ಅಮ್ಮನಿಂದ ಶುರುವಾದ-ಬದುಕಿನಾಟ
ಗೆಳೆಯರೊಂದಿಗೆ-ಆಟ/ತುಂಟಾಟ
ಮೇಷ್ಟ್ರುಗಳಿಂದ-ಪಾಠ
ಬೇಕು/ಬೇಡದವುಗಳ - ಚಟ
ವೃತ್ತಿ/ಪ್ರವೃತ್ತಿಗಳ - ಹುಡುಕಾಟ
ಸಾಂಸಾರಿಕ ಲೋಕದ - ಜಂಜಾಟ
ಹುಟ್ಟೋ ಮಕ್ಕಳ ಬದುಕಿಗೆ - ಪರದಾಟ
ಮಾನಸಿಕ ಭಾವನೆಗಳ -ಸಂಕಟ
ವೃದ್ಧಾಪ್ಯ ಜೀವನದ - ಹೋರಾಟ
ಕೊನೆಯ ಪಯಣಕೆ ಸಿದ್ಧವಾದ - ಚಟ್ಟ
ಎರಡನೇ ದರ್ಜೆಯವರಿಗೆ
ಒಂದುಂಟು ಒಂದಿಲ್ಲ,
ಕಾಲಿಗೆಳೆದರೆ ತಲೆಗಿಲ್ಲ,
ತಲೆಗೆಳೆದರೆ ಕಾಲಿಗಿಲ್ಲ,
ಕೆಲವರಿಗಂತೂ ಕಾಲು
ಚಾಚಲು ಚಾಪೆಯೇ ಇಲ್ಲ
"ಚಾಪೆ ಇದ್ದಷ್ಟೇ ಕಾಲು ಚಾಚು"
ಎಂಬ ಎಸಿ ಬೋಗಿಯವರ ಉಪನ್ಯಾಸ ನಿಂತಿಲ್ಲ.
ಎಸಿ ಬೋಗಿಯವರಿಗೆ,
ಹೊರ ಗಾಳಿಯ ಹಂಗಿಲ್ಲ
ಬಿಸಿಲ್ಗಾಳಿಯ ಸುಳಿವಿಲ್ಲ
ತಂಗಾಳಿಯ ಅರಿವಿಲ್ಲ
ಒಬ್ಬರ ಉಸಿರ ವಿಷ ಮತ್ತೊಬ್ಬರು ಕುಡಿಯುತ್ತ
ವಿಷಜಂತುಗಳಂತೆ ಬದುಕುತ್ತಿಹರೆಲ್ಲ..
ಎರಡನೇ ದರ್ಜೆಯವರಿಗೆ,
ಸುಡುವ ಬಿಸಿಲುಂಟು,
ತೊಯ್ಸುವ ಮಳೆಯುಂಟು
ಆದರೂ ಬಡತನಕೂ ಇವರಿಗೂ ಬಾರೀ ನಂಟು
ಎಸಿ ಬೋಗಿಯೊಳಗೆ
ಎರಡನೇ ದರ್ಜೇಯವರಿಗೆ ಅವಕಾಶವಿಲ್ಲ
ತಲೆ ಹೊಡೆದು ಮೇಲೆ ಬಂದ ಎಸಿ ಜನರೂ
ಹೇಳುತ್ತಿದ್ದಾರೆ.. "ಕಷ್ಟ ಪಟ್ಟು ಮೇಲೆ ಬನ್ನಿ"
ಕಷ್ಟ ಪಟ್ಟು ಮೇಲೆ ಬಂದ ಒಂದಿಬ್ಬರಿಗೆ
ಎರಡನೇ ದರ್ಜೆಯ ನೆನಪಿಲ್ಲ,
ಏಕೆಂದರೆ ಎಸಿ ಗಾಳಿ
ಮರೆಸುವುದು ಹಳೆಯದನೆಲ್ಲ.
"ಕಷ್ಟ ಪಟ್ಟರೆ ಕೈಲಾಸ"
ಇದು ಎಸಿ ಬೋಗಿಯವರ ಉವಾಚ
ನಿಲ್ಲಲೂ ಕಷ್ಟವಿರುವ
ಎರಡನೇ ದರ್ಜೆಯಲಿ
ಕಷ್ಟಗಳಿಗಿಲ್ಲ ಕಿಂಚಿತ್ತೂ ಸಂಕೋಚ !
ಅವಳು ನೋಡದಿದ್ದರೆ,
ನಾನು ಮೋಹಿತನಾಗುತಿರಲಿಲ್ಲ
ಅವಳು ನಗದಿದ್ದರೆ
ನಾನು ಹುಚ್ಚ ಪ್ರೇಮಿ ಆಗುತಿರಲಿಲ್ಲ
ಅವಳು ನಾ ನಿನ್ನ ಪ್ರೀತಿಸುವೆ ಎನ್ನದಿದ್ದರೆ
ನಾನು ನಿನ್ನ ಬಿಡಲಾರೆ ಎನ್ನುತಿರಲಿಲ್ಲ
ಅವಳು ಈ ಹೃದಯ ನಿನಗಾಗಿಯೇ ಎನ್ನದಿದ್ದರೆ
ನಾನು ನಿನ್ನ ಮರೆಯಲಾರೆ ಎನ್ನುತಿದ್ದೆ
ಆದರೀಗ ನನಗೂ ಅವಳಿಗೂ ನಾನೊಂದು ತೀರಾ
ನೀನೊಂದು ತೀರವಾಗಿ ಬಾಡದ ಹೂವಾಗಿದೆ