Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ರಮ್ಯ ತಾಣ

ನಡೆದು ಬಾ ಕರೆದೊಯ್ಯುವೆ
ನಿನ್ನ ನಾ ಬಾನಂಗಳದ ರಮ್ಯ ತಾಣಕೆ
ಇಲ್ಲಿ ನೋವಿಲ್ಲ ,ಅಳುವಿಲ್ಲ
ಪ್ರೀತಿಯ ತಂಗಾಳಿ ಆಡುವುದು
ನಿನ್ನೊಡನೆ..
ಬಾ ಬಾನಂಗಳದ ಈ ರಮ್ಯ ತಾಣಕೆ..

ನೇಸರನ ಮೊದಲ ಕಿರಣಕೆ
ಉಲ್ಲಾಸದಿ ಬೆಳಗು ಅರಳುವುದು
ಶಶಿಯ ತಂಪು ಕರಗಳಲಿ
ಗಾಢ ನಿಶೆ ಹಾಗೆ ಕರಗುವಳು..

ಬಿಸಿಲೊಮ್ಮೆ ಸಿಟ್ಟಾಗಿ
ನೆರಳೊಮ್ಮೆ ನಕ್ಕು
ಹೀಗೆ ಇಲ್ಲಿ ನಿಲ್ಲದು ಭಾವಗಳು
ಇಲ್ಲಿ ನೋವಿಲ್ಲ ,ಅಳುವಿಲ್ಲ
ಪ್ರೀತಿಯ ತಂಗಾಳಿ ಆಡುವುದು
ನಿನ್ನೊಡನೆ..
ಬಾ ಬಾನಂಗಳದ ಈ ರಮ್ಯ ತಾಣಕೆ..

ದೂರ ದಿಗಂತದ ನೋಟಕೆ
ಸ್ವಚ್ಛ ನೀಲ ಕಣ್ ತಣಿಸುವುದು
ಅಲ್ಲಿ‌ ರಂಗು ರಂಗಿನ ಹಕ್ಕಿಗಳು
ನೆಮ್ಮದಿಯ ಸಂದೇಶ ‌ತರುತಿಹುದು

ಕನಸಲಿ ಕಂಡ ಒಲವು
ನನಸಾಗಿ ಮೂಡಿದ ಚೆಲುವು
ಸಂತಸದ ಸಂಜೆಯು ನಿರ್ಮಲವು
ಈ ನೈಜತೆ , ಸ್ವಪ್ನಲೋಕದ ಅನಾವರಣ
ಎಲ್ಲೆಲ್ಲೂ ಪ್ರೇಮಗಂಧದ ಪ್ರಸರಣ
ಇಲ್ಲಿ ಕಳೆದು ಹೋಗವ ನಾವು
ಸಂಕೋಚ ,ಭಯ ತೊರೆದು

ಎದಿರಿಲ್ಲ ,ತಡೆಇಲ್ಲ
ಇಲ್ಲಿ ಬೇರಾರಿಲ್ಲ
ಒಟ್ಟಾಗಿ ನಡೆವ
ಇರುವ ನಾವು ಹೀಗೆ...
ಇಲ್ಲಿ ನೋವಿಲ್ಲ ,ಅಳುವಿಲ್ಲ
ಪ್ರೀತಿಯ ತಂಗಾಳಿ ಆಡುವುದು
ನಿನ್ನೊಡನೆ..
ಬಾ ಬಾನಂಗಳದ ಈ ರಮ್ಯ ತಾಣಕೆ..

- Indushekar Chinivar

09 Dec 2016, 07:43 pm

ಹೃದಯ

ನನ್ನ ಮನ ಮಂದಿರದಲ್ಲಿ
ನಿಮ್ಮ ದೇ ರೂಪ
ಕಣ್ಣ ತುಂಬಾ ನಿಮ್ಮ ದೇ
ಪ್ರತಿ ಬಿಂಬ
ನನ್ನೊಳಗೆ ಆವರಿಸಿದೆ
ನಿಮ್ಮಂತರಂಗ
ಒಂದೇ ಒಂದು ಸ್ವಲ್ಪ
ಕಣ್ಣಲಿ ಕಣ್ಣು
ಬೆರೆಸಿ ನೋಡಿ ‌

- kavita Rajesh

09 Dec 2016, 07:31 pm

ಋಣಾನುಬಂಧ

ಯಾವ ಜನ್ಮದ ಋಣಾನುಬಂಧವೋ
ನೀ ನನ್ನ ಬಾಳಿನಲ್ಲಿ ಬಂದು
ಅತೀ ಆನಂದ ನೀಡಿದೆ
ಯಾವ ಜನ್ಮದ ಪಾಪ ಕರ್ಮವೋ
ನನ್ಮ ಮನಸ್ಸಿನಲ್ಲಿ ಎಂದೂ
ಮಾಯದ ಗಾಯ ಮಾಡಿದೆ.......

- Jayashri

09 Dec 2016, 06:30 pm

ಕನಸು

ನನಸಾಗದ ಕನಸಿನ ವ್ಯಾಮೋಹವ
ಹೇಳುವುದೇಗೆ
ಅದು ನನ್ನಲ್ಲೇ ಹುಟ್ಟಿ ನನ್ನಲ್ಲೇ
ಕೊನೆಯುಸಿರೆಳೆಯುವಾಗ...

...ಅನುಸರಸ್ವತಿ

- Anusha

09 Dec 2016, 05:33 pm

ಮುಸ್ಸಂಜೆ ಮೌನ

ರಂಗೇರಿದ ರವಿಯ ಕೆಂಪು
ಸಂಜೆಯ ಭುವಿಯಲ್ಲಿ ತಂಪು
ಹಕ್ಕಿ ಪಿಕ್ಕಿಗಳ ಕಲರವ ಗಾನ
ಕೇಳಿ ತಿಳಿಯಿತು ಮುಸ್ಸಂಜೆ ಮೌನ

- ವೆಂಕಟೇಶ್ ದೈಶಿ ವೇಮಗಲ್

09 Dec 2016, 05:25 pm

ನೋಡಬ್ಯಾಡ ಹಂಗ.....

ನೋಡಬ್ಯಾಡ ಹುಡಗಿ ಹಂಗ ನೀ ಭಾಳ ಚೆಂದ..
ಕಾಡಬ್ಯಾಡ ಸುಮ್ಮ್.. ನನ್ನ ಬುದ್ದಿ ಭಾಳ ಮಂದ
ನಕ್ಕು ನಕ್ಕು ಸೆಳಿತಿಯಲ್ಲೇ ನನ್ನ ದ್ಯಾಸ
ನೋಡಿ ನೋಡಿ ಎದಿಯಾಗ ಏನೋ ಒಂಥರದ ತ್ರಾಸ
ಹುಚ್ಚು ಮನಸ್ಸು ಹದಕ್ಕ ಬಂದದ
ನನ್ನ ರೇಷನ್ ಕಾರ್ಡಗೆ ನಿನ್ನ ಹೆಸರು ಕೇಳ್ತದ
ಬತ್ತಿದ ಕನಸು ಮತ್ತ ಎದ್ದ ಕುಂತಾವು
ಚೆಂದದ ಜೀವನಕ್ಕೆ ನೀನಾ ಬೇಕ ಅಂತಾವು
ಕೈ ಹಿಡಿ ಒಮ್ಮೆ ಹೆಂಗಾರ
ಕೂಡಿ ಹೊರುವಾ ಈ ಜೀವನದ ಭಾರ
ಪ್ರೀತಿಲಿ ನಡಸೋನು ಅಂದದ ಸಂಸಾರ..

- Goudru

09 Dec 2016, 04:06 pm

ಮಳೆಯೇ ನೀ ಸೇರಲು ಬರುವೆಯ

ಮಳೆಯೇ ನಾನು ಸೇರಲೇ ನಿನ್ನೊಟ್ಟಿಗೆ
ನೀನಾದರು ಇರುವೆಯ ನನ್ನೊಂದಿಗೆ
ಜಗಕೆ ಕಾಣದ ನೋವ ನೀನಾದರೂ ಕಾಣುವೆಯ
ಈ ಮನುಜ ಕಾಣದ ಕಣ್ಣ ನೀರ ನೀನಾದರು ಒರೆಸುವೆಯ
ತೋರಲಾರೆನು ಕಣ್ಣೀರು ಜಗದೊಳು
ತಡೆದು ಇರಲಾರೆನು, ತೋರಿ ಸೋಲಲಾರೆನು
ಮನದೊಳಗಿನ ನೋವು ಕಾಡುತಿರಲು
ಕಣ್ಣಂಚಿನ ನೀರು ಜಾರಲು ಕಾಯುತಿರಲು
ಸೋಲಲಾರೆನು ಈ ಜಗದೊಳು
ಸೇರಿಸಿಕೊಳ್ಳುವೆಯ ನನ್ನ ಕಣ್ಣೀರ ನಿನ್ನ ಜೊತೆಯಲಿ
ನಿಂತಿರುವೆ ನಾನು ನಿನ್ನ ಪ್ರೀತಿಯ ಅಲೆಯಲಿ
ಜಾರಲು ಕಾಯುತಿಹ ಕಣ್ಣೀರ ತೊಳೆದು ನೀಡು ನೆಮ್ಮದಿಯನು
ಮಳೆಯೇ ನೀ ಸೇರಲು ಬರುವೆಯ ನನ್ನ ಕಣ್ಣ ಅಂಚಿನ ನೀರನು.


ಅರ್ಪಣೆ:
ನೋವು ಕಣ್ಣೀರನ್ನು ಮನಸೊಳಗೆ ಬಚ್ಚಿಟ್ಟು ಬದುಕುತಿರುವವರಿಗೆ

- ಶ್ರೀಕಾವ್ಯ

09 Dec 2016, 03:47 pm

ಅವ್ವ

ಏನೆಲ್ಲಾ ಇಹುದು ಈ ಜಗತ್ತಿನಲ್ಲಿ
ಇನ್ಯಾರು ಸರಿಸಾಟಿ ನಿನ್ನಲ್ಲಿ
ನೀ ಕೊಟ್ಟ ಉಸಿರು ನನ್ನಲ್ಲಿ
ನನ್ನ ಜೀವನ ನಿನ್ನ ಪಾದದ ಅಡಿಯಲ್ಲಿ
-ಅಪ್ಪಣ್ಣಗೌಡ ಇಡಕನಹಳ್ಳಿ

- ಅಪ್ಪಣ್ಣಗೌಡ.ಐ.ಜೆ.

09 Dec 2016, 03:33 pm

ಕ್ರೌರ್ಯ

ಕಾಶ್ಮೀರ ಆಕ್ರಮಿಸಿದರೂ
ಬಳೆತೊಟ್ಟು ಕೂತಿದ್ದೀರಿ

ಉಗ್ರರ ಉಪಟಳಕ್ಕೆ
ಸೀರೆಯುಟ್ಟು ಒಳಗಿದ್ದೀರಿ

ನಕ್ಸಲರ ಅಟ್ಟಹಾಸಕ್ಕೆ
ತಲೆಬಾಗಿ ನಿಂತಿದ್ದೀರಿ

ಮಹದಾಯಿ ನೀರು ಕೇಳಿದ್ದಕ್ಕೆ
ಮಹಿಳೆ,ಮಕ್ಕಳು,ಮುದುಕರೆನ್ನದೆ
ಮನೆನುಗ್ಗಿ ಹೊಡೆದಿದ್ದೀರಿ

ಅಲ್ಪವಾದರೂ ಬೇಕಲ್ಲವೆ ಮಾನ,ಮರ್ಯಾದೆ,ನಾಚಿಕೆ?

ಸಂಸತ್ತಿಗೆ ನುಗ್ಗಿದರೂ
ಪರವಾಗಿಲ್ಲ ಕ್ಷಮಾದಾನ

ಗುಂಡಿಟ್ಟು ಕೊಂದರೂ
ಪರವಾಗಿಲ್ಲ ಕ್ಷಮಾದಾನ

ಕೋಟಿ ಕಬಳಿಸಿದರೂ
ಪರವಾಗಿಲ್ಲ ಕ್ಷಮಾದಾನ

ಮಹದಾಯಿ ನೀರು ಕೇಳಿದ್ದಕ್ಕೆ
ದರ್ಪ,ದೌರ್ಜನ್ಯ ಎಸಗುವ
ಆ ರಕ್ಷಕರಿಗೆ ಇಲ್ಲ ಸಮಾದಾನ

ಅಲ್ಪವಾದರೂ ಬೇಕಲ್ಲವೆ ಮಾನ,ಮರ್ಯಾದೆ,ನಾಚಿಕೆ?

ಕಣ್ಮುಚ್ಚಿ ಕುಳಿತ ನಾಯಕರೆ
ಜಾಣತನದ ಅಧಿಕಾರಿಗಳೆ
ಲಾಠಿ ಎತ್ತುವ ಆರಕ್ಷಕರೆ

ಮಣ್ಣಮಕ್ಕಳ ಮೇಲೆ ಕೈಮಾಡುವ
ಮುನ್ನ ಸ್ವಲ್ಪ ಯೋಚಿಸಿ....

ಮುರಿದರೆ ರೈತರ ಬೆನ್ನು
ತಿನಬೇಕಾದೀತು ಮಣ್ಣು!

-ಬಸುತನಯ, ಧಾರವಾಡ

- ಬಸುತನಯ

09 Dec 2016, 03:19 pm

ವಿಧಿ

ಬರುವವು ಹಳೆ ನೆನಪುಗಳು
ಕಾಡುವವು ಆ ನೆನಪಿನ ಕ್ಷಣಗಳು
ಹಸಿಯಾಗುವವು ಕಣ್ಣುಗಳು
ಹುಸಿಯಾದವು ನಿರಿಕ್ಷೆಗಳು...
:- ಪರಮಾತ್ಮ ಸೋಂ

- ಪರಮಾತ್ಮ ಸೋಂ

09 Dec 2016, 02:02 pm