Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೊಂದಿಹಳು ಅಮ್ಮ

ನೋಯಿಸಿದೆನು ನಾ
ನೋಯಿಸಿದೆನು ನಾ
ನನ್ನ ಅಮ್ಮನ ಮನವ
ನೋಯಿಸಿದೆನು !!

ಅರಿವಿದ್ದು ಮಾಡಲಿಲ್ಲ
ಅರಿಯದೇ ಮಾಡಿದೆನಲ್ಲಾ
ಆದರೂ ಮಾಡಿದ ತಪ್ಪಿಗೆ
ಶಿಕ್ಷೆ ಕೊಡಲಿಲ್ಲ ಅಮ್ಮ !!

ತಪ್ಪು ತಪ್ಪೆಂದು ತಿಳಿಯದೆ
ತಪ್ಪು ಮಾಡಿದೆನಲ್ಲಾ
ತಪ್ಪುಸರಿಯೆಂದು ತಿಳಿದು
ತಪ್ಪಾಗಿ ಹೋಯಿತಲ್ಲಾ!!

ನೊಂದಿಹಳು ನನ್ನ ಅಮ್ಮ
ನನ್ನ ಪ್ರೀತಿಯ ಅಮ್ಮ
ನೋಯಿಸಿದೆನು ನಾ
ನನ್ನ ಅಮ್ಮನ ಮನವ!!

ಅಮ್ಮನ ಪ್ರೀತಿಗೆ
ಕೊನೆ ಎಲ್ಲಿದೆ ಹೇಳು
ಆ ಪ್ರೀತಿಗೆ ಸಾಟಿ
ಯಾವುದಿದೆ ನೀ ಹೇಳು!!

- ಪಿ.ಜಿ.ಜ್ಯೋತಿ

17 Oct 2016, 09:43 am

ಸುಂದರ ಕನಸು

ಸೃಷ್ಟಿಯ ಸೊಬಗಿನ
ಸುಂದರ ಲೋಕದ
ಸುಂದರ ಕನಸೊಂದು!!

ಕಳೆ ಅಲ್ಲದಿಹ
ಕಾಣಲಾಗದ
ಸೊಬಗಿನ ಕಲ್ಪನೆ ಇದು!!

ಮರೆತರು ಮರೆಯದ
ಸುಂದರ ನೋಟ
ಆ ಕನಸಲ್ಲಿಹುದು!!

ಸ್ವರ್ಗಕೂ ಸುಂದರ
ಸವೆಯದ ಕನಸು
ಸವಿ ಸವಿಯಾಗಿಹುದು!!

ಸವಿನಯ ಮನದಲಿ
ವಿನಯದಿಂದುರುವ
ವಿಶ್ವಾಸದ ಕನಸು ನನ್ನದು!!

- ಪಿ.ಜಿ.ಜ್ಯೋತಿ

17 Oct 2016, 09:29 am

ನೀನು....

ಪಯಣದ ಹಾದಿಯಲಿ ಅಪರಿಚಿತೆಯಾಗಿ ಸಿಕ್ಕವಳು ನೀನು ...
ಕೆಂಡ ಸಂಪಿಗೆಯಂತೆ ಕಣ್ಣ ಮಿಣುಕಿಸಿದವಳು ನೀನು .....
ಮನದಲ್ಲಿ ಹೊಸ ಆಸೆ ಮಿಟಿಸಿದವಳು ನೀನು
ಭಾವನೆಯ ಬದುಕನ್ನು ಸೃಷ್ಟಿಸಿದವಳು ನೀನು.....
ಮೌನಿ ನಾನಾದಾಗ ಮೆರೆಯಾದವಳು ನೀನು ನೀನು ....!!!!!!

- ಆನಂದ.ಎಮ್.ಹೆಚ್

17 Oct 2016, 08:53 am

ಪ್ರೇಮಿ

ನಿನಗೆ ಗೊತ್ತಿಲ್ಲವೇ ಗೆಳೆಯ
ಪ್ರೇಮಿಯಾದವಳನ್ನು
ಇಸ್ಟು‌‌ ಕಾಯಿಸಬಾರದೆಂದು
ಆದರೂ ಯಾಕೆ ಹೀಗೆ!!

ಕಾಡಿಸಿ ಪೀಡಿಸಿ
ಮೋಹಿಸಿ ಮುದ್ದಿಸುತ್ತಿದ್ದೆ
ಇಂದು ಏನಾಗಿದೆ ನಿನಗೆ
ಯಾಕೆ ಈ ಅಂತರ!!

ನಾ ಎಷ್ಟೇ ಕೂಗಿದರೂ
ಕೇಳದಾಯಿತೆ ನಿನಗೆ
ಎಷ್ಟೇ ಅಂಗಲಾಚಿದರೂ
ನನ್ನ ಸನಿಹ ಬೇಡವಾಯಿತೆ!!

ಮತ್ತೆ ಮತ್ತೆ ಸುಳ್ಳಿನ
ಭರವಸೆ ನೀಡಿ
ಏಕೆ ಮೋಸಗೊಳಿಸುತ್ತಿರುವೆ
ನನ್ನಿಂದ ದೂರವಾಗುವ ಇಚ್ಚೆಯೇ!!

- ಪಿ.ಜಿ.ಜ್ಯೋತಿ

16 Oct 2016, 06:36 pm

ಆಕೆ.....!!!

ನೂರಾರು ಬಯಕೆ ಕಟ್ಟಿಕೊಂಡಾಕೆ,
ಆಕೆ ನನ್ನಾಕೆ ನನ್ನ ಹೊತ್ತು ಹೆತ್ತಾಕೆ,
ಹತ್ತಾರು ಸುಖವ ತ್ಯಜಿಸಿದಾಕೆ,
ಆಕೆ ನನ್ನಾಕೆ ಅಮೃತವುಣಿಸಿದಾಕೆ,
ನೂರಾರು ಕಷ್ಟಗಳ ನುಂಗಿದಾಕೆ,
ಆಕೆ ನನ್ನಾಕೆ ಸಾಕಿ ಸಲುಹಿದಾಕೆ.
-ಸರ್ಪ

- sarpa

16 Oct 2016, 05:48 pm

ಹೇಳು ಗೆಳತಿ

ಯಾವ ಭಾವವ ಮೀಟೊ
ವೀಣೆಯಾಗಲಿ ನಾನು!!
ಯಾವ ನಾದವ ಸೇರೊ
ಸ್ವರವಾಗಲಿ ನಾನು !!
‌‌ಹೇಳು ಗೆಳತಿ ನೀ ಹೇಳು
ನನ್ನ ಬದುಕಿನ ಧಾಟಿ ಹೇಳು ನೀನು!!

ಸರಿಗಮದ ಅಂಚಿನ
ಭಾವ ಆಗಬೇಕೇನು !!
ಶೃತಿ ಲಯದ ಒಳಗಿನ
ರಾಘ ಆಗಲೇನು ‌‌ !!
ಹೇಳು ಗೆಳತಿ ನೀ ಹೇಳು
ನನ್ನ ಬದುಕಿನ ಧಾಟಿ ಹೇಳು ನೀನು!!

ತಾಳ ತಪ್ಪಿದ ಶೃತಿಯು
ನಾ ಆಗಲಾರೆನು !!
ದಾರಿ ತಪ್ಪಿದ ಜೀವ ಕೂಡ
ನಾ ಆಗಲಾರೆನು !!
ಹೇಳು ಗೆಳತಿ ನೀ ಹೇಳು
ನನ್ನ ಬದುಕಿನ ಧಾಟಿ ಹೇಳು ನೀನು!!

ಸಂಗೀತದ ಒಂದು
ಪಲ್ಲವಿಯು ನಾನು !!
ಅದರೊಳಡಗಿರುವ
ರಸ ಕಾವ್ಯವು ನಾನು !!
‌ ಈಗ ಹೇಳು ಗೆಳತಿ
ನನ್ನ ಬದುಕಿನ ಧಾಟಿಯನು ನೀನು!!

- ಪಿ.ಜಿ.ಜ್ಯೋತಿ

16 Oct 2016, 02:51 pm

ನಿದಿರೆಯ ಕನಸು

ಕಾಲೊಂದು ಜಾರಿ
ನಾ ಬಿದ್ದ ಮೇಲೆ
ಏಳೋದು ಹೇಗೆ
ಹೇಳು !!

ಪಾತಾಳವಂತೆ
ನಾ ಬಿದ್ದ ಜಾಗ
ಬರದಾದ
ನನ್ನ ಪಾಡು !!

ಹಸಿರಿಲ್ಲಿ ಕಾಣದು
ಬೆಳಕೇಕೆ ಬಾರದು
ಉಸಿರಾಡೋ ಗಾಳಿಯು
ಹೆಸರೀಗೂ ಬಾರದು!!

ಹಸಿವನ್ನು ನೀಗಲು
ಫಲವೊಂದು ಕಾಣದು
ನನ್ನ ನೆರಳೂ ಬಾರದ
ನಿದಿರೆಯ ಕನಸದು !!

- ಪಿ.ಜಿ.ಜ್ಯೋತಿ

16 Oct 2016, 02:26 pm

ನಾ ಎಂಥವಾ...!!

ಅವ ಹಾಗೆ...ಇವ ಹೀಗೆ
ಅವ ದುಷ್ಟ...ಇವ ಭ್ರಷ್ಟ
ಅವ ಸುಳ್ಳ... ಇವ ಕಳ್ಳ...
ಅವ ವಂಚಕ...ಇವ ನೀಚಕ
-ನೆಂದು ಬಗೆವ ನಾ ನೋಡೆನು
ನಾನೆಂತವನೆಂಬುದನು...

ಅವ ಕಪ್ಪು ...ನಾ ಬಿಳುಪು
ಅವ ಕೀಳು...ನಾ ಮೇಲು
ಅವ ಬಡವ...ನಾ ಒಡೆಯ
-ನೆಂದು ಬಗೆವ ನಾ ಮರೆತಿಹೆನು
ನಾಳೆಯ ವಿಧಿ ಆಟವ...

ಇತರರ ದೂರುತ... ನಿಂದಿಸುತ
ಮೋಸವ ಮಾಡುತ...ಮನ ನೋಯಿಸುತ
ತೃಪ್ತಿಯ ಕಾಣುವ ನಾ ಚಿಂತಿಸೆನು ಅನುಭವಿಸುವ
ಗಳಿಗೆಯಲಿ ಸಹಿಸಲಾಗುವುದೇ
ಇವುಗಳ ಕಾಟವ...

ಇತರರ ಕಂಡು ಉಪದೇಶಿಸುತ
ತಪ್ಪುಗಳ ವಿರುದ್ಧ ಧ್ವನಿಮೂಡಿಸುತ
ಅನ್ಯಾಯಗಳತ್ತ ಲೇಖನಿ ಬಳಸುತ
ಉತ್ತಮನಂತೆ ಇತರರ
ತಪ್ಪುಗಳ ಬರೆವ ಎನಗೆ
ಸಾಕಾದೀತೇ ಪುಟಗಳು
ಎನ್ನ ತಪ್ಪನು ತುಂಬಲು...

ಮನಬಂದಂತೆ ಬಳಸುವ ಎಲುಬಿಲ್ಲದ ಅಂಗವ...
ಬಿಗಿಹಿಡಿದು ನಿಯಂತ್ರಿಸದೆ
ಪಶ್ಚತಪಿಸಿ ಫಲವುಂಟೆ
ಸೋದರ...

- AsiddeeqN

16 Oct 2016, 01:02 pm

ದೂರಾದ ಗೆಳತಿ

ಗೆಳತಿ ನಿನ್ನ ಸ್ನೇಹ
ನನಗಾಗಿ ಅಲ್ಲವೇ
ಮನಸಲ್ಲಿ ನಿನ್ನ ಬಿಟ್ಟು
ಬೇರಾರು ಇಲ್ಲವೇ!!

ಈಗೇಕೆ ದೂರಾದೆ
ನನ್ನ ನೆನಪು ಬಾರದೇನೆ
ಗೆಳತಿ ನಿನ್ನ ಸ್ನೇಹ
ನನಗಾಗಿ ಅಲ್ಲವೇ!!

ಈ ನನ್ನ ಮನಸಿನಲ್ಲಿ
ನಿನ್ನ ಸ್ಮರಣೆ ಎಂದಿಗೂ
ಅದ ನೀನು ಅರಿಯದಾದೆ
ಏಕೋ ನಾನು ಕಾಣೆ!!

ನಾನಂದ ಒಂದು ಮಾತಿಂದ
ನೊಂದೆ ಅಂದೆ ಅಂದು
ನಿಜವಾದ ಸ್ನೇಹವೊಂದು
ಮರೆಸುವುದು ಎಲ್ಲ ನೋವ!!

ನನ್ನ ಸ್ನೇಹ ನಿನಗೇಕೆ
ದ್ರೋಹ ಎನಿಸಿತು
ನಾ ಪಾಪಿ ಅದಕಾಗಿ
ಈ ಸ್ನೇಹ ಉಳಿಸಲಿಲ್ಲ!!

ನೀ ಕೇಳೆ ನನ್ನ ಮಾತು
ಈ ಮುನಿಸು ನಿನಗೆ ತರುವಲ್ಲ
ಗೆಳತಿ ನಿನ್ನ ಸ್ನೇಹ
ನನಗಾಗಿ ಅಲ್ಲವೇ!!

- ಪಿ.ಜಿ.ಜ್ಯೋತಿ

15 Oct 2016, 08:45 pm

:ಅವಳು ಬರೀ ಅವಳಲ್ಲ:

ಉನ್ಮಾದ ಅವಳಿಗಾಗಿ ಮೀಸಲಿರೋ ಉಸಿರಾಟದ ಭಾವ ತೀರ್ವತೆ
ಅವಳು ಹೆಣ್ಣೋ ಇಲ್ಲ ನನ್ನ ಆವರಿಸಿರೋ ಭಾವವ
ಬದುಕುತ್ತಿರುವ ಬದುಕು ಶರಣು ಶರಣೆನ್ನುತ್ತಿದೆ
ಅವಳ ನೆನೆದಾಗ ಆಗೋ ಮನದ ಗೊಂದಲಕ್ಕೆ ಅವಳಲ್ಲದೆ ಯಾರ ದೂಷಿಸಲಿ
ಬೇಡವೇ ಬೇಡ ಅವಳ ಗೊಡವೆ
ಸುಮ್ಮನಿರು ಮನವೇ ಮಾಡದೆ ಅವಳ ಕನವರಿಕೆ
ಎರಡು ದಿನ ಸುಮ್ಮನಿದ್ದು ಕಂಡಾಗ ಮತ್ತೆ ಮತ್ತೇರುತ್ತೀಯ
ಅವಳ ಬಂಧನಗಳ ಗೋಜು ನೀ ಹೊರುವೆಯ
ಅವಳದ್ದೇ ಬಳಗ ಎದುರಿಸುವ ಕಲ್ಪನೆಯಾದರೂ ಬಲ್ಲೆಯ
ಯಾರೂ ಇಲ್ಲದ ಏಕಾಂತದಡಿ ಸುಮ್ಮನೆ ಕೂತುಬಿಡು
ಹುಚ್ಚು ಅಕ್ಷರಗಳೇ ನಾನು ಎಂಬುದು ಉಳಿದಿರುವಾಗ ನನ್ನಲ್ಲೇ ಅವಳು ಅಡಗಿರುವಾಗ ಅವಳ ಹೊರತು ಏಕಾಂಗಿತನ ನಾ ನನ್ನಾತ್ಮವ ತೊರೆದಾಗಲೆ..

- ದೀಪು....

14 Oct 2016, 10:13 pm