Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನನ್ನ ಪ್ರತೀ ಕಣ್ಣ ನೋಟದಲ್ಲಿ ನಿನ್ನದೇ ಬಿಂಬ..
ಅದರಿಂದ ನನ್ನ ಮನದಲಿ ಮನೆ ಮಾಡಿದೆ ಅದ್ಯಾವುದೋ ಒಣ ಜಂಬ....
ಆದರು ಪರವಾಗಿಲ್ಲ ನಾನು ನಿನ್ನ ಮನಸ್ಸಿನ ಪ್ರತಿಬಿಂಬ......
ನಿನ್ನು ನನವಳೆಂಬುಧೂ ನನ್ನ ಜೀವನ ಪರ್ಯಂತದ ಜಂಬ ಜಂಬ ಜಂಬ..............
- manjunath.r
27 Oct 2016, 01:22 pm
ಕಪ್ಪೆಚಿಪ್ಪಿನೊಳಗೆ ಇತ್ತು
ಒಂದು ಸ್ವಾತಿ ಮುತ್ತು
ಕಡಲಿನಾಳದಲ್ಲಿ ತಾನು
ಅಡಗಿ ಕುಳಿತಿತ್ತು !!
ನನ್ನ ಹೃದಯದಲ್ಲಿ ಇತ್ತು
ಮೊದಲ ಪ್ರೀತಿ ಮತ್ತು
ಎದೆಯ ಗೂಡಿನಲ್ಲಿ ಅದು
ಅಡಗಿ ಕುಳಿತಿತ್ತು !!
ಹಕ್ಕಿಯೊಂದು ರೆಕ್ಕೆ ಬಿಚ್ಚಿ
ಹಾರಿ ಬಂದಂತ್ತಿತ್ತು
ಎದುರು ಬಂದ ಹಕ್ಕಿ
ಎದೆಯ ಕದವ ಬಡಿಯುತ್ತಿತ್ತು!!
ಕತ್ತಲಿಹುದು ಸುತ್ತ ಮುತ್ತ
ಹೋಗಲೀಗ ನಾನು ಎತ್ತ
ಮಳೆಯು ಬಹುದು
ಈಗಲೆ ಇತ್ತ !!
ಪುಟ್ಟದೊಂದು ಜಾಗವಿತ್ತು
ಕೃಪೆಯ ತೋರಿ ನನ್ನ ಸುತ್ತ
ಕೊಡುವೆ ನಾನು ಒಂದು ಮುತ್ತ
ಎಂದು ಹೇಳುತ!!
ಎದೆಯ ಕದವು ತೆರೆದುಕೊಳ್ಳಲು
ಹೃದಯದಲ್ಲಿ ಹುದುಗಿ ಕುಳಿತು
ಪ್ರೀತಿಯನ್ನು ಮೆಲ್ಲ ಹೊತ್ತು
ಹಾರಿ ಹೋಯ್ತು ತಿಳಿಯದು ಎತ್ತ!!
- ಪಿ.ಜಿ.ಜ್ಯೋತಿ
27 Oct 2016, 10:37 am
ಹೇಳದೇ ಉಳಿದು ಹೋದ ಪ್ರೀತಿ
ಕನಸಿನಂತೆ ಕಣ್ಣಿನೊಳಗೆ
ನೆನಪಿನಂತೆ ನೋಟದೊಳಗೆ
ಹುದುಗಿ ಹೋಯ್ತು ರೆಪ್ಪೆಯೊಳಗೆ!!
ಹೇಳದೇ ಉಳಿದು ಹೋದ ಪ್ರೀತಿ
ಭಾವ ತುಂಬಿ ಎದೆಯ ಒಳಗೆ
ಮಿಡಿದ ನಾದ ಹೃದಯದೊಳಗೆ
ಬಂದಿಯಾಯ್ತು ಮನಸಿನೊಳಗೆ!!
ಹೇಳದೇ ಉಳಿದು ಹೋದ ಪ್ರೀತಿ
ನೆರಳಿನಂತೆ ಬೆಳಕಿನೊಳಗೆ
ಮರಳದಂತೆ ಮರಣದೊಳಗೆ
ಮಣ್ಣು ಸೇರಿ ಮಸಣದೊಳಗೆ!!
- ಪಿ.ಜಿ.ಜ್ಯೋತಿ
27 Oct 2016, 10:36 am
ಕನಸು ಕಂಡಿದ್ದರು ಅಂದು,
ಉದಯವಾಗಲಿ ನವ ಭಾರತವೆಂದು,
ಹೊತ್ತಿ ಉರಿಯುತ್ತಿದೆ ಇಂದು,
ಭ್ರಷ್ಟ ಕೂಪದಲಿ ಬೆಂದು,
ಯುವ ಶಕ್ತಿಗೆ ದಾರಿ ಕಾಣದಾಗಿದೆ ಇಂದು,
ಓದು ಎಂಬುದು ಮಾರುವ ವಸ್ತುವಾಗಿ ಬದಲಾಗಿದೆ ಬಂಧು,
ಸಾಮಾಜಿಕ ಮೌಲ್ಯಗಳು ಪುಸ್ತಕದ ಅಂಚಿನಲ್ಲಿ
ವಿನಾಶವಾಗಿವೆ ನೊಂದು.
- ವೇಣು ಆರ್ ಚಿನ್ನದೂರು
27 Oct 2016, 12:02 am
ಹಂಚು ಮಾತ್ರ ಪರಿಚಯವಿದ್ದ (ನಾನು)
ಅಂದೊಮ್ಮೆ ಹೊರಗಿಳಿದಿದ್ದೆ
ಹಸಿರು ಗೂಟಗಳ (ಮರ-ಗಿಡ) ಕಂಡು ಪ್ರಶ್ನಿಸಿದ್ದೆ
ಹಂಚಿನ ಬಣ್ಣದ ಊರು
ಕಣ್ಣಿಗೆ ಹಂಚಿನಷ್ಟೇ ತಂಪಾಗಿತ್ತು
ಅದರ ಸುತ್ತಿದ ಅಚ್ಚ-ಹಸುರು
ಬಟ್ರ ಹೋಟೆಲಿನ ಊಟದಂತಿತ್ತು
ಗಾಳಿ ಬೀಸಿ, ಹಾಡುತ್ತಾ
ನನ್ನ ನಿದ್ರಿಸುತ್ತಿದ್ದ
ಮಾವು, ತೆಂಗು
ನೇತ್ರದೊಂದಿಗೆ ಪರಿಚಯಭಾವ ತೋರುತ್ತಿತ್ತು.
ನೋಡಲು ಬಲು ಚಂದ
ಮಾತನಾಡಬೇಕೆನಿಸುತ್ತಿತ್ತು.
ಹೊರಗಿಳಿದ ನಾನು
ಹಾರಾಡಬೇಕು, ಕುಣಿದಾಡಬೇಕು
ನಡೆ(ಲಿ)ದಾಡಬೇಕೆಂದೆನಿಸಿದಾಗ
ತಾತೆ-ತಾತೆ ಎಂಬ ಧ್ವನಿ
ನನ್ನ ಸ್ವಾಗತಿಸುತ್ತಿತ್ತು
ಚಿಕ್ಕ ಚೆಂಡು, ಪುಟ್ಟ ಕಾರು
ಗಿಜಿ-ಗಿಜಿ ಬ್ಯಾಟು
ನನಗಿಂತ ಮುಂಚೆಯೇ
ಅಂಗಳ ತಲುಪುವವರು.
ಕುಟ್ಟಿ-ದೊಣ್ಣೆ, ಬ್ಯಾಟ್-ಬಾಲ್ ಆಡುವಷ್ಟಾಗುವಾಗ
ಅಂಗಳ ಪೂರ್ತಿ ವಿಕೆಟಿನದ್ದೇ ತೂತು...
(ದಣಿವಾದಾಗ ಮಾವಿನ ಮಡಿಲು
ಹಾಯಾಗಿಸುತ್ತಿತ್ತು)
ಪರ್ಯಾಯ ದ್ವೀಪದಂತೆ
ಸುತ್ತುವರಿದ ಮನೆ
ಅಂಗಳವ ತಡೆವ (ಕಿರಣಗಳಿಂದ)
ಕಾವಲುಗಾರನಾಗಿತ್ತು
ಗೋಳಿಯಾಟ, ತಂದೆ-ತಾಯಿಯಾಟ
ಅದರೊಂದಿಗೆ ಊಟ - (ಹೀಗಿರುವಾಗ)
ಅಡುಗೆ ಬಿಸಲಿಯೂ
ಅಂಗಳದಲ್ಲಿ ಮೂರು ಕಲ್ಲುಗಳ ಮೇಲಿತ್ತು.
ನೆಲಪೂಚೆಯ ಹುಡುಕುವ ಭರದಲ್ಲಿ
ಮೂಲೆಯಲ್ಲಿ ಕೂತ ಇಡುಸೂಡಿ
ಸೋಮಾಲಿಯನ್ನರಂತೆ ತೆಳ್ಳಗಾಗುತ್ತಿತ್ತು..
"ಹೇ ರಹೀಮ್" ಎಂದು ಕರೆಯುತ್ತಾ
ನೆರೆಯ ರಾಮನೂ -ಆಡಲೆಂದು
ಥೋಮಸ್'ನೊಂದಿಗೆ ಬರುವಾಗ
ವಾರಕ್ಕೊಮ್ಮೆ ತರುವ ಚಾಕಲೇಟು ಚೀಲ
ತೂತಾದ ಮಡಕೆಯಂತೆ ಅಂಗಳದಲ್ಲಿ ಎಸೆಯಲ್ಪಡುತ್ತಿತ್ತು.
ನಿದ್ದೆಗೆ ಮಾತ್ರ ಮೀಸಲಾದ ಮನೆ
ಊಟ, ಆಟ, ಮನೆಪಾಠ
ಎಲ್ಲದಕ್ಕೂ ವೇದಿಕೆಯಾಗಿದ್ದ ಅಂಗಳವು
ಅಜ್ಜಿಯಿಂದ ವರ್ಷಕ್ಕೆ 365
ದಿನಗಳೆಂಬ ಪಾಠ ಕಲಿಸಿತ್ತು...
ಇತೀ
ಶಾಹಿದ್, ಉಪ್ಪಿನಂಗಡಿ
- ಶಾಹಿದ್ ಉಪ್ಪಿನಂಗಡಿ
26 Oct 2016, 03:10 pm
ಬಯಕೆಗಳು
ಚಿಗುರೊಡೆಯಲು
ಹಾತೊರೆವ ಮನಸ್ಸುಗಳು
ನಿದ್ದೆಯಲ್ಲೂ
ಬಯಕೆಗಳ
ಬಡಿದೇಳಿಸುವ ಕನಸುಗಳು
ಸಫಲತೆಯ
ಸೂಚನೆಗೆ
ಕಾದುಕುಳಿತ ಸಮಯಗಳು
ಈಡೇರುವ
ತವಕದಲಿ
ಮರೆತುಬಿಟ್ಟ ಪರಿಸರಗಳು
ನೆನೆಯುತ್ತಾ
ಸವಿಯುತ್ತಾ
ಊಟ ಬಿಟ್ಟ ರಾತ್ರಿಗಳು
ನನಸಾಗದ
ನಯನದಿಂದ
ಉದುರಿ ಬಿದ್ದ ಹನಿಗಳು
ಬಚ್ಚಿಟ್ಟ
ಮನದಾಳವ
ಬಿಚ್ಚಿಟ್ಟ ಕವಿಗಳು
ಇತೀ
ಶಾಹಿದ್ ಉಪ್ಪಿನಂಗಡಿ
- ಶಾಹಿದ್ ಉಪ್ಪಿನಂಗಡಿ
26 Oct 2016, 11:34 am
ಬರುವಿ ಎಂದಿಯಲ್ಲೋ ನೀನು
ಬರದಿ ಹೋದಿ ಯಾಕ
ಕಾದು ಕುಂತಿನಲ್ಲೋ ನಾನು
ಬರಂಗಿಲ್ಲ ನೀನು!!
ನನ್ನ ಪಿರುತಿ ತಿಳಿಯಂಗಿಲ್ಲ
ಬಿಟ್ಟು ದೂರ ಹೊಂಟಿ
ಬ್ಯಾರಿ ಹೆಣ್ಣು ಸಿಕ್ಕವಳೇನು
ಅದಕಾ ನನ್ನ ತೊರೆದಿ!!
ಹುಚ್ಚು ಮನಸು ಹೇಳ್ತಾದಂತ
ಬಿಟ್ಟು ಹೊಂಟಿಯಲ್ಲೋ
ಕೆಟ್ಟ ಜನ್ರ ಸಾವಾಸ ನಿನ್ನ
ಮೆಟ್ಟಿ ಕುಂತೈತಲ್ಲೋ!!
ಬಿಟ್ಟು ಬಾರ ನನ್ನ ರಾಜಾ
ನಾ ಕಾದು ಕುಂತಿನಲ್ಲೋ
ನೆಚ್ಚಿ ಬಾರ ನನ್ನ ಧೀರ
ನಾ ನಿನ್ನ ತೊರೆಯಂಗಿಲ್ಲ!!
- ಪಿ.ಜಿ.ಜ್ಯೋತಿ
22 Oct 2016, 02:56 pm
ಕಂಡಾಗ ಕಣ್ಣಲ್ಲಿ ಕರೆದು
ಕಾಣದೆ ಇದ್ದಾಗ ಮನದಲ್ಲಿ ನೆನೆದು
ಕಂಡರು ಕರೆಯದೆ ಇರುವ
ನಾಚುವ ಈ ನಿನ್ನ ವರ್ತನೆ
ಗೋತ್ತಿದ್ದು ಗೋತ್ತಿಲ್ಲದ ಹಾಗೆ
ನಟಿಸುವ ಈ ನಿನ್ನ ಗುಣ
ಸ್ನೇಹಾನಾ???? ಪ್ರೀತಿನಾ????
ಶ್ರೀವತ್ಸ ಪಾಟೀಲ್
- srivatsa patil
22 Oct 2016, 02:43 pm
ಬಾಂದಳದ ಚೆಲುವಲ್ಲಿ
ನೂರು ಆಸೆಯ ಚೆಲ್ಲಿ
ಕವಲುಗಳ ಕಡೆಗೋಲ
ಕವನ ಬರೆದೆ !!
ಬಾರದಿರೋ ನೆನಪಲ್ಲಿ
ಬರುತಿರುವ ಕನಸಲ್ಲಿ
ನಿನ್ನ ಹುಡುಕುವ ದಾರಿ
ನಾನು ಕಂಡೆ !!
ಕೋಗಿಲೆಯ ಧನಿ ಕೇಳಿ
ಕೋಮಲದ ಮನ ಹೇಳಿ
ನಿನ್ನ ನೆನೆಯದ ಕ್ಷಣವು
ಇನ್ನು ಉಂಟೆ !!
ಆ ನೀಲಿ ಬಾನಿನಲಿ
ಮಿನುಗು ನಕ್ಷತ್ರಗಳ
ಮಧ್ಯ ಹೊಳೆಯುವ
ಚಂದ್ರ ಎಲ್ಲಿಗೆ ಹೊಂಟೆ!!
ಓ ಹೂವೆ ನಿನ್ನ ನಗುವೆ
ನನ್ನ ಮುದ್ದು ಗೆಳೆತನವೆ
ನಿನ್ನ ಸ್ಪರ್ಷಕೆ
ನಾನು ಮನಸೋತೆ !!
- ಪಿ.ಜಿ.ಜ್ಯೋತಿ
22 Oct 2016, 09:23 am
ಈ ಜಗದಲ್ಲಿ ನೆಲೆಸಲಿ ಶಾಂತಿ
ಬಾ ಕರುಣೆಯನು ತೋರಿಸು ದೇವಾ!!
ಭೂವಿ ನಡುಗೋ ಹೊತ್ತು
ಜಗ ಮುಳುಗೋ ಹೊತ್ತು !!
ಇಲ್ಲಿ ಹಸಿ ಹಸಿರು ಬೆಳೆಗಳ ನಾಶ
ಹಿಡಿದಿಹುದು ನಮ್ಮನ್ನು ಪಾಶ!!
ಇಲ್ಲಿ ವಿಧ ವಿಧದಿ ಬೆಳೆದಂತ ಕ್ರಾಂತಿ
ನಮ್ಮ ಬದುಕಲ್ಲಿ ದಿನವೂ ಅಶಾಂತಿ!!
ಕಡು ಬಡವರಿಗೆ ಇಲ್ಲ ನೆಲೆಯು
ಸಿರಿವಂತರಿಗೇನಲ್ಲ ಬೆಲೆಯು!!
ಬೀಡು ಬಿಟ್ಟಿರುವ ಜಾತಿ ವಿಜಾತಿ
ದ್ವೇಷ ಬೆಳೆಸಿಹುದು ನೀತಿಯ ಅಳಿಸಿ!!
ಭೇದ ಭಾವಕ್ಕೆ ಯಾಕಿಲ್ಲ ಕೊನೆಯು
ಪ್ರೀತಿ ಮಮತೆಗಾಗಿರಬೇಕು ಮನೆಯು!!
ಹೊತ್ತ ಭೂ ತಾಯಿಗೆ ತಕ್ಕ ಮಗನಾಗಿ ಬಾ
ಸಲಹೋ ಈ ನಾಡಿಗೆ ತಕ್ಕ ಪ್ರಜೆಯಾಗಿ ಬಾ!!
- ಪಿ.ಜಿ.ಜ್ಯೋತಿ
22 Oct 2016, 09:02 am