Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕವಿತೆಗೇಕೆ ಹೆಸರು

ಕವಿತೆಗೇಕೆ ಬೇಕು ಹೆಸರು,
ಕವಿಯ ಜೀವ ಮಿಡಿಯುತ್ತಿರಲು,
ಭಾವ-ಭಾಷೆ ಕಲೆತು ನಿಂತು,
ಹೊಮ್ಮುತ್ತಿರಲು ಕಾವ್ಯ ಸೃಷ್ಟಿ.


ಜನರು ಹೇಳ್ವ, ಹೆಸರ ಕೇಳಿ?
ಬೀಸುವುದೇನು ತಂಪು ಗಾಳಿ.


ಕವಿಗೇಕೆ? ಕಾವ್ಯನಾಮ,
ಕಾವ್ಯಸೃಷ್ಟಿ ಅವಂಗೆ ಮುಕ್ತಿಧಾಮ,
ನೋವು-ನಲಿವು,ಸೋಲು-ಗೆಲವು,
ಕಷ್ಟ-ನಷ್ಟ,ರೀತಿ-ನೀತಿಗಳ ಸಮುದ್ರದಲೆಯ ಸೀಳಿ,
ಆಳಮುಟ್ಟಿ ಹೆಕ್ಕಿ ತರಲು ರತ್ನವು,
ರತ್ನ ಅದುವೇ ಕಾವ್ಯವು.


ಜನರು ಹೇಳ್ವ ಹೆಸರ ಕೇಳಿ?
ಮಿಂಚುವನೇನು ದಿನವು ಭಾನು.


ಬದುಕು ಬಯಲುದಾರಿಯಲ್ಲಿ ಓಟ,
ದಿನವು ನಿತ್ಯ ಓಲುಮೆಯಾಟ,
ಬಯಲೊಳಡಗಿದೆ ದಾರಿಯು.
ದಾರಿಗೇಕೆ? ಬೇರೆ ಹೆಸರು,
*ಬಯಲುದಾರಿ*ಅಷ್ಟೇ ಅದರ ಹೆಸರು.


ಜೀವದೊಳಗೆ ಒಲುಮೆಯಿರಲು,
ಒಲುಮೆಯೊಳಗೆ ದೇವನಿರಲು,
ಅವನಿಗೇಕೆ ಒಂದು ಹೆಸರು,
ಒಲುಮೆ ಅದುವೆ ದೇವರು.


ಪ್ರವೀಣ್ ವಿಪ್ರ

- ವಿಪ್ರ

15 Nov 2016, 11:49 pm

ಗಾಳಿ ಮಾತು

ಬಾಯಿಂದ ಬಾಯಿಗೆ ಬಂದ ಮಾತಿಗೆ ಕಿವಿಕೊಟ್ಟ ಗೆಳತಿ ನೀನು . ಆ ಗಾಳಿ ಮಾತಿಗೆ ಮನಸು ಕೊಟ್ಟು ಕೆಟ್ಟೆ ನೀ ಗೆಳತಿ .ಕೈಗೆ ಸಿಗದ ಗಾಳಿ ಉತ್ತರ ಸಿಗದ ಪ್ರಶ್ನೆ ಎರಡು ಒಂದೇ. ಕೇಳಬೇಡ ಗೆಳತಿ ಗಾಳಿ ಮಾತನ್ನ........ ಡಿ .ಆನಂದ. ನಕಲದಿನ್ನಿ

- anand.herur

15 Nov 2016, 08:28 pm

ಭಾವಗೀತೆ

ಭಾವಗೀತೆಯೊಂದು ಮೂಡಿ ಬಂತು
ಉದಯಯುಗದ ಕಾಲದಿ,
ಮೂಕನಾದೆ,ವಿನೀತಾನಾದೆ
ಅದರ ಲಯದ ಮಾಟದೀ,


ಭಾವದೊಡನೆ ಸೇರಿ ಒಲುಮೆ
ಹಾಡು ಹಸೆಯ ಏರಿತು,
ನೂರು ವೀಣೆ ತಂತಿ ಮಿಡಿದು
ನೂರು ಮನವ ಸೇರಿತು.


ಕತ್ತಲಿರುಳ ಬೆಳಕ ಮಾಡಿ,
ಭಾವಗೀತೆ ಬೆಳಗಿತು.
ಸೂರ್ಯ,ಚಂದ್ರ,ಚುಕ್ಕಿಗಳಿಗೆ
ಕಳೆಗೆ ಪ್ರಭೆಯ ನೀಡಿತು.


ಭಾವಗೀತೆ ಬರೆದ ನಾನು,
ಕಳೆದ ಭಾವಗಳ ಹುಡುಕುತಿಹೆ
ಅದೇಕೊ ಇಂದು ನಾನು
ಜಡದಂತೆ ಮಲಗಿಹೆ.



ಪ್ರವೀಣ್ ವಿಪ್ರ

- ವಿಪ್ರ

15 Nov 2016, 08:07 pm

ನಿನ್ನ ನಗೆಯ ಹಿಂದೆ..

ನಿನ್ನ ನಗೆಯ ಹಿಂದೆ ಸಾಗಿದೆ
ಈ ನನ್ನ ಭಾವನೆಗಳ ಹೂ ತೇರು
ಕಣ್ಮರೆಯಾಗದೆ ಉಳಿವುದು ಹೇಗೆ?
ನಾ ನಿನ್ನ ಕಣ್ಣೆದುರು..

ಬಯಕೆಯ ತಂತಿಗಳ ಮೀಟಿ
ಹೊಮ್ಮಿದೆ ನಿನ್ನ ಸೇರೊ ತವಕ..
ಕನಸಲು ಮನಸು ಬಯಸಿದೆ
ನಿನ್ನ ಸಾಂಗತ್ಯ ಸವಿಗಳಿಗೆಯ ಪುಳಕ..

- ಬಾನು ಅಡಿಗಾರ್

15 Nov 2016, 06:32 pm

ಹೊಸ ಹುಡುಗಿ

ಯಾರಿವಳು ಹೊಸ ಹುಡುಗಿ
ಎಂದೂ ಕಾಣದ ಬೆಡಗಿ!!
ನಿಂತವಳ ನೋಡುತ ತಿರುಗಿ
ಸಾಗಿದೆ ನನ್ನಯ ನಡಿಗೆ!!

ಸೂರ್ಯಾಸ್ತದ ರಂಗು
ಆ ಕೆನ್ನೆಯ ತುಂಬ!!
ಮಳೆ ಬಿಲ್ಲೆ ಮೈದುಂಬಿ
ನಿತಂತ ಸೊಗಸು!!

ಚಂದ್ರ ಮುಖಿಯು ಅವಳು
ಯಾವೂರ ಕನ್ನಿಕೆಯೋ!!
ಶೃಂಗಾರ ತುಂಬಿದ ಹೆಣ್ಣು
ಬೇಲೂರ ಬಾಲಿಕೆಯೋ!!

ಕ್ಷೀರ ಸಾಗರದಿ ಜನಿಸಿ
ಬಂದಂತ ದೇವತೆಯೋ!!
ತಿಂಗಳ ಬೆಳಕಲ್ಲಿ ಮುಳುಗೆದ್ದ
ಅಪರೂಪದ ಚಂದ್ರಿಕೆಯು!!

- ಪಿ.ಜಿ.ಜ್ಯೋತಿ

15 Nov 2016, 04:35 pm

ನೀ ಸಿಗಬೇಕಿತ್ತು......

ನಡೆವಾಗ
ತಿರುತಿರುಗಿ ನೋಡುತ್ತಿದ್ದೆ
ಅಲ್ಲೆಲ್ಲೋ ರಸ್ತೆಯ
ಮೂಲೆಯಲಿ ನೀ ನಿಂತು
ನೋಡುತಿರಬೇಕೆಂದು
ಆಸೆಯಿಂದ,

ಕನಸೊಳಗೆ
ನಿನ್ನನೆ ಹುಡುಕುತಿದ್ದೆ
ಸ್ವಲ್ಪ ಮುಖ
ಮಸುಕುಮಸುಕಾಗಿತ್ತು
ನೀನು ಮೇಕಪ್ ಮಾಡಿರಲಿಲ್ಲವೇನೋ
ಹೇಗಿರಬಹುದು ನೀನು.....

ಜಾತ್ರೆಯೊಳಗೆ
ಸುಮ್ಮನೆ ಯಾರನ್ನೋ
ಕಳಕೊಂಡವನಂತೆ
ಹುಡುಕುತಿದ್ದೆ ಯಾರೂ
ಕಳೆದುಹೋಗಿರಲಿಲ್ಲ
ನನ್ನವರು ಆದರೆ
ನೀ ಕಳೆದುಹೋಗಿದ್ದೆ
ನನ್ನೆದೆಯೊಳಗಿಂದ......

ನೀ ಸಿಗುವೆಯೆಂಬ
ಭರವಸೆಯಿಂದ ಈ ದಿನವೂ
ಸಾಯಿಸಿ ಕತ್ತಲೊಳಗೆ
ನಾಳೆಗೆ
ಕಾಯುತಿರುವೆ
ನಾಳಿನ ಬೆಳಗಿಗಾದರೂ
ನೀ ಕಾಣುವೆಯೇನೋ.....
ಸಂತ ನಕ್ಕಲುಬಂಡೆ

- ಸಂತ ನಕ್ಕಲುಬಂಡೆ

15 Nov 2016, 01:37 pm

ನಾನು ನಿರಪರಾಧಿ...

ನಾನು
ಅಂತ ತಪ್ಪು ಮಾಡಿಲ್ಲ
ಆದರೂ ನನ್ನ
ಸಾಯಿಸಿಬಿಟ್ಟರು...

ಯಾರೋ
ಮಾಡಿದ ತಪ್ಪಿಗೆ
ನನಗೆ ಜೀವಕಳೆವ ಶಿಕ್ಷೆ
ನೀಡಿದರು.....

ನಾ ಸುಮ್ಮನೆ
ತಿರುಗಾಡಿಕೊಂಡಿದ್ದೆ
ಒಮ್ಮೊಮ್ಮೆ ಸಿರಿವಂತರ
ಮನೆಯೊಳಗೆ ತಿಜೋರಿಯಲಿ
ಮಲಗಿರುತಿದ್ದೆ

ಎಷ್ಟೋ ಕಾಲದಿಂದ
ನನ್ನನ್ನು ಮಾತನಾಡಿಸಿಯೇ
ಇರಲಿಲ್ಲ ಕೆಲವರು
ನಮಗೂ ಬೇಜಾರಾಗಿತ್ತು

ಬಡವರು ಮಾತ್ರ
ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ
ಮುದುರಿಕೊಂಡು ಕೊಳೆಯಾದ
ಜೇಬಿನಿಂದಿಡಿದು
ಮೃದುವಾದ ಹೆಣ್ಣಿನ
ಎದೆಯೊಳಗೆಲ್ಲಾ
ಓಡಿಯಾಡಿಸಿಬಿಟ್ಟರು....

ಸಿರಿವಂತರ
ತಿಜೋರಿಯ ನುಗ್ಗಲು
ವಾಸನೆಗಿಂತ
ಬಡವರ ಬೆವರಿನ ಘಮ
ಸುಮಧುರ ಅನಿಸುತಿತ್ತು

ಈಗ ಏಕಾಏಕಿ
ನೇಣಿಗೇರಿಸಿಬಿಟ್ಟರು
ನಾ ಮಾಡಿದ
ಅಪರಾಧವಾದರೂ ಏನು??

ನಾನು
ಐನೂರಾಗಿ
ಸಾವಿರಗಳಾಗಿ ಹುಟ್ಟಿದ್ದೇ
ತಪ್ಪಾ....
ಯಾರೂ ಕೇಳುವರಿಲ್ಲ
ನನ್ನ ಗೋಳು
ನಾನು ನಿರಪರಾಧಿ....

ಸಂತ ನಕ್ಕಲುಬಂಡೆ...

- ಸಂತ ನಕ್ಕಲುಬಂಡೆ

15 Nov 2016, 01:28 pm

ಕಾಣದ ಮೌನ

ನೀನೊಂದು ಕಾಣದ ಮೌನ
ನಿನ್ನದೇ ನೂರೆಂಟು ಧ್ಯಾನ
ನಾ ನಿನ್ನ ಕಾಣುವ ಮುನ್ನ
ಹಾರಿ ಹೋಗದಿರಲಿ ಈ ನನ್ನ ಪ್ರಾಣ
ಇಂತಿ ನಿಮ್ಮ ♡ಸ್ನೇಹ ಸಿಂಚನ♡
ನಾಗರಾಜ್ ಬಿ {9743216235}

- ನಾಗರಾಜ ಬಾಕೆ೯ರ್

15 Nov 2016, 12:47 pm

ವನದ ಗಿಳಿಗಳು

ಆಡುತ ನಲಿಯುತಲಿದ್ದವು ಚಂದನ ವನದಲಿ
ತಮ್ಮ ನಿತ್ಯ ಬದುಕಿನ ನೋವು ನಲಿವಿನ ಜಂಜಾಟದಲಿ
ಅಚ್ಚ ಹಸಿರ ಕಾನನದ ಸ್ವಚ್ಚ ಶ್ರೀ ಗಂಧದ ವನದಲಿ
ಹೀಗೆ ಹಾಯಾಗಿ ದಿನಗಳ ಕಳೆಯುತ ಚಂದದ ಬದುಕು ತಮ್ಮದಾಗಿಸುತ

ಒಂದಿನ ಕಂಡವು ಆಸೆಬುರುಕ ಬೇಟೆಗಾರನ ಕಣ್ಣಿಗೆ
ಉಕ್ಕಿತು ಆಸೆ ಹಿಡಿಯಲೆ ಬೇಕೆಂದು ಆ ಗಿಳಿಗಳಿಗೆ
ಇದರ ಪರಿವೆ ಇಲ್ಲದ ಗಿಳಿಗಳು ಸಿಕ್ಕವು ಕಷ್ಟದ ದಿನಗಳಿಗೆ
ತಮ್ಮ ಹಿಂದನ ದಿನಗಳನ್ನು ನೆನೆದು ಪ್ರಾರ್ಥಿಸಿದವು ಭಗವಂತನ ಪಾದಗಳಿಗೆ
ಇದೇ ಇವುಗಳ ಕೊನೆಯ ಗಳಿಗೆ

- ರನ್ನ ಮಹಾದೇವ

15 Nov 2016, 08:52 am

ಪ್ರೀತಿ

ಪ್ರೀತಿಗೆ ದಾಸನಾದ
ಪ್ರೇಮಿಗೆ ಶ್ವಾಸ ನೀನು!!
ಪ್ರಾಣವೇ ಹೋಗುವಾಗ
ದೊರೆತಂತ ಅಮೃತ ನೀನು!!

ದೇಹಕೆ ಜೀವ ನೀನು
ಕಣ್ಣ ವಳಗೆ ಕನಸು ನೀನು!!
ಭಾವದ ಬಯಕೆ ನೀನು
ಹೃದಯದೊಳಗೆ ಪ್ರೀತಿ ನೀನು!!

ಕಲ್ಪನೆಗೆ ಸಾವಿರ ಅರ್ಥ
ಕೊಡುವವನು ಪ್ರೇಮಿ ಮಾತ್ರ!!
ಬೆರಳ ಬೆಸೆದು ಜೊತೆಗೆ ನಡೆವ
ಹೆಜ್ಜೆ ಮೇಲೆ ಹೆಸರ ಬರೆವ!!

ಅದಲು ಬದಲು ಆದ ಹೃದಯ
ಹರೆಯದಲ್ಲಿ ಕಲಿತ ವಿಷಯ!!
ಮನಸಿನೊಳಗೆ ಪ್ರೀತಿ ಬೆಸುಗೆ
ಸಲಿಗೆ ಇರಲಿ ನನ್ನ ಜೊತೆಗೆ!!

- ಪಿ.ಜಿ.ಜ್ಯೋತಿ

15 Nov 2016, 07:12 am