Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮನದ ಗುಡಿಯಲಿ ದೀಪ
ಬೆಳಗುತಿದೆ ನಿನ ಪ್ರೀತಿ,
ಮಯಣದಾ ದೀಪವದು
ಉರಿಯುವುದೆ ಯುಗಪೂರ್ತಿ..
ಆಸೆಯಾ ಭಾಷೆಯಾ
ಆಮಿಷದ ಮಡುವಲಿ,
ಆಪ್ಯಾಯನದ ಸಮೂಹಿತ
ನೆರಳಿನಾ ಸುಳಿಯಲಿ..
ನಿಜವಾದ ಪ್ರೀತಿಯಾ
ಇರುವಿಕೆಯ ನಾ ಮರೆತೆ,
ಕರುಗುವಾ ದೀಪದಾ
ಎದುರಲ್ಲೆ ನಾ ಕುಳಿತೆ..
ದೀಪದಾ ಜ್ಯೋತಿಯು
ಕಿಚ್ಚನು ಹಚ್ಚಿದೆ,
ಮನಸಿನಾ ಮುಖವನು
ಸುಡುತ ತಾ ಕರಗಿದೆ..
ಬಾಳ ಬೆಳಗಿದ ಪ್ರೀತಿ
ಚಿತೆಯಲಿ ಮಲಗಿದೆ,
ಬದುಕ ಬೆಳಗುವ ದೀಪ
ಚಿತೆಯನು ಉರಿಸಿದೆ..
©CRB
- ಭಾವ ಮೃದಂಗ
09 Nov 2016, 09:51 am
ಅರಿವಿನಾಳದ ಒಳಗೊಂದು
ಪುಟ್ಟ ಹೊತ್ತಿಗೆ,
ಅಜ್ಜನದೋ, ಮುತ್ತಜ್ಜನದೋ?
ಹೇಳಿದರೂ ಕೇಳದ ಮನಸು
ಅಜ್ಜ ಬೆಳೆದ ಆಲಕ್ಕೇ
ಉರುಲಾಗುವ ಬಯಕೆ,
ಸುತ್ತಲೂ ಹೊತ್ತಿಗೆಯ
ಹಾಳೆಗಳು!
ಅಗೋ, ಪುರ್ರೆಂದು ಬರುತಿರೆ
ಹಾರಿ,
ಅಕ್ಷರಕ್ಷರಗಳು
ಬಿಡಿಯಾಗಿ, ಒಂದಾಗಿ,
ವೇದಗಳಾಗಿ, ಮಂತ್ರಗಳಾಗಿ
ಸುತ್ತ ಸುತ್ತಲು,
ಬಿಡುಗಡೆ ಇನ್ನೆಂತು?
ಅದಕ್ಕೇ ಇದ್ದಿತು
ಆಲಕ್ಕೆ ಉರುಲ
ಬಯಕೆ.
- ಶ್ರೀನಿವಾಸ ಕುಲಕರ್ಣಿ
09 Nov 2016, 09:49 am
ಗುರುತಿರದ ಊರಿನ
ದಾರಿಯಲಿ,
ಬೆವರಿಳಸುವ ಸುಡುಬಿಸಿಲಿನ
ಅಡಿಯಲಿ
ತಂದು ಬಿಟ್ಟಿಹೆ ದೇವಾ!
ಹೇಳು, ಇನ್ನೆಂತು ಮುಂದೆ
ಅಡಿಯಿಡಲಿ?
- ಶ್ರೀನಿವಾಸ ಕುಲಕರ್ಣಿ
09 Nov 2016, 09:32 am
ಓಂಕಾರ ನಾದದಲಿ
ಜೆಂಕಾರ ನುಡಿಯಲಿ
ಚಿತ್ತಾರದ ಗೆರೆಯಲಿ
ಸುತ್ತೂರು ಹೆಸರಾಗಲಿ
ಓ ಎನ್ನ ದೇಶದ ಬಂಧು
ಬಳಗದ ಜೀವ ನೀನಾಗಲಿ
ಉತ್ತುವ ಬೆಳೆಯಲಿ
ಬಂಗಾರ ನಿನದಾಗಲಿ
ಸುತ್ತುವ ಈ ಜಗತ್ತಿನಲಿ
ನಿನ್ನ ಹೆಸರೇ ಉಳಿಯಲಿ
ಸತ್ತು ಬದುಕುವ ಜಗತ್ತಲ್ಲಿ
ಬದುಕಿಸುವ ನಿನ್ನ ಸೇವೆ ಮುಂದುವರಿಯಲಿ
ಈ ಕತ್ತಲ ಜಗತ್ತಿನಲಿ
ಅರೆ ಬೆತ್ತಲೆಯಾಗಿ
ಜೋಡಿ ಎತ್ತಿನ ಜತ್ತಿಯಲ್ಲಿ
ಮುತ್ತಿನ ರಾಶಿಯನ್ನು ಕಾಣುವ
ಉತ್ತುಂಗದ ಶಿಖರದಲಿ ನಿಂತು
ಹೊತ್ತು ಹೊತ್ತಿಗೆ ಊಟ ನೀಡುತಲಿರುವ
ಕಣ್ಣಿಗೆ ಕಾಣುವ ದೇವರೆ
ನಿನಗೆ ಎಂದೆಂದಿಗೂ ನಾವು ಚಿರಋಣಿ
ಇಂತಿ ನಿಮ್ಮ♡ಸ್ನೇಹ ಸಿಂಚನ♡
ನಾಗರಾಜ್ ಬಿ {9743216235}
- ನಾಗರಾಜ ಬಾಕೆ೯ರ್
08 Nov 2016, 10:38 pm
ಯವ್ವನದ ಹೊಳೆಯಲ್ಲೊಂದು
ಹೂವಿನಂತ ಜೀವನ ನನ್ನದು
ಪ್ರೀತಿಯೇ ಎನ್ನ ಹೃದಯ
ಪ್ರೇಮವೇ ಎನ್ನ ಉಸಿರು
ಪ್ರತಿ ಗಂಟೆಯಲ್ಲೂ ಪ್ರೀತ್ಸೋನು ನಾನು
ಪ್ರತಿ ತಿಂಗಳಲ್ಲೂ ಬೇಡೋನು ನಾನು
ಪ್ರತಿ ನಿಮಿಷದಲ್ಲೂ ನಿನ್ನದೇ ಯೋಚನೆ
ಆದರೆ ನೀನು ಮಾತ್ರ ವರುಷದ
ಕೊನೆಯಲ್ಲಿ ಬರುವುದೇ ಎನಗೆ ವಿಷಾದ
ಮನೆಯವರ ಮನದಂಗಳದಲ್ಲಿ
ಮಾತುಗಳು ಎನಗೆ ಇನ್ನೆಲ್ಲಿ
ಮುತ್ತೊಂದೆ ಎನಗೆ ಆಸ್ತಿ
ನಿನ್ನ ಮನಸ್ಸೊಂದೆ ಎನಗೆ ಜೀವ
ಬೆಂಬಿಡದೇ ಜಿನುಗುವ ಮಳೆಯಲ್ಲಿ
ತೋಲ್ಬಲಗಳ ಅಂಕುಶದಲ್ಲಿ
ಈ ಬಡ ಜೀವದ ಜೊತೆಯಲ್ಲಿ
ನಾ ನಡೆಯುವ ಹೆಜ್ಜೆಯಲ್ಲಿ
ಗಜ್ಜೆಯ ನಾದದೊಡನೆ
ಬಂದು ಸೇರು ಎನ್ನ ಹೃದಯವ
ಹೇ.... ಎನ್ನ ಜೀವದ
ಗೆಜ್ಜೆಯ ನಾದ
ಇಂತಿ ನಿಮ್ಮ♡ಸ್ನೇಹ ಸಿಂಚನ♡
ನಾಗರಾಜ್ ಬಿ {9743216235}
- ನಾಗರಾಜ ಬಾಕೆ೯ರ್
08 Nov 2016, 10:08 pm
ನೀ ಹಿಂಗ್ಯಾಕೊ
ಜರಿತಿಯ ನನ್ನ
ತವರಾಗ ಅವನೆ
ನನ್ನ ಅಣ್ಣ!!
ನನ್ನ ನೆತ್ತಿ ಮುಟ್ಟಿ ಅವ
ಭಾಶೆಯ ಕೊಟ್ಟವ್ನೆ
ತಂಗಿ ನೀನವ್ವ
ಎಂದೂ ನನ್ನ ಕಣ್ಣ!!
ದೂರದ ಊರಾಗ
ಕಾಯುತ್ತ ಕುಂತವ್ನೆ
ಬೇಗ ಬಾರವ್ವ
ತಂಗಿ ಎಂದ ಅಣ್ಣ!!
ತಂಗೀಯ ಧಾರೆಗಾಗಿ
ತುಂಗೆಯ ನೀರ ತಂದ
ಮಂಗಳ ಕಾಲದಾಗ
ಚೆಂದಾಗಿ ಧಾರೆ ಎರೆದ!!
ಪೆಟ್ಟಿಗೆ ಹೊನ್ನ ಕೊಟ್ಟ
ತೊಟ್ಟಿಲ ಕಟ್ಟಿ ಕೊಟ್ಟ
ಹಿತ್ತಲ ಗಿಡಕೆಲ್ಲ
ನನ್ನಯ ಹೆಸರಿಟ್ಟ!!
ತವರಾಗ ಅವನೆ
ನನ್ನ ಅಣ್ಣ
ತೋಳ ಬಲದಾಗ
ಅವ ಭೀಮಣ್ಣ!!
- ಪಿ.ಜಿ.ಜ್ಯೋತಿ
08 Nov 2016, 06:33 pm
ಮನ್ನಿಸು ನನ್ನಯ ಪ್ರೇಮದ ಅರಸಿ
ಬಂದು ಬಿಡು ನೀ ನನ್ನನು ಅರೆಸಿ !!
ಕಾದಿರುವೆ ನಾ ಕಂಬನಿ ಸುರಿಸಿ
ನಲಿವ ಕೊಡು ನೀ ನೋವನು ಮರೆಸಿ!!
ಮುಗಿಲಿಗು ಮಿಗಿಲಾದ ಪ್ರೀತಿಯ ಹೊದಿಸಿ
ಬಂದು ಬಿಡು ನೀ ನನ್ನನು ಅರೆಸಿ !!
ಬಣ್ಣದ ಹಾಳೆಯ ಚಿತ್ರವ ಬಿಡಿಸಿ
ಬಣ್ಣಿಸುವೆ ನಾ ನಿನ್ನನು ಅರಸಿ!!
ಕಡಲಿನ ಅಲೆ ಅಲೆಯ ಸ್ವಾಗತ ಇರಿಸಿ
ಕಾದಿರುವೆ ನಾ ಕಂಬನಿ ಸುರಿಸಿ!!
- ಪಿ.ಜಿ.ಜ್ಯೋತಿ
08 Nov 2016, 05:57 pm
ಬದುಕಿನ ದಾರಿಯಲಿ
ಹಸಿವಿನಿಂದ ಅಲೆಯುತಿದ್ದೆ
ಜ್ಞಾನದ ಹಸಿವಿನಿಂದ
ಅಲೆಯುತಿದ್ದೆ....
ಸಿಕ್ಕ ಜೀವಗಳೆಲ್ಲಾ
ನಕ್ಕು ಮುನ್ನಡೆಯುತಿದ್ದರೆ
ಅಕ್ಕರೆಯ ಮಾತಿಗೆ
ಹಾತೊರೆಯುತಿತ್ತು ಮನ...
ಎತ್ತ ತಿರುಗಿದರೂ
ಅಜ್ಞಾನದ ಕತ್ತಲು ತುಂಬಿ
ನನ್ನವರು ಪರರು ಯಾರೂ
ಕಾಣದಂತಾಗಿ
ಹೆಣದಂತೆ ಅಲೆಯುತಿದ್ದೆ....
ನೀ ಸಿಗುವತನಕ
ಬದುಕಿನ ದಾರಿ ಮಸುಕು
ಮಸುಕಾಗಿತ್ತು
ನೀನು ಪ್ರಕೃತಿಯಂತ
ಹೆಣ್ಣು ಆಶ್ರಯಕೊಟ್ಟೆ
ಅನ್ನವ ಕೊಟ್ಟೆ .........
ಅತಿಶಯವೆನಿಸುವ
ಆತ್ಮೀಯತೆ ತೋರಿದೆ
ಬದುಕ ದಾರಿಗೆ ದೀಪದ
ಬೆಳಕಾದೆ ನೀನು
ದೇವತೆ.......
- ಸಂತ ನಕ್ಕಲುಬಂಡೆ
07 Nov 2016, 08:32 pm
ಬಸಿರ ಬಯಕೆ ಇಂದು
ನನ್ನ ಉಸಿರ ಹಿಡಿದಿದೆ
ಹಸಿರ ತೋರಣದ ತವರಿನಲ್ಲಿಂದು
ನನ್ನ ಸೀಮಂತ ಸಂಭ್ರಮಿಸುತ್ತಿದೆ
ಕೂಸಿನ ಕನಸ ಕಾಣುವ ನನ್ನೀ
ಮಾಸಿದ ದಿನಗಳ ಅವದಿಯಲ್ಲಿ
ಸೂಸುವ ಗಂಧ ಕುಸುಮಗಳಲ್ಲಿಂದು
ಚೊಚ್ಚಲದ ಸೀಮಂತ ಕುಣಿದು ಕುಪ್ಪಳಿಸುತ್ತಿದೆ
ಹುಳಿ ಮಾವಿನ ಕಾಯಿಯ ರುಚಿ
ಕೆಂಪು ಮಣ್ಣಿನ ಗುಣದ ಶುಚಿ
ಡ್ವಾರಿ ಹುಳಿ ಹುಣಸಿ ಕಾಯಿಯಿಂದ
ಮಗುವಿನ ಮಕರಂದ ಕಂಗೊಳಿಸಬೇಕಾಗಿದೆ
ಹೆಣ್ಣಿಗೆ ಸಿಗುವ ಈ ಸಿರಿತನ
ಮಗುವಿಗಾಗಿಯೇ ಅವಳೆಲ್ಲಾ ತನುಮನ
ಅದರ ಏಳ್ಗೆಗಾಗಿಯೆ ಶ್ರಮಿಸುವಳು ಕೊನೆತನ
ಮಾತೃವಿನ ಮಡಿಲಿನಲ್ಲಿ ಮಗುವಿನ ಜನನ
ಇದು ತಾಯಿಯ ಸಾವಿರ ಪುಣ್ಯದ ಪ್ರತಿಪಲನ
ಇಂತಿ ನಿಮ್ಮ♡ಸ್ನೇಹ ಸಿಂಚನ♡
ನಾಗರಾಜ್ ಬಿ {9743216235}
- ನಾಗರಾಜ ಬಾಕೆ೯ರ್
07 Nov 2016, 07:09 pm
ಹಲವಾರು ಕನಸುಗಳನ್ನು
ನನಸು ಮಾಡಲು
ಬಂದಿಳಿದ ಮರುಭೂಮಿಗೆ..!
ಬಿಸಿಲು,ಚಳಿಯನ್ನು
ಲೆಕ್ಕಿಸದೆ ತನ್ನ ಜೀವನ ವನ್ನೆ
ಮುಡಿಪಾಗಿರಿಸಿದ ತನ್ನವರಿಗೆ..!
ಹಲವಾರು ಬಾರಿ ಹೋಗಿ
ಬಂದ ದೊಡ್ಡ ದೊಡ್ಡ
ಪೆಟ್ಟಿಗೆಗಳೊಂದಿಗೆ ತನ್ನೂರಿಗೆ..
ಜೀವನವನ್ನು ದಡ ಸೇರಿಸುವ
ಹೋರಾಟದಲ್ಲಿ ಕೊನೆಗೊಂದು
ದಿನ ಪೆಟ್ಟಿಗೆಯ ಒಳಗೆ ಮಲಗಿ ಹೋದ
ಇನ್ನೆಂದೂ ಮರಳಿ ಬಾರದ ಊರಿಗೆ...!
✒ಸಲ್ಮಾನ್ ಸಜೀಪ
- ಸಲ್ಮಾನ್ ಸಜೀಪ
07 Nov 2016, 11:36 am