Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮರೆತು ಹೋಗಬೇಡ ನೋವಾಗುತ್ತೆ..
ದೂರ ಹೋಗಬೇಡ ದುಃಖ ಆಗುತ್ತೆ...
ಮೌನವಾಗಬೇಡ ಮನಸ್ಸಿಗೆ ಬೇಜಾರು ಆಗುತ್ತೆ..
ಈ ಪ್ರೀತಿ ಮರೆಯಬೇಡ ಉಸಿರು ನಿಂತು ಹೊಗತ್ತೆ...!
- ಶಿವು ಬಿ ಎಸ್
13 Jul 2016, 07:00 pm
ನೆನಪುಗಳ ನೆನಪಲ್ಲಿ ನೆನಪಾದ ನೆನಪೊಂದು,
ನೆನಪುಗಳ ನೆನಪಲ್ಲಿ ನೆನಪಾದ ನೆನಪೊಂದು,
ನೆನಪಿರುವವರೆಗೂ ನೆನಪಿರಲಿ ನನ್ನ ನೆನಪು....
- Dayanand
13 Jul 2016, 01:40 pm
ಯಾರೋ ಬರುವರು
ಏನೋ ಬರೆವರು
ಅಳಿಸಲಾಗದ ಈ ಹೃದಯದಲಿ.
ಬರಿದೇ ತೊರೆವರು
ಬದುಕನು ಸುಡುವರು
ಬಣ್ಣ ಗೆಟ್ಟ ಬಯಲಾಟದಲಿ
ಕನಸನು ಕದಿವರು
ಮನಸನು ಇರಿವರು
ಮೊನಚು ಮಾತುಗಳ ಈಟಿಯಲಿ
ಸತ್ತೂ ಸಾಯದ
ಮರೆತೂ ಹೋಗದ
ಮರಳುಗಾಡಿನ ಹುಸಿ ಬದುಕಿನಲ್ಲಿ...
- ಶ್ರೀಗೋ.
12 Jul 2016, 05:51 pm
ಜಗದ
ಅಚ್ಚರಿಗಳು
ಸಾವಿರಾರು,
ಅದರಲ್ಲಿ
ನೀನೂ
ಒಬ್ಬಳು !
- ashfaq peerzade
12 Jul 2016, 10:12 am
ಮೊನ್ನೆ ಕಂಡ ಕನಸು ಇಂದು ನನಸಾಗಿಲ
ಬಾಡಿದ ಹೂವಿನ ಮಕರಂದ ಕರಗಿದಂತಾಗಿದೆ ಈ ಜೀವನ
- gtr
12 Jul 2016, 09:14 am
ಮರೆಯದೆ ಕ್ಷಮಿಸು ನೆನಪಾಗಿದೆ
ಹಸಿವನು ಮರೆಸು ಋಣಿಯಾಗುವೆ...
ಜಗವಾ ಬೆರೆಸಿ, ಉಸಿರ ಮೆರೆಸಿ
ನೀ ನನ್ನ ಕನಸಿಗೆ ಸಾಕ್ಷಿಯಾಗಿರು...
ಮನಸಿನ ಸ್ಪರ್ಶವೆ ದೇಗುಲ
ಸ್ಪರ್ಶದ ಹಸಿವಿಗೆ ಇಂಚರ
ನೆನಪಿದು ಉಸಿರಿನ ಹಸಿವಿದು ನಿತ್ಯದ
ನಾ ನಿಂತೆ ಮೌನದಿ ನಿನ್ನ ನೆರಳನು ಹರಸಿ...
ಭಾವದ ಬೆಳಕು ಹುಸಿಯಾಗಿದೆ
ಕಡಲಿನ ನೆನಪು ಹಸಿಯಾಗಿದೆ
ಮನವ ತೆರೆಸಿ ಒಡಲ ಹರಸಿ
ನಾ ನಿನ್ನೆ ಹುಡುಕಲು ಮಾಯವಗಿದೆ...
- Shreepadh
11 Jul 2016, 09:22 pm
ಉಸಿರೇ...ಬದುಕು ನಿನಗಾಗಿ, ಮನಸು ಹನಿಯಾಗಿ
ಹೆಸರಲ್ಲಿಯೆ ಉಸಿರಾಗಿರು, ಉಸಿರಲ್ಲಿಯೆ ಹಸಿರಾಗಿರು....
ನನ್ನ ಜಗವೆಲ್ಲ ನಿನ್ನ ಪ್ರೀತಿ ಅಲ್ಲವೆ...
ಮನಸಲ್ಲೆ ಪ್ರೀತಿ ಮಾಡಿ, ಮನದಲ್ಲೆ ಬಚ್ಚಿಡುವಂತೆ
ನಿನ್ನ ಉಸಿರಿನ ಕಡೆಯ ಹೆಸರಾ, ನಾ ಬರೆಯುವಂತೆ...
ನಿನ್ನ ಮೊಗವ ಪ್ರೀತಿಯ ಛಾಯೆ ನೆರಳಲ್ಲಿ ಅವಿತಿರುವಂತೆ...
ಹೆಜ್ಜೆಗಳ ಸರಪಳಿಯಲ್ಲಿ ಮೌನದ ಗೀತೆಯಂತೆ...
ಉಸಿರೆ ನಾ ಏನೆ ಮಾಡಿದರು ನಿನ್ನ ಪ್ರೀತಿಗಲ್ಲವೇ...
ಮನಸೇ ಮನಸಾ ಮೆರೆಸೆ...
- Shreepadh
11 Jul 2016, 09:04 pm
ಇಂದಿನಿರುಳು
ಸುಧೀರ್ಘವಾಗಿ
ನಾಳೆಂಬುದು
ನನ್ನ ಪಾಲಿಗೆ
ಬರಲೇ
ಬಾರದೆಂದು
ಬೇಡಿಕೊಳತೀನಿ
ಜತೆ ನೀನಿರುವ
ಪ್ರತಿ ರಾತ್ರಿ !
- ashfaq peerzade
11 Jul 2016, 10:13 pm
ಬಯಸದೇ ಸಿಕ್ಕಿದ್ದು
ಬಯಸಿದರೂ ದಕ್ಕದ್ದು
ಮೌಲ್ಯಕ್ಕೂ ಎಟುಕದ್ದು
ನಮ್ಮ ಜೀವನ
ನಗುವಿಹುದು
ಕೆಲವೊಮ್ಮೆ ಅಳುವಿಹುದು
ದುಃಖ, ದುಮ್ಮಾನಗಳ
ಆಗರವೂ ಹೌದು
ವೈರಾಗ್ಯ, ಮತ್ಸರ
ಮನೆ ಮಾಡಬಹುದು
ಪ್ರೀತಿ, ಪ್ರೇಮಗಳ
ಜಗವೂ ಹೌದು
ಗಿಣಿಗಳು, ಚಿಟ್ಟೆಗಳು
ಹೌಹಾರುವವು
ಬಚ್ಚಿಟ್ಟ ಹೆಂಗಿಣಿಯು
ಹಾರಿ ಹೋಗಲೂಬಹುದು
ಸುಮಧುರ ಕ್ಷಣಗಳು
ಧಾರಾಳವಿಹುದು
ಕಹಿ-ಕಹಿ ಅನುಭವ
ಉಂಟಾಗಲೂಬಹುದು
ಪ್ರೀತಿ-ಶಾಂತಿಯ ಗಳಿಸಿ
ದುಃಖಗಳ ಎದುರಿಸಿ
ತಂತ್ರ - ಜಾಣ್ಮೆಯೊಂದಿಗೆ
ಯಶಸ್ಸನ್ನೂ ಗಳಿಸಬಹುದು.
- ಶಾಹಿದ್ ಉಪ್ಪಿನಂಗಡಿ
11 Jul 2016, 11:38 am
ಪ್ರೀತಿಯಲಿ ಗೆಲುವೊಂದೆ ಇದ್ದರೆ ಅದು
ನನಗಿರಲಿ
ಸೋಲೊಂದೆ ಇದ್ದರೆ ಅದು
ನನಗಿರಲಿ
ಸೋಲು ಗೆಲುವು ಎರಡು ಇದ್ದರೆ
ಅವು
ನಮ್ಮ ಬಾಳಲ್ಲಿ ಹಾಲು ಜೇನಿನಂತಿರಲಿ
- su
10 Jul 2016, 07:26 pm