Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಸಿಗಬೇಕು ಅಂತ ಪ್ರಯತ್ನ ಮಾಡೋದು
ಜೀವನˌ
ಸಿಗಲೇಬೇಕು ಅಂತಾ ಪ್ರಯತ್ನ ಮಾಡೋದು
ಹೋರಾಟˌ
ಸಿಗಲ್ಲಾ ಅಂತಾ ಗೊತ್ತಿದ್ದು ಹೋರಾಟ ಮಾಡಿ ಪಡೆಯೋದು
ನಿಜವಾದ ..ಸಾಧನೆ..
- Faruk
17 Jul 2016, 09:07 am
ಮನದ ಮ೦ದಿರದಲ್ಲಿ ಬೆಳಗಿದ ಪ್ರೀತಿಯ ದೀಪ ನೀನು..
ಹೃದಯ ಸಮುದ್ರದಲ್ಲಿ ಸಿಕ್ಕ ಪ್ರೀತಿಯ ಮುತ್ತು ನೀನು...
ಕಣ್ಣ ಕೊಳದಲ್ಲಿ ಅರಳಿದ ಪ್ರೀತಿಯ ಪುಷ್ಪ ನೀನು...
ನೆನಪಿರಲಿ....
ದೀಪ ಆರದಿರಲಿ,ಮುತ್ತು ಒಡೆಯದಿರಲಿ,ಪುಷ್ಪ ಬಾಡದಿರಲಿ.....!!!
- Arun S. S.
16 Jul 2016, 11:09 pm
ಹೆಜ್ಜೆಹೆಜ್ಜೆಗೂ
ಆ -
ದಿನಗಳ
ನೆನಪು
ನೆರಳಾಗಿ
ನಡೆದಿದೆ
ಈ-
ದಿನಗಳ
ಕಡು
ಬಿಸಿಲಿನ
ಕ್ಷಣಕ್ಷಣಕೂ !
- ashfaq peerzade
16 Jul 2016, 09:25 pm
ಸ್ವಾತಂತ್ರ‍್ಯವಾಗಿ ಉಸಿರಾಡಿದ ಕೇಲವೇ ಕೆಲವು ಕ್ಷಣಗಳ ನೆನಪು
ನನ್ನದೆನ್ನುವುದು ಬಿಟ್ಟರೆ
ಉಳಿದೆಲ್ಲ ದಿನಗಳು ನಿನ್ನ ದಾಸ್ಯದಲ್ಲಿ ಕರಗಿ ಹೋದ ಬೆವರಹನಿ ಸಾಲುಗಳು!!
- ashfaq peerzade
16 Jul 2016, 09:23 pm
ಗುಲಾಬಿ ಗಿಡದಲ್ಲಿ ಎಷ್ಟೆ ಮುಳ್ಳಿದ್ದರು
ಅದರಲ್ಲಿ ಹೂವು ಅರಳಲೆಬೇಕುˌ
ಮನಸ್ಸಿನಲ್ಲಿ ಎಷ್ಟೆ ನೋವುಗಳಿದ್ದರು
ಮುಖದಲ್ಲಿ ನಗು ತುಂಬಿರಬೇಕು.
- Faruk
16 Jul 2016, 01:00 pm
ನೀನಿರದ ಬರಿ ಸಂಜೆ
ಆಗಬಹುದು ಬಂಜೆ
ಬಾನ ಬಿಗುವಿನ ಆ ಮೌನ
ನಗುವಿಲ್ಲದ ನನ್ನ ಧ್ಯಾನ
ನೆನಪುಗಳು ಮರಳಲಾರವು
ನೀನಿರದ ಈ ಗೂಡಿಗೆ
ಕನಸುಗಳು ನನಸಾಗಲಾರವು
ಭಾವವಿರದ ಹಾಡಿಗೆ
ಒಲವಿನಾಗಸದಿ ಮೆಲ್ಲ
ವಿರಹ ಕತ್ತಲೆ ಕವಿಯುತಿದೆ
ಸರಿಯಿಲ್ಲದ ನಿನ್ನ ಸರಸವ
ನಿರ್ದಯಿಯಾಗಿ ಕವಿಯುತಿದೆ
ಏಕೆ ಈ ದೂರ
ಬಾಳೇ ನಿಸ್ಸಾರ
ನೀನಿಲ್ಲದ ಈ ವೇಳೆ
ನಿತ್ಯ ನೂರಾರು ರಗಳೆ
ಬಂದುಬಿಡು ನಲ್ಲ
ನೀ ಬೆಳದಿಂಗಳಾಗಿ
ಉಕ್ಕಿ ಬಿಡುವೆ ನಾನಾಗಲೇ
ಸಾಗರದ ಅಲೆಮಾರಿ, ,,,,,,,
- ಅಮುಭಾವಜೀವಿ (ಅಪ್ಪಾಜಿ ಎ ಮುಸ್ಟೂರು )
14 Jul 2016, 10:54 pm
ಸದ್ದುಗದ್ದಲದೊಳಗಿನ ಶಾಂತಿ ;
ಶಬ್ಧದಲ್ಲಿನ ನೀರವ ನಿಶ್ಶಬ್ಧತೆ ;
ಮಾತಿನ ಮನೆಯ ಸೂತಕ ;
ಪದಗಳೆರಡರ ನಡುವಿನಂತರ ;
ಸಂತೆಯೊಳಗಣ ಸಂತ ;
ಸಾರಾಯಿ ಬಾರಿನ
ಗಲ್ಲಾಪೆಟ್ಟಿಗೆಯ ಮೇಲೆ
ಕೂತು ನಗುವ ಹಸನ್ಮುಖಿ ಬುದ್ಧ (ಲಾಫಿಂಗ್ ಬುದ್ಧ);
ಪಾಪದ ಮನೆಯಲ್ಲಿ ಭಕ್ತಿಯಿಂದ
ಆರಾಧಿಸಲ್ಪಡುವ ಭಗವಂತನ ಚಿತ್ರ ;
ಅಗ್ನಿ ಸ್ಪರ್ಶನೀಡಿ
ಸುಟ್ಟು ಬೂದಿಯಾಗಿಸಿದರೂ
ಸುಗಂಧ ಬೀರುವ ಊದಿನ ಕಡ್ಡಿಯ ಹೊಗೆ ;
ಮುಚ್ಚಿಟ್ಟರೂ ಪರಿಮಳಸೂಸುವ ಮಲ್ಲಿಗೆ ಮಾಲೆ ;
ಸಂಗೀತಾಲಾಪನೆಯ
ಹಿಂದಿನ ಮೌನರಾಗ ;
ತಂಬೂರಿತಂತಿಮೀಟಿ
ಮಾಧುರ್ಯಹೊಮ್ಮಿಸುವ
ಬೆರಳುತುದಿಯ ಹಿತಸ್ಪರ್ಶ ;
ಭೋರ್ಗರೆಯುವ ಜಲಪಾತದಡಿ
ಜಡವಾಗಿ ಮಲಗಿರೋ ಬೋರುಗಲ್ಲು ;
ಯಾರು ತುಳಿದರೂ ತಕರಾರಿಲ್ಲದೆ
ಕೊನರಲು ಕಾತರಿಸುವ ಗರಿಕೆಹುಲ್ಲು ;
ಅದೃಶ್ಯ ಸತ್ಯಗಳ ಕಾವ್ಯದರ್ಪಣ ನಾ... !!
- ashfaq peerzade
14 Jul 2016, 08:53 pm
ಒಂದು ಮನಸು
ಎರಡು ಹೃದಯ
ಮೂರು ಗಂಟು
ನಾಲ್ಕು ಜೀವ
ಸುಂದರ ಬದುಕು !!
- ಸಾಗರ್ ಸಿದ್ದು
14 Jul 2016, 11:52 am
ನಾ ಕನಸಿನೊಳಗೋ , ಕನಸು ನನ್ನೊಳಗೋ ..
ನಾ ಹೋಗೋ ಧಾರಿಯಲ್ಲಿ ನೀ ಹೇಕೆ ಬಂದೆ
ಒಂದೇ ಮಾತಿನಲ್ಲಿ ನನ್ನ ಪ್ರೀತಿಯನ್ನು ಕೊಂದೇ
- Shashank
14 Jul 2016, 02:58 am
ಹಣಕ್ಕಾಗಿ ಹಾಸಿಗೆಗೆ ಬಂದ ಯುವತಿಗೆ
ಕೇಳಿದನಾತ...
ಈ ಜೀವನ ನಿನಗೆ ಯಾಕೆ ?
ನನ್ನ ಮದುವೆಯಾಗಬಾರದೇಕೇ?
ಮೂತಿ ಮುರಿದು ನುಡಿದಳಾಕೆ...
ನಿನ್ನಂತ ವಿಟ ಪುರುಷನ ಕಟ್ಟಿಕೊಂಡು
ನಾನೇನ ಸುಖ ಕಾಣಲಿ?
ಬಾಯಿ ಮುಚ್ಚಿಕೊಂಡು ಹೋಗಬಾರದೇ ?
- ಶ್ರೀಗೋ.
13 Jul 2016, 08:13 pm