Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಒಲವಿನ ರಂಗೋಲಿ

ಓ ನನ್ನ ಕಲ್ಪನೆಯ ರಮಣಿ
ತಿಳಿಯದೇ ನನ್ನ ತವಕಗಳ ಸರಣಿ?

ನಿನ ಮೊಗವ ಕಾಣುವ ತವಕ
ನೆನೆದಾಗಲೆಲ್ಲಾ ನಾ ಭಾವುಕ.

ಹೃದಯವೆಂಬ ಲತೆಗೆ
ಪ್ರೀತಿಯೆಂಬ ನೀರೆರೆದು ಪೋಷಿಸು,

ನನ್ನೆದೆಯ ಬಾನಿನಲಿ ಭಾವನೆಗಳ ಚುಕ್ಕೆಯಿಟ್ಟು ಒಲವಿನ ರಂಗೋಲಿ ಬಿಡಿಸು.

- Raj

11 Dec 2016, 05:20 pm

ಮತ್ತಿನ್ಯಾರು

ನನ್ನ ಹುಸಿಗೋಪದ ಹಿಂದಿನ ಹಸಿವ ಹುಡುಕಿ
ಉಣಬಡಿಸಿದೆ ನೀನು ;
ನೀ ಊಟ ಮಾಡಿದೆಯ ಎಂದು
ಕೇಳದೆ ಹೋದೆ ನಾನು

- prajna

11 Dec 2016, 02:54 pm

ಪೊರೆ

ಈ ಕಣ್ಣಿನ ಪೊರೆ
ಆ ವೇದಿಕೆ ತೆರೆ,
ಎರಡೂ ದುಷ್ಟಜಂತುಗಳು.
ಅವಳ ರೂಪದ
ದೃಶ್ಯ ಸಂಗಮ
ಆಗಲೇ ಇಲ್ಲ.
ತೆರೆ ಮುಚ್ಚಿತು.
ಪೊರೆ ಕುರುಡಾಯಿತು.
ಸುತ್ತಲೂ ಕತ್ತಲು.

- Madhusudana y n

11 Dec 2016, 01:40 pm

ಮನ್ಸಿನ್ಮಾತು

ಬಾಬೇಗ ಗೆಳ್ತಿ
ಯಾಕ್ ಹಿಂಗ್ ನೀ ಕಾಡ್ತಿ
ಇಲ್ಲೇನ ಹೇಳು ನಿನ್ಗ
ನನ್ಮ್ಯಾಲಿ ಪ್ರೀತಿ

ಹಗಲ್ಯಾಲ್ ನಾ ಕನ್ಸ
ಕಾಣ್ತಿನಿ ನೀ ಬಂದ್ಹಂಗ
ಬಂದು ನನ್ನೆದಿಗಿ ಒರಗಿ
ಪಿಸ್ಗುಟ್ಟಿ ಮಾತಾಡ್ದ್ಹಂಗ

ನಸ್ಕಿಲೇ ಮುಸ್ಕ
ತೆಗದ್ ನೋಡಿದ್ರ
ಅದೆಲ್ಲಿ ಹಾರಿ ಹೋಗ್ತಿಯೋ
ಗೊತ್ತಾಗ್ವಾತು
ಏನ್ ಹೇಳ್ ಇದು
ನಿನ್ನ ಹಕ್ಕಿಕತ್ತು.
==================
ಎಲ್ಲಾರ್ಸೂರ್ಯ*

- ಸುರೇಶ ಎಲ್.ರಾಜಮಾನೆ

11 Dec 2016, 01:09 pm

ಮನದ ಮಾತು

ನಿನ್ನ ಹೊಗಳಲು ಪದಗಳ ಹುಡುಕುತಾ....
ಪದೇಪದೇ ಸೋತಿರುವೆನು...!
ನನ್ನ ಮನದ ಮಾತು ಹೇಳಲು..
ಉಸಿರ ಹಿಡಿದು ಕಾದಿರುವೆನು...!
ಎದುರು ನಿಲ್ಲು ನಿನ್ನ ಪ್ರತಿರೂಪವ..
ಎದೆಯ ಬಗೆದು ತೋರಿಸುವೆನು...!

(...Hamsakanthu...)

- Hamsakanthu

11 Dec 2016, 12:30 pm

ಮಣ್ಣು ಸುಟ್ಟು ಮಡಕೆಯಾಗಿ

ಮಣ್ಣು ಸುಟ್ಟು ಮಡಕೆಯಾಗಿ
ಹೊನ್ನು ಸುಟ್ಟು ಹೊಳಪಾಗಿ
ಕಲ್ಲು ಸುಟ್ಟು ಸುಣ್ಣವಾಗಿ
ಅಕ್ಕಿ ಬೆಂದು ಅನ್ನವಾಗಿ
ಕುರುಳು ಸುಟ್ಟು ವಿಭೂತಿಯಾಗಿ
ಆಸೆ, ಮೋಹ ಸುಟ್ಟು ಬುದ್ದನಾಗಿ
ಅಸೂಹೆ, ಕುಲ,ಜಾತಿ ಸುಟ್ಟು ಮನುಜನಾಗೆಂದ
ಗುರು ಬಸವಪ್ರಿಯ ರೇವಣಸಿದ್ದ

ರಚಣೆ: ರೇವಣಸಿದ್ದ ಗೌಡರ
ರಬಕವಿ-587314
Mobile:9008060918

- Revanasidda Goudar

11 Dec 2016, 11:50 am

ಆಕಾಶಕ್ಕೆ ಜೋಕಾಲಿ ಕಟ್ಟಿದ್ದೆ

ಆಕಾಶಕ್ಕೆ ಜೋಕಾಲಿ ಕಟ್ಟಿದ್ದೆ
ಜೀಕಿ ಜೀಕಿ ಚಂದ್ರನ ತರಬೇಕೆಂದಿದ್ದೆ
ಅಷ್ಟರಲ್ಲಿ......
ಕತ್ತಲೆ ಕರಗಿತ್ತು, ಜೋಕಾಲಿಯೂ ಹರದಿತ್ತು

ಸ್ವರ್ಗಕ್ಕೆ ಹೋಗಲೆಂದು ಪುಷ್ಪಕ ವಿಮಾನ ತಂದಿದ್ದೆ
ಕೂಗಿ ಕೂಗಿ ನಿನ್ನ ಕರದಿದ್ದೆ ಜೊತೆಯಾಗಿ ಬಾ ಎಂದು
ಅಷ್ಟರಲ್ಲಿ.....
ಪಕ್ಕ ಕಿತ್ತಿತ್ತು ,ಕನಸು ನುಚ್ಚುನೂರಾಗಿತ್ತು

ಸಿನೇಮಾ ಹೀರೋ ಆಗಬೇಕೆಂದಿದ್ದೆ
ಓಣಿ ಓಣಿಲಿ ಪೋಷ್ಟರ್ ಅಂಟಿಸಿದ್ದೆ
ಅಷ್ಟರಲ್ಲಿ....
ಪರದೆ ಹರದಿತ್ತು, ಕತ್ತಲೆ ಕವಿದಿತ್ತು

ರಚಣೆ: ರೇವಣಸಿದ್ದ ಗೌಡರ
ರಬಕವಿ-587314
Mobile:9008060918

- Revanasidda Goudar

11 Dec 2016, 11:30 am

ಕನ್ನಡ ಕವನ

ಗೀಚಿ ಗೀಚಿ ಬರೆದೆ ಬೀಚಿಯಾಂತಗಲ್
ಹುಡಿಕಿದರು ಹೊಳೆಯಲಿಲ್ಲ ಕನ್ನಡಪದಗಳ್
ಹಂಗೋ ಇಂಗೋ ಕದಡಿ ಕೆದಕಿ ಮನ
ಬರೆದೆ ಬಿಟ್ಟೇ ಈ ಕನ್ನಡ ಕವನ

- ವೆಂಕಟೇಶ್ ದೈಶಿ ವೇಮಗಲ್

11 Dec 2016, 11:14 am

ಕಿರಿಕೆಟ್ (ಕ್ರಿಕೆಟ್) ಪ್ರೀತ

ನೀ ತುಂಟ ಕಿರುನಗೆಯ ಬೀರೆ
ಬೌಲ್ಡ್ ಔಟ್ ಆದೆ ನಾನು
ಅವಸರಿಸಲು ಆದೆ
ರನ್ ಔಟ್ !!

ಎದೆಯುಬ್ಬಿಸಿ ಮುಂದೆ ನಡೆಯೆ
ಸ್ಟಂಪ್ ಔಟ್ ಆದೆ
ಹೊಡೆದುರುಳಿಸುವ ಆಸೆ
ಕ್ಯಾಚ್ ಔಟ್ನ ಭೀತಿ!!

ನೇರ ಎದುರಿಸಹೋಗಿ
ಆದೆ ಎಲ್ ಬಿಡಬ್ಲ್ಯೂ
ಕೊoಚ ವಿಚಲಿತಗೊಳೆ
ಆದೆ ಹಿಟ್ ವಿಕೆಟ್ !!

ಆಗಲಾರೆಯ ಗೆಳತಿ
ಹೃದಯಕೆ ಚೀಯರ್ ಗರ್ರ್ಲ
ಕಾದಿಹೆನು ನಾನಿಂದು
ಹಸಿರು ದೀಪದ ಕರೆಗೆ!!

ಟೆಸ್ಟ್ ಆಟಗಾರನಾಗುವ ಆಸೆ
ಅಡ್ಡಿ ಬಂತು ಟ್ವೇ0ಟಿ - ಟ್ವೇಂಟಿ
ಹೀಗಿತ್ತು ನನ್ನ ಪ್ರೇಮಾಯಣದ ಪರಿ
ಫಾರ್ಮ್ ಕಳೆದುಕೊ0ಡ
ಅಲ್ ರೌ0ಡರ್ ನಂತೆ !!


- ರಘುರಾಮ್ ಬೈ0ದೂರ್ .

- Raghuram Byndoor

11 Dec 2016, 10:30 am

ಮನ=ಕನ್ನಡ...

ಮನವು ತಾನೋಗೆದು ಕೆರಳಿ
ಕಂಪನ,ಕೊನೆಗೆ ಕೇಳಿಸುವುದು
ಈ ನುಡಿಗೇನೊಳಗೆ ನಿನ್ನ ಸಾಧ೯ನೆ
ಮನವು ಕೆರಳಿತು....
ಮನದ ಇಂಗಿತವ ಕಂಡಾದರೂ
ಸಾಧನೆಗೈಯಬೇಕೆಂಬ ಛಲ ಅಗತ್ಯ ಕನ್ನಡದಲ್ಲಿ

- ಅದ್ಯತನ

11 Dec 2016, 07:49 am