Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
"ಮಳೆ ಬಂತು ಮಳೆ
==============
ಮಳೆ ಬಂತು ಮಳೆ
ಬಿರಿ ಬಿಸಿಲಿನ ನಾಡಿಗೆ
ಬರಡು ಬರಿದಾದ ಬಯಲಿಗೆ
ಮಳೆ ಬಂತು ಮಳೆ
ಬಿರಕು ಬಿಟ್ಟ ಭೂಮಿಗೆ
ರಣಗುಡವ ರಣಾಂಗಣಕ್ಕೆ
ಮಳೆ ಬಂತು ಮಳೆ
ಉತ್ತಿ ಬತ್ತಿಹೋಗವ ನೆಲಕ್ಕೆ
ಕೈ ಹೊತ್ತು ಕುಳಿತ ಜನರ ಮನಕ್ಕೆ
ಮಳೆ ಬಂತು ಮಳೆ
ಧಗಧಗ ದಗಿಸುವ ಧರೆಗೆ
ಬಿಸಿಲು ಜಳ ಇರುವ ಇಳೆಗೆ
ಮಳೆ ಬಂತು ಮಳೆ
ಹಸಿವಿನಿಂದ ಬಳಲಿದ ಜನರಿಗೆ
ಬಿಸಿಲಿನಿಂದ ಕಂಗೆಟ್ಟ ದಾರಿಗೆ
ರಚನೆ* ಆನಂದ ಎಸ್ ಪೂಜಾರಿ
ರನ್ನ ಮುಧೋಳ
Ph. 8904215983
- ಆನಂದ ಪೂಜಾರಿ
15 Dec 2016, 03:08 pm
ಹುಡುಕ ಹೊರಟೆ
ನನಾರೆಂದು
ಎಲ್ಲಿಹೆನೆಂದು!
ಶರೀರವೇ ನಾನೇನು?
ಒಳದನಿ ಹೇಳಿತು
ಶರೀರ ನನ್ನದೆಂದು
ಯಾರದು ಹೇಳಿದ್ದು
ಮನವೇ? ಬುದ್ಧಿಯೆ?
ಭ್ರಮೆಯೆ?
ಒಳಗಿರುವ ದಿವ್ಯ
ಚೇತನವೇ? ಹೇಳು
ನೀನಾರೆಂದು?
ನಾನು ನಾನೇ ಎಂದು
ಬಡಬಡಿಪನಾರೆಂದು?
- ಗುರುಮೂರ್ತಿ ಬಾಲಚಂದ್ರ ಮೆಹೆಂದಳೆ
15 Dec 2016, 10:17 am
ಜೀವ ಹೋದ ಮೇಲೆ ದೇಹ ಮಣ್ಣು ಪಾಲು,
ಅಸ್ಥಿಗಳು ಗಂಗೆ ಪಾಲು, ವಸ್ತ್ರಗಳು ಅಗಸನ ಪಾಲು, ಆಸ್ಥಿಗಳು-ಮುಂದೆ ಕೂತು ಅಳುವವರ ಪಾಲು, ಮಗನು ಹಾಕುವ ಪಿಂಡ ಕಾಗೆಯ ಪಾಲು, ಅರಿಯದ ಈ ಜೀವ ಯಮನ ಪಾಲು,ನೀ ಮಾಡಿದ ಸೇವೆ ದಾನ-ಧರ್ಮ ಮಾತ್ರ ನಿನ್ನ ಪಾಲು.
- kiran
15 Dec 2016, 09:59 am
ಮಾತುಮಾತಿನಲ್ಲೂ ಮೇಳೈಸಿದೆ ಮೌನದ ಮೆರವಣಿಗೆ
ನಡೆದಿದೆ ಪಯಣವು ಕೋರೈಸುವ ನಿನ್ನ ಪ್ರಕಾಶದೆಡೆಗೆ
ಒಲಿದುಬಂದಿರುವೆ ನಾನೆ ನಿನ್ನೆಡೆಗೆ
ನಿನ್ನ ಮೌನವೆ ಹೇಳಿದೆ ಮಿಡಿಯಲಾರದ ಆ ಮಿಡಿತವನು,
ಹೂ ಅರಳಿದಂತ ಸದ್ದನು, ಪ್ರತಿ ಹೆಜ್ಜೆಯಲ್ಲಿ ನಿನ್ನದೇ ಗುಂಗಲಿ
ಪ್ರತಿಯೊಂದು ಮಾತಿನಲ್ಲಿ ಅನುರಣಿಸಿದೆ ಸೋಜಿಗದ ಶೃಂಗಾರ
ಶೃತಿಗೂಡಿದ ಹಾಡಿನಲಿ ಕರಣಗಳು ಆಲಿಸಿದ ಧನಿ ಗಂಭೀರ,
ಕಣ್ಣೋಟಕೆ ಕಾಣದಾಯಿತು ಮನದ ದಾರಿ,ಮರಣಿಸಲೆ ಒಂದು ಅವಧಿ
ಮುಳುಗಿಹೋಗೋಣ ಒಲವ ಜೀವನದಿ,ತೇಲುತ ಹರಿಯುವ ಪ್ರೇಮಶರಧಿ
- veerabhadra
15 Dec 2016, 09:40 am
ಪರಿಪರಿಯಾಗಿ
ಮೊರೆ ಹೋದರೂ
ಮನ ಕರಗದ
ದೇವರಂತೆ ಅನಿಸುವ ನೀನು ,,..
ವಿಧ ವಿಧವಾಗಿ ಅರಳುವ
ಮನ ಸೂರುವ
ಹೂಗಳಲಿ
ಪ್ರತ್ಯಕ್ಷವಾಗಿ ವರವನೀವನೊ ನೀನೇ .
...ಭಾರತಿ
- Bharavi
15 Dec 2016, 09:40 am
ನಿನ್ನ ಕಣ್ಣ ಕನ್ನಡಿಯಲಿ ಪ್ರತಿಪಾಲಿಸಲು,
ನಾ ಕಾಯುವೇನು ಹಗಲಿರುಳು
ನೀ ಎದುರಾಗೊ ಸಮಯವನು..
ನೀ ಕಂಡ ಕ್ಷಣದಲಿ
ಧ್ವನಿ ಬರದೆ ಹೋಗಲು
ಮೌನ ರಾಗದಿ ನಿವೇದಿಸುವೆ
ನನ್ನ ಪ್ರೀತಿಯ ನಿನ್ನೆದುರಲಿ...
- ಬಾನು ಅಡಿಗಾರ್
15 Dec 2016, 09:39 am
ಅಡಿಗಡಿಗು ರಂಗನು ಚೆಲ್ಲುತಾ
ಉಲ್ಲಾಸದಿ ನಕ್ಕ ಬಾನಂಗಳದಿ
ಕೈ ನೀಡಿದ ನೇಸರ ಜೊತೆಗೂಡಲು
ಹೊಸ ಪುಟವ ತೆರದು ಬಾಳಲಿ...
- Indushekar Chinivar
15 Dec 2016, 05:45 am
ಬರಗೆಟ್ಟೆನ್ನ ತಲೆಗೂದಲಿಗೆ ತೈಲವೆರೆದು
ಕ್ರಾಪು ತೆಗೆದೆನ್ನ ನೊಸಲಿಗೆ ಸಿಂಧೂರವಿಟ್ಟು
ಅರಳುವೆನ್ನ ಕಂಗಳನು ತನ್ನ ಕರಗಳಿಂದ
ದೃಷ್ಟಿ ತೆಗೆಯಲು ಅವ ಬಿಡಲೆ ಇಲ್ಲ....
ಹಸಿದೊಡಲ ತಡವಿ ತನ್ನೊಡಲಪಾಲನ್ನೂ
ನನ್ನೊಡಲಿಗೇ ಸುರುವಿ ,ನನ್ನವ್ವ ತನ್ಮನದ
ನಗುವ ಹಸನುಗೊಳಿಸಲು ಚಂದ್ರನ
ವೃದ್ದಿಸಲವ ಬಿಡಲೇ ಇಲ್ಲ.....
ದಿನದ ಬದುಕ ಸಣ್ಣ ಸಣ್ಣ ಖುಷಿಯ
ಅನುಭವಿಸಲು,ಹುಸಿಗೋಪದಿ
ಮುಂಗುರುಳ ಮೊಟಕಿ ಮನದ ಹರುಷದ
ಕಡಲನುಕ್ಕಿಸಲೆನ್ನವ್ವನಿಗವಕಾಶವೇ ಇಲ್ಲ....
ನಾ..ಅಸಯ್ಯ ನುಡಿದಾಗ ನನ್ನ ನಾಲೀಗೆಯ
ತಿದ್ದಲು ,ಅನ್ಯರ ಮುಂದೆ ಅಂಗೈ ಚಾಚದಂತೆ
ಸ್ವಾಭಿಮಾನದ ಮುದ್ರೆ ಸ್ಪಷ್ಟವಾಗಿ ಕಾಣಲು
ತಲೆ ನೇವರಿಸಿ ,ಎದೆಯುಬ್ಬಿಸಿ ನಡೆವುದ..
ನನ್ನವ್ವ ........ಇದನೆಲ್ಲ ಮಾಡಲು ಆ...ಅವನೆನ್ನುವ ಅವನಾ.... ದೇವರೆಂದೇಗೆ ಕರೆಯಲಿ.....?
- ಜಿ. ಶಿವಪ್ಪ ನಾಯಕ
14 Dec 2016, 10:52 pm
ಹಳೆಯ ಹಳೆಯ ನೆನಪುಗಳ
ಹೊಳೆಯ ಹರಿಸಿ ಹೊರಟವಳು!!
ಕಣ್ಣೆದುರು ಬಾರದೇನೇ
ಕಲ್ಪನೆಯಲಿ ನಿಲ್ಲುವಳು!!
ಇವಳೇ ಅವಳು ನನ್ನವಳು
ಕಿರುಬೆರಳ ಹಿಡಿದು ನಡೆದವಳು!!
ನೊಂದು ಬೆಂದ ಮನಸಿನ ಮೇಲೆ
ವಿರಹದೋಲೆ ಬರೆದವಳು!!
ಸಾಗಿ ಬಂದ ಹೆಜ್ಜೆಗುರುತ
ನೆನಪ ಉಳಿಸಿ ಹೋದವಳು!!
ಕಣ್ಣಿನಲ್ಲಿ ಕರಗದೇನೇ
ದಿನವೂ ನನ್ನ ಕಾಡುವಳು!!
ಜೊತೆಯಲಿರುವೆನೆಂದು ನುಡಿದ
ನನ್ನ ಪ್ರೀತಿ ಸತಿ ಅವಳು!!
ಹೇಳದೇನೇ ಕೇಳದೇನೇ
ನನ್ನ ಅಗಲಿ ಹೋದವಳು!!
- ಪಿ.ಜಿ.ಜ್ಯೋತಿ
14 Dec 2016, 09:01 pm
ಪ್ರತಿ ಕ್ಷಣ ಒಂದೊಂದು ಅಕ್ಷರ
ಪ್ರತಿ ದಿನ ಒಂದೊಂದು ಸಾಲು
ಸೇರಿ ಸಾಲಾಗಿ ಮೂಡಿ ಬಂದ..
ಜೀವನವೆಂಬ ಸುಂದರ ಅಧ್ಯಾಯ
ಪುಟ ತಿರುವಿದಂತೆ ಸಾಗುತ್ತ ಹೋಗುವ ಜೀವನ
ಪುಟಗಳೆಷ್ಟೋ ಅಧ್ಯಾಯಗಳೆಷ್ಟೋ..
ಈ ಪುಸ್ತಕ ಕಲಿಸುವ ಪಾಠಗಳೆಷ್ಟೋ.
ಹುಟ್ಟೆಂಬ ಮುನ್ನುಡಿ..
ಸಾವೆಂಬ ಹಿನ್ನುಡಿ
ಉಸಿರಾಡುವ ವರೆಗೂ ಬದುಕಿನ ಹಾಳೆಗಳಲ್ಲಿ..
ನಮ್ಮ ಪರಿವಿಡಿ.
ರವೀಂದ್ರ ಬಿ ಅರ್
- ರವೀಂದ್ರ
14 Dec 2016, 08:39 pm