Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅತ್ತ್ಯಾಚಾರ

ಮನ್ಮತನ ಬಾಣ
ಗುರಿ ತಪ್ಪಿತ್ತು
ಅವಳು ಹೆಣವಾಗಿ
ಬಿದ್ದಿದ್ದಳು

- karthik

24 Aug 2016, 12:04 pm

ದಂಡ ಯಾತ್ರೆ

ಜಗತ್ತು ಗೆಲ್ಲುವೆನೆಂದು
ಕತ್ತಿ ಗುರಣಿಯೊಂದಿಗೆ
ಸಿದ್ದನಾಗಿದ್ದ ಯುವಕ
...........
ಮದುವೆಯಾಗಿದ್ದ

- karthik

24 Aug 2016, 12:01 pm

ಬೆಂಕಿಯ ಬಲೆ

ಒಮ್ಮೆ ಅಕಸ್ಮಾತ್
ಸೋಕಿದ ಅವಳ
ಬಿಸಿಯುಸಿರು
ಹೃದಯಕ್ಕೆ ಕಾಳ್ಗಿಚ್ಛು ಹಚ್ಛಿ
ನನ್ನ ಸುಡುತ್ತಿದೆ

- karthik

24 Aug 2016, 11:59 am

ವ್ಯವಸ್ಥೆ

ಬೆಕ್ಕು ಕದ್ದು
ಹಾಲು ಕುಡಿಯುವ ಮುನ್ನ
ಹಾಲಪ್ಪ ದಂಡಿಯಾಗಿ
ನೀರು ಸುರಿದಿದ್ದ
ಮನೆ ಯಜಮಾನ
ಸವಿ ನಿದ್ದೆಯಲಿದ್ದ....

- karthik

24 Aug 2016, 11:48 am

ಅವಳ ಹೆಸರು

"ಅವಳ ಹೆಸರಿರುವುದು ಈ ಕವನದಲಿ
ನುಡಿಮುತ್ತು ಆ ಹೆಸರು ನನ್ನ ಬಾಳ ಪುಟದಲಿ
ಪದವಾಗುವಳು ಪ್ರತಿ ಸಾಲಿನಲಿ
ಮನೆ ಮಾಡಿರುವಳು ನನ್ನ ಹ್ರದಯದಲಿ"

- GIRISH

24 Aug 2016, 01:27 am

ನನ್ನ ಬಾಲ್ಯದ ಸವಿ........

ನಾ ಚಿಕ್ಕವನಾಗಿದ್ದಾಗ ಅಪ್ಪ ಹೇಳುತ್ತಿದ್ದರು
ಈ ನಿಂಬೆಯ ಗಿಡದಿಂದೊಂದು ಒಳ್ಳೆಯ ಪಾಠವ ಕಲಿ ಮಗು
ನೀ ಪ್ರೇಮದಲ್ಲಿ ಎಂದೂ ನಂಬಿಕೆ ಇಡಬೇಡಾ ಮರಿ
ಆ ಪ್ರೇಮವು ಸಹ ನಿಂಬೆಯ ಗಿಡದಂತೆಂಬುದ ನೀ ತಿಳಿ

ನಿಂಬೆ ಗಿಡ ತುಂಬ ಚಂದ
ನಿಂಬೆಯ ಹೂವು ತುಂಬ ಸಿಹಿ
ಆದರೆ ನಿಂಬೆಯ ಹಣ್ಣು ಕಂದ
ತಿನ್ನಲು ಬಹಳ ಹುಳೀ ಕಹಿ

ಯೌವ್ವನದಲ್ಲಿ ನಾನು ಒಂದು ಹುಡುಗಿಯ ಪ್ರೇಮಿಸಿದೆ
ಆ ಹುಡುಗಿಯು ನನಗೆ ಊಡಿಸುತಿದ್ದಳು ದಿನವು ಪ್ರೇಮಸುಧೆ
ಸೂರ್ಯನತ್ತಲೆ ಸೂರ್ಯ ಕಾಂತಿ ಮೊಗವೆತ್ತಿ ತಿರುಗುವಂತೆ
ಆ ಹುಡುಗಿಯ ಮೋಹದಲ್ಲಿ ಅಪ್ಪನ ಮಾತ ನಾ ಮರೆತೆ.

ನಿಂಬೆಯ ಗಿಡದ ರೆಂಬೆ ರೆಂಬೆಯಲು ನೂರು ನೂರು ಮುಳ್ಳು
ಹುಡುಗಿಯ ಪ್ರೇಮದ ಮಾತುಗಳೆಲ್ಲ ಶುದ್ಧ ಕಪಟ ಸುಳ್ಳು
ಬೇರೊಬ್ಬನ ಕೊಬ್ಬಿಗೆ ಶಾಖವಾಗಿಹಳು ನನ್ನ ಹುಡುಗಿ ಇಂದು
ಅಪ್ಪನ ಕಿರುನಗೆ ರೇಗಿಸುತ್ತಿದೆ ಬುದ್ಧಿ ಬಂತೆ ಎಂದು.

- uday

23 Aug 2016, 10:45 pm

ಸುಡುಗಾಡು

ಜೀವಂತ
ಶವಗಳನು
ಸುಡುವ
ಸಮಾಜಕ್ಕಿಂತ,
ಸತ್ತ ಶವಗಳನ್ನು
ಸುಡುವ
ನೀನೆ ಮೇಲು...

- Hk

23 Aug 2016, 09:23 pm

ಕನಸು ಚೆಲ್ಲೊಯ್ತು

ಹೃದಯದ ಮಡಕೆ ಒಡೆದು ಕನಸು ಚೆಲ್ಲೋಯ್ತು ! ಮೌನದ ಏಟನ್ನು ತಾಳದೆ ಮನಸು ಸತ್ತೂಯ್ತು ! ಹೃದಯ ಚೂರಾಗಿ ಉಸಿರು ನಿಂತೊಯ್ತು. !!!

- Vasanth Rao

23 Aug 2016, 05:03 pm

ಚಂದನದ ಗೊಂಬೆ

ಚಂದನದ ಗೊಂಬೆಯೇ
ಚಂದಿರನ ಕಂಡೆಯೇ!!
ಚಂದದಾ ನನ್ನ ಸಖೀ ನೀ
ಚಂದೊಳ್ಳಿ ಚಲುವೆಯೇ!!

ಮುತ್ತು ರತ್ನದ ಹಾಗೆ
ಪಳ ಪಳ ಹೋಳೆಯುವೆ!!
ಮುತ್ತಿಡಲು ಬಂದಾಗ
ಮರೆಯಾಗಿ ಹೋಗುವೆ!!

ಮರೆತೆನೆಂದರೂ ನಾನು
ಮರೆಯಲು ಸಾಧ್ಯವೇ!!
ಮರಳಿ ಬರುವುದು ನಿನ್ನ
ಮಾಯೆತನ ಅಲ್ಲವೇ!!

- ಪಿ.ಜಿ.ಜ್ಯೋತಿ

23 Aug 2016, 04:08 pm

ಪ್ರಣಯ ಗೀತೆ

ಪ್ರೀತಿ ತುಂಬು ವೇಳೆ
ಆ ಚಂದ್ರ ಬಂದ ವೇಳೆ
ಹದಿನೆಂಟು ಚೈತ್ರ ಕಳೆದು
ನಲ್ಲ ನಿನ್ನ ನೋಡಿದಾಗ
ನಾಚಿ ನಿಂತ ನನ್ನ ಕೆನ್ನೆ
ರಂಗೇರಿತು!!

ಆ ನೀಲಿ ಬಾನಿನಲ್ಲಿ
ಚುಕ್ಕಿಗಳ ಸಾಲಿನಲ್ಲಿ
ಬೆಳದಿಂಗಳಾ ಚಂದ್ರ
ಬೆಳಕ ತೋರಿದಾ
ನಲ್ಲಾ
ನಿನ್ನ ನೋಡಲು!!

ನಿನ್ನೊಡನೆ ನಾನಿರಲು
ಮಲ್ಲಿಗೆಯು ಘಮ್ ಎನಲು
ಪ್ರಣಯ ಗೀತೆ ಹಾಡುವಾಗ
ಶಶಿ ಜಾರಿದಾ
ನಲ್ಲಾ
ರವಿ ಮೂಡಿದ!!

- ಪಿ.ಜಿ.ಜ್ಯೋತಿ

23 Aug 2016, 03:59 pm