Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನ ವಳು...!!

ಮಧುರ ಕಾವ್ಯ ದ
ಸು೦ದರಿ ಅವಳು...
ಚ೦ದಿರನ ಬೆಳದಿ೦ಗಳು
ಅವಳ ಮೊಗದ ಮು೦ಗುರಳು...
ಇನ್ನೂ ಅವಳನ್ನು ಪ್ರತಕ್ಷ ಕ೦ಡ
ನನಗೆ ಆಗಾದಿರುವುದೇ ಅರಳು ಮರಳು...
ಸಾಗದಿರುವುದೇ ಅವಳ ಜೋತೆ
ನನ್ನ ಜೀವನದ ಉರಳು?...

- ವಲ್ಲಭ..

21 Aug 2016, 07:14 pm

ಈ ನಾಡ ಒಮ್ಮೆ ನೋಡು

ಚಂದನದಲಿ ಹೊಂಬೆಳಕಲಿ
ಕಸ್ತೂರಿಯ ಕಂಪನದಲಿ
ಒಮ್ಮೇ ತಿರುಗಿ ನೋಡು
ನೀನೊಮ್ಮೆ ತಿರುಗಿ ನೋಡು!!

ಮಾಮರದಲಿ‌ ಮೈ ಮರೆಯುವ
ಕೋಗಿಲೆಗಳ ಆ ಗುಂಪಲಿ
ಒಮ್ಮೇ ಸೇರಿ ನೋಡು
ನೀನೊಮ್ಮೆ ಸೇರಿ ನೋಡು!!

ಬೇಲೂರಿನ ಆ ಶಿಲೆಗಳ
ಕೋಲಾರದ ಹೊನ್ ಸಿರಿಗಳ
ಒಮ್ಮೇ ಕಲೆತು ನೋಡು
ನೀನೊಮ್ಮೆ ಕಲೆತು ನೋಡು!!

ಅಬ್ಬರಿಸುವ ಸಾಗರವಿದೆ
ಹುಬ್ಬೇರಿಸೊ ಆ ತೀರದಿ
ಒಮ್ಮೇ ಸಾಗಿ ನೋಡು
ನೀನೊಮ್ಮೆ ಸಾಗಿ‌ ನೋಡು!!

ಈ ನಾಡಿನ ಈ ನುಡಿಗಳ
ಆಹ್ಲಾದಿಸುವ ಒಲುಮೆಯ
ಒಮ್ಮೇ ಕೇಳಿ ನೋಡು
ನೀನೊಮ್ಮೆ ಕೇಳಿ ನೋಡು!!

ನಿಸ್ವಾರ್ಥದ ಅಮೃತದಲಿ
ಸತ್ಯಾರ್ಥದ ಸಂಜೀವಿನಿ
ಒಮ್ಮೇ ಆಗಿ ನೋಡು
ನೀನೊಮ್ಮೆ ಆಗಿ ನೋಡು!!

- ಪಿ.ಜಿ.ಜ್ಯೋತಿ

21 Aug 2016, 11:02 am

ಗೆಳತಿ...ಉಳಿದಿಲ್ಲ ಏನು ಸಾಕ್


ನೀನು ನನ್ನ ಬಿಟ್ಟು ಹೋದ ದಿನವೇ ನಿ ಕೊಟ್ಟ ನವಿಲುಗರಿ,
ಶುಭಾಶಯದ ಕಾಗದ ,ಒಲವಿನ ಪತ್ರ ,ಉಡುಗೊರೆಗಳನ್ನೆಲ್ಲ ಹೂತು ಹಾಕಿ ಬಂದೆ
ನಮ್ಮ ಪ್ರೀತಿ ಸಮಾಧಿಯ ಹತ್ತಿರ...!!
ಗೆಳತಿ...ನೆನಪು ಮತ್ತು ಕಣ್ಣಿರು ಬಿಟ್ಟರೆ ನಮ್ಮ ಸತ್ತು ಹೋದ ಪ್ರೀತಿ ಸಂಬಂದಕ್ಕೆ
ಉಳಿದಿಲ್ಲ ಯಾವುದೇ ಲೆಕ್ಕಪತ್ರ ...!! ಆದರೂ...
ನಿನ್ನ ನೆನಪಲ್ಲಿ ಅಳೋದು ನಂಗೆ ತುಂಬಾ ಇಷ್ಟ ಕಣೇ ಹುಡುಗೀ...!

- pavan

20 Aug 2016, 11:26 pm

ಆಣೆ

ಪ್ರೀತಿಸಿದ ನೀನು
ಕೈ ಹಿಡಿದು ನನ್ನ
ಸಾಗೋ ಹೆಜ್ಜೆ ಮೇಲಾಣೆ!!

ನೀ ಕೈ ಬಿಟ್ಟು ನನ್ನ
ಅಗಲಿದರೆ ಚಿನ್ನ
ನಾ ಉಳಿಯಲಾರೆ ನನ್ನಾಣೆ!!

- ಪಿ.ಜಿ.ಜ್ಯೋತಿ

20 Aug 2016, 04:04 pm

ಮೇಣದ ಬತ್ತಿ

ಉರಿವ ಮೇಣದ ಬತ್ತಿ
ಒಳಗೆ ದಾರವು ಹೊತ್ತಿ!!
ನೀಗಿ ಕತ್ತಲ ಜಗವ
ತೋರಿ ಬೆಳಕಿನ ನಗೆಯ!!

ತನ್ನ ಸುಟ್ಟರು ಸರಿಯೇ
ತಾನು ಕರಗಿದರಯೆ!!
ತನ್ನ ಬುಡದಲಿ ಬೆಳಕು
ಇಲ್ಲದಿದ್ದರೆ ಉರಿವೆ!!

ಗಾಳಿಗಂಜಿದರೂನು
ಆರದುರಿಯುವೆ ನೀನು!!
ಉರಿದು ಹೋಗುವೆ ನೀನು
ಕರಗಿ ಜಗದಲಿ!!

- ಪಿ.ಜಿ.ಜ್ಯೋತಿ

20 Aug 2016, 03:50 pm

ಇರುಳ ಬೆಳಕು

ಇರುಳಲ್ಲಿ ಒಂಟಿಯಾಗಿ
ಬೆಳಕನ್ನು ಕಾದು ನಿಂತೆ!!
ನಿನ್ನ ಹೆಸರ ನೆಲದಿ ಬರೆದು
ಮಳೆ ಹನಿಯ ತಡೆದು ನಿಂತೆ!!

ಕಾಗದದ ದೋಣಿಯಲ್ಲಿ
ಪಯಣಿಸುವ ಆಸೆ ಬಂತು!!
ತಾರೆಗಳ ಮಾಲೆ ಮಾಡಿ
ನಿನಗಾಗಿ ಹಿಡಿದು ಕಾದೆ!!

ಎದೆಯ ವಿರಹ ಅರಿತು
ಕಣ್ಣೀರು ಜಿನುಗಿ ಬಂತು!!
ಕಣ್ಣೀರ ತಡೆದ ಕೈಯಲ್ಲಿ
ನಿನ್ನ ಚಹರೆ ಮೂಡಿ ಬಂತು!!

ನಿನ್ನ ಸನಿಹ ಬಯಸಿದಾಗ
ತಂಗಾಳಿ ಬೀಸಿ ಬಂತು!!
ನನ್ನ ಕೈಗೆ ಎಟುಕದಂತೆ
ಬಳಿ ಸೋಕಿ ದೂರ ಹೋಯ್ತು!!

- ಪಿ.ಜಿ.ಜ್ಯೋತಿ

20 Aug 2016, 03:06 pm

ದುಃಖ


ಮನವು ನೋಯುತಿದೆ
ಮನಸ್ಸನ್ನೇ ಯಾರೋ
ಮುಷ್ಟಿಯೊಳಗಾಗಿಸಿದ ಅನುಭವ
ಬಯಸಿದ್ದು ಸಿಗದಾಗಲೂ
ಸಿಗುವಂತದ್ದು ವಿರಳವಾದರೂ
ಮನಸ್ಸಿಗೆ ಅರ್ಥವಾಗುವುದೇ ಇಲ್ಲ
ಹಂಬಲಿಸುತ್ತಿದೆ
ಹಾತೊರೆಯುತ್ತಿದೆ
ತನ್ನ ನೋವನ್ನು ಯಾರೊಂದಿಗೆ
ಹಂಚಲಿ ?
ಮರುಗುವ ಮನವ
ಸಂತೈಸಿ
ತಂಗಾಳಿಯ ಸಂದೇಶ ಹರಡಿ ಸಾಂತ್ವವನ್ನೀಯಲು ಯಾರಿಗೆಲ್ಲ ಸಾಧ್ಯವಿದೆ ?
ದುಃಖಗಳ ಸಾಮ್ರಾಜ್ಯವ
ಭೇದಿಸಿ
ಸಂತೋಷರಾಜ್ಯ ನಿರ್ಮಾಣ ಮಾಡಿ
ಜಯಗಳಿಸುವವರೇ ನೈಜ
ಜಯಶಾಲಿಗಳು
ಅದಕ್ಕೆ ದೊರಕುವ ಪರಿಸರವೇ "ವರ"
ವರವಿಲ್ಲದ ಪಯಣದ
ಕಾರ್ಯ ಸಾಧನೆಯು ಅಸಾಧ್ಯ...

- ಶಾಹಿದ್ ಉಪ್ಪಿನಂಗಡಿ

20 Aug 2016, 08:22 am

ಸತ್ತಿದ್ದ.....

ಕತ್ತಲೆಯ ಮೌನದಲಿ ಸೀಳಿ ಹೋದವನ ಮುಂದೆ ಗದ್ದಲು - ಅರಚಾಟ

ಬೆತ್ತಲೆ ಸಂತೆಗಿಳಿದು ಧಾರಣೆಗಳ
ಹೋಯ್ದಾಟದೊಂದಿಗೆ ಸಿಗುವ - ಸಿಗದ ಪದಾರ್ಥಗಳಿಗೆಲ್ಲ ಕೈ ಹಾಕಿದವ

ಸತ್ತ ನಂತರ ಕಿವಿಗಳಿದ್ದರೆ ಇದ್ದವರ ಎರಡೆರಡು ಮುಖ ಧ್ವನಿ ಕೇಳ್ತಿದ್ದ.
ಕಣ್ಣಿದ್ದರೆ ಹರಿವ ಕಣ್ಣೀರಲಿ ತನ್ನ ಸಾರ್ಥಕತೆ ಕಾಣ್ತಿದ್ದ.

ಮೂಲೆಯಲಿ ಎಲೆಯಾಟವಾಡುವ ಪುಂಡರ, ಸಾರಾಯಿ ನಶೆಯಲಿ ಅಲೆದಾಡುವ ಪರಿಚಿತರ ,ಮೌನದಿ ರೋಧಿಸುವ ಗೆಳೆಯರ, ಅತ್ತು ಹೈರಾಣದ ಪ್ರೀತಿ ಪಾತ್ರರ ಬೆಲೆ ತಾ ತಿಳೀತಿದ್ದ ಸತ್ತರೂ ಅಲ್ಲಿದ್ದಲ್ಲಿ.

ಅರಿವಿಲ್ಲದೆಯೇ ಒಳಗೆ ಎಂದಿನಿಂದಲೋ ಸಿಕ್ಕಿಕೊಂಡಿರುವ ಗಾಳಿಗೆ ಬಿಡುಗಡೆ ನೀಡುತಲೇ ಇಲ್ಲವಾದವ, ಉಪಕಾರಿ.

ಸಾಯಲು ಸಾಲುಗಟ್ಟಿ ನಿಂತವರಲ್ಲಿ ತನ್ನ ಪಾಳಿಯೊಂದಿಗೆ ನಿರ್ಗಮಿಸಿದವನ ನೆನೆಯಲು ಇಷ್ಟು ಜನ, ಇಷ್ಟೊಂದು ಒಡೆದ ಮೌನ?


ಐಂದ್ರೇಯ (ಮಹೇಶ).

- MaheshRK

20 Aug 2016, 10:57 am

ಕದನ

ದಿನದ ಪ್ರತಿ ಕ್ಷಣವು
ಒಂದಲ್ಲ ಒಂದು ರೀತಿಯ ಕದನ
ಸಮಯವ ಕಳೆಯಲು
ಚಟುವಟಿಕೆಗಳ ಚಲನ ವಲನ
ಭೂತ ವರ್ತಮಾನ ಭವಿಷ್ಯತ್ಗಳ
ಚಿಂತನ ಮಂಥನ
ಸಿರಿತನದ ಸೋಗಿನಲಿ ಮೆರೆದ
ಬಡತನದ ಬೇಗೆಯಲಿ ಬೆಂದ
ಮನಸುಗಳ ಕಥನ
ಜೀವನದ ಉದ್ದಕೂ ನಾನು ನಾನೆಂಬ ಅಹಂಕಾರಗಳ ಕದನ

- ಆನಂದ್

19 Aug 2016, 09:23 pm

ಅವಳ ಮುನಿಸು

ಅರ್ಥವಿಲ್ಲದ ಕನಸು ಕಾಣುವ
ಮನಸ್ಸು ನನ್ನದು
ಆ ಕನಸುಗಳಿಗೆ ಅರ್ಥ ತುಂಬಲು ಬಂದ
ಮನಸ್ಸು ನಿನ್ನದು
ಕನಸು ನನಸಾಗುವ ವೇಳೆ ತಂದೇ ನೀ
ಮುನಿಸುಗಳ ಸಾಲು
ಅಂದೇ ಶುರುವಾಹಿತು ನನ್ನ
ಕನಸುಗಳ ಸೋಲು

- ಆನಂದ್

18 Aug 2016, 09:31 pm