Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

....... ಗೆಳೆತನ........

ಎಲ್ಲದಕ್ಕೂ ಮಿಗಿಲಾದ ಬಂಧನ
ಸಾಸಿವೆ ಕೋಪ ಸಾಗರದ ಸಂತೋಷಗಳ ಸಮ್ಮಿಲನ
ತರ್ಲೆ ತುಂಟಾಟದ ಸಮ್ಮಿಶ್ರಣ.......

ಆಗಸದಷ್ಟು ಆತ್ಮೀಯತೆ ಆಲಂಬನ
ತುಸು ತಾಸು ಮುನಿಸ ಸಿಹಿ ಸಿಂಚನ
ನೋವು ನಶಿಸೋ ಮಿತ್ರತ್ವ ನಯನ........

ಹೇಳದೆ ಅರ್ಥೈಸಿಕೊಳ್ಳುವ ಸದ್ಗುಣ
ಜೀವನದ ಪರಮಾಪ್ತ ಕ್ಷಣ
ಜಗದ ಸುಖ ಕೊಂಡುಕೊಳ್ಳೊ ಸಿರಿತನ......

ಬಾಳಿನ ಸುಂದರ ಯಾನ
ಭಾವನೆಗಳಿಗೆ ಸ್ಪಂದಿಸುವ ಮನ
ಎಷ್ಟು ಹೇಳಿದರು ಮುಗಿಯದ ಕಥನ......

ಮೇಘಲತೆಯ ಗೌಜಿನ ಗೆಳೆತನ
ಸದಾ ಸಂಭ್ರಮದ ಹೂರಣ
ಹೀಗೆ ಸ್ನೇಹದ ಕಡಲಲ್ಲಿ ನಲಿತ ಸಾಗೋಣ......

ಸ್ವಾತಿ S...........

- Swati S

26 Nov 2022, 12:16 am

ಪ್ರೀತಿಯ ಬಂಧ

ನನ್ನದೊಂದು ಪುಟ್ಟ ಹೃದಯ
ಅದರೊಳಗೆ ದೊಡ್ಡ ದೊಡ್ಡ ಕನಸುಗಳು,
ಆ ಕನಸುಗಳಿಗೆ ರೆಕ್ಕೆ ಕಟ್ಟಿ ಹಾರಿಸಿರುವೆ.
ನನ್ನ ಖುಷಿಯಲ್ಲಿ ತನ್ನ ಖುಷಿಯನ್ನು ಕಾಣುವೆ.
ನನ್ನ ಇಷ್ಟ ಕಷ್ಟಗಳನ್ನು ನಿನ್ನಮೇಲೆ ಹೇರಿರುವೆ.
ವರ್ಷಗಳು ಉರುಳಿದಂತೆ ನಮ್ಮಿಬ್ಬರ ಬಂಧ
ಬಿಗಿಯಾಗುತ್ತಿರಲೆಂದು ಆಶಿಸುವೆ.........

ಸ್ವಾತಿ S.............

- Swati S

25 Nov 2022, 11:47 pm

ಸ್ನೇಹ ಎಂದರೆ ಹೀಗೆ ಇರಬೇಕು...

ಸ್ನೇಹ ಎಂದರೆ ಯಾವಾಗಲೂ
ನಮ್ಮ ಕಾಲುಗಳಂತಿರಬೇಕು.
ಯಾವ ಕಾಲು ಮುಂದೆ ಹೋಗಲಿ,
ಅಥವಾ ಯಾವ ಕಾಲು ಹಿಂದೆ ಉಳಿಯಲಿ,
ಸಂಬಂಧದಲ್ಲಿ ಎಂದಿಗೂ
ಅಂತರ ಬರಬಾರದು, ಹೊಂದಾಣಿಕೆ
ಅಳಿಯದೆಯೇ ಉಳಿಯಬೇಕು...!!
ಜೊತೆಗೂಡಿ ಮುಂದೆ ಸಾಗುವ
ಗುರಿಯೊಂದೇ ಪ್ರಬಲವಾಗಿರಬೇಕು...!!
ಎಮ್.ಎಸ್.ಭೋವಿ...✍️
.
..
...
....

- mani_s_bhovi

25 Nov 2022, 12:17 pm

ಗಜಲ್


ಎಷ್ಟೊಂದು ಸುಂದರವಾಗಿ ಗೀಚಿಹನು ನಿನ್ನನು ಯಾವ ಶಿಲ್ಪಿಯು
ಎಷ್ಟೊಂದು ಆಕರ್ಷಣೆ ನಿನ್ನಲಿ ತುಂಬಿಹನು ಯಾವ ಶಿಲ್ಪಿಯು

ಕೋಮಲ ಮನಸು ನವಿರಾದ ಮೆರಗು ಬಣ್ಣದ ಚಿಟ್ಟೆಯ ರೂಪವು
ನೋಡಿದರೆ ನೋಡುತ್ತಲೆ ಇರಬೇಕೆಂಬ ಆಸೆ ಇಟ್ಟವನು ಯಾವ ಶಿಲ್ಪಿಯು

ಜಿಂಕೆಯ ಕಣ್ಣು ಬಳುಕುವ ಬಳ್ಳಿ ತುಂಬಿದ ರಸ ಭರಿತ ಮಾವು
ಸವಿದ ಸವಿಯು ಕವಿತೆಗೆ ಸಿಗದ ಭಾವವು ಕೊಟ್ಟವನು ಯಾವ ಶಿಲ್ಪಿಯು

ಸ್ಪರ್ಶದಲಿ ಹಿತ ಮಾತಿನಲಿ ಮಾಣಿಕ್ಯ ಜೀವನ ನಿನ್ನಿಂದ ಸಾರ್ಥಕವು
ನೀನಿಲ್ಲದ ಪಯಣ ಮುಗಿಯದ ಕತೆಯಂತೆ ಬರೆದವನು ಯಾವ ಶಿಲ್ಪಿಯು

ನಿನ್ನಿಂದಲೇ ಉನ್ನತಿ ನಿನ್ನಿಂದಲೇ ಅವನತಿ ನಿರ್ಮಾಪಕ ನಿರ್ನಾಮಕಳು
ಜಗದ ಬೆಡಗೆಲ್ಲ ನಿನ್ನಲಿ ತುಂಬಿ ನವಿಲಿನಂತೆ ಕಟೆದವನು ಯಾವ ಶಿಲ್ಪಿಯು

ಆಕಾಶ ಭೂಮಿ ಸೂರ್ಯ ಚಂದ್ರ ಹಗಲು ರಾತ್ರಿಯಂತೆ ಬಂಧವು
ಯುಗ ಯುಗದಿಂದ ನಡೆವ ಬಂಡಿಗೆ ಗಾಲಿ ಕಟ್ಟಿದವನು ಯಾವ ಶಿಲ್ಪಿಯು

ಸೃಷ್ಟಿ ಸೌಂದರ್ಯದ ಅನುಪಮ ರತುನ ಮಯೂರ ಸಿಂಹಾಸಿನಿಯು
ಆದರ ಆತಿಥ್ಯ ಸದಾಕಾಲ ಸಲ್ಲುವಂತೆ ಅಲಿ ಅಕ್ಷರ ಬಿತ್ತಿದವನು ಯಾವ ಶಿಲ್ಪಿಯು

~ ಅಲಿಬಾಬಾ ರವುಡಕುಂದಾ

- ALIBABA ROUDAKUNDA

22 Nov 2022, 08:11 am

ಮಳೆಯಲಿ ನೆನಪುಗಳು ಕರಗಲಿ

ಮಳೆಯಲಿ ನೆನೆಯಬೇಕು ನಾನು
ಮತ್ತೆ ಮತ್ತೆ ನೆನೆಯಬೇಕು ನಾನು..

ನಿನ್ನ ನೆನಪುಗಳು ಕರಗುವ ಹಾಗೆ
ಮತ್ತೊಂದು ಉಳಿಯದ ಹಾಗೆ
ಇನ್ನೊಂದು ಸುಳಿಯದ ಹಾಗೆ..

ಬಿಕ್ಕಿ ಬಿಕ್ಕಿ ಅಳುವ ಆಸೆ ಮನಕೆ
ಅಪ್ಪಿ ಸಂತೈಸುವ ಹೆಗಲು ಜೊತೆಯಲಿಲ್ಲ ಜೀವಕೆ

ಪಾಪ ಕರ್ಮಗಳಿಂದ ತುಂಬಿದ ಈ ಜನ್ಮ
ದೂರ ಮಾಡಿತು ನನ್ನ ಪ್ರೀತಿಯನ್ನ

ಭರವಸೆಯೊಂದೆ ಉಳಿಯಿತು
ಕಣ್ಣೀರೊಂದೆ ಜೊತೆಗಾರನಾಯಿತು

ಇಳಿದು ಹೋಗಲಿ ಈ ಹೃದಯದ ಭಾರ
ಯಾರೂ ನೋಡದಿರಲಿ ಈ ನನ್ನ ಕಣ್ಣೀರ..

- Tanuja.K

21 Nov 2022, 10:40 pm

ನಮ್ಮ ವೀರರು

ಕೆಚ್ಚೆದೆಯ ವೀರರು ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ
ಕಂಬನಿಯ ಮಿಡಿದರು
ಜೋರು ಬೊಬ್ಬಿತ್ತರು
ಬಿಲ್ಲನ್ನು ಎತ್ತಿದರು
ಬಾಣವನ್ನು ಬಿಟ್ಟರು
ಬ್ರಿಟಿಷರ ವಿರುದ್ಧ ಹೋರಾಡಿದರು
ಸೆರೆಮನೆ ಅನುಭವಿಸಿದರು
ಬಂದೂಕ ಎತ್ತಿದರು
ಕ್ರಾಂತಿಕಾರಿ ಗಳಾದರು
ಪ್ರಾಣ ತ್ಯಾಗ ಮಾಡಿದರು
ನಮಗೆ ಸ್ವತಂತ್ರ ತಂದು ಕೊಟ್ಟರು
ಅವರನ್ನು ಮತ್ತೆ ಮಗು ನೀ ನೆನಪಿಗೆ ತರು
ಮರೆಯಬೇಡ ಅವರ ಚಿನ್ನ ವಜ್ರ ಕಿಂತಲೂ ಹೆಚ್ಚು ಅವರು

- Nisha anjum

20 Nov 2022, 11:57 pm

ದೇವ....

ಬೆಂಕಿ ತಾಗಿಸಿಕೊಂಡು ದೀಪ ಕಿಚ್ಚಿಗೆ ಅಂಜಿದೆಂದೆಂತಯ್ಯ
ಅಂತಾದರೆ ಊರ ಬೆಳಗುವವರಾರು?
ಶಾಖಕೆ ಅಂಜಿ ಸೂರ್ಯ ಅತ್ತರೆ
ಲೋಕ ಬೆಳಗುವವರಾರು.?
ಚಳಿ ತಾಳದೆ ಶಶಿಯೆ ಕಂಬನಿ ಮಿಡಿದು ಬಿಟ್ಟರೆ
ತಾರೆಗಳಿಗೆ ಜೊತೆಗಾರರು ಯಾರು
ನನ್ನ ತಪ್ಪಾ ಕಂಡು ನನ್ನ ನೀನು ಕೈ ಬಿಟ್ಟರೆ
ನನ್ನ ಮನವ ಬೇಳಗುವವರರು ದೇವ?

✍️ ನಿಶಾ ಅಂಜುಮ್

- Nisha anjum

20 Nov 2022, 11:56 pm

ಕಲಿಯುಗ.....

ಬುದ್ಧಿವಂತಿಕೆ ಯಲ್ಲಿ ಶಶಿಯಲ್ಲಿ ಪಾದವಿತ್ತು
ಸಮುದ್ರ ರಾಜನ ಭೇದಿಸಿ ಪಳೆಯುಳಿಕೆ ಪಡೆದ
ವಾಯುವನ್ನು ಬಂಧಿಸಿ ಅಡುಗೆ ಮಾಡಿದ
ವರುಣನ ಕಲುಷಿತ ಮಾಡಿದ
ಆಧುನಿಕ ಮಾನವ ಮತ್ತೆ ಏಕೆ ಎನಿಸುವೆ ಆ ಸತ್ಯಾಯುಗದಕತೆಯನ್ನ
ಇದ್ದರೆ ನೀನು ಅಲ್ಲಿ ನಿರ್ಮಿಸುತ್ತಿದೆ
ಮತ್ತೊಂದು ಕಲಿಯುಗವ ನ್ನು ನನ್ನಾತ್ಮಾ ಲಿಂಗ

- Nisha anjum

20 Nov 2022, 11:54 pm

ಅಂತರಾಳದಲ್ಲಿ ಬರಿ ನಿನ್ನ_ಒಲವೇ...

"ನೀ_ಓದು ಒಮ್ಮೆ ಆದರೂ..
ನಾ_ಬರೆದಿರುವ ಒಲವಿನ ಪತ್ರವ !
ಅಂತರಾಳದಲ್ಲಿ ಇದ್ದ ಭಾವವೆಲ್ಲ..
ಹೆಕ್ಕಿ ತುಂಬಿರೋ ಸಾರವ !!"
"ಬರಿ ಪದಗಳೇ ಅಲಿಲ್ಲ..
ಆಲಿಸು ಮನದಿ ಒಲವ_ನಾದ !
ನೀ_ಅಷ್ಟೇ ಅಲಿಲ್ಲ..
ನಾ_ಕೂಡ ಇರುವೆ ಅಲ್ಲಿ ಸೀದಾ_ಸಾದ !
ಪೂರ್ಣ_ನೀನೆ..
ನನ್ನ ಆವರಿಸಿ ಕೊಂಡಿರುವೆ ಒಲವೇ !
ತಿಳಿಯೇ..
ಅಂತರಾಳದಲ್ಲಿ ಬರಿ ನಿನ್ನ_ಒಲವೇ !!"
ಎಮ್.ಎಸ್.ಭೋವಿ...✍️

- mani_s_bhovi

20 Nov 2022, 10:41 pm

ಶಿವ

ನೀನೊಂದು ಮಹಿಮೆ
ನಿನ್ನ ದಯೆ ನನ್ನ ಹಿರಿಮೆ
ಬಾಳು ನೀ ಕೊಟ್ಟ ಭಿಕ್ಷೆ
ನೀನೆ ನನಗೆ ರಕ್ಷೆ
ಕಾರ್ಯ ಕಾರಣಗಳು ಬೇಡ ನಿನ್ನ ನಂಬಲು
ನೀನೊಬ್ಬ ಸಾಕು ಈ ಜೀವನ ಸಂಪೂರ್ಣವಾಗಲು..


ಕಣ್ಣಂಚಲ್ಲಿ ನೀರು ತಂದವರು ಸಾವಿರ ಜನ
ಕಣ್ಣೊರೆಸಿದ ದೈವ ನೀನು ಮಾತ್ರ
ಧೈರ್ಯ ತುಂಬಿದ ಗುರುವು ನೀನು
ಬದುಕುವ ಛಲ ಹುಟ್ಟಿಸಿದ ತಂದೆ ನೀನು
ಆತ್ಮ ಸ್ಥೈರ್ಯವ ತುಂಬಿದವನು ನೀನು
ಆತ್ಮ ತೃಪ್ತಿಯಂತೆ ಬದುಕುತ್ತಿರುವವಳು ನಾನು..



ನನ್ನ ನೋವನ್ನು ಕಂಡು ಕಾಡದಂತೆ ನಡೆದವರೆ ಹೆಚ್ಚು
ಸ್ವಾರ್ಥ ಜನರ ಸಂತೆಯಲಿ ನನ್ನ ದೂರಿದವರು ಮತ್ತೊಂದಷ್ಟು
ಏನೇ ಆಗಲಿ ಸ್ವಾಭಿಮಾನವ ಬಿಡದ ಹೆಣ್ಣು ನಾನು
ನೀ ನನ್ನೊಂದಿಗಿರುವಾಗ ಮತ್ತಾರ ಹಂಗೇಕಿನ್ನು...

- Tanuja.K

20 Nov 2022, 08:03 am