Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕನಸಿನ ನೂರು ಚೂರುಗಳು

ಒಂದು ಕಣ್ಣ ಹನಿಯ ಬಿಂದು
ಹೇಳುತಿದೆ ತೇಲಿ ಬಂದು
ತನ್ನ ಒಲುಮೆಯನ್ನು
ನೋಂದು ನೋಂದು

ಅದುಮಿಟ್ಟುಕೋಳ್ಳಲಾಗದ
ಒಂದು ನೂವಿನ ಸ್ವರ
ಹೋರಡಿಸುತಿದೆ ವಿರಹ
ಕಣ್ಣೀರಿನ ತರಹ ದರಾ ದರಾ

ಯಾರ ಹ್ರದಹದ ಧ್ವನಿಗೆ
ಯಾರ ಉಸೀರು ಬೇರತಿದೆಯೋ
ಆ ಉಸೀರಿನ ಒಡೆಯನದು
ಯಾವ ತರಹದ ನಿಲುವೋ

ಇರುಳು ಕವಿದರೆ ಮತ್ತದೆ
ಕನಸಿನ ನೂರು ಚೂರುಗಳು
ಯಾರ ಕಣ್ಣಿನಿಂದ ಜಾರಿ ಬಂದು
ಸೇರಲಿ ನಾನು ನಿನ್ನ ಎಂದು

ಮಹೇಶ ಕಾಳಿ

- ಮಹೇಶ ಕಾಳಿ

10 Dec 2016, 12:30 pm

ಆ ಚಂದಿರ

ಚೆಂದದ ಸುಂದರಿ
ಕನಸಿನ ವೈಯಾರಿ
ಭೂ ಲೋಕದ ಕುವರಿ

ಕನಸಿನ ಮದರಂಗಿ
ಮನಸಿನ ಮೃದುವಂಗಿ
ನನ್ನ ಈ ಚೆಲುವಿನ ರಂಗಿ

ನಿನ್ನದೆ ಗ್ಯಾನ
ನಿನ್ನದೆ ದ್ಯಾನ
ನಿನ್ನದೆ ಪ್ರೇಮ ಪುರಾಣ

ಕನಸ್ಸು ಹೇಳುತ್ತಿದೆ
ಮನಸ್ಸು ಕೇಳುತ್ತಿದೆ
ಹೃದಯ ಹೆದರುತ್ತಿದೆ

ಒಬ್ಬಳೆ ಒಬ್ಬಳು ಪ್ರೇಯಸಿ ಸಿಗುವಳೋ..
ಈ ಬಡಪಾಯಿ ಹೃದಯಕೆ
ಕಾಯುತ್ತಿವೆ ಕಾಯಾ ವಾಚಾ ಮನಸ್ಸುಗಳು
ಆ ಚಂದಿರನ ಮೊಗದವಳ ಬರುವಿಕೆಗೆ

- ರನ್ನ ಮಹಾದೇವ

10 Dec 2016, 12:21 pm

ತುಡಿತ

ಕವಿಯಾಗುವ ಕನಸೊoದು ಮೂಡುತಿದೆ
ಅದ ಸಾಧಿಸಲು ಮನಸ್ಸಿoದು ಮಿಡಿಯುತಿದೆ
ಸಾಧಕನಾಗಲು ಸಾವಿರಾರು ಕ್ಷಣಗಳ ಅಗತ್ಯವಿದೆ
ಆದರೆ,,,,ಆ ಕ್ಷಣಗಳ ಕೊಲ್ಲಲು ಬಾಳಲಿ,
ನೂರಾರು ನೋವುಗಳಿವೆ
ಆ ಕಾರಣ,,, ಕoಡ ಕನಸ್ಸುಗಳು ನಿಲ್ಲುತಲಿವೆ
ಪ್ರತಿಭಾ ಮನಸ್ಸು ಸಾಯುತಲಿದೆ
ಸಾಧನೆಯ ತುಡಿತವು ಚಡಪಡಿಸಿದೆ
ಬೆಳಕಿದ್ದರೂ,,,,, ಕತ್ತಲೆ ಕವಿಯುತಿದೆ
ಆದರೂ,,,,,
ಛಲಬಿಡದ ಮನಸ್ಸಿoದು ಹರಿಯುತಲಿದೆ
ಪದಗಳು ಸಾಲನು ಸೇರುತಲಿವೆ
ಕಾಣದ ಕವಿತೆಯು ಮೂಡುತಲಿದೆ
ಆ ಕವಿತೆಯು ಈ ಕವಿಯನು ಪರಿಚಯಿಸುತಿದೆ.
.....ರಘುವಿಜಯ ಕಸ್ತೂರಿ.

- ರಘುವಿಜಯ ಕಸ್ತೂರಿ

10 Dec 2016, 12:13 pm

ಹಿಂದಿನ ಭಾರತಕ್ಕೆ ಇಂದಿನ ಭಾರ

ನೆನಪಾಗುತ್ತಿದೆ ಹಿಂದಿನ ಭಾರತ ಬದುಕು
ನಸು ಬೆಳಕಾಗಿದೆ ಇಂದಿನ ಜೀವನ ತುಣುಕು
ರಾಜ-ಸೇವಕ, ಗುರು-ಶಿಷ್ಯರ ಸ್ವಾಮಿ ಭಕ್ತಿ
ಆಜ್ಞಾ ಕಾರ್ಯದಿ ಚಿತ್ತ ಭಕ್ತಿಯ ಮುಕ್ತಿ
ಇದುವೆ ಆನಾದಿ ಕಾಲದ ಶೋಭಿತ ಸೂಕ್ತಿ
ಆದರೆ ಏನಾಗಿದೆ ಇವತ್ತು?
ನೋಡು ನೋಡುತಾ ಬರುವ ಕಾಲಗಳು
ಆಯಾತಪ್ಪಿ ಮುಕ್ಕುರುಸಿ ಬೀಳುತ್ತಿವೆ
ಕಾರಣ, ಮೋಸದ ಆಡಳಿತಸೂತ್ರ ಬಳಕೆಯ ಕಾರ್ಖಾನೆ
ಉಗುಳುತಿದೆ ತನ್ನೋಳಗಿನ ವಿಷದ್ವೇಷ
ಬಲಿಯಾದವರು ಅಮಾಯಕರು! ಬಳಿಯೇ ಯಮಪಾಶ
ಕೇಳೋರು ದಿಕ್ಕಿಲ್ಲ, ಬಂದರೋ ಅವರಿಗೆ ಬದುಕಿಲ್ಲ
ಅಧಿಪತಿಯೇ ಭ್ರಷ್ಟನಾದರೆ ಅಧಿಕಾರಿಗಳು ಅದೃಷ್ಟರು!
ಅಧರ್ಮ ಕಾಲ ಬರಬಹುದೇನೋ...?
ಮಾಯಾ ಜಾಲ ಬೀಸಿ ಉಕ್ಕಿಸುವುದು ಹಾಲಹಲ
ಬರಬಹುದು ವಿಷ್ಣುವಿನ ಹನ್ನೆರಡನೇ ಅವತಾರ
ಮೊದಮೊದಲು ಹೆದರಬಹುದು ನೋಡಿ ಇವರ ಗ್ರಹಚಾರ
ಜಾತಿ ಎಂಬ ಬಲೆ, ಮತವೆಂಬ ಸೆಲೆ, ಕೋಮುವಾದದ ಅಲೆ
ಕಂಡು! ಕಂಗಾಲಾದರೂ ಸಂಶಯವಿಲ್ಲ
ಗೋಮುಖ ಧರಿಸಿದ ವ್ಯಾಘ್ರಗಳೋ ಸುತ್ತಲಿನ ಜನರು
ಸಾಥ್ ನೀಡುವ ನಾಟಕವಾಡಿ ದೂರ ಓಡಿ ಸಂತಸ ಪಡುವವರು!
ಅಶಾಂತಿ, ಕೊಲೆ, ದರೋಡೆ ಎಂಬ ಭೂತ ಮೈಗೂಡಿಸುವವರು!
ಬಲಿಯಾದವರು ಪರಿಶುದ್ಧ ಧರ್ಮಾಂಧರು!
-ದೇವ ಕಜ್ಜೇರ

- Deva Kajjera

10 Dec 2016, 12:12 pm

ಪುಟ್ಟ ಕಂದ

ಮುದ್ದು ಪುಟ್ಟ ಕಂದ,
ನೀ ನಗುತಿರೇ ಚಂದ,
ನೋಡಲು ಅದುವೇ ಆನಂದ.

ನಿನ್ನ ತೊದಲು ನುಡಿ
ಅದುವೇ ಎಲ್ಲರ ಪ್ರೀತಿಗೆ ಮುನ್ನುಡಿ
ನೀ ಆಡುತಿರಲು ಮಾತು
ನಿನಗಲ್ಲಿಹುದು ಸಿಹಿ ಮುತ್ತು.

ನೀ ಮೊದಲಿಡಲು ಪುಟ್ಟ ಹೆಜ್ಜೆ
ಅದೇ ಎತ್ತವಳ ಮನದಲ್ಲಿ ಸುಂದರ ಹಚ್ಚೆ
ನೀ ಇಡುತಿರಲು ಹೆಜ್ಜೆ ಮುಂದೆ ಮುಂದೆ
ನಿನ್ನ ಹಿಡಿಯಲು ಎಲ್ಲರೂ ನಿನ್ನ ಹಿಂದೆ ಹಿಂದೆ.

ನೀ ಮಾಡಲು ಶುರು ಅಳಲು
ನಿಲ್ಲಿಸಲು ಎಲ್ಲರ ಪರಿಪಾಟಲು
ಆಗ ಎತ್ತಿ ಮುದ್ದಿಸೇ ನಿನ್ನ
ನಗುವುದ ನೋಡಲು ಬಲು ಚೆನ್ನ.

ಊಟವ ನಿನಗೆ ತಿನ್ನಲು ತಂದಿರಲು ಅಮ್ಮ
ತಿನ್ನಿಸಲು ಬಂದಿಹನು ಚೆಂದಮಾಮ
ನಿನಗೆ ಅವಳಿಡಲು ಒಂದು ತುತ್ತು
ತಿರುಗಾಡಿಸಬೇಕು ಹತ್ತಾರು ಸುತ್ತು.

ನಿನಗೆ ಇದ್ದೇ ಇರುವುದು ಹಠ
ಎಲ್ಲರ ಕಣ್ತಪ್ಪಿಸಿ ಹೊರಗೋಡುವ ಚಟ
ಕಾಯಲು ಇರಬೇಕು ಒಬ್ಬರು ನಿನ್ನೊಂದಿಗೆ
ಇಲ್ಲದಿದ್ದರೆ ಕೇಳಬೇಕಾಗುವುದು ನಿನಗಾಗಿ ಅಕ್ಕಪಕ್ಕದವರೊಂದಿಗೆ

ಏನಾದರೂ ಆಗಲಿ ಪುಟ್ಟ ಮುದ್ದು ಕಂದ
ನೀ ಮಾಡುವುದು ಕೇಳುವುದೆಲ್ಲಾ ಒಂದು ಚೆಂದ
ನಿನ್ನ ನೋಡಲು ಮೂಡುವುದು ಮೊಗದಲ್ಲಿ ಮಂದಹಾಸ
ನೋವ ಮರೆಸಿ ನಗುವು ಮೂಡುತಿದೆ ಎಲ್ಲ ನಿನ್ನ ಸಹವಾಸ

- ಶ್ರೀಕಾವ್ಯ

10 Dec 2016, 12:09 pm

ವಿರಹ

ಏನಾಗುತ್ತಿದೆ ಎಂಬುದ ಅರಿಯದ ಮನಸ್ಸು
ಗಾಢವಾದ ಸಿಹಿಯ ನೋವಿನಂಚಿನಲ್ಲಿದೆ ತುಸು
ಆ ಚೆಲುವೆಯು ನೆನಪಾಗುತಾ....
ಈ ಮನಸ್ಸೆಂಬ ಕಗ್ಗಲ್ಲಿಗೆ ವಿಕಾರ ಹೋಗಿ ಆಕಾರ ಬಂದಿದೆ,
ಅವಳು ದೂರ ಇರುವುದರಿಂದ
ವಿರಹದ ವೇದನೆ ಕಾರಂಜಿಯ ಬುಗ್ಗೆಯಂತೆ ಚಿಮ್ಮುತ್ತಿದೆ♡

- Deva Kajjera

10 Dec 2016, 11:17 am

ಒಲವಿನ ಸಿಂಚನ

ಕನಸಿನ ಊರಿನಲಿ ಮನಸಿನ ಮೆರವಣಿಗೆ...
ಅನುರಾಗದ ಪುಟಗಳಲಿ ನಿನ್ನದೆ ಬರೆವಣಿಗೆ...
ಮನಸಿನ ಆಳದಲಿ ಪ್ರೀತಿಯ ಕನವರಿಕೆ....
ಹೃದಯದ ಬಾಗಿಲಿಗೆ ಒಲವಿನ ಸಿಂಪಡಿಕೆ.......

- ಮಹೇಶ್..

10 Dec 2016, 10:05 am

ಮುದ್ದು ಮನಸ್ಸಿನ ಹುಡುಗಿ

ಮುದ್ದು ಮನಸ್ಸಿನ ಹುಡುಗಿ
ಹೂವಂತೆ ನಗು ಚೆಲ್ಲಿ, ಎಂದೆಂದಿಗೂ
ಬಾನಲ್ಲಿ ಮಿನುಗುವ ತಾರೆ
ಮುಂಜಾನೆ ಸೂರ್ಯನು
ಬೆಳದಿಂಗಳ ಚಂದ್ರನು, ಕಾದಿಹರು
ಈ ದಿನ ಶುಭಕೋರಲು
ನಿನ್ನ ಕಣ್ಣ ಬೆಳಕೆ ಅವರ ಪ್ರತಿಬಿಂಬ
ಗಾನ ನವೀನ ಸ್ವರಧರೀಣಿಗೆ
ಈ ದಿನ ಸಪ್ತ ಸ್ವರಗಳು ಸೇರಿ
ಮಡುವವು ಸಮ್ಮೇಳನ.

ಅಂಬರಕ್ಕೆ ಕೈ ಚಾಚಿ
ಕ್ಷತ್ರಿಯನ ಜೊತೆ ಹೋರಾಡಿ
ತಾಯಿ ಇಂದ ಬೇಡಿ ಪಡೆದು
ಪೋಣಿಸಿ ಬರೆದೆ ನಿನ್ನ ಹೆಸರು.....

_ ಪುನೀತ್ ಸೋಮಿ

- _ ‌‌ಪುನೀತ್ ಸೋಮಿ

10 Dec 2016, 08:52 am

ನನ್ನ ಪ್ರೀತಿ

ಎಷ್ಟು ಕವನ
ಬರೆದರೇನು
ಸಾಟಿಯಾಗದು
ನಲ್ಲ ನಿನ್ನ ಪ್ರೀತಿಗೆ.....

ಎಷ್ಟು ವದನ
ನೋಡಿದರೂ
ತೃಪಯಾಗುತಿಲ್ಲ
ನನ್ನ ಕಣ್ಣಿಗೆ ....

ಪ್ರತಿ ಕ್ಷಣವು
ಕಾಯುತಿರುವೆ
ನಿನ್ನ ಮುದ್ದು ನಗುವಿಗೆ....

- kavita

10 Dec 2016, 08:07 am

ಕಂಬನಿ

ಭುಗಿಲೆದ್ದಿದೆ ಭಯೋತ್ಪಾದನೆಯ ದನಿ
ಕೇಳುವವರಾರು ಸಂತ್ರಸ್ತರ कहानि ?
ಸರಕಾರ ಕೊಡಬಹುದು ಸ್ವಲ್ಪ Money
ಇದರಿಂದ ಮಾಸೀತೇ ಅವರ ಕಂಬನಿ..?

- Raj

10 Dec 2016, 08:06 am