Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಬದುಕಿನಲ್ಲಿ ಏರುಪೇರು ಸಾವಿರಾರು
ಅದ ಎದುರಿಸಿ ನಡೆಯುವಂತೆ ನೀನಾಗಿರು
ಬಿದ್ದಾಗ ಕೈ ಹಿಡಿಯುವುದಿಲ್ಲ ಯಾವ ಜನರು
ಗೆದ್ದಾಗ ಕೈ ಕುಲುಕುವರು ಕೆಲ ಜಲ್ಪಕರು
ನಿನ್ನ ಗೆಲುವಿಗೆ ನೀನೇ ಆಗಿರು ದಾರಿ
ಆ ದಾರಿಗೆ ದಾರಿದೀಪವಾಗಿ ಬರುವನು ಶ್ರೀಹರಿ
- ಮಂಜುನಾಥ ಶಾಸ್ತ್ರಿ
12 Aug 2016, 08:19 am
ನ ಕವಿತೆ ಬರೆಯಲೇ ಬೇಕಿದೆ
ಬರೆವ ಮುನ್ನ
ಹೇಳುವೆ ಚಿನ್ನ
ನೀನೆ ನನ್ನ ಸ್ಪೂರ್ಥಿಯೆಂದು
ಸಾಕಾರವಾಯ್ತು ಕವಿಯಾಗೊ ನನ್ನ ಕನಸಿಂದು.
- ankush
10 Aug 2016, 08:39 pm
'ಕ'ಣ್ಮರೆಯಾದ ನಗುವಿನ ಹಿಂದೆ
'ಕಾ'ಣದ ನೋವಿದೆ
'ಕಿ'ತ್ತು ತಿನ್ನುವ
'ಕೀ'ಚಕರ ವರ್ತನೆಗೂ
'ಕು'ಸಿದುಬಿದ್ದ ಬದುಕಿದೆ
'ಕೂ'ಗಿ ಕರೆದಾಗ
'ಕೃ'ತಕ ಭಾವನೆಗಳು ಸ್ಪಂದಿಸದೆ
'ಕೆ'ಣಕಿದ ಮನಸುಗಳಿಗೆ
'ಕೇ'ವಲ ಜೀವವಿದೆ
'ಕೈ' ಹಿಡಿವ ಹಂಬಲಕೆ
'ಕೊ'ಡು ತಾಯೆ ವರವೊಂದ
'ಕೋ'ರುವೆ ಭಕ್ತಿಯಲಿ
'ಕೌ'ತುಕ ಜೀವನದಲಿ
'ಕಂ'ಬನಿಗಳ ಸಾರದೊಂದಿಗೆ
'ಕಃ' ಎಂಬ ಉದ್ಗಾರದೊಂದಿಗೆ.
ಕೊನೆಯಾಯಿತು ನೋವು ತುಂಬಿದ "ಕ-ಕಃ"ಬದುಕಿನ ಪಯಣ!!!
- ಸಾಗರ್ ಸಿದ್ದು
10 Aug 2016, 01:12 pm
ದಶಕದ ನಂತರ ಮಾತಿಗೆ ಸಿಕ್ಕಿದ್ದ ಗೆಳತಿಗೆ..
ಅಂದು ಅರಳುತ್ತಿದ್ದವು,
ಎಳೆ ಬಳ್ಳಿಯಲಿ
ತಿಳಿಬಿಳಿ ಬಣ್ಣದ,
ಕೆಣ್ಣನ, ಹೊನ್ನನ
ಬಣ್ಣ ಬಣ್ಣದ
ಅಂದ-ಚಂದದ ಹೂವುಗಳು.
ಇಂದೂ...
ಅರಳುತ್ತವೆ,
ಆಗೊಮ್ಮೆ- ಈಗೊಮ್ಮೆ
ಅರಳಿ, ತಲೆಯೆತ್ತಿ
ಮತ್ಯಾರದೋ ಮರ್ಜಿ ನೋಡುತ್ತವೆ.
ಕಣ್ಣಳುಕಿಗೆ, ಮೂಗಳುಕಿಗೆ
ಮತ್ತೆ ಮುದುಡಿಬಿಡುತ್ತವೆ.
ಯಾಕಮ್ಮ ಗೆಳತಿ,
ಬಳ್ಳಿಯೊಡಲಲಿ
ಅರಳಿದ ಕುಸುಮಗಳೆಲ್ಲ
ನಿನ್ನ ದೈವಸನ್ನಿಧಿಗೆ ಮಾತ್ರವೇ!
ಭಾವಸನ್ನಿಧಿಗೆ...?
- 'ವಿಹ' ಪೂಜೇರ
10 Aug 2016, 02:18 am
ಪ್ರತಿ ತಿಂಗಳು ನಮಗೆ ಸಿಗುವದು ಸ್ಯಾಲರಿ
ಪತ್ನಿಯ ನುಡಿ ವಂದೇ ಅದು ಜಿವಲರಿ
ಎಷ್ಟು ದುಡ್ದಿದ್ದರು ನಾವು ಹೇಳುವ ನುಡಿ ಸಾಲಲ್ರಿ
ತಿಂಗಳ ಕೊನೆಗೆ ಕೈ ಚಾಚುವೆವು ಸಾಲಾ ರೀ ಸಾಲಾ ರೀ
- Rahul marali
08 Aug 2016, 10:47 am
ವರನು ಕಾತುರದೊಳೆಂದನು,
ಸುಮುಹೂರ್ತ ಬಂದಾಯ್ತು ಕಟ್ಟಲೇ 'ತಾಳಿ'?
ವಧುವು ಮೆದು ದನಿಯೊಳೆಂದಳು,
ವಾಟ್ಸ್ಯಾಪ್ ಮೆಸೇಜಿಹುದು ....ಸ್ವಲ್ಪ ತಾಳಿ!
- ಮಲ್ಲಿಭಾಗವತ್ ಗುಡಿಬಂಡೆ
08 Aug 2016, 12:51 am
ಪ್ರತಿ ಕ್ಷಣದಲ್ಲೂ ನೆನಪಾಗುವ ನನ್ನ ಪುಣ್ಯ
ಕಾಣದಂತೆ ಮರೆಸಿತು ಮನದನೋವ
ಶತ ಪ್ರಯತ್ನಿಸಿದರೂ ಸಿಗಲಿಲ್ಲ ನೀನು ಸಿಂಡರೆಲಾ
- ಪ್ರಕಾಶ್ ಕೆ. ಬಿ.
07 Aug 2016, 03:50 pm
ಕಡಲಾಗಿ ಕೂಡಿ ಬಾಳಿದ ಸ್ನೇಹ
ಬತ್ತಿ ಹೋದ ಕೆರೆ ಕುಂಟೆಗಳಂತಾಗಿದೆ
ಕನ್ನಡಿಯಂತೆ ಫಳಫಳನೆ ಹೊಳೆಯುವ
ನನ್ನ ಸ್ನೇಹ ಒಡೆದ ಕನ್ನಡಿಯ ಚೂರುಗಳಂತಾಗಿದೇ
ಗುಲಾಬಿಯ ಹೂವಿನಂತಿದ್ದ ನಮ್ಮ ಸ್ನೇಹ
ಬಾಡಿದ ಮಲ್ಲಿಗೆ ಸಂಪಿಗೆಯಂತಾಗಿದೆ
ಆಕಾಶದ ನಕ್ಷತ್ರದಂತಿದ್ದ ನಮ್ಮ ಸ್ನೇಹ ಕಲ್ಲು ಗುಡ್ಡೆಗಳಂತಾಗಿದೆ
ಸ್ನೇಹಕ್ಕಾಗಿ ಪ್ರಾಣ ಕೊಡುವ ಸ್ನೇಹವ ನಂಬಲೇ ಇಲ್ಲಾ ಹಣದ ಆಸೇಗೆ ಗೆಳೆತನ ಮಾಡುವ ಸ್ನೇಹವನ್ನೇ ನಂಬಲಿ ನೀವೇ ಹೇಳಿ ಎಂತಹ ಸ್ನೇಹವನ್ನು ಮಾಡಲಿ ?
- gtr
06 Aug 2016, 11:22 pm
ಒಳಗಂಡ ಅವನು
ಹೊರಗಂಡ ಇವನು
ಮನಸು ಬಯಸಿದುದು ಯಾರನು?
ಅವನ ಪ್ರೀತಿಸಿ ಇವನ ವರಿಸಿ
ನಾ ಪಡೆದೆ ಏನನು?
ಒಂದು ಎರೆಡು ಮೂರು ನಾಲ್ಕು
ದಿನ, ತಿಂಗಳು, ವರುಷಗಳ ಕಳೆದೆನು
ಮರೆಯಾದವೇ ಮನದಲ್ಲಿನ ಸವಿನೆನಪುಗಳು?
ಕಾಡದಿಹವೇ ನೀ ನನಗೆ ಕೊಟ್ಟ ಮುತ್ತುಗಳು?
ಯಾವ ಸುಖವ ಪಡೆಯಲು ನಾ ಹೀಗೆ ಮಾಡಿದೆನು?
ಯಾರನು ಮೆಚ್ಚಿಸಲು ನಾ ನಿನ್ನ ದೂಡಿದೆನು?
ಕಣ್ಣಂಚಲಿ ಮೂಡಿದ ಹನಿಗಳಿವು
ಎಂದು ಜಾರುವವು?
ಅಯ್ಯೋ ವಿಧಿಯೇ...
ಬೇಗ ಬಂದು ನನ್ನ ಕರೆದು ಹೊಗು...
ಘನ ಘೋರ ಈ ಜೀವನ...
ಸಾಕಾಗಿದೆ ಕಾಣದೇ ಮನದಿನಿಯನ...
- ಚೇತನ್ ಬಿ ಸಿ
06 Aug 2016, 09:30 pm
ಸಂಗ್ರಾಮ...
ಎದುರಿಸುವಲ್ಲಿ,
ಎದುರಿಸಿ ನಿಲ್ಲುವಲ್ಲಿ,
ನಿಂತೂ ಬಗ್ಗುವಲ್ಲಿ,
ಬಗ್ಗಿದರೂ ಏಳುವಲ್ಲಿ,
ಎದ್ದರೂ ನಯದಲ್ಲಿ,
ನಯವೂ ದೈರ್ಯದಲ್ಲಿ...
ಜೀವನ ಸಂಗ್ರಾಮ ತಪ್ಪಿನ ಓಪ್ಪಿಗೆಗೆಯಲ್ಲ...
ಓಪ್ಪಿನ ತಪ್ಪಿಗೆ ತಿದ್ದಿ ನಡೆದಾಗ...
ಒಂದು ತಪ್ಪಿಗೆ ಇನ್ನೊಂದು ಉತ್ತರವಲ್ಲ...
ಉತ್ತರಕ್ಕೆ ಪ್ರಶ್ನೆ ಸಮಾಧಾನವಲ್ಲ...
ತಿಳದೂ ಮಾಡಿದರೆ ಅವನು ಗಂಡಸೂ ಅಲ್ಲ, ಮನುಜನೂ ಅಲ್ಲ...
ಸರ್ವವೂ ತಿಳಿದೂ ಮನುಷ್ಯ ಕೀಳಾಗಿ ವರ್ತಿಸುವನಲ್ಲಾ...
ಮೃಗಗಳಂತೆ ಆಡುವ ಮನುಜರಿಗಿಂತ ಪ್ರಾಣಿಗಳೇ ಎಷ್ಟೋ ಮಿಗಲಲ್ಲಾ...???
ಸಂಗ್ರಾಮ... ಇದು ನಮ್ಮ ಓಳಗೇ ಇರುವ ಸಂಗ್ರಾಮ...
ನಮ್ಮ ಓಳಗೇ ಇರುವ ಪ್ರಹಲ್ಲಾದ ಹಿರಣ್ಯನ ಸಂಗ್ರಾಮ...
- ಮನರಂಗ
06 Aug 2016, 09:19 pm