ಏಕಾಂಗಿ ನಾನಾದೆ
ನಿ ತೊರೆದ ಆ ಸಂಜೆ
ಎಂದಿನಂತೆ ನಾ ಸರಿದಿದ್ದೆ ನನ್ನ ಮನೆಯ ಬಿಟ್ಟು ತುಸು ಹಿಂದೆ
ಭರವಸೆಯ ಅಲೆಗಳು ತೀರಕ್ಕೆ ಬಡಿದು ಬಡಿದು
ಒದ್ದೆಮರಳ ಮೇಲೆ ನಡೆದೆ ದಿಕ್ಕುತೋಚದೆ
ಹೆಜ್ಜೆ ಹೆಜ್ಜೆಯೂ ಭಾರ ನಿನ್ನ ಹುಸಿಕರೆಯೋಲೆಗಳು ಜಾಸ್ತಿಯಾದಂತೆ
ಹಿಂದಿರುಗಿ ನೋಡಿದೆ...ನೀನಿಲ್ಲ
ಅಲೆಗಳು ಬಡಿದರೂ ಮಾಸದೆ ಹೋದ ಹೆಜ್ಜೆಗಳ ಅಚ್ಚೆಯಷ್ಟೆ ಅಲ್ಲಿ
ಬೇಕುಬೇಡವೆನ್ನುತ ತ್ಯಜಿಸಿದೆ ನಿನ್ನ ನನ್ನ ಮನ
ತ್ಸುನಾಮಿ ನಂತರದ ನೀರಸ ಮೌನ
ನಿನ್ನ ಜೊತೆ ಕಳೆದ ಸಿಹಿಕ್ಷಣಗಳು ನೀನಿತ್ತ ಕಿತ್ತುಬಿಸಾಕುವ ಹುಸಿಗನಸುಗಳು
ಮೆಲುಕುಹಾಕುತ್ತ ಮುಂದೆ ನಡೆದೆ...ಐದೇ ನಿಮಿಷ
ಅಚ್ಚರಿ ಎಂಬಂತೆ ನಾ ನಿಂತಿದ್ದೆ ನಿನ್ನ ಮನೆಯ ಮುಂದೆ
ಈ ಪ್ರೀತಿ ಎಂಥಾ ಹುಚ್ಚು ರೀ...
ಶಿಕ್ಷಕ,ಇವನು ಲೋಕ ರಕ್ಷಕ.
ಮಕ್ಕಳನು ಸರಿದಾರಿಗೆ ತರುವ ಆರಕ್ಷಕ.
ಪುಸ್ತಕ ಸಂಗ್ರಹವಿರುವ ಗ್ರಂಥಾಲಯದ ವ್ಯವಸ್ಥಾಪಕ.
ಮೌಲ್ಯಗಳ ಮಹತ್ವ ಬೆಳೆಸುವ ನಾಯಕ.
ಹಣವನ್ನು ಸಂಗ್ರಹಮಾಡುವಾಗ ಇವನೊಬ್ಬ ಬ್ಯಾಂಕರ್.
ನ್ಯಾಯದ ಪರವಾಗಿ ಮಾತಡುತ ಕೆಲವೊಮ್ಮೆ ಆಗುವ ಲಾಯರ್.
ಈತ ಮಕ್ಕಳಿಗೆ ಪ್ರಥಮ ಚಿಕಿತ್ಸೆ ವದಗಿಸುವ ಡಾಕ್ಟರ್.
ತಂತ್ರಜ್ಞಾನಗಳ ಬಗ್ಗೆ ಪ್ರಯೋಗ ಮಾಡಿ ತೋರಿಸುವ ಎಂಜಿನೀಯರ್.
ರಜೆಯಲು ಕೂಡ ಇವನಿಗುಂಟು ನೂರೆಂಟು ವಿದ್ಯಾರ್ಥಿಗಳ ನಂಟು.
ಜನರ ಅಭಿಪ್ರಾಯದಲಿ ಶಿಕ್ಷಕನು ಮಾಡುವನು ದುಡ್ದಿನ ಗಂಟು.
ನೈಜವಾಗಿ ಜೀವನದಲ್ಲಿ ಅವನಿಗಿರುವ ಆಸ್ತಿ ಅದುವೆ ನಿಘಂಟು.
ಇದರ ಮಧ್ಯ ಸರ್ಕಾರ ಹಾಗೂ ಅಧಿಕಾರಿಗಳ ವತ್ತಡ ನೂರೆಂಟು.
ಮನದಲ್ಲಿ ಸಾವಿರರು
ಚಿಂತೆಗಳಿದ್ದರೂ ಬದಿಗೊತ್ತಿ ನೀಡುವನು ಪಾಠದ ಮೂಲಕ ಹಾಸ್ಯ.
ಇದುವೆ ಶಿಕ್ಷಕರ ಬದುಕಿನ ಯಾರೂ ಅರಿಯದ ದೊಡ್ದ ಸಾಮರಸ್ಯ.
ಸುಧಾರಿಸುವನು ಈತ ಒಂದು ದೇಶದ ಪ್ರತಿನಿಧಿಗಳ ಭವಿಷ್ಯ
ತಿಳಿದಲ್ಲ ನಿಮಗೆ ಶಿಕ್ಷಕ ಬದುಕಿನ ನಿಗೂಢ ರಹಸ್ಯ..
ಜಗತ್ತಿನ ಎಲ್ಲ ವೃತ್ತಿಗಳ ಸಂಸ್ಥಾಪಕ ಈ ಶಿಕ್ಷಕ
ಲೋಕದ ಹಿತವನ್ನು ಬಯಸುವ ನಿಜವಾದ ನಿರೀಕ್ಷಕ.
ಒಳ್ಲೆಯ ಜನರನ್ನು ದುಶ್ಟರಿಂದ ಬೇರ್ಪಡಿಸುವ ಸಂಶ್ಲೇಷಕ
ಹೆಮ್ಮೆಯಿಂದ ಹೇಳುವೆ ನಾನೊಬ್ಬ ಶಿಕ್ಷಕ.