Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಓ
ನನ್ನ ಹ್ರದಯ
ಕದ್ದ ಕಳ್ಳಿ
ಅಳಿಸು ಬಾರೆ, ಎನ್ನ ಮನದ ತಳಮಳ.
ಗೊತ್ತಿದ್ದೋ
ಗೊತ್ತಿಲ್ಲದೆಯೋ...
ತೇಲಿ ಬಿಟ್ಟಿರುವೆ ಪ್ರೀತಿಯ ಹೊಳೆ
ದಡಸೇರ ಬಲ್ಲೆನೆಂಬ ಹೊಂಬದಿಂದ
ಅವರಿವರೆನ್ನದೆ
ಒತ್ತಿ ಬಿಡು, ನಿನ್ನೊಲುಮೆಯ ಮುದ್ರೆ ಪ್ರೇಮ ಭಿಕ್ಷೆ ಬಯಸಿದ
ಈ ನಿನ್ನ ಹ್ರದಯ ಕದ್ದ ಚೋರನಿಗೆ
ಪ್ರೇಯಸಿ
- "ಪ್ರೇಯಸಿ"
13 Sep 2016, 07:18 pm
ಹುಡುಗರಿಗೆ ಸಿಗರೇಟ್ ನ ಚಟ
ಹುಡುಗಿಯರಿಗೆ ಸಿಕ್ರೇಟ್ ನ ಚಟ
ಕೊನೆಗೆ ಯಾರು ಸೇರದಿರಲಿ ಮಠ
ಬೇಡವೆಂದರು ಏರಲೇ..ಬೇಕು ಚಟ್ಟ
- ಆನಂದ್
13 Sep 2016, 06:35 pm
ಜರೂರತ್ಗಿಂತ
ಜಾಸ್ತಿಯಾಗಿದೆ
ಜಾಹೀರಾತು
ಟಿ.ವಿ. ಯಲ್ಲಿ
ರಸವತ್ತಿಗಿಂತ
ರುಷುವತ್ತು
ರುಜುವಾತಗಿದೆ
ರಾಜಕೀಯದಲ್ಲಿ.
- ಸಾ.ರಾ.ಜ್ಞಾ
13 Sep 2016, 03:57 pm
ಎಲ್ಲೆ ವಿರದ ಪ್ರೀತಿ
ಎಲ್ಲಾ ಹೇಗೆ ಹೇಳಲಿ ಗೆಳತಿ
ಕಟ್ಟಲಾದೀತೆ? ನನ್ನ ಅಗಣಿತ ಅಳ್ಕಿರನ
ಸೋತು ಪರಿತಪಿಸುತಿದೆ ಹಗಲಿರಳೆನ್ನದೆ
ಕಂಪಿಡುವ ತಂಪಾದ
ಸಿಹಿ ಗಾಳಿಯಲಿ ಸಹಿ ಹಾಕಿ ಬಯಸುತಿದೆ ನಿನ್ಮ ಪ್ರೇಮದ ಸವಿ ತಾತ್ಸರಿಸದೆ ಸತ್ಕರಿಸು ಒಲುಮೆ ಸುಧೆ
ಆ ಸಂಧ್ಯಾ ಸೋನೆಯಲಿ ನೀ ಕದ್ದು ಕೊಟ್ಟ ಮುತ್ತು , ಮಂಕಾದ ಹ್ರದಯನು ಪ್ರಫುಲ್ಲಗೊಳಿಸಿ ತೆನೆ ತೆಗೆದು ತಲೆಯತ್ತಿ ನಿಂತು ಬೇಡುತಿದೆ ಪ್ರೇಮ ಭಿಕ್ಷಯನು ಪ್ರೇಯಸಿ
ಪ್ರೇಯಸಿ
- "ಪ್ರೇಯಸಿ"
13 Sep 2016, 03:07 pm
ನಲ್ಲಾ ನಿನ್ನನು ಸೇರೋಕಂತಲೇ
ಹುಟ್ಟಿ ಬಂದೆ ನಾ ಈ ಭೂಮಿಗೆ!!
ಕ್ಷಣಕ್ಕೆ ಒಂದು ಕನಸು ಕಾಣೊ
ಆಸೆ ಮೂಡಿದೆ!!
ವಿಪರೀತವಾದ ವಿರಹ ಏಕೆ
ಹೀಗೆ ಕಾಡಿದೆ!!
ಆಕಾಶ ಭೂಮಿ ಸೇರಲೆಂದು
ಕೈಯ ಚಾಚಿದೆ!!
ಕಾರ್ಮೋಡ ಕವಿದು ನಡುವಿನಲ್ಲಿ
ನಿಂತುಕೊಂಡಿದೆ!!
ಮರುಭೂಮಿಯಲ್ಲಿ
ನಿಂತ ಒಂಟಿ ಜೀವ ನಾನಾದೆ!!
ಬಿರುಗಾಳಿ ಬಂದು
ಹಾದು ಹೋಯ್ತು ನೀನು ಬರದಾದೆ!!
- ಪಿ.ಜಿ.ಜ್ಯೋತಿ
13 Sep 2016, 01:11 pm
ನೀಲಿ ಮುಗಿಲಿಗೆ
ನಗೆಯ ಬೆಳಕಂತೆ
ಮೂಡಿ ಬಾ ನೀ ಚಂದಿರ!!
ಬಾನ ದಾರಿಯ
ನಗೆಯ ಊರಿಗೆ
ಹೋಗಬೇಕು ಚಂದಿರ!!
ಬೆಳಗುವಾಸೆ
ಕರಗುವಾಸೆ
ನೀನೆ ತಾನೆ ಚಂದಿರ!!
ಬೆಳಗಿ ಬದುಕಲಿ
ಕರಗಿ ಕನಸಲಿ
ಹರಸಬೇಕು ಚಂದಿರ!!
- ಪಿ.ಜಿ.ಜ್ಯೋತಿ
13 Sep 2016, 12:54 pm
ನಿನ್ನ ನೆನಪಾದರೆ... ಬಿಸಿಲಲ್ಲೂ ತಂಗಾಳಿಯ ತಂಪು...
ನೀ ಜೊತೆಯಿದ್ದರೆ... ಮರುಭೂಮಿಯಲ್ಲೂ ಮಲ್ಲಿಗೆಯ ಕಂಪು...
- ಬಾಲುಮಹೇಂದರ್
13 Sep 2016, 01:58 am
ಕಣ್ಣಿರಿನ ಹನಿಯೂ
ಕಡಲ ಸೇರಿ ಉಪ್ಪಾಯಿತು,
ನನ್ನ ಹೃದಯದೊಳಗಿನ
ನಂದಾದೀಪವು ಹಾರುವ ಒತ್ತಾಯಿತು ಅದರೆ ನಿನ್ನ ನೆನಪುಗಳಿಗೆ
ಮುಪ್ಪಾಗಲೇ ಇಲ್ಲ ಗೆಳತಿ....
- ಬಾಲುಮಹೇಂದರ್
13 Sep 2016, 01:41 am
ಕನಸೊಂದು ಕಾಡುತ್ತಿದೆ ನಿನ್ನ
ನೆನಪುಗಳ ಸಾಲಿನಲ್ಲಿ
ಮನಸ್ಸಿಂದು ಚಡಪಡಿಸುತ್ತಿದೆ ಪ್ರೀತಿಯ
ಒಲವಿನಲಿ
ಹೂವೂಂದು ಅರಳಿದೆ ದುಂಬಿಯ ಬಳಿ
ಸೆಳೆಯುತಲಿ
ನಿನ್ನ ಹೂ ನಗೆಯೊಂದು ಹೇಳುತ್ತಿದೆ
ನೀನಂದ್ರೆ ಇಷ್ಟ ಅಂತ ಮೌನದಲ್ಲಿ
ನೆನಪಿರಲಿ ಇದು ಮನಸ್ಸಿನ ಭಾವನೆಗಳ
ಪಿಸುಮಾತು
- ಬಾಲುಮಹೇಂದರ್
13 Sep 2016, 01:24 am
ಸಾಗರದಲ್ಲಿ ಮೀನಾದೆ
ಆಕಾಶದಲ್ಲಿ ಚುಕ್ಕಿಯಾದೆ
ನೀ ನನ್ನ ಕಣ್ಮುಂದೆ ಬಂದು
ನಿಂತು ನನ್ನ ಹೃದಯದ
ಒಳಗಿಳಿದಾಗ
ನಾನು ಪ್ರೇಮಿಯಾದೆ
- ಶಿವಾ ಬಳಿಚಕ್ರ
12 Sep 2016, 06:36 pm