Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನನ್ನಾಕೆ ಚೆಂದುಳ್ಳಿ ತಾರೆ
ನೆನಪಿಸುತಾಳೆ ನೆಲತಾವರೆ
ಬೆಳಗ್ಗೆ ನಾ ಕಚೇರಿಗೆ ಹೋಗುವಾಗ
ಅವಳು ಬೇಜಾರಾಗಿ ಬಿಳಿಚಿ ಬೆಳ್ಳಗೆ
ಸಂಜೆ ಮನೆಗೆ ಹೋದಾಗ
ನಾಚಿ ಆಗುವಳು ಕೆಂಪಗೆ
- keshavappu
29 Nov 2016, 11:34 pm
ಬೇಡ ಸ್ಪರ್ಧೆ, ಬೇಡ ಜಾಣತನ,
ಇಂಥ ಸ್ವಾರ್ಥಿ ಮತ್ತು ಮೋಸ ಜಗತ್ತಿನಲ್ಲಿ
ತನ್ನನ್ನು ತಾನೇ ಗೊರೀತಿಸವುದಿಲ್ಲ,
ಜನರು ಬಗ್ಗಿಸಿದೊ ಸ್ವಾರ್ಥಿಗಳ ಕೈಯಲ್ಲಿ
ಬಂಢೂಪಂತ ಕುಲಕರ್ಣಿ
- Bandopant Kulkarni Solapur
29 Nov 2016, 06:33 am
ಮಾತಿನ ಸುರಿಮಳೆಯಲ್ಲಿ
ಜಾತಿಯ ಅಂಗನ್ನು ತೊರೆವ
ಮನುಜ..
ಬಿಡನು ಅದನ್ನು ಏಳಿಗೆಯ
ಏಣಿ ಹತ್ತುವ ಸಮಯದಿ..
ಅದರಲಿ ಅಂತಹದೇನು
ಮುಚ್ಚಿಟ್ಟಿಹನೋ ಏನೋ..
ನಾನೇ ಎಂದು ಬೀಗುತ
ಮರೆತೆ ಬೀಡುವನು
ಸ್ನೇಹದ ಭಾವನೆಗಳನ್ನು..
ಕರುಣೆಯ ಬದಿಗಿಟ್ಟು
ಆದರತೆಯ ಮರೆತು
ತಾ ಏರ ಬಯಸುವ
ಇಲ್ಲದ ಜಾತಿ ಪಲ್ಲಕ್ಕಿಯ..
ಎಲ್ಲಾರೊಳಗೂಡಿ ಸ್ನೇಹದಿ
ಆಧರಿಸಿ ಬದುಕುವುದೇ
ನೀಜ ಸುಖವಲ್ಲವೇ...
- ಬಾನು ಅಡಿಗಾರ್
28 Nov 2016, 10:20 pm
ಹುಚ್ಚು ನವಿಲು ಕುಣಿದೈತೆ ನೋಡಾ
ಹಾಳ್ ಮನದ ಮೂಲೆಯಾಗೆ
ಗರಿ ಬಿಚ್ಚಿ ಬಿಚ್ಚಿ ಹಳೆ ಗಾಯ ಚುಚ್ಚಿ
ಬೋಳ್ ಮರದ ಕೊಂಬೆ ಮ್ಯಾಗೆ||
ಒಣ ಹೃದಯ ಕಿತ್ತು ಬಾಣಲೆಗೆ ಬಿತ್ತು
ಹನಿ ಪ್ರೀತಿ ಕಾಣದಾದಾಗ
ಗಾಣಕ್ಕೆ ಹಾಕಿ ತಿರು ತಿರುವಿ ಹಿಂಡಿದರೂ
ಪಸೆ ಚೂರು ಇಲ್ಲ ನೋಡ ||
ಕುಣಿವ ನವಿಲ ಆ ರೆಕ್ಕೆ ಪುಕ್ಕ ಎಲ್ಲ
ಕಿತ್ತು ಕೊಡವಿದಾಗ
ಸೌಂದರ್ಯವಿಲ್ಲ, ಸಂಗಾತಿಯಿಲ್ಲ
ಈ ಬದುಕು ವ್ಯರ್ಥ ಕೊರಡ ||
- ಶ್ರೀಗೋ.
27 Nov 2016, 07:49 pm
ತವರಿನ ಆಸೆ
ಪಂಚಮಿ ಹಬ್ಬಕ್ಕೆ ತವರಿಗೆ ಹೋದಾಗ ಸೀರೆಯ ತರಲಿಲ್ಲ ನನಗೆ
ನಿನ್ನ ಗಂಡನ ಮನೆಗೆ ತಂದು ಕೊಡುತ್ತಿನಿಯಂದು
ಮೂರು ತಿಂಗಳೂ ಆದರೂ ತರಲಿಲ್ಲ ನನ್ನಣ್ಣ ನನಗೊಂದು ಸೀರೆಯಾ
ಗಂಡ : ಮನೆಯಲ್ಲಿ ನೂರೆ೦ಟು ಸೀರೆ ಇರುವಾಗ
ನಿನಗೆ ಯಾಕೆ ತವರು ಮನೆಯ ಸೀರೆಯಾ ಮ್ಯಾಲೆ ಆಸೆ ?
ಹೆಂಡತಿ : ಹುಟ್ಟಿ ಬೆಳದ ಮನೆಯ ಸೀರೆಯಾ
ಉಟ್ಟುಕೊಳ್ಳವ ಆಸೆ ನನಗೆ
ಕೋಪವ ತೋರದೆ ನಾ ಹ್ಯಾಂಗೇ
ಬಿಟ್ಟು ಇರಲಿ ನನ್ನ ತವರು ಮನೆಯಾ
ಗಂಡ: ಮರುದಿನ ಆವಳ ಅಣ್ಣಾ ಬಂದ
ಸೀರೆಯಾ ತಂದಾ
ಅಣ್ಣನಿಗೆ ಹಬ್ಬದ ಊಟವ ಬಡಿಸಿ ಹೇಳಿದಳು ನನ್ನಾಕೆ
ಊರಹಬ್ಬಕ್ಕೇ ಮೂರುದಿನ ಮುಂಚೆ
ಬಾ ಹಾಗೇ ತರುತ್ತಿರು ಹಬ್ಬಕ್ಕೆ ನನಗೆ ಒಂದು ಸೀರೆಯಾ
ಅಣ್ಣನ ಕಳುಹಿಸಿ ಓಡಿದಳು
ಓಣಿ ತುಂಬಾ ಪಾತರಗಿತ್ತಿಯಾಗಿ
ಸೀರೆಯಾ ಉಟ್ಟು ನಲಿದಳು ನನ್ನಾಕೆ
ಹೆಣ್ಣಿಗೆ ತವರಿನ ಆಸೆ
ಹೋಗಲ್ಲ ಮಣ್ಣಿಗೆ ಹೋಗುವ ತನಕ
ಎ ಜಿ ಶರಣ್
- ಎ ಜಿ ಶರಣ್
27 Nov 2016, 08:49 am
ಇಳಿಸಂಜೆ ಕಳೆದಮೇಲೆ ಇನ್ನೇನು ಉಳಿದಿದೆ
ಹಸಿದ ಹಕ್ಕಿ ಸೇರೋ ಮುನ್ನ ಗೂಡು ಏನನೋ ಉಸುರಿದೆ
ದಿನವೆಲ್ಲಾ ಅರಳಿ ನಿಂದ ಹೂವ ಬೇಸರ ಕಾಡಿದೆ....
ದಿನವಿಡೀ ರಮಿಸಿ ಜೇನ ಹೀರಿದ ದುಂಬಿಯ ಹುಡುಕಾಡಿದೆ...
ಬಿಟ್ಟೂಬಿಡದೇ ಮತ್ತೆ ಜಡಿಮಳೆ ಧಾರೆಯಾಗಿಯೇ ಸುರಿದಿದೆ...
ಬಿಟ್ಟುಹೋದ ಅವನ ನೆನಪಲಿ ಕಣ್ಣೀರು ಗಲ್ಲವ ಸೋಕಿದೆ...
ಸಂಜೆ ಕಳೆದಿದೆ ಮಬ್ಬು ಹಬ್ಬುತಿದೆ ಎಣ್ಣೆಮುಗಿದ ದೀಪ ನಕ್ಕಿದೆ...
ಒಡೆದ ಹಂಚಿಂದಿಳಿವ ಮಳೆಹನಿ ಒಳಗೂ ಶಾಂತಿಯ ಕದಡಿದೆ...
ಮುಗಿದ ಸಂಜೆಗೆ ಉತ್ತರವಿಲ್ಲ ಹಳೆಯ ಕನಸು ಕನವರಿಸುತ್ತದೆ
ಬರುವ ನಾಳೆಗೆ ಭರವಸೆಯಿಲ್ಲ ಕಲ್ಪನೆ ಚಳಿಗೆ ಮುದುರಿದೆ...
ಸದಾ ನಾ ಸೋಲೋ ಹುಡುಗಿ ಈ ಬೇಸರ ಮುಗಿಯೊಲ್ಲ
ಸದಾ ಗೆಲುವ ಕಾಲೆಳೆಯೋ ನನಗೆ ಈ ಸಂಜೆಯೇನು ಕೊನೆಯಲ್ಲ...
ಮುಟ್ಟಲಾಗದ ನಕ್ಷತ್ರಗಳ ಹಾಗೇ ಚಿತ್ರಿಸಿ ಮುತ್ತಿಕ್ಕುವೆ
ಕಟ್ಟಲಾಗದ ಮಹಲಿನ ಸುಖವನು ಹಂಚಿನ ಮನೆಯಲೇ ಕಲ್ಪಿಸುವೆ...
ಯಾರೂಕೇಳದ ಹಾಡ ನಾ ಗುನುಗುವುದಿಲ್ಲ
ಹಾಗೆಂದು ಬೋರ್ಗರೆದು ಅಳುತ್ತಾ ಕೂರೋದಿಲ್ಲಾ
ದೀಪವಿಲ್ಲದ ಕತ್ತಲೆಗೆ ಬಣ್ಣ ಹಚ್ಚುತ್ತೇನೆ... ಚುಚ್ಚುವ ನೋವುಗಳ ಹಿತವಾಗಿ ಕಿತ್ತು ಕವನ ಬರೆಯುತ್ತೇನೆ...
ಮತ್ತೆ ಗೆಲುವನ್ನು ಅಣಕಿಸುತ್ತಾ ನಾಳೆಯ ಸೋಲಿಗೆ ಕಾಯುತ್ತೇನೆ...
............................................................... ... ಮಧುಕುಮಾರ್.ಕೆ.ಆರ್.
- ಮಧುಕುಮಾರ್.ಕೆ.ಆರ್
26 Nov 2016, 05:13 pm
ಕೀ ಪ್ಯಾಡು ಮೇಲೆ ಬೆರಳಲೆ ನರ್ತಿಸುವ
ಉದ್ದ ಉಗುರಿನ ಸುಂದರಿಗೆ
ನೆಲಕಾಣದ ವಯಸಲೊಂದು
ಮಾಡರ್ನೈಸ್ ಥಿಂಕಿಂಗು…
ಮೂದೇವಿ……!
ಊರ ಅಜ್ಜಿ ಜರಿದಾಳು
ನಿನ್ನ ಹರಿದ ಜೀನ್ಸುಕಂಡು………
ಮುಖದ ಮೊಡವೆಗೊಂದು ಕ್ರೀಮು,
ಗುಡಿಸಲು ಕಟ್ಟಲು ಒದ್ದಾಡುವರ ಮಧ್ಯೆ
ಬೇಕೇನು ನಿನ್ನ ಮೊಗಕೆ ಫೌಂಡೇಶನ್ನು…
ಲಿವೈ ಸ್ಟ್ರಾಸು …!ಆಡಿಡಾಸು…!
ತನಗೂ ಬೇಕೆನ್ನುತಿದೆ ಆಡುವ ಕೂಸು……
ಅಜ್ಜಿಗೇನು ಗೊತ್ತು ಹೊಸ ಜನರೇಷನ್ನು………!!!
ಲ್ಯಾಕ್ಮೆ ಕೆಮಿಕಲ್ಲು ಕಣ್ಗಪ್ಪು
ತಂಪಲ್ಲ ರೆಪ್ಪೆಗೆ,
ಹುಬ್ಬು ಕತ್ತರಿಸುವ ಅಂಗಡಿಯಲ್ಲಿ
ಕಾಡಿಗೆ ಡಬ್ಬಿ ಕಳೆದೋಗಿ
ವರುಷವಾಯ್ತು………
ಡವ್ ಸೋಪು - ಶಾಂಪು ಬಂದಮೇಲೆ
ಬೆನ್ನುಬಾಗಿದ ಮುದುಕಿಯ ಶೀಗೇಕಾಯಿ
ಹೆಕ್ಕುವರಿಲ್ಲದೆ ಬಾಡೋಯ್ತು……
ಮೈನೆರೆದ ಮೊಮ್ಮಗಳ ಮೀಯಿಸಲು
ಅರಿಶಿನ ಕೊಂಬು ತೇಯ್ದ ನೆನಪು ಅಜ್ಜಿಗೆ…
ಓಡುವ ಕಾಲದ ತೆಕ್ಕೆಗಿಳಿದ ಹೆಣ್ಣೊಬ್ಬಳ
ಬ್ಯಾಗಲೊಂದಿಷ್ಟು ಕೆಂಪು ಗುಳಿಗೆ…
ಕಾಲ ಬದಲಾಗಿದೆ ಅಜ್ಜಿ…!
ಮುಟ್ಟು ಮಡಿ ಮೈಲಿಗೆಗಳನು ಗಂಟುಕಟ್ಟಿ
ನೀನಿನ್ನು ಹೊರಡಬೇಕು ಕಾಶಿಗೆ…
- ಪರಮೇಶ್ವರ
- ಒಂಟಿತೋಳ
26 Nov 2016, 01:50 pm
ಪ್ರೀತಿ ಎಂಬುದು ಮಾಯೆ!
ಮನಸ್ಸಿಗೆ ಕಪ್ಪು ಶಾಯಿಯ ಕಲೆಯೆ.
ಪುಸ್ತಕದ ಮೇಲೆ ಬರೆದ ಛಾಯೆ,
ವಿನಾಷದ ಅಂಚಿನ ಬಲೆಯೆ,
ಹೃದಯ ಹಿಂಡುವ ಕಬ್ಬಿನ ಜಲ್ಲೆಯೆ:
ನಾಗರ ಹಾವಿನ ವಿಷದ ನಲ್ಲೆಯೆ,
- ವೇಣು ಆರ್ ಚಿನ್ನದೂರು
26 Nov 2016, 01:25 pm
ಮರೆಯಲಾಗದ ನೆನಪುಗಳ
ಹಿಂದೆ ಸಾಗಿದೆ ಮುಗ್ದ ಮನಸು..
ಮಾತು ಮರೆತ ಮೂಕ ಮನವ
ವಿವರಿಸಲು ಆಗುವುದೆ ಮನದ
ಭಾವನೆ ಅವಳೆದುರಲಿ...
ನೂರಾರು ಬಾರಿ ಹೊರಬಂದ ಮಾತದು
ತುಟಿ ಅಂಚಲಿ ಪದ ಮರೆತು ಹೊಗಲು
ನಾ ಹೇಗೆ ಸಮಜಾಯಿಸಿ ನೀಡಲಿ
ಅವಳೊಂಮ್ಮೆ ಎದುರಾಗಲು..!
ಎಲ್ಲಾ ತಳಮಳವ ತೊರೆದು
ನಾ ಹೇಳಲಿ ಹೇಗೆ
ನನ್ನೀ ಪ್ರೀತಿಯ ಅವಳೆದುರಲಿ..!!
- ಬಾನು ಅಡಿಗಾರ್
26 Nov 2016, 08:41 am
ಸಂತೆಯಲ್ಲಿ ನಿಂತ ಸುಂದರಿ
ರೂಪದಲ್ಲಿ ಎಂತ ಚೆಂದ ರೀ!!
ನೋಟದಲ್ಲಿ ನನ್ನ ಸೆಳೆಯುತ
ಕರೆದಳೊಮ್ಮೆ ಇಲ್ಲಿ ಬನ್ನಿರಿ!!
ಅವಳ ಆ ಮಾತಿಗೆ
ನಾನು ಸಹಚಾರಿ ಎಂಬಂತೆ!!
ಮರು ಮಾತಾಡದೇ
ತಲೆದೂಗಿ ಸಾಗಿ ನಿಂತೆ!!
ಅವಳ ವಯ್ಯಾರ ಕಂಡು
ನನ್ನ ಹೃದಯ ಜಾರಿ ಬಿತ್ತು!!
ಅವಳ ಪಿಸು ಮಾತಿಗೆ ನನ್ನ
ಉಸಿರೊಮ್ಮೆ ನಿಂತಂತಾಯ್ತು!!
ಅಯ್ಯೋ ತಪ್ಪಾಯ್ತು ರೀ
ನೀವು ದಯಮಾಡಿ ನನ್ನ ಕ್ಷಮಿಸಿ!!
ನನ್ನ ಪತಿರಾಯರು
ನಿಮ್ಮ ಮುಂದೆ ಹಾದು ಹೋದರು!!
- ಪಿ.ಜಿ.ಜ್ಯೋತಿ
25 Nov 2016, 04:43 pm