬ್ಬಂಟಿಯಾಗಿ ಇಲ್ಲಿಯವರೆಗು ಬಂದಿರುವೆ
ಹಿಂತಿರುಗಿ ನೋಡಿದರೆ ಹೆಜ್ಜೆ ಗುರುತುಗಳು
ಬೀರುಗಾಳಿಯಲಿ ಮಾಸುತಿವೆ
ನಶಿಸುವ ಮನುಜನಿಗೆ ಹೆಜ್ಜೆಯ ಗುರುತುಗಳೆ ಆಧಾರ
ಅವೆ ಇಲ್ಲವಾಗುತಿವೆ ನನ್ನ ಬದುಕಿನಲಿ...,
ಬತ್ತಿದ ಭಾವದಲ್ಲಿ
ಚಿತ್ತಾರ ಬಿಟ್ಟವಳೆ
ಎತ್ತ ಹೋದಯಾ...ನೀನು
ನನ್ನ ತೊರೆದೆಯಾ!
ಕಷ್ಟ ಕಾಲದಲ್ಲಿ
ಜೊತೆಯಲ್ಲಿ ಇರುವೆನೆಂದು
ಭಾಷೆಯನ್ನು ಕೊಟ್ಟ ನೀನು
ಬಿಟ್ಟು ಹೊರಟೆಯಾ....ಗೆಳತಿ!
ಏಳೇಳು ಜನ್ಮದಲ್ಲಿ
ನನ್ನಲ್ಲಿ ಇರುವೆನೆಂದು
ಭರವಸೆಯ ಭವನಕಟ್ಟಿ
ಒಂಟಿಯಾಗಿ ನನ್ನ ಬಿಟ್ಟು
ಹೊರಟು ಹೋದೆಯಾ...ಗೆಳತಿ!
ಏಕೆ ಹೀಗೆ ಮಾಡಿದೆ ನನಗೆ
ಮನಸ್ಸು ಹೇಗೆ ಬಂತು ನಿನಗೆ
ಘಾಸಿಗೊಳಿಸಿದೆ ನನ್ನ ಮನಸ್ಸಿಗೆ
ನಲಿವಾಗಿರಲಿ ನಿನ್ನ ಜೀವನ ಗಳಿಗೆ!
---------------------------------------------*ಬಸವಪ್ರಿಯ*
(ಬಲವಂತ ಮೋರಟಗಿ)