Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಾಯುತ್ತೇನೆ ನಾನು..

ಹೂವು ನನ್ನತ್ತ ತಿರುಗ ಬಾರದೆ ಎಂದು,
ತಿರುಗುವ ಮನಸು ಹೂವಿಗೆ ಇಲ್ಲವಾದರೂ
ಗಾಳಿಯ ನೆವಕ್ಕಾದರೂ ಕೊಂಚ
ಹೊರಳ ಬಾರದೆ ಇತ್ತ ?

ಕಣ್ಣೆತ್ತಿ ನೋಡದ ಹೂವಿನ ಸುತ್ತ
ಗಿರಕಿ ಹೊಡೆವ ದುಂಬಿಗಳ ದಂಡು
ಚಿತ್ತ ಚಂಚಲವಾಗಿಲ್ಲ ಕಿಂಚಿತ್ತೂ
ಹೂವಿಗೆ ನೂರು ದುಂಬಿಗಳ ಕಂಡು

ನೂರೊಳಗೊಬ್ಬ ನಾನಾಗಿ
ಹೂವ ಬನದೊಳಗೆ
ಬರಿಗೈಲಿ ಕಳೆದು ಹೋಗಿ
ಹೂವ ಕಂಪಲ್ಲೇ ಹೃದಯ ನಿಂತು ಹೋಯ್ತಲ್ಲೇ

ತಿರುಗಲಿಲ್ಲ ಹೂವು
ದುಂಬಿಯ ಹೆಣ ಕಂಡೂ
ಕದಡಲಿಲ್ಲ ಮನ
ಮುತ್ತಿಕೊಂಡರೂ ದುಂಬಿಗಳ ಹಿಂಡು !

- ಶ್ರೀಗೋ.

02 Aug 2016, 11:57 am

ಮಂದಾರ

ಹಸಿರು..ಉಸಿರ ನಡುವೆ
ಕಂಗೊಳಿಸುತಿದೆ
ನಳನಳಸುತಿದೆ..ಪ್ರಕೃತಿ
ತಂಪಾದ ತಿಳಿಗಾಳಿ
ಘಮ್ಮೆನುವ..ಹೂ ಪಕಳೆ
ಮೆಲುದನಿಯ..ಗಿಳಿ.ಮೈನಾಗಳ
ನಿನಾದದೊಳು..
ಮೆಲಕು ಹಾಕಿವೆ ಮನಸುಗಳು
ಕಣ್ ರೆಪ್ಪೆ ಮುಚ್ಚದಲೆ
ಹೊಯ್ದಾಡುತಿವೆ...
ಕೂಡಿಟ್ಟ ಕನಸುಗಳು..
ಕರದಲ್ಲಿ ಕರವಿಟ್ಟು
ಅಂದು ನಾವಿಟ್ಟ ಸಪ್ತಪದಿ
ನಾ ಮುಂದೆ ನೀ ಹಿಂದೆ
ಇಂದು ನೀ ನಡೆಸುತಿಹೆ ಎನ್ನ
ಅದರರ್ಥ.ಅರ್ಧಾಂಗಿ..
ಏಳು ಬಣ್ಣಗಳ ಸಮ್ಮಿಲನದೆ
ಹೊರ ಹೊಮ್ಮುತಿದೆ ಸದಾ
ನಮ್ಮೊಲವ ಮಂದಾರ..

- a.n.k.murthy

02 Aug 2016, 11:55 am

ಮಗಳು

ಮಗಳ ಮೊದಲ ಮಾತು ಅದು ಹೂ ಮಲ್ಲಿಗೆ ...
ಕೇಳಲು ಕಾದಿಹ ಕಿವಿಗಳಲಿ ನೀ ಹೇಳು ತುಸು ಮೆಲ್ಲಗೆ .....

ಮಲಗುವ ಮುನ್ನ ಮಾಡುವ ಅವಳ ರಂಪಾಟ ಅದು ಬರೀ ಹುಸಿ ಕೋಪದ ಪರಿಪಾಠ....
ಅವಳ ತುಂಟಾಟದ ಓಟ ಅದು ನಮಗೊಲವಿನ ಪ್ರೀತಿಪಾಠ....

ಆಟವ ಆಡಿಸಿ ಪಾಠವ ಕಲಿಸಿ ಮುದ್ದಿಸುವ ಮಗುವಿಗೆ ಶುಭರಾತ್ರಿಯ ಸಿಹಿಮುತ್ತುಗಳು...

ಮಗುವಿನ ನಗುವಲಿ ನೋವೆಲ್ಲಾ ಮರೆಯುವ ಮಡದಿಗೆ ಮನಸಾರೆ ಜೋಡಿಮುತ್ತುಗಳು....

- shashidhar

02 Aug 2016, 10:03 am

ಗೆಳತಿ

ಹಣೆಗೆ ಕುಂಕುಮ ಚೆಂದ
ಮೂಗಿಗೆ ಮೂಗುತಿ ಚೆಂದ
ಕೈಗೆ ಬಳೆ ಚೆಂದ
ಕಾಲಿಗೆ ಕಾಲುಂಗುರ ಚೆಂದ
ಗೆಳತಿ
ನನಗೆ ನೀನು ಚೆಂದ ನಿಂಗೂ

- anand

02 Aug 2016, 08:10 am

ಜೀವನ

ಕತ್ತಲ ಅನುಭವ ತಿಳಿಯಲು ಕಣ್ಣು ಮುಚ್ಚಿದರೆ ಸಾಕು ,,,ಕತ್ತಲಾಗಬೇಕಿಲ್ಲ

ಬೆತ್ತಲ ಅನುಭವ ತಿಳಿಯಲು ಮಾನ ಹೋದರೆ
ಸಾಕು,,,,ಬಟ್ಟೆ ಬಿಚ್ಚಬೇಕಿಲ್ಲ.

- simha shivu

31 Jul 2016, 06:49 pm

ತೆರೆದ ಹೃದಯ....

ತೆರೆದ ಮನಸ ಹೂವಿಗೆ
ಸೂರ್ಯನೇ ಇಷ್ಟವೇಕೆ?
ಪ್ರೀತಿ ತೋರುತ್ತಾ ಸುಟ್ಟರು

ನಗುವ ಚೆಲ್ಲಿ ಮೊಗದಲಿ
ಹೊರಳಿಸುತ್ತ ಮೆಲ್ಲಗೆ
ಪೂರ್ವದಿ೦ದ ಪಶ್ಚಿಮದೆಡೆಗೆ

ಮುಳುಗೊವರೆಗು ಮರುಗದೆ
ಕೊನೆಗೆ ಕೊರಗಿ ಉಸಿರೆಳೆದ
ನಿನ್ನ ಪ್ರೀತಿಗೆ ಸಿಕ್ಕ ಫಲವೇನೆ ಹೂವೆ?
-

- ajith giliyar

31 Jul 2016, 03:08 pm

ಸುಪ್ರಭಾತ

ಮುಂಜಾನೆಯ ಶುಭಕಾಲದಿ
ಶುಭವಾಗಲಿ ನಮಗೆಲ್ಲಾ
ಹಿಂದಿನ ಕಹಿಯು ಮರೆತು
ಸಿಹಿ ತುಂಬಲಿ ಬಾಳೆಲ್ಲಾ.

- ishak

31 Jul 2016, 06:36 am

ನಂಬಿಕೆ.......

ಮರೆತು ಹೋದ
ದಾರಿಯೊಳಗೆ
ಕರೆದು ಹೋದ ನೆನಪುಗಳಿಗೆ
ಹತ್ತಿರ ನಿನ್ನ ಬಳಿಯಿದೆ ಈ
ಪ್ರಶ್ನೆಗೆ ಉತ್ತರ
ಕರೆದ ಕನಸಿನ ಆಸೆಯೊಳಗೆ
ಕಣ್ಣ ಬಿಂಬವು ನಿನ್ನ ಕಡೆಗೆ
ಹತ್ತಿರ
ಸಿಗಲೇಬೇಕು ನನಗುತ್ತರ
ಈ ಹಾಡು ನನ್ನನ್ನು ನನಗೆ
ಪರಿಚಯಿಸಿದಂತಿದೆ
ನಿಮಗಿಷ್ಟ ವಾಗಿದೆ
ಎಂಬುದು ನನ್ನ ನಂಬಿಕೆ...

- ajith giliyar

30 Jul 2016, 10:52 pm

ಪ್ರೀತಿ

ಕಾಣದ ಗೆಳತಿಯೆ ಕೇಳೆ ನಿನಗಾಗಿ ಬರೆದಿರುವೆ ಈ ಕವನ
ಕಾಣೆನೆ೦ಬ ಕಾರಣಕ್ಕೆ ಮರೆಯದಿರು ನೀ ನನ್ನ

ಮನಬಿಚ್ಚಿ ಹೇಳುತೀನಿ ಕಿವಿಗೊಟ್ಟು ಕೇಳುತೀಯ
ನಾನೊಬ್ಬ ಭಾವಜೀವಿ ಜೊತೆ-ಜೊತೆಗೆ ಸ್ನೇಹ ಜೀವಿ

ಭಾವನೆಗಳ ಲೋಕದಲಿ ಕನಸಿನ ಕಾಮನಬಿಲ್ಲಿನ ಮೇಲೆ
ನನ್ನ ಬದುಕು
ನೀ ಸ್ನೇಹ ಜೀವಿಯಾದರೆ ಕಳಿಸೆನ್ನ ಲೋಕಕೊ೦ದು
ನಿನ್ನ ನೆನಪು

ಮನಸು ಬಿಚ್ಚಿ ನಾ ನುಡಿವೆ ನನ್ನ ಭಾವನೆ ನೂರು
ಸವಿನೆನಪಲ್ಲೆ ಕಟ್ಟಿಕೊಡುವೆ ಸ್ನೇಹವೆ೦ಬ ತೇರು

ತೆರೆದ ಹೃದಯದಲಿ ನಿನಗಾಗಿ ಬರೆದಿರುವೆ ಈ ಓಲೆ
ಮನಸಿಟ್ಟು ಪ್ರೀತಿಯಿ೦ದ ನೀನಿದನು ಓದು ಬಾಲೆ

ನಿನಗಿಷ್ಟವಾದರೆ ಈ ಕವನ, ನಿನಗಿದೊ ನನ್ನ ಕೋಟಿ ನಮನ...!

- kishu

30 Jul 2016, 01:38 pm

ಚುಕ್ಕೆಗಳು

ನಾವೇನು ರವಿ- ಚಂದ್ರರಲ್ಲ
ನೀಲಿ ಬಾನಿನ ಚುಕ್ಕೆಗಳು,
ಸಮಯ ಬಂದಾಗ
ಚಲಿಸುವವರಲ್ಲ,ವೇಷ ಮರೆಸುವರಲ್ಲ,
ಸಮಯವಾದಾಗ ಒಂದೇಡೆ ನಿಲ್ಲುವವರು.
ನಾವೇನು ಮುಳುಗಿ ಏಳುವವರಲ್ಲ,
ನಿಂತಲ್ಲೇ ನಿಂತು.....
ಬೆಳಕಿಗೆ ಬಾರದಿಹ
ನತದ್ಱಷ್ಟರು,ಭಾಗ್ಯಹೀನರು.
ಚಂದ್ರನಿಲ್ಲದಾಗ ಒಗ್ಗೂಡಿ,
ಮಂದಬೆಳಕನ್ನು ನೀಡುವ
ಅಂಧಕಾರದ ಬಿಂದುಗಳು.
ಮೋಡಬಂದಾಗ ಮರೆಯಾಗಿ
ಬಯಲಾದಾಗ ಹೋಳೆಯುವ
ಕಾಳ-ನೀಲ ಬಾನಿನ ಚುಕ್ಕೆಗಳು.

- ಅರುಣಕುಮಾರ ಮ ಜೇವರಗಿ

30 Jul 2016, 01:19 pm