Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೀನೆ ಇರದಿದ್ದ ಮೇಲೆ

ಯಾಕಾದ್ರು ಉಳಿಸಿದ್ದಿ ಈ ಜೀವ ಇನ್ನು
ದೆೇವ್ರೆ ಈ ಆಟ ನಿನ್ನದೇನು
ಗೊತ್ತಿಲ್ಲದೆ ನೀನು ಮರೆಯಾಗಿರುವೆ
ಈ ಪ್ರೀತಿಯ ಹೊಡೆದಾಟದ ನಡುವೆ
ಹೆೇಗೆ ಮರೆಯಲಿ ಅವಳ ನೆನಪು
ರ್ಹದಯ ನಾಟಿದೆ ಕಣ್ಣಾ ಹೊಳಪು

- dinesha k y

30 Jul 2016, 06:37 am

ಬಾಸು೦ಡೆ ಕನಸು..

ತಿರುಕನ ಕನಸು ಕ೦ಡೆ
ನಿನ್ನೆ ಕ೦ಡ ಹುಡುಗಿಗಾಗಿ
ಕನಸಲ್ಲೆ ಕೊಟ್ಟಳು
ಬಾರು ಬೀಳುವಾಗೆ ಬಾಸು೦ಡೆ
ನಾನು ಎಲ್ಲಿ ನೋಡಿರದ
ವೀರ ಮಹಿಳೆ ಎ೦ದುಕೊ೦ಡೆ
ಮತ್ತೊ೦ದು ಹುಡುಗಿಯ ಕನಸು ಕಾಣದೇ
ಮುಚ್ಚಿಕೊ೦ಡು ಬಿದುಕೊ೦ಡೆ...!

- ವಲ್ಲಭ..

30 Jul 2016, 12:03 pm

ಕೈ ತಪ್ಪಿ ಹೋದ ಪ್ರೀತಿ

ಗೆಳತಿ ನೀನು ಕೂಗುವಾಗ
ಸಹಿಸಲಿಕ್ಕೆ ಆಗ್ತ ಇಲ್ಲ

ಒಟ್ಟಿಗೆ ಕೂತು ಕೂಗುವಾ

ಆ ಅವಕಾಶ ನನಗೆ ಇಲ್ಲ

ಸಮದ್ ಪುತ್ತೂರು

- ಸಮದ್ ಪುತ್ತೂರು

28 Jul 2016, 03:08 pm

ನೀ ಸನಿಹ ಬಾರದೆ ಹೋದರೆ

ಒಡಲ ನೋವಿಗೆ ಸಂತ್ವಾನ ಇಲ್ಲದೆ
ನಾ ಸೋತು ಹೋಗುವ ಮುನ್ನ
ಕನಸು ಕಲ್ಪನೆಗಳ ನಡುವೆ
ನಾ ಬೆಂದು ಹೋಗುವ ಮುನ್ನ
ಸಾವಿರಾರು ಭಗ್ನ ಪ್ರೇಮಿಗಳಲ್ಲಿ
ನಾನೂಬ್ಬನಗುವ ಮುನ್ನ
ನೀನಿಲ್ಲದೆ ಬರುವ ನಾಳೆಗಳ ನೆನೆದು
ಅತ್ತು ಅತ್ತು ನಿದ್ದೆ ಬರುವ ಮುನ್ನ
ನೀನೊಮ್ಮೆ ಬರಬಾರದೆ
ನನ್ನ ಸನಿಹ

- ಸನಿಹ

27 Jul 2016, 05:09 pm

ಪ್ರೇಮ

ಕಣ್ಣಲ್ಲಿ ಕಣ್ಣಗಿ ಕಾವಲು
ನನಗೆ ನನ್ನ ಗೆಳಯ..

- Mamatha

27 Jul 2016, 03:52 pm

ಮರೆಯಾದವಳು

ಸದ್ದಿಲ್ಲದೆ ಮರೆಯಾಗಿ ಸುದ್ದಿ ಮಾಡಿದೆ
ಆ ಸುದ್ದಿಯಲ್ಲು ನಿನ್ನ ನೆನಪಾಗಿದೆ
ಸುಟ್ಟು ಮಣ್ಣಿಗೆ ಮಣ್ಣಾದರು ನೆನಪಳಿಸದು
ಅವಳ ನೆನಪಲ್ಲೆ ಜೀವ ಬಿಡೊ ಈ ಜೀವ ನನ್ನದು.

- dinesha k y

27 Jul 2016, 06:46 am

ಅವಳಿರದೆ

ನನ್ನ ಬಯಕೆಯ ಹೂಗಳು
ಬತ್ತಿ ಹೋಗಿದೆ
ಇರುಳು ಮುಗಿಯದೆ ಹಗಲು ಮುಡದೆ
ಈ ಜೀವನ ಬೆೇಡವಾಗಿದೆ.

- dinesha k y

27 Jul 2016, 06:02 am

ಕನಸಿನ ಗಿಣಿ.

ಓ ನನ್ನ ಕನಸಿನ ರಾಣಿ
ನೀನಾಗ ಬೇಡ ಬೇರೇಯವರ ಏಣಿ
ಒಂದು ವೇಳೇಯಾದರೆ....
ಮುಳುಗುವುದು ನನ್ನ ಪ್ರೀತಿಯ ದೋಣಿ..!

- ವಲ್ಲಭ..

27 Jul 2016, 10:00 am

ಸನಿಹ

ನಿ ಬಿಟ್ಟು ಹೋದ
ಸಾವಿರಾರು ಸವಿ ನೆನಪುಗಳು
ಜೊತೆಯಲ್ಲಿ ಇದ್ದರೂ
ನಾ ಇನ್ನು ಏಕಾಂಗಿಯಾಗಿರುವೆ

- ಸನಿಹ

27 Jul 2016, 09:44 am

ತಾಯಿ.

ತಾಯಿ ನಾನು ನಿನ್ನ ತೃಣಕೆ
ಸಮಾನಾಗಿರುವೆ ನಿನ್ನ ಪಾದಗಳಿಗೆ.

ತಾಯಿ ನಾನು ನಿನ್ನ ರೆಪೆಗಳಾಗಿರುವೆ
ನಿನ್ನ ಕಣ್ಣುಗಳಿಗೆ..

ತಾಯಿ ನಾನು ನಿನ್ನ ಕೂಸಾಗಿರುವೆ
ನಿನ್ನೆಲ್ಲಾ ಕನಸುಗಳಿಗೆ..

ತಾಯಿ ನಾನು ವೀರನಾಗುವೆ
ನಿನ್ನ ಮಡಲಿಗೆ..

ತಾಯಿ ನಾನು ನಿನಗೆ ಮಗನಾಗಿರುವೆ
ಈ ಜನ್ಮದವರಿಗೆ..

ತಾಯಿ ನೀನಾಗು ನನಗೆ ಮಾತೃದೇವತೆ
ಏಳೇಳು ಜನ್ಮದವರೆಗೆ..!

- ವಲ್ಲಭ..

26 Jul 2016, 09:52 am