Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

....ಗೆ,

ಚಿಟ್ಟೆಗಳ ಜನಿವಾರಕೆ
ತಾಕಿದ
ಮೊಲೆಗಳಲಿ
ಚಿಮ್ಮಿದ ಹಸಿ ರಕ್ತ
ನೆಲವೆಲ್ಲ ಬಂಜರು...

ಎತ್ತಿದ ಕೈಗಳಲ್ಲಿ
ಕಂಕುಳ ಕೂದಲೇ
ಇಲ್ಲ
ಗಂಡಸ್ತನವೆಂದರೆ
ಹಾಸಿಗೆಯ ಮುಲುಕು

ತಬ್ಬಿದ ದೇಹಗಳಲಿ
ಬಸಿದ ಬೆವರಿಗೆ
ಬರೀ
ಚರಂಡಿ ವಾಸನೆ
ಹಂದಿಯ ಗೊರಗೊರ
ಕೇಳಿಸದ
ಕಿವಿಯಲಿ ಗುಗ್ಗೆಯ ಗೊಬ್ಬರ

ಕೆನ್ನೆಯೆಂದರೆ
ಕಾವಲಿ
ಚುಂಯ್ಯೆಂದ ದೋಸೆಗೆ
ಕೆಂಪು ಚಟ್ನಿ
ತಿಂದ ನಾಲಿಗೆಗೆ
ಮಾಂಸದ ರುಚಿ

ತಿರುಗಿದ ಭೂಮಿಯಲಿ
ಹೆಜ್ಜೆ ಗುರುತು ಯಾರದು?
ಜನಿವಾರ - ಜುಟ್ಟು
ನೆಲದಲಿ ನೆಟ್ಟು
ಬಂಜರಾದ ಭೂಮಿಗೆ
ಯಾರ ಮೇಲೆ ಸಿಟ್ಟು?!

- ಆರುಡೋ ಗಣೇಶ

15 Sep 2016, 01:43 pm

ನಲ್ಲೆ...

ನಲ್ಲೆ
ಅವಳಿಲ್ಲದ ಜೀವನವ
ನಾ ಒಲ್ಲೆ..
ಅವಳೇ ನನಗೆ ಎಲ್ಲವೂ..
ಅವಳಿಂದಲೇ
ನನ್ನ ಮನಕ್ಕೆ ಶಾಂತಿಯು..
ನನ್ನ ದುಃಖಕ್ಕೆ ಮರುಗುವಳು
ನನಗಾಗಿ ಬಂದವಳು
ದುಃಖದಿಂದ ಭಾರಗೊಂಡ
ಹೃದಯವನ್ನು ಹಗುರಿಸುವಳು..
ನನಗಾಗಿ ತನ್ನ ನೋವನ್ನೂ
ಮರೆಯುವಳು..
ಪರರ ಸುಖವನ್ನು
ಬಯಸುವವಳು
ತ್ಯಾಗಪೂರ್ಣ ಜೀವನ
ನಡೆಸುವಳು..
ಮಕ್ಕಳ ಹಿತಕ್ಕಾಗಿ
ಹಂಗು ತೊರೆಯುವಳು..
ಮನಸಾರೆ ನನ್ನನ್ನು
ಪ್ರೀತಿಸುವಳು..
ನನ್ನನ್ನೇ ನಂಬಿ
ಬಂದವಳು..
ನನಗಾಗಿ ಸರ್ವವನ್ನೂ
ಅರ್ಪಿಸಿದಳು..
ತಾನು ಹಸಿದು ಕೂತರೂ
ನನ್ನ ಹೊಟ್ಟೆಯ ತುಂಬಿದಳು..
ಜೇಬಿನೆಡೆಗೆ ನೋಡದೆ
ಹೃದಯವನ್ನಾವರಿಸಿದಳು..
ದುಃಖವನ್ನು ತೋರದೆ
ನನ್ನ ಸಂತೈಸಿದಳು..
ಎಂದೂ ಮುಗುಳ್ನಗೆಯ
ಬೀರಿಹಳು
ಅಸಂತೋಷವ ಅಡಗಿಸಿಟ್ಟಳು..
ಸಂಧ್ಯೆ ನನಗಾಗಿ ಕಾಯುವಳು..
ದಾರಿಯೆಡೆಗೆ ನೋಟವ ನೆಟ್ಟಿಹಳು..
ನನ್ನ ಕಂಡೊಡನೆ ನಿಟ್ಟಿಸಿರು ಬಿಟ್ಟು
ನಿರಾಳವಾಗುವಳು..

- ಶಾಹಿದ್ ಉಪ್ಪಿನಂಗಡಿ

14 Sep 2016, 11:11 pm

ನಮ್ ಕೂಸು

ಎಷ್ಟು ಭಾರದ ದಾತನಿವ
ಅಷ್ಟು ಹಗುರ ಸಲೀಸು ಕೂಸುಕೊಂಡ,
ದೀರ್ಘ ಗರ್ಭವ ಸೀಳಿ ಬಂದ ಕೂಸದು ಹಡೆದವಗೆ ತೂಗದ ತೊಟ್ಟಿಲು ತೋರಿತು ಅಳುತಳುತ ಹಾಡಿದ ಲಾಲಿಯ ನಡುವೆ ಅನಂತಾಯುಷ್ಯ ಪಡೆಯಿತು ಆ ಕೂಸು!

ಸರದಿಯಲಿದ್ದವರೆಲ್ಲ ಹೆರುವವರೆ
ಉತ್ತಲಾಗದು ಬಿತ್ತಲಾಗದು ಕೊನೆಯ ನಿಟ್ಟುಸಿರಿನಲೆ ಇದರ ಹುಟ್ಟು ,ಬರಡು ಬಂಜೆ ಎಂಬ ಮಾತೇ ಇಲ್ಲ ಇದು ಸಮಯದ ಸಂತಾನ.

ಈ ಕೂಸಾಗದ ಮನೆಯೇ ಇಲ್ಲ
ಒಮ್ಮೊಮ್ಮೆ ಕುಲಾವಿಗೂ ಬರವಿಲ್ಲ
ಇದರ ಜನನಕೆ ನೆಲ,ಕುಲ,ಜಲದ ತಂಟೆ ಬೇಕಿಲ್ಲ, ಜನ ಜನರು ತಾವೀದ್ದರೆ ಸಾಕು ತಾನುದಿಸುವುದು ಉಸಿರು ತಿಂದು


ಅಳದ ಕೂಸಿದು ಅಳಿಸುವ ಕೂಸು
ಹಡೆವವರು ನಡೆವಲ್ಲಿ ಪರದೆ ಎಳೆದು ಆಟ ಮುಗಿಯಿತಿನ್ನು ಎಂದು ಕೊನೆ ತಿಳಿಸುವ ಮರಿಗೂಸು.
ತನ್ನಾದಿಯಲೆ ತನ್ನವರಂತ್ಯ ಕಾಣ್ವ ಇದಕೆ " ಸಾವು" ಎಂಬ ಹೆಸರಿಟ್ಟರೇನೆ ಲೇಸು.

- MaheshRK

14 Sep 2016, 11:09 pm

ವ್ಯತ್ಯಾಸ

ಮನದಿ ಮೌಢ್ಯತೆ
ಬೆರೆತರೆ ಮದಿರೆಯು
ಕುಡಿದಂತೆ
ಮನದ ಮೌಢ್ಯತೆ
ಕಳೆದರೆ
ಮನ ಮಂದಿರದಂತೆ.

- ಸಾ.ರಾ.ಜ್ಞಾ

14 Sep 2016, 10:06 pm

ತಾಯಿಯ ಋಣ ತೀರಿತೆ?

ಓ ತಾಯಿಯೇ ನನ್ನನ್ನು
ಈ ಭೂಮಿಗೆ ತಂದೆಯೆ
ಹಸಿವಾದಾಗ ಉಣ್ಣಿಸಿದೆ
ನನ್ನ ನೋವು-ನಲಿವುಗಳಿಗೆ
ಸ್ಪಂದಿಸಿದೆ
ತಪ್ಪು-ಒಪ್ಪು ಗಳನ್ನು ಕಲಿಸಿದರು
ಪ್ರೀತಿಯ ಅಥ೯ ತಿಳಿಸಿದೆ
ಸಮಾಜಕ್ಕೆ ಪೂರಕವಾಗಿ
ಬದುಕು ಎಂದು ಹೇಳಿದೆ
ನನಗಾಗಿ ಎಲ್ಲಾ ತ್ಯಾಗ
ಮಾಡಿದೆ.
ನಿನಗಾಗಿ ಏನು ಕೇಳ ಬಯಸಲಿಲ್ಲ
ಸಮಾಜದಲ್ಲಿ ದೇವರ ಸ್ಥಾನ
ಪಡೆದೆ..
ಗುರುಗಳಲ್ಲಿ ಮೊದಲನೆ
ಸ್ಥಾನ ಪಡೆದೆ..
ಓ ತಾಯಿಯೇ ನಿನ್ನ ಬಗ್ಗೆ
ಹೇಳಬೇಕೆಂದರೆ
ಮಹಾಭಾರತದ ಪುಟವೆ
ಮೀರುತ್ತದೆ
ಗೆಳೆಯರೆ ತಾಯಿಯ ಋಣ ತೀರಿಸಲು
ಈ ಜನ್ಮ ಸಾಲದು
ಯಾವತ್ತು ತಂದೆ ತಾಯಿಯನ್ನು ಕಡೆಗಣಿಸಬೇಡಿ
ಈ ಜಗತ್ತಿನಲ್ಲಿ ತಾಯಿಯ ಪ್ರೀತಿಗಿಂತ ಯಾರ ಪ್ರೀತಿಯು ಮೇಲಲ್ಲ...

- ಶಿವಾ ಬಳಿಚಕ್ರ

14 Sep 2016, 07:42 pm

ಮನಸ್ಸು


ಸುವಾಸನೆ ಸೂಸುವ
ಕೆಲವೊಂದು ಮನಸ್ಸು
ದುರ್ಗಂಧ ಬೀರುವ
ಕೊಳಕಾದ ಮನಸ್ಸು
ಪಾಸಿಟಿವ್ ಥಿಂಕಿಂಗ್
ಅದರಲ್ಲಿಹುದು
ನೆಗೆಟಿವ್ ಚಿಂತೆ
ಮತ್ತೊಂದರಲ್ಲೂ...
ಚಿಂತಿಸುವವರನ್ನು
ಜಾಣನೆನ್ನುವರು
ಸುಮ್ಮನೆ ಕೂರುವವರು
ದಡ್ಡರೆನಿಸುವರು,,
ಮನದ ಮಾತು
ಮನದಟ್ಟಾಗದಿದ್ದರೆ,
ಮೌನವೇ ಮಾತಾಗಿ
ಕೊನೆಗಾಣುವುದು..

- ಶಾಹಿದ್ ಉಪ್ಪಿನಂಗಡಿ

14 Sep 2016, 04:24 pm

ಮಲ್ಲೆ ಮೊಗ್ಗು

ಮಲ್ಲೆ ಮೊಗ್ಗೊಂದು ಹೇಳಿತಂತೆ
ತಾನು ಬಳ್ಳೀಲಿ ಅರಳಿದರೂ ಚೆನ್ನ!!
ಬಳ್ಳಿ ಮೊಗ್ಗಿಗೆ ಹೇಳಿತಂತೆ
ನೀನು ನನ್ನನ್ನು ಅಗಲದಿರು ಚಿನ್ನ!!

ಮೊಗ್ಗು ಹೂವಾಗಿ ಅರಳುತ್ತಿದ್ದಂತೆ
ಸೂಸಿ ತನ್ನಿಂದ ಸೊಂಪಾದ ಗಂಧ!!
ಗಂಧ ಗಾಳಿಲಿ ಬೆರೆಯುತ್ತಿದ್ದಂತೆ
ಬಂದ ಕೀರ್ತಿಯು ಗಾಳಿಗೆ ಚೆನ್ನ!!

ಹೂವು ಮಕರಂದ ಚಿಮ್ಮುತ್ತಿದ್ದಂತೆ
ದುಂಬಿ ಝೆಂಕರಿಸಿ ಸುತ್ತೋದೆ ಚೆನ್ನ!!
ದುಂಬಿ ಹೂವನ್ನು ಸ್ಪರ್ಷಿಸಿ ತಾನು
ಹೀರಿ ಮಧುವನ್ನು ಸವಿಯೋದೆ ಚೆನ್ನ!!

ಮಧುವು ದುಂಬಿಗೆ ಸೇರುತ್ತಿದ್ದಂತೆ
ಹೂವ ಯವ್ವನವು ಸಾರ್ಥಕವಾದಂತೆ!!
ತಾನು ಬಳ್ಳೀಲಿ ಅರಳಿದರೂನು
ಉದುರಿ ಭೂಮಿಯ ಸೇರಿತಂತೆ!!

- ಪಿ.ಜಿ.ಜ್ಯೋತಿ

14 Sep 2016, 04:23 pm

ತಿರುಗಿ ಮೇಲೆ ಹೋಗದಂತೆಯೇ

ಭೂಮಿಗೆ ಈ ಭೂಮಿಗೆ
ಬಾನಿನ ಆ ಚಂದ್ರನು
ಬಂದರೆ ಏನು ಮಾಡಲಿ
ತಿರುಗಿ ಮೇಲೆ ಹೋಗದಂತೆಯೇ!!

ಸ್ವಾತಿಯ ಮಳೆಯನು
ಬೊಗಸೆಯ ತುಂಬ ನಾ
ತಂದು ಅವನ ಮೇಲೆ ಚಲ್ಲಲೇ
ತಿರುಗಿ ಮೇಲೆ ಹೋಗದಂತೆಯೇ!!

ಹೂವಿನ ಮಂಟಪ
ಕಟ್ಟಿ ನಾ ಹಾಗೆಯೇ
ಅವನ ಸುತ್ತ ಬೇಲಿ ಹಾಕಲೇ
ತಿರುಗಿ ಮೇಲೆ ಹೋಗದಂತೆಯೇ!!

ಮುತ್ತಿನ ತೋರಣ ಕಟ್ಟಿ ನಾ ಸುತ್ತಲು
ತಾರೆಯನ್ನು ಭೂವಿಗೆ ಕರೆಯಲೇ
ಭೂಮಿಯನ್ನು ಗಗನ ಮಾಡಲೇ
ತಿರುಗಿ ಮೇಲೆ ಹೋಗದಂತೆಯೇ!!

- ಪಿ.ಜಿ.ಜ್ಯೋತಿ

14 Sep 2016, 03:53 pm

ಪ್ರೇಮದಾ ನೆಂಟ

ಚಲುವ ಚನ್ನಿಗರಾಯ
ಚಲುವೂರ ಚನ್ನಯ್ಯ
ಬಂದಾ ನೋಡೀಗ
ಚಲುವಿನ ಅರಮನೆಗೆ!!

ಚಲುವಿನ ಅರಮನೆಯಲ್ಲಿ
ಅರಗಿಣಿಯ ಆಟ
ಅದರ ಜೊತೆಯಲ್ಲಿ ಒಂದು
ಅಂದದಾ ನೋಟ!!

ಹುಡುಕಿದರೂ ನಾ ಕಾಣೆ
ಇಂತಹ ಒಂದು ನೋಟ
ಅದ ಹುಡುಕೊಂಡು ಬಂದವ
ಈ ಪ್ರೇಮದಾ ನೆಂಟ!!

- ಪಿ.ಜಿ.ಜ್ಯೋತಿ

14 Sep 2016, 02:54 pm

ಜಲ ದೇವತೆ

ಸಕಲ ಸಂಕುಲಕೆ
ನೀನೇ ಆಧಾರ
ನೀನಿಲ್ಲದೆ ಹೋದರೆ
ಎಲ್ಲವೂ ನಿರಾಧಾರ

ಅರಿತರಿತು ಮರೆತು ಹೋದೆವು,
ಹೋಗುತಿಹೆವು ನಿನ್ನ ಹಿಂಬಲವನು ,ಡಾಂಬರ್ ನೆಚ್ಚಿ .ಮರೆತು ಹೋದೆವು ವಸುದೈವ ಕುಟುಂಬಕ ಮಂತ್ರವನು ಜಪಗೈವುತಿರುವೆವು ನಿನ್ನೊಲುಮೆಯನು ಸಾವಿನಲೂ ಗಹಗಹಿಸಿ ನಕ್ಕು ತೀರಿಸಿ ಕೊಳ್ಳುತಿವೆ ತಮ್ಮ ಮನದಾಳವನು ಹೊತ್ತುರಿಯುತಿವೆ ವಂದೇ ಬಳ್ಳಿಯ ಯೆರಡು ಕುಡಿಗಳು

ದಗದಗಿಸುತಿರುವ ಈ‌ಜಗದಲಿ ಜಗಮಗಿಸಿ ನೀ ಬಂದು ಅಪ್ಪಿ ಮುತ್ತಿಟ್ಟು ಸಲಹು ತಾಯಿ
'ಯಂತ್ರ ಮೆಚ್ಚಿ' ತಂತ್ರ ಹೊಲಿಯುವ ಈ ಕಾವೇರಿದ ಮಕ್ಕಳನು.

- "ಪ್ರೇಯಸಿ"

13 Sep 2016, 09:29 pm