ಮನನೊಂದು ಬೇಡುವ
ಕೆಲವೊಂದು ಹೃದಯಗಳು
ಉತ್ತರವ ನಿರೀಕ್ಷಿಸುವ
ಕೆಲವೊಂದು ಮನಸ್ಸುಗಳು
ಫಲಿತಾಂಶ ವೀಕ್ಷಿಸುವ
ಕೆಲವೊಂದು ನಯನಗಳು
ಅದಕ್ಕಾಗಿಯೇ ಆಯ್ಕೆ ಮಾಡಲ್ಪಟ್ಟ
ಕೆಲವೊಂದು ವನಗಳು
ದೇವ ಸ್ಮರಣೆಯಲ್ಲೇ ಕಳೆದ
ಕೆಲವೊಂದು ಮುನಿಗಳು
ಅವರಿಗೆ ಆಹಾರವನ್ನಿತ್ತ
ಕೆಲವೊಂದು ದನಗಳು
ಸಮಾಜದ ಕ್ಷೇಮಕ್ಕೆ
ಎತ್ತಲ್ಪಟ್ಟ ಹಸ್ತಗಳು
ಎಲ್ಲವನ್ನೂ ಸ್ಪಷ್ಟಿಸಿದ
ದೇವನಿಗೆ ಸ್ತೋತ್ರಗಳು...
ಮನಸ್ಸೆಂದರೆ ಹಾಗೇನೇ..
ಒಂದನ್ನು ಬಯಸುತ್ತೆ,
ಕೆಲವೊಮ್ಮೆ ತೊರೆಯುತ್ತೆ.
ಬಯಸಿದ್ದು ಸಿಗದಿದ್ದರೆ...
ಮರುಗುತ್ತಿರುತ್ತೆ.
ಬಯಸದ್ದು ಬಂದು
ಸಂತೋಷವೆನಿಸಿದರೂ
ಬಯಸಿದ್ದು ಬಂದಷ್ಟು
ಸಂತೋಷಪಡಲಾರದು.
ಇನ್ನೊಂದು ಮನದಿಂದ
ಲಭಿಸಿದ ಮೆಸೇಜು
ಕರಗತವಾಗದಾಗ
ಅಷ್ಟೊಂದು ಮರುಗದಿದ್ದರೂ
ಸ್ವತಃ ಬಯಸಿದ್ದು
ಸಿಕ್ಕೇ ಸಿಗಬೇಕೆಂಬ
ಹಠವಿರುವುದು
ಒಮ್ಮೆ ಆ ಕಡೆ
ಇನ್ನೊಮ್ಮೆ ಈ ಕಡೆ
ವಾಲುತಿರುವುದು
ಸಂತೋಷಕ್ಕಂತೂ
ಹಂಬಲಿಸುತಿರುವುದು...
ನೈಸರ್ಗಿಕ ಪ್ರೀತಿಯಿತ್ತು
ಅಂದು
ಶಾಂತಿಯೂ ಮನೆ ಮಾಡಿತ್ತು
ಮನೆಗಳು ದೂರವಿದ್ದರೂ
ಮನಗಳು ಹತ್ತಿರವಾಗಿತ್ತು
ಸಂದರ್ಶಿಸಲು ಸಮಯವಿತ್ತು..
ಸೌಕರ್ಯಗಳು ಮಿತಿಮೀರಿದ್ದರೂ
ಇಂದು
ಕೃತಕ ನಗೆ ದರ್ಶನವಾಗುತಿದೆ.
ಅಶಾಂತಿ ತಲೆದೋರುತ್ತಿದೆ.
ಮೊಬೈಲ್ ಹತ್ತಿರವಿದ್ದರೂ
ಸಮಯ ಪೋಲಾಗುತ್ತಿದೆ
ಪ್ರಿಯರ, ಕುಟುಂಬಿಕರ ಸಂದರ್ಶನವೂ ಅಸಾಧ್ಯವಾಗುತಿದೆ...