Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಇಂಧ್ರ ಧನುಷ್ಯಿನ
ಹಲವು ಬಣ್ಣಗಳು ಬಿಳಿಯ ಬಣ್ಣವಾಗುವಂತೆ
ಬಣ್ಣ-ಬಣ್ಣದ ಬದುಕ-ಬದುಕಿ
ಬಿಳಿಯ ಬೆಳಕಿನೆಡೆ ಸಾಗುವ.
- ಸಾ.ರಾ.ಜ್ಞಾ
18 Aug 2016, 08:53 pm
ನಡುಮನೆಗೆ ಬೇಕು ತೊಲೆ
ಅಡುಗೆ ಮನೆಗೆ ಬೇಕು ವಲೆ
ಮನುಷ್ಯನಿಗೆ ಇರುವುದು ತಲೆ
ಅದರಲ್ಲಿ ಇರಬೇಕು ಕಲೆ
ಇದ್ದರೆ ಕಲೆ ಇದ್ದೆ ಇದೆ ನೆಲೆ
- ಆನಂದ್
18 Aug 2016, 06:33 pm
ನೀ ಬಿತ್ತಿದ ಪ್ರೇಮದ ಬೀಜ
ಮೊಳಕೆ ಹೊಡೆದ ವಿಶ್ವಾಸದ ಚಿಗುರು
ಚಿಗುರಿ ಹೊಡೆಯಿತು ಅನ್ಯೊನತೆಯ ಕವಲು
ಅರಳಿ ಪರಿಮಳಿಸಿತು ಸುಖ ಸಂತೊಷದ ಹೂವು
ಬಾಡಿ ಉದುರಿತು ಜೀವನದ ನೋವು
- ಪ್ರಕಾಶ್ ಕೆ. ಬಿ.
18 Aug 2016, 06:13 pm
ಹೂವು ಅರಳುವ ಮುನ್ನ
ಮೊಗ್ಗಿನ ಕತ್ತು ಹಿಸುಕುವಂತೆ
ಹೆಣ್ಣೆಂದು ತಿಳಿದೊಡೆ
ಗರ್ಭದಲ್ಲೆ ಹೊಸಕುವರು
ಸೋಗಲಾಡಿ ಶೂರರು.
- ಸಾ.ರಾ.ಜ್ಞಾ
18 Aug 2016, 09:26 am
ದೂರವಿದ್ದುಬಿಡಿ
ಇಂದು ಹುಡುಗಿಯರಿಂದ.
ಕಟ್ಟಿಬಿಟ್ಟಾರು
ರಾಖಿ ನಿಮಗೆ ಪ್ರೀತಿಯಿಂದ
- anup
18 Aug 2016, 08:32 am
ಮನದ ಮೂಲೆಯಲ್ಲೋಬ್ಬ ಸಾಹಿತಿ
ಕೈಯಲ್ಲೋಂದು ಲೇಖನಿ ಹಿಡಿದು
ಗೀಚುತ್ತಿದ್ದಾನೆ ತೊಚಿದ ಪದಗಳ
ಅಲ್ಲೋ ಇಲ್ಲೋ ದೋಚಿದ ಪದಗಳ
ಕಣ್ಣಿಗೆ ಕಟ್ಟಿದ ಹಾಗೆ ಕಲ್ಪನೆ ಮಾಡಿ
ಎಲ್ಲರು ಮೆಚ್ಚುವ ರೀತಿ ಬಣ್ಣನೆ ನೀಡಿ
ಒಳಾರ್ಥಗಳಿಂದ ಓದುಗರಿಗೆ
ಮಧುವ ಸುರಿದು
ಗೀಚುತ್ತಿದ್ದಾನೆ ತೊಚಿದ ಪದಗಳ
ಅಲ್ಲೋ ಇಲ್ಲೋ ದೋಚಿದ ಪದಗಳ
ಬದುಕಿನ ಜೊತೆಗೆ ಒಲವನು ಇರಿಸಿ
ಒಲವಿನ ಜೊತೆಗೆ ಸಿಹಿ ಕಹಿಯನು ಉಣಿಸಿ
ತನ್ನನ್ನು ಮರೆತು ಎಲ್ಲರಲ್ಲಿಯು ಬೆರೆತು
ಗೀಚುತ್ತಿದ್ದಾನೆ ತೊಚಿದ ಪದಗಳ
ಅಲ್ಲೋ ಇಲ್ಲೋ ದೋಚಿದ ಪದಗಳ
ಸಾಹಿತಿ ಲೇಖನಿಯ ಸಾರಥಿ
ಸಾಹಿತಿ ಭಾವನೆಗಳ ಅಧಿಪತಿ
- ಆನಂದ್
18 Aug 2016, 07:36 am
ಬಾನಲ್ಲಿ ಕರಿ ಬಿಳಿಯ
ಮೋಡಗಳ ನರ್ತನ
ಭುವಿಯಲ್ಲಿ ಮಳೆರಾಯನ
ಇಂಪಾದ ಗಾನ
ತಂಗಾಳಿಯು ಬೀಸಲು
ಏನೋ ರೋಮಾಂಚನ
ಆಷಾಡದ ಬೀಳ್ಕೊಡುಗೆ
ಕಣ್ಣೀರ ಆಲಿಂಗನ
ಶ್ರಾವಣದ ಸ್ವಾಗತಕೆ
ಹಸಿರು ತಳಿರು ತೋರಣ
ಹಬ್ಬಗಳ ಸರದಿಯು
ಮುಂಬರುವ ದಿನ
ರಕ್ಷಾಬಂಧನದ ಶುಭಾಶಯ
ಹೇಳುವೆ ಈ ಕ್ಷಣ
✍
- anup
17 Aug 2016, 11:16 pm
ಕಣ್ಣಿಗೆ ದೂರವಿದ್ದರೆನು
ಹೃದಯದೊಳಿರುವ ಆ ನಿನ್ನ ಸಾನಿಧ್ಯವನು
ಸವಿಯುತಿತ್ತು ಈ ನನ್ನ ಮನವು
ಇಂದು ನೀ ನನ್ನ ದೂರ ತಳ್ಳಿರಲು
ನಿನ್ನ ಆ ಸಾನ್ನಿಧ್ಯದ ನೆನಪಿನಲ್ಲಿ
ಸಾಯುತಿರುವೆ ನಾ ಅನುಕ್ಷಣವು.
✍
- anup
17 Aug 2016, 11:15 pm
ಬಂದಿಹೆನೆಂಬ
ದುಃಖದಲ್ಲಿ
ಹೋಗಬೇಕೆಂಬ
ನೆಪವ ಹುಡುಕಿ
ಬದುಕ ಬಂಡಿ ಸಾಗಿದೆ.
- ಸಾ.ರಾ.ಜ್ಞಾ
17 Aug 2016, 09:45 pm
ಹೇಳಿ ಯಾರು ಯಾರಿಗಾಗಿ
ಜೀವನದ ಜ್ಯೋತಿಯು ಆರುವಾಗ
ಜೀವವು ಭಾವನೆಗಳ ಸಂಗ ಕ್ಷಣದಲ್ಲೆ ಬಿಡುವಾಗ
ಹೇಳಿ ಯಾರು ಯಾರಿಗಾಗಿ
- ಸಾ.ರಾ.ಜ್ಞಾ
17 Aug 2016, 08:59 pm