ನನ್ನವಳು ಹೇಳಿದಳು
"ನಾನು ಖುಷಿಯಿರಲು
ನೀ ನನ್ನ ಮರೆಯಬೇಕು
ನನಗೆ ನೀ ಕರೆ ಮಾಡುವುದ ಬಿಡಬೇಕು"
ಆದರೆ ನನ್ನನೆ೦ದೂ ಕೇಳಲಿಲ್ಲ
ನೀ ಖುಷಿಯಿರನು ನಾ
ಎನು ಮಾಡಬೇಕೆ೦ದು
ಅವಳೆ೦ದೂ ಯೋಚಿಸಲಿಲ್ಲ
ಅವಳ ಮರೆತ ಈ ಹೃದಯ
ಬದುಕುವುದು ಹೇಗೆ೦ದು?
✍️ಫೀಲಿಂಗ್
ಹುಟ್ಟಿದ ಮನುಷ್ಯ ಸಾಯಲೇ ಬೇಕು,
ಆದರೆ ಕಾಣಲು ಬಯಸುವುದಿಲ್ಲ,
ಯಾರು ಕೂಡ ಸಾವಿನ ಕನಸು.
ಬದುಕು ನಶ್ವರವೆಂದು ತಿಳಿದಿದ್ದರು ಮೋಹದಲ್ಲಿ
ಸಿಲುಕುವೆವು.
ಕಾಣುವೆವು ಕಾಣದ ನಾಳೆಯ ಬಗ್ಗೆ ಸಾವಿರ ಕನಸು.
ಈ ಬದುಕೇ ಮಾಯೆ, ನಡೆಯವುದು ಮಾತ್ರ ಅವನ ಲೀಲೆ.
ಇರುವಷ್ಟು ಕಾಲ ಸಾರ್ಥಕತೆಯ ಬದುಕು ಬದುಕಿದರೆ
ಮಾತ್ರ ಈ ಬದುಕಿಗೊಂದು ಅರ್ಥ.
ನನ್ನೆದೆಯ
ಮೌನ ಭಾವ ಕಣ್ಣಲ್ಲಿ ತುಂಬಿ ......
ರಂಗು ರಂಗಿನ ಗೆಜ್ಜೆ ಕಟ್ಟುವ ಬಾ ಗೆಳತಿ.....
ನನ್ನ ಪ್ರೇಮದ ಕಂಪನದ ದ್ವನಿಯಾಗಿ.....
ಲಯ ತಪ್ಪಿದ ತಾಳದಲ್ಲಿ....
ಪ್ರೀತಿ ಹೆಜ್ಜೆಯ ಗೆಜ್ಜೆ ಕಟ್ಟುವೆ ಬಾ ಗೆಳತಿ....
ಇಂತಿ ನಿನ್ನ ಪ್ರೀತಿಯ ......
ರಾತ್ರಿ ವೇಳೆ ರಾಜುವಿನ ತಾಯಿ ಅವನಿಗೆ ಊಟ ಮಾಡಿಸುತಿದ್ದಾರೆ . ಆಗ ಮೇಲೆ ನೋಡಿದ ರಾಜು)
ರಾಜು :-ಅಮ್ಮ ಮೇಲೆ ಏನಿದೆ?
ಅಮ್ಮ :- ಆಕಾಶ
ರಾಜು:-ಹೌದಾ? ಅದರಲ್ಲಿ ಕೆಲವು ಚುಕ್ಕಿ ಹಾಗೆ ಇದೆ.
ಆ.. ಅದೇನು ಚಪಾತಿ ಹಾಗೆ ಇದೆ??
ಅಮ್ಮ: ಮಗು ಅದು ಚುಕ್ಕಿ ಅಲ್ಲಪ್ಪ ನಕ್ಷತ್ರ. ಅದು
ಚಪಾತಿ ಅಲ್ಲಾ ಚಂದ್ರ ಕಣೋ
ರಾಜು : ಹೌದಾ ನಾನು ಚಂದ್ರನ ಜೊತೆ
ಮಾತನಾಡುತ್ತೇನೆ.
ಅಮ್ಮ: (ನಗುತ್ತಾ) ಆಯ್ತು
( ಅಮ್ಮ ಮಲಗಲು ಹೊರಟರು)
ರಾಜು: ಚಂದ ಮಾಮ .......
( ರಾಜುವಿನ ಮುಗ್ಧತೆಗೆ ಚಂದಿರ ಪ್ರತ್ಯಕ್ಷನಾದ)
ಚಂದ್ರ: ಏನು ರಾಜು
ರಾಜು: ಏನು ಇಲ್ಲ ಇಡೀ ಹಳ್ಳಿ ಜನ ಮಲಗಿದ್ದಾರೆ.
ನೀನು ಮಲಗೂದಿಲ್ಲವಾ?
ಚಂದ್ರ: ಇಲ್ಲಪ್ಪ ನಾನು ಮಲಗಿದ್ರೆ ಹಳ್ಳಿಗೆ ಬೆಳಕು
ನೀಡೋರು ಯಾರು? ಅಲ್ವಾ
ರಾಜು : ಹೌದು ಆದ್ರೆ ನಿನ್ ಮನೆ ಎಲ್ಲಿದೆ?
ಚಂದ್ರ : ನನಗೆ ಮನೆ ಇಲ್ಲ ಪುಟ್ಟ
ರಾಜು : ಹಾಗಾದ್ರೆ ನಿಂಗೆ ಚಳಿ ಬಿಸಿಲು ಆಗಲ್ವಾ
ಚಂದ್ರ: ನಾನು ಹಗಲಲ್ಲಿ ಇರೋದಿಲ್ಲ . ಬಾನಿನಲ್ಲಿ ಚಳಿ.ಅನಿಸುವುದಿಲ್ಲ. ಇಲ್ಲಿ ಕಾಮನಬಿಲ್ಲು