Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೀತಿಯ ಸ್ತರ

ಜೀವನದಿ ಸುಖ-ದುಃಖದ
ಪರಿಧಿಯೊಳಗೆ
ನನ್ನ-ನಿನ್ನ ಪ್ರೀತಿಯ
ಅನುಭೂತಿಯು
ದಿಗಂತದೆಡೆಗೆ.

- ಸಾ.ರಾ.ಜ್ಞಾ

28 Aug 2016, 08:38 pm

ಎಷ್ಟು ಜನ್ಮ ಸವೆಸಲಿ?!

ಒಲವಿನ ಹೊತ್ತಿಗೆಗೆ ಯಾವ ಹೆಸರಿಡಲಿ
ಗೆಳತಿ?
ಅನನ್ಯ ,ಅಪೂರ್ವ...
ನಿನ್ನ ನುಡಿಯ ವಿಸ್ಮಯಕೆ ಯಾವ
ಬೆಲೆಯನು ತೆರಲಿ
ನಿನ್ನ ನಗುವೆ ಇಂಧನ
ನನ್ನ ಬಾಳ ಬಂಡಿಗೆ..
ನಿನ್ನ ಒಲವೆ ಸ್ಪೂರ್ತಿ
ನನ್ನ
ಹೃದಯ
ಬಡಿತಕೆ..
ಎಷ್ಟು ಜನ್ಮ
ಸವೆಸಲಿ ಹೇಳು
ಬರಲು
ನಿನ್ನ ಸನಿಹಕೆ.....?!

- ಶಿಖರಸೂರ್ಯ

28 Aug 2016, 05:41 pm

ನಿನಗೆ ಯಾವ ಹೋಲಿಕೆ...

ನನ್ನ ಒಲುಮೆ ಗೂಡಿಗೆ
ನೀ ಪಟ್ಟದರಸಿ ಎಂದು
ಹೇಳಲೇಬೇಕೆ?
ನಿನ್ನ ರೂಪರಂಗಿಗೆ ಹೋಲುವ
ಬಣ್ಣ ಇನ್ನು ಇದೆ ಎಂದು ನಂಬಲೆಬೇಕೆ?
ಯಾವ ಹೋಲಿಕೆಗೂ ನಿಲುಕದ ನಿನ್ನ
ರೂಪಕೆ ಬೇರೆ
ಉಪಮೆ ಬೇಕೆ!

- ಶಿಖರಸೂರ್ಯ

28 Aug 2016, 11:14 am

ಮನ

ಪರ ಪ್ರಶಂಸೆಯ
ಸಹಿಸದ ಈ ಮನ
ಪರ ನಿಂದನೆಯ
ಸ್ವಾಗತಿಸುವುದು.

- ಸಾ.ರಾ.ಜ್ಞಾ

28 Aug 2016, 10:29 am

ಅಂತರಾತ್ಮ

ಎಲ್ಲ ಕಂಡು
ಸುಮ್ಮನಿರುವ ಹಾಗೆ
ನಟಿಸುವ
ನನ್ನ ಎಲ್ಲ ನೋವಿಗೂ
ಕನ್ನಡಿ ನೀನು
ನನ್ನ ಎಚ್ಚರಿಸುವ
ಬೆಳಕಿನೆಡೆಗೆ ನನ್ನ ಕರೆದೊಯ್ಯುವ
ನಿನಗೆ ನಮಸ್ಕಾರ
ಓ ಅಂತರಾತ್ಮ......

- ಶಿಖರಸೂರ್ಯ

27 Aug 2016, 09:46 pm

ಅಂತರ

ಕಾದಳು ಶಬರಿ ಉದ್ಧರಿಸಲು
ರಾಮ ಬರುವನೆಂದು.
ಕಾಯುವಳು ಈಕೆ ಬರಿ
ರಮಣ ಮಣ-ಹಣ ತರಲೆಂದು.

- ಸಾ.ರಾ.ಜ್ಞಾ

27 Aug 2016, 09:34 pm

ನನ್ನವಳು

ಕಳೆದಿರುಳ ರಾತ್ರಿಯಲಿ
ನನ್ನವಳು ಕನಸಿನಲಿ
ಕಾರಣವ ಹೇಳದೆ
ಕಚ್ಚಿದಳು ಕೆಳತುಟಿಯ

ಮುಂಜಾವಿನ ಬೆಳಗಿನಲಿ
ಕೆಳತುಟಿಯ ಭಾಗದಲಿ
ಸಣ್ಣ ಮೊಡವೆಯೊಂದು ಮುಡಿತ್ತು

ತಿಳಿದಿತ್ತು ನನಗಾಗ
ನನ್ನ ಕೆಳತುಟಿಯ
ಕಚ್ಚಿದವನೆ ನಾನೆಂದೂ
ನನ್ನವಳು ನೆನಪಿನಲಿ

- anup

27 Aug 2016, 08:23 pm

ನೆನಪು

ನನ್ನ ಎದೆಯಲ್ಲಿ ಪುರಾತನವಾದ ಅವನ ನೆನಪೊಂದು ಕಾಡುತ್ತಿದೆ ಪ್ರತಿ ರಾತ್ರಿ...

ನಿದ್ರೆ ಬಂದರೂ ಒಲ್ಲದ ಮನಸ್ಸು ಕನಸಿನ
ನೆಪದಲ್ಲಿ ಅವನನ್ನು ಸುಳಿಯುತ್ತಿದೆ ಇಡೀ ರಾತ್ರಿ ....

- ತೇಜು

27 Aug 2016, 12:31 pm

ಹೈಕು

ನಲ್ಮೆಯ ಹೂವ
ಮಂದಸ್ಮಿತ ಮೊಗಕೆ
ಪ್ರೀತಿ ಕಾರಣ.!

- ಸಾ.ರಾ.ಜ್ಞಾ

27 Aug 2016, 08:17 am

ವೃಧ್ಧಾಶ್ರಮ

ಬೆಳೆಯುತಿದೆ ನಗರದಲಿ
ಬಹುಬೇಗವಾಗಿ
ಖಾಸಗಿ ವೃದ್ಧಾಶ್ರಮ...
ಕಷ್ಟವಾಗುತ್ತಿದೆ ಹೆತ್ತು-ಹೊತ್ತ
ಬಡಜೀವಿಗಳೊಂದಿಗೆ
ಮಾಡಲು ಆತನ ಜೀವನಕ್ರಮ ...

ಅತಿಯಾಯಿತೆಂದನಿಸುತ್ತದೆ ಆತನಿಗೆ
ಬುದ್ಧಿ,ಅರಿವು,ಅಧಿಕಾರ ಬಲ...
ಆತನಿಗೇನು ಗೊತ್ತು
ಹೆತ್ತವರ ಚಾಕರಿಗೆ
ಸಿಗುವ ಪ್ರತಿಫಲ ....

ಉತ್ತರಿಸುವನು ಕೇಳಿದರೆ
ಅತ್ಯಾಧುನಿಕ,ಸಕಲ ಸೌಲಭ್ಯ
ಗಳಿರುವ ಉತ್ತಮ ಆಶ್ರಮ...
ಸ್ವಾರ್ಥಕ್ಕಾಗಿ ಮರೆತು ಬಿಟ್ಟನು
ಆ ತಾಯಿ ನಿದ್ದೆ ಊಟ
ಬಿಟ್ಟು ಮಾಡಿದ ಆ-ಶ್ರಮ...

- AsiddeeqN

27 Aug 2016, 12:02 am