Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಏನನು ಹೇಳಲಿ ನನ್ನ ಮನಕದ್ದ ಗೆಳೆಯನಿಗೆ
ಹೇಗೆ ಹೇಳಲಿ ನನ್ನ ಹೃದಯದ ಚೋರನಿಗೆ
ಕಾಳಜಿಗೂ ನೀನೆ ಒಡೆಯ
ಕಾರಣವಿಲ್ಲ ಪ್ರೀತಿಗೆ ಇನಿಯ
ಒಮ್ಮೆ ನಿನ್ನ ಕೊರಳ ಬಳಸಿ ಅಪ್ಪುವಾಸೆ
ನನ್ನಲೇ ನಿನ್ನ ಸೆಳೆವಾಸೆ
ಮತ್ತೊಮ್ಮೆ ನಿನ್ನ ಎದೆಯೊರಗಿ ತಬ್ಬುವಾಸೆ
ನಿನ್ನ ಕರದಲಿ ಮುಗವಿರಿಸುವಾಸೆ
ಕಣ್ಣಲ್ಲಿ ಕಣ್ಣಿಡಲು ಒಮ್ಮೊಮ್ಮೆ ಆತಂಕ
ಏಕೆ ಹೀಗೆ ನನ್ನ ಸೇರಿರುವ ನಾಯಕ
ಮನಸಾರೆ ಮೆಚ್ಚಿರುವೆ ನೀ ನನ್ನವನು ಅನಾಮಿಕ
ಈ ತನುವಿಗೆ ಎಂದಿದ್ದರೂ ನೀನೆ ಸಖ
- Tanuja.K
24 Dec 2022, 10:35 pm
"ಅಳಿಸಲಾರೆ_ನೀ ನಿನ್ನ ಗುರುತುಗಳ..
ನನ್ನ ಮನದಲ್ಲಿ ಎಂದಿಗು !
ಹಾವಿಯಾಗೋ ಪರಿಯೇ !
ನಡೆಯೋದಿಲ್ಲ ಕೆಳೆಯೇ !
ಹಚ್ಚಾಗಿಯೆ ನನ್ನಲ್ಲಿ.. ನೀ ಎಂದೋ !!"
"ಮನದ ಒಡಲಲು.. ಆಲೋಚನೆಯ ಕಡಲಲು..
ಆವರಿಸಿರುವೆ ಪೂರ_ನೀನೆಯೇ !
ನೀ ದೂರ ಸರಿದರು.. ಮಾತುಗಳೆ ನಿಂತರು..
ಬದಲಾಗದೇನು ತಿಳಿಯೇ !
ಇಲ್ಲದೆ ಹೋದರು.. ನೀ_ಜೊತೆಯಲ್ಲಿ !
ಒಲವಿದು ಶಾಶ್ವತ.. ಎಂದಿಗು ನನ್ನಲ್ಲಿ !!"
ಎಮ್.ಎಸ್.ಭೋವಿ...✍️
- mani_s_bhovi
22 Dec 2022, 09:06 pm
"ಕವಿತೆವೊಂದ ಬರದೇ ನಾನು.. ನಿನಗೇ !
ನೀಡಲೇಕೋ ಆಗುತ್ತಿಲ್ಲ.. ಅದು ನಿನಗೇ !
ಮನದಾಳದ ಮಾತೆಲ್ಲ.. ಭಾವದ ರಂಗೆಲ್ಲ..
ಪೋಣಿಸಿ ಗೀಚಿಹ !
ಬರಿ_ಒಲವೇ ತುಂಬಿಹ !
ಈ ಕವಿತೆ.. ಅತಿ_ಮಧುರವು !
ನೀ_ಓದಬೇಕೆ.. ಒಮ್ಮೆಯಾದರು !
ನಿನಾಗೋದೆ ಕಣೇ.. ನನ್ನ ಪ್ಯಾರು !!"
ಎಮ್.ಎಸ್.ಭೋವಿ...✍️
- mani_s_bhovi
19 Dec 2022, 10:29 pm
"ಮೌನದಲೇ ಕೂಗಿದೆ.. ನಾನು !
ಹೃದಯದ ಸದ್ದಿಗೆ ತಿರುಗಿದಳು.. ಅವಳು !
ಕಣ್ಣೆಲ್ಲೆ ಮಾತನಾಡಿಸಿದೆ.. ನಾನು !
ಸನ್ನೆಯಲ್ಲೆ ಉತ್ತರಿಸಿದಳು.. ಅವಳು !
ಮೆಚ್ಚಿಸಲು ಕವಿಯಾದೆ.. ನಾನು !
ಒಲವಾರ್ಪಣೆಗೆ ನಾಚಿ_ನೀರಾದಳು.. ಅವಳು !
ಹೀಗಿತ್ತು ಪೂರ್ವದಲ್ಲಿ..
ನನ್ನ_ಅವಳ ಒಲವ ದಿನಗಳು !
ಈಗ ನಾನು..
ಬದುಕಿನ ಒದ್ದಾಟಕ್ಕೆ ಒಳಗಾಗಿ,
ದೂರಾದ ಪ್ರೇಮಿ ನಾನು !!"
ಎಮ್.ಎಸ್.ಭೋವಿ...✍️
- mani_s_bhovi
19 Dec 2022, 10:18 pm
"ನೀ_ದೂರ_ಸರಿದಾಗ !
ಕನಸೆಲ್ಲ ಕರಗೋಗಿ.. ಮನಸೆಲ್ಲ ಮಂಕಾಗಿ..
ನಗುವೆ ಕಳೆದೋಗಿದೆ !
ಮಾತೆಲ್ಲ ಮೌನವಾಗಿ.. ಮೌನವೆ ಎಲ್ಲವಾಗಿ..
ದಾರಿ ಕಾಣದಾಗಿದೆ !!"
"ಯಾರಿಗು ಹತ್ತಿರವಾಗುವ.. ಮನಸಿಲ್ಲ !
ಯಾರಲ್ಲು ಮನಸ್ಸಿನ_ಭಾರ ಹೇಳಿಕೊಳ್ಳೋ..
ಇಷ್ಟವಿಲ್ಲ !
ಯಾಕಾಗಿ.. ಹೀಗಾದೆ ?
ಹೇಗೆ.. ನಾ_ಬದಲಾದೆ ?!
ಜೀವವೆ ಹೋಗುವ.. ಹಾಗಿದೆ.. ಏಕೋ ?
ಬದುಕೆ ನಿಂತಿರುವಾಗೆ ಅನಿಸುತಿದೆ.. ನನಗೇಕೋ ?!"
ಎಮ್.ಎಸ್.ಭೋವಿ...✍️
- mani_s_bhovi
18 Dec 2022, 09:16 pm
ನೆನಪು ಎಂಬುದು ದೊಡ್ಡ ಉಡುಗೊರೆಯಂತೆ,
ಅದು ಸಿಹಿ ನೆನಪಾದರೆ ಸಂತೋಷದಂತೆ,
ಅತೀ ಕಹಿ ನೆನಪಾದರೆ ದುಃಖವಾದಂತೆ..
ನನ್ನ ಕರ್ಮಕ್ಕೆ ನನಗೆ ಆಗುವ ನೆನಪುಗಳು
ಅತೀ ದುಃಖವನ್ನೇ ತರುತ್ತಿವೆ ಎನಿಸುತ್ತಿದೆ.
---✍️ಇಂತಿ ನಿನ್ನ ಗೆಳತಿ
- Kavya chinni1950
18 Dec 2022, 07:16 pm
ನನ್ನವಳ ಕಣ್ಸನ್ನೆಗೆ ಸೋತಿರುವೆ
ನೋಡಬಾರದೆ ನನ್ನೊಲವೆ
ಯಾರಿಲ್ಲದ ಊರಲ್ಲಿ
ಜೊತೆಗಾರನಾಗಿರುವೆ ನಾನಿಲ್ಲಿ
ನೋವಿನಲಿ ನಗುವಾಗುವೆ
ಕಷ್ಟದಲಿ ಹೆಗಲಾಗಿರುವೆ
ನೆರಳಾಗಿ ಹಿಂಬಾಲಿಸುಬೆ
ಪ್ರತಿಕ್ಷಣ ಜೊತೆ ಇರುವೆ
ದೂರದಲ್ಲಿದ್ದೆವು ನಾವು
ಪರಸ್ಪರ ಪ್ರೀತಿಯಲಿ ಒಂದಾದೆವು
ಬಿಟ್ಟಿರಲಾರೆ ಕ್ಷಣ ಕಾಲವು
ನೀನೆ ನನ್ನ ಜಗವು
ಕಾದಿದೆ ಹೃದಯವು ನಿನಗೆ
ನಾ ಬರುವೆ ನಿನ್ನ ಜೊತೆಗೆ
ಯಾರ ಹಂಗು ಬೇಡ ನಮಗೆ
ಹೋಗೋಣ ಬಾ ನನ್ನೊಲವಿನ ಊರಿಗೆ...
- Tanuja.K
18 Dec 2022, 07:48 am
ಏಕಾಂಗಿ ಪಯಣಕೆ
ನೀನಾದೆ ಬೆಳಕಿನ ಆಸರೆ
ಕನಸುಗಳ ಬಣ್ಣದ ಲೋಕವಿದು
ಕಾಡುತಿದೆ ನನ್ನನ್ನೇ ತಡೆದು
ಕರವಿದು ಕೈ ಚಾಚಿ ಕರೆದಿದೆ ನಿನ್ನ
ಮನಸಾರೆ ಮೆಚ್ಚಿ ಬರುವೆಯ ಚಿನ್ನ
ನಿನ್ನ ಎದೆಯೊರಗಿ ಹೃದಯ ಬಡಿತ ಕೇಳಬೇಕು
ನಿನ್ನ ಬೆಚ್ಚನೆಯ ಅಪ್ಪುಗೆ ಸಾಕು
ನಿನ್ನ ಕೋಪ ಅಂದ, ಪ್ರೀತಿ ಚೆಂದ
ಮುದ್ದು ಮಾತು ಇನ್ನೂ ಚೆಂದ
ನಿನ್ನ ಕರುಣಿಸಿದ ಆ ದೇವರಿಗೆ ನನ್ನ ನಮನ
ಹೀಗೆ ಇರಲಿ ನಮ್ಮ ಬೇವು ಬೆಲ್ಲದ ಜೀವನ...
- Tanuja.K
17 Dec 2022, 11:10 pm
ನಾವು ಯಾರನ್ನ ನಮ್ಮೋರು ಅಂತ ಹೆಚ್ಚು ನಂಬುತ್ತೇವೋ, ಅವರು ಸಮಯ ಬಂದಾಗ ಅವರ ನಿಜವಾದ ಮುಖವಾಡವನ್ನು ತೋರಿಸಿ ಜೀವನಕ್ಕೆ ಬೇಕಾದ ಪಾಠವನ್ನ ಕಳಿಸಿ ಹೋಗುತ್ತಾರೆ. ಅವರಿಗೆ ನನ್ನ ಧನ್ಯವಾದ
- Kavya chinni1950
17 Dec 2022, 11:03 pm
ಚೂರಾಯ್ತು ಹೃದಯದ ಚಿಪ್ಪು,....ಕಳೆದು ಹೋಯ್ತು ಪ್ರೀತಿಯ ಮುತ್ತು...!!
ದೂರವಾದ ಪ್ರೀತಿಯದು ಇನ್ನ್ಯಾರದೋ ಸ್ವತ್ತು....!
ನಾ ಬರೆದ ಕವನಗಳೆಲ್ಲಾ,.....ಬರೀ ನೆನಪುಗಳ ಚರಿತ್ರೆಯಾಯ್ತು ....!!
ಕಮರಿಹೋದ ನನ್ನ ಕನಸಿನ ಹೂಗಳು...ಅರಳಲಿ ಅವಳ ಬಾಳಲಿ ಎಂದೆಂದೂ
ಆಶಿಸುವೆ ಅವು ಸದಾ ನಗುತಿರಲೆಂದು...!!
ಪ್ರೀತಿ ನರಳಿದರೆ..ಹೃದಯ ಅರಳೊಲ್ಲ ಗೆಳೆತಿ...!!
ಚೂರಾದ ಚಿಪ್ಪಿನಲಿ...ಉಸಿರಾಡುವ ಪ್ರೇಮಿ ನಾನು....!!
✍️ಫೀಲಿಂಗ್
- ನೆನಪಿನ ಕವಿತೆ
15 Dec 2022, 06:34 pm