Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಒಲವಿನ ಅಂತ:ಪುರದ ಪಟ್ಟದರಸಿ..

ನನ್ನ
ನಿನ್ನ
ನಡುವೆ
ಎಷ್ಟು
ಅಂತರ ಗೆಳತಿ?

ಒಲವಿಗೆ
ಒಳಿತಾಗುವ
ಯಾವ
ನಿಲುವಿಗೂ
ನೀ ಬರಲಾರೆಯ?

ನನ್ನೊಲವಿನ
ಅಂತ:ಪುರದ
ಪಟ್ಟದರಸಿ
ನೀ ಆಗುವುದೆಂದಿಗೆ
ಗೆಳತಿ?

- ಶಿಖರಸೂರ್ಯ

03 Sep 2016, 03:26 pm

ನಲ್ಲೆ

ನನ್ನ ಕಣ್ಣಿನ ನಿನ್ನ ಪ್ರತಿಬಿಂಬ
ಕಳೆಯಲೆಂದು ಕಣ್ಣೀರ ಹಾಕಿದೆ
ಕಣ್ಣೀರ ಪ್ರತಿ ಹನಿ-ಹನಿಯಲ್ಲೂ
ನಿನ್ನ ಪ್ರತಿಬಿಂಬವೇ ಕಾಣಿತಿದೆಯಲ್ಲೇ

- ಸಾ.ರಾ.ಜ್ಞಾ

02 Sep 2016, 08:25 pm

ನೀನೆ ಮರೆತ ದಾರಿಗೆ.....

ಕನಸುಗಳ
ಬೆನ್ನೇರಿ
ನಿನ್ನ
ನಿರೀಕ್ಷೆಯಲಿ
ಜೀವಿಸುತ್ತಿರುವೆ
ಗೆಳತಿ..

ನೂರು
ನಿಟ್ಟುಸಿರಿಗಳಾಚೆ
ನಿನ್ನ
ಸನಿಹದ
ನಿರೀಕ್ಷೆಯಷ್ಟೆ

ವಿರಾಗಿಗೆ...

ರಾಧೆಯ
ವಿರಹಕೂ
ಮಿಗಿಲು
ನಿನ್ನ
ಸೇರುವ
ನನ್ನ
ಹಂಬಲ...


ಧಾವಿಸಿ
ಬರುವೆಯೆಂದು
ನನ್ನ
ಪ್ರೇಮದ
ಬೃಂದಾವನಕೆ
ನೀನೆ ಮರೆತ
ದಾರಿಗೆ....

- ಶಿಖರಸೂರ್ಯ

02 Sep 2016, 07:49 pm

ಪಾಟ ಶಾಲೆ

ಬೆಚ್ಚಗಿನ ಮನೆ
ಹಚ್ಚಗಿನ ಮಡದಿ
ಆರತಿ-ಕೀರುತಿ ಮಕ್ಕಳಿರಲು..
ವ್ಯಚ್ಚಕ್ಕೆ ಹಣ ಬರುತ್ತಿರುವಲ್ಲಿ..
ಶಾಲೆ...
ಮುಚ್ಚುವುದೇಕೆ ಗುರುವರ್ಯ..?

ಬೆಚ್ಚಗಿನ ಪಾಠ ಶಾಲೆ
ಹಚ್ಚಗಿನ ಸಸ್ಯ ವನ
ಆರತಿ-ಕೀರುತಿ ವಿಧ್ಯಾರ್ಥಿಗಳಿರಲು..
ಉಚ್ಚ ಫಲಿತಾಂಶ ಬರುತ್ತಿರುವಲ್ಲಿ..
ಕಾಲವೇ..
ಮೆಚ್ಚುವುದಲ್ಲವೇ ಗುರುವರ್ಯ..!!!

- ವೀರೇಶ್ ಶಿವರುದ್ರಪ್ಪ

01 Sep 2016, 11:18 pm

ಪ್ರೀತಿ ಬೆಸುಗೆ

ಸೂಕ್ಷ್ಮಮತಿ ದೈವದತ್ತ
ಅಧೃಷ್ಟ ನಮ್ಮ ಪ್ರಯತ್ನ
ಸ್ನೇಹ ಹಾದಿಯಲ್ಲಿ ಸಿಕ್ಕದ್ದು
ಪ್ರೀತಿ ಬೆಸುಗೆ ಮಾತ್ರ ಹೃದಯ ಸಂಬಂಧಿ

- ವೀರೇಶ್ ಶಿವರುದ್ರಪ್ಪ

01 Sep 2016, 11:09 pm

ಕನ್ನಡ ಬೆಳಕು..

ಹಸುವಿನ ಹಾಲು ಬಿಳಪು..
ಅಮ್ಮನ ಹಾಲೂ ಬಿಳಪು...!

ಬೆಳಕಿನ ಬಣ್ಣವು ಬಿಳಪು..
ಬೆಳ್ಳಿಯ ಬಣ್ಣವೂ ಬಿಳಪು...!

ಬಿಳಪಿನಿಂದ ಬೆಳಕಾಗಿ ಬೆಳಗಲಿ..
ಕನ್ನಡಮ್ಮನ ಬಿಗುಮಾನ.. ಕೀರ್ತಿ...!!

- ವೀರೇಶ್ ಶಿವರುದ್ರಪ್ಪ

01 Sep 2016, 10:49 pm

ಕವನಳಲ್ಲಾ..?

ಕವನ ಎಂದರೆ ಕವನಳಲ್ಲಾ..
ಕಾವ್ಯ ಎನಲು ಕಾರಣವಿಲ್ಲಾ..
ಕಾಣುವ ಕನಸು ಇದೆಯಲ್ಲಾ...!
ಕಂಡರೆ ಮನಸು ಹದವೆಲ್ಲಾ..
ಕಾವೇರಿ ಮಾತೆಯ ಮಕ್ಕಳೇ ಎಲ್ಲಾ..
ಕನ್ನಡ ಅಭಿಮಾನಿ ದೇವರುಗಳೇ ಎಲ್ಲಾ...!!

- ವೀರೇಶ್ ಶಿವರುದ್ರಪ್ಪ

01 Sep 2016, 10:38 pm

ನನ್ನ ಹಳೆಯ ವಾಹನ...!!

ನನ್ನ ಹೃದಯ ರಿಪೇರಿ
ಮಾಡಲಾಗದಷ್ಟು
ಹಳೆಯ ವಾಹನ..
ಇದಕ್ಕೆ ಕಾರಣ....
ನನ್ನ ಹೊಸ ಪ್ರಿಯತಮೇ
ಚ೦ದನಾ ಅವಳ ಮೋಸತನ..!

- ವಲ್ಲಭ..

01 Sep 2016, 09:14 pm

ಆಶಾಕಿರಣ

ಆರತಿಗೊಬ್ಬ ಮಗಳು...
ಕೀರತಿಗೊಬ್ಬ ಮಗನು.‌.....

ಸಮಯೋಚಿತ ನಿರ್ಧಾರ
ಸಮತೋಲನ ಸಂಸಾರ...

ಜೀವನ ಮಧುರಾ ಕಿರಣ..
ಮಕ್ಕಳೇ ಮುಂದೆ ಆಶಾಕಿರಣ.‌..

- ವೀರೇಶ್ ಶಿವರುದ್ರಪ್ಪ

31 Aug 2016, 10:18 pm

ಮೊದಲ ಹಸಿರು

ಚಿತ್ರ ವಿಚಿತ್ರ ಸಚಿತ್ರ ಜೀವನದಲ್ಲಿ
ಚೈತ್ರ ಮಾಸವೇ ಮೊದಲ ಹಸಿರು,

ಹಸಿರಿನಿಂದ ಹಸಿರಾಗಿ
ಪರಿಸರದ ಉಸಿರಾಗಿ
ಪ್ರಾಣವಾಯು ಪಾತ್ರವಾಗಿ
ಕಾಯಿಬಿಡುವ ಬಳ್ಳಿಯಾಗಿ
ಮುಂದೊಂದು ತಾಯಿಯಾಗಿ

ಚಿತ್ತಾರ ಬಿಡಿಸುವ
ಚೈತ್ರ ಕುಸುಮವೇ
ನಿನಗೆ ಶುಭಾಷಯಗಳು

- ವೀರೇಶ್ ಶಿವರುದ್ರಪ್ಪ

31 Aug 2016, 07:53 pm