ಅವಳಿಗಾಗಿ ನಾನು ನನ್ನ ಸ್ವಚ್ಙವಾದ ಮನಸ್ಸನ್ನು ಕೊಟ್ಟೆ ಅವಳ ಅಲೆಯಾದ ಪ್ರೀತಿಯ ಸೆರೆ ಮನೆಯಲ್ಲಿ ಸಿಲುಕಿ
ಕಾಡು ಮೇಡು ಬೆಟ್ಟ ಗುಡ್ಡವನ್ನೆಲ್ಲ ಸುತ್ತಿದೆ
ಅವಳಿಗಾಗಿ ಬಂಧು ಬಳಗದವರಿಂದ ದೂರವಾದೆ
ಅವಳೇ ನನ್ನ ಜೀವ ಎಂದು ಅವಳನ್ನ ನನ್ನ ಹೃದಯದೊಳಗೆ ಮುತ್ತಿನಂತೆ ಮುಚ್ಚಿಟ್ಟು ಪೋಶಿಸಿದೆ
ನನ್ನ ನಂಬಿ ಬಂದಿರುವ ನನ್ನ ಹೂ ಮಲ್ಲಿಗೆಯನ್ನು ಬಾಡದಂತೆ ಇಡಬೇಕೆಂದು
ಹಗಲು ಇರುಳು ಎನ್ನದೆ ಮಣ್ಣು ಕಲ್ಲೆನ್ನದೆ
ಬಿಸಿಲಲ್ಲಿ ಮಳೆಯಲ್ಲಿ ನೊಂದು ಬೆಂದೆ
ಆದರೆ ಅವಳ ಆಸೆಯ ಗೋಪುರವನ್ನು
ಕಟ್ಟಿದ ಮೇಲೆ ನನ್ನ ಬಾಳಿನ ಪ್ರೀತಿಯ ಪ್ರೇಮಲೋಕವೇ ಕಳಚಿಹೋಯಿತು.
ನಾನೆಂಬುದು ನಾನಲ್ಲ ...
ನನ್ನದು ಎಂಬುದು ಅದೂ ನನ್ನದಲ್ಲ...
ಸ್ವಾರ್ಥ ಬದುಕಿನ ಜಂಜಾಟದಲ್ಲಿ ನಾ ಬಂಧಿಯಾಗಿರುವೆ...
ಬೆಳಕಲ್ಲಿ ಇದ್ದು ಕಾಣದ ಪ್ರೀತಿಗೆ ಹಂಬಲಿಸುತ್ತಿರುವೆ....
ನಾಳೆಯ ಬದುಕಿಗಾಗಿ ಇಂದು ಕಾಯುತ್ತಿರುವೆ....
ವಾಸ್ತವ ಗೊತ್ತಿದ್ದೂ ಭ್ರಮೆಯಲ್ಲಿ ಜೀವಿಸುತ್ತಿರುವೆ...
ಬಾಳೊಂದು ಸುಂದರ ಪಯಣ..
ಪ್ರೀತಿಸುವ ಹೃದಯ ಜೊತೆಗಿದ್ದರೆ ಬಾಳೆಷ್ಟು ಸುಂದರ ಅಲ್ವಾ...
ನನ್ನ ಕವಿತೆಗಳನ್ನು ನೀ ಓದಲೇಬೇಕೆಂದಲ್ಲ..
ಹೃದಯಕ್ಕೆ ತಟ್ಟದ್ದು ಮನಸ್ಸಿಗೆ ನಾಟಿತೇ...
ಬದುಕಿಗೊಂದು ಆಸರೆಬೇಕು,ಆ ಆಸರೆ ನೀನಾಗಿರಬೇಕು ಅಷ್ಟೇ ...
ಪದಗಳು ಹಾಡಯಿತು ಆದರೆ ಹಾಡು ಮನಸ್ಸಿಗೆ ನಾಟಲೇ ಇಲ್ಲ ..
ತಪ್ಪು ನನ್ನದಲ್ಲ....ಕ್ಷಮಿಸುವಂತ ವಿಶಾಲ ಹೃದಯ ನಿನಗಿಲ್ಲವಷ್ಟೆ...
ಹಕ್ಕಿಯಂತೆ ಹಾರಾಡುತ್ತಿದ್ದೆ.. ಆದರೆ ನೀ ರೆಕ್ಕೆಯನ್ನೇ ಮುರಿದುಬಿಟ್ಟೆ...
ಬೆಳ್ಳಿಯ ಕಾಲ್ಗೆಜ್ಜೆ,ಬಣ್ಣದ ಸೀರೆ....
ಉದ್ದನೆಯ ಜೆಡೆ ,ಕಿವಿಗೊಂದು ಓಲೆ.....
ಆಕೆ ನಡೆದರೆ ಸಾಕು....ದಾರಿಯುದ್ದಕ್ಕೂ ಹೂವಿನ ಮಳೆ ...
ಆಕೆ ನಕ್ಕರೆ ಸಾಕು ...ಚಂದ್ರನೂ ನಾಚಿ ನೀರಾಗುವನು....
ಕಣ್ಣಿಲ್ಲೇ ಎಲ್ಲರ ಹೃದಯ ಕದಿಯುವಳು...
ಏನೆಂದು ಬರೆಯಲಿ ಈ ಖಾಲಿ ಹಾಳೆಯಲಿ..
ಪದಗಳ ಪೋಣಿಸಿ ಬರೆಯೋಕೆ ನನಗೆ ಗೊತ್ತಿಲ್ಲ ...
ಬರೆಯಬೇಕೆಂದು ಹೊರಟಾಗ ನೆನಪಾಗುವುದು ನೀನು ಮಾತ್ರ ...
ನಾ ಏನೇ ಬರೆದರೂ ಅದು ನಿನಗೆ ಮಾತ್ರ ಅರ್ಥವಾಗಲ್ಲ...
ಮೋಡದ ಮರೆಯಲಿ ಚಂದ್ರ ಅಡಗಿದ ಹಾಗೆ ....
ಕಾಣದ ಈ ಪದಗಳ ಹಿಂದೆ ನನ್ನ ನೋವಿದೆ..
-ಇಂತಿ ನಿನ್ನ ಪ್ರೀತಿಯ
ಕಟ್ಲು ಮೇಲೆ ಕುಂತು ಕಾಫಿ ಕುಡಿವ ಅಪ್ಪ
ಕುಡುಗೋಲು ಹಿಡಿದು ಹಸಿಹುಲ್ಲು ಕೊಯ್ವ ಅವ್ವ
ಜಾರುವ ಪೇರಳೆ ಮರ ಹತ್ತಿ ಹಣ್ಣು ಕಿತ್ತು
ತಮ್ಮಗೆ ಕೊಡುವ ಅಣ್ಣ
ಎಲ್ಲಾ ನೆನಪು ಮಾತ್ರ ||
ಸುರಿವ ಮಳೆಯಲಿ ಹೂಟೀ ಹೊಡೆವ ಅಪ್ಪ
ಕಳಲೆ ಹೆಚ್ಚಿ ಸಾರು, ಪಲ್ಯ ಮಾಡುವ ಅವ್ವ
ಹೊಳೆ ಗೋರಿ ಹತ್ ಮೀನ್ ಹಿಡಿದು
ಹೊತ್ತು ತರೊ ಅಣ್ಣ
ಎಲ್ಲಾ ನೆನಪು ಮಾತ್ರ ||
ಉತ್ತು ಬಿತ್ತು ಕಣಜ ಕಟ್ಟಿ ತುತ್ತು ಕೊಡೋ ಅಪ್ಪ
ಹೊತ್ತು ಗೊತ್ತಿಲ್ಲದೆ ಹೊಗೆಯಲಿ ಸತ್ತು ಪ್ರೀತಿಯ ಕೂಳು ಬಡಿಸೊ ಅವ್ವ
ಎತ್ತಿಕೊಂಡು, ಹೊತ್ತುಕೊಂಡು ಪೇಟೆ ಸುತ್ತಿಸಿ
ಐಸ್ ಕ್ಯಾಂಡಿ ಚಾಕ್ಲೆಟ್ ಕೊಡಿಸಿ ನಗಿಸಿದ ಅಣ್ಣ
ಎಲ್ಲಾ ನೆನಪು ಮಾತ್ರ ||