Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಚುಟುಕು

ಅವಳ ಮುದ್ದು ಕಣ್ಣುಗಳ ಬಗ್ಗೆ
ಅರ್ಧಂಬರ್ಧ ಕವಿತೆ ಬರೆದು
ಸಮಾಧಾನವಾಗದೆ
ಹಾಳೆಯನ್ನು ಡಸ್ಟ್ ಬಿನ್ ಗೆ ಎಸೆದೆ.
ಈಗ ಡಸ್ಟ್ ಬಿನ್ನಿನ ತುಂಬೆಲ್ಲಾ
ಹಾಲು ಬೆಳದಿಂಗಳು.........!!!

- ಅರೆಯೂರು ಚಿ. ಸುರೇಶ್

10 Oct 2016, 03:15 pm

ಆಷಾಡದ ಸಮಯ

ಹೃದಯದ ಬಡಿತದಲ್ಲಿ ಯಾರದ್ದೋ ನೆನಪು..
ಉಸಿರಾಡುವ ಉಸಿರಿನಲ್ಲಿ ಯಾರದ್ದೋ ಮಾತು..
ಕಣ್ಣೀರಿನ ಹನಿಯಲ್ಲಿ ಯಾರದ್ದೋ ಸ್ಪರ್ಶ..
ಖಂಡಿತ ಅದು.. ಆಷಾಡದಲ್ಲಿನ ದೆವ್ವದ ಸ್ಪರ್ಷ!

- ಪವನ್

10 Oct 2016, 01:20 pm

ಸೌಂದಯ೯ ಲೋಕ

ಆ ನಿನ್ನ ಸೌಂದಯ೯
ಲೋಕದಲ್ಲಿ
ನನ್ನನ್ನು
ಮರೆಮಾಚಿ ನೀ
ಎಲ್ಲಿ ಮಾರೆಯಾದೆಯೇ?

- ಶಿವಾ ಬಳಿಚಕ್ರ

10 Oct 2016, 08:01 am

ಬೇಸರವಾಯಿತು ಈ ಪ್ರೀತಿ

ಕಣ್ಣಿಲ್ಲದ ಜಗತ್ತಿನಲ್ಲಿ
ಒಬ್ಬಂಟಿತನ ನಾನು
ಓ ಹಸಿರೇ ನನ್ನುಸಿರು
ನಿಲ್ಲಿಸಲು ಬಯಸುವೆಯಾ?
ಪ್ರೀತಿಗೆ ಸಾವಿಲ್ಲ
ಪ್ರೀತಿಸೋಳಿಗೆ ನಿಯ್ಯತ್ತಿಲ್ಲ....

- ಶಿವಾ ಬಳಿಚಕ್ರ

10 Oct 2016, 07:11 am

ನ್ಯೂನತೆ

ಕರುಣ ಜನಕನಲ್ಲ ನೀ
ನಿಷ್ಕ್ ಕರುಣಿ ಯಾಗಿರುವೆ
ಈ ಜಗತ್ತಿನ ಮಾಯ ಲೋಕದಲ್ಲಿ //

ಕರುಣೆ ಎಂಬುದು ನಿನ್ನಲ್ಲಿದಿದರೆ
ಸೃಷ್ಟಿಯಲಿ ನೀ ಸೃಷ್ಟಿಸುತಿರಲಿಲ
ಈ ತಾರತಮ್ಯದ ವೈವಿಧ್ಯವ //

ಯಾವ ಪಾಪವ ಮಾಡಿಹರು
ಈ ನ್ಯೂನತೆಯ ಮುದ್ದು ಕ೦ದಮ್ಮಗಳು
ಎಳೆವಯಸ್ಸಿನ ಮುದ್ದು ಮನಗಳು//

ತ೦ದೆ ತಾಯಿಗಳು ಮಾಡಿದ ಪಾಪವೋ
ಸೃಷ್ಟಿಯ ವಿಕೃತಿಯೋ
ಮನುಕುಲದ ಶಾಪವೋ //

ನಲುಗುತಿವೇ ಒಡನಾಡಿಗಳು
ಎನನ್ನು ಅರಿಯದೇ
ಸೃಷ್ಟಿಯ ಈ ನಿಯಮದಲೀ//

- ತಾ೦ಡವ.

09 Oct 2016, 11:32 am

ಅಬಲೆ ಅಲ್ಲ ಸಬಲೆ

ದೈವ ಸರೂಪಿಣಿಯು ಪ್ರಕೃತಿದಾತೆಯು ಇವಳು
ತಾಯಿ ಮಡದಿ ಸಹೋದರಿ ಮಗಳಾಗಿ
ನಾನಾ ರೂಪವ ಜನ್ಮ ತಳೆದವಳು ಇವಳು
ಅವಳಲ್ಲವೆ ಇವಳು ಅಬಲೆ ಯಲ್ಲ
ಈ ಸಬಲೆ...

- ತಾ೦ಡವ.

09 Oct 2016, 10:53 am

ನೇಸರ

ಮುಂಜಾನೆ ಮೂಡಣದಿ
ಮೂಡಿರುವ ನೇಸರನು!!
ಅಂಬರದ ಅಂಬಾರಿ
ಏರುತಲಿ ಬೆಳಗಿಹನು!!

ಕತ್ತಲ ಕಳೆಯಲೆಂದು
ಬಾನೇರಿ ಉದಿಸಿದನು!!
ಮಂಜಿನ ಹನಿಯೊಳಗೆ
ಬೆಳಗಿ ಹೊಳೆದಿಹನು!!

ಹಿಮಗಿರಿಯ ಏರಿ
ಗಂಗೆಯಲಿ ಇಣುಕಿದನು!!
ತೆಂಗಿನ ಗರಿ ಸೀಳಿ
ಹೊಂಬೆಳಕ ಚೆಲ್ಲಿಹನು!!

ಸಂಜೆಯಲಿ ನೇಸರನು
ರಂಗೇರಿ ನಗುತಿಹನು!!
ಪಡುವಣ ಕಡಲಿನಲಿ
ಮರೆಯಾಗ ಹೊರಟಿಹನು!!

- ಪಿ.ಜಿ.ಜ್ಯೋತಿ

09 Oct 2016, 10:03 am

ಬೆಂಗಳೂರು ಲೈಪು

ಬೆಂಗಳೂರು ಲೈಪು ಸಿಗರೇಟು ಹೊಗೆಗಿಂತ ಗಾಟು;
ಬಿ.ಎಮ್.ಟಿ.ಸಿ. ಪ್ರಯಾಣದಲ್ಲಿ ಬೀಳುವ ಏಟು,
ಟ್ರಾಪಿಕ್ ಜಾಮ್ ಕಿರಿಕಿರಿಯ ದಾಟು:
ಅನುಭವಿಸಿದವನಿಗೆ ಮರೆತು ಹೋಗುತ್ತೆ ಮನೆಯ ರೂಟು.

- ವೇಣು ಆರ್ ಚಿನ್ನದೂರು

08 Oct 2016, 05:38 pm

ಹೇಗೆ ಸಾಧ್ಯ

ಕಣ್ಣ ವಳಗೆ ಹುದುಗಿ ಕುಳಿತ
ನಿನ್ನ ಬಿಂಬ ಜಾರಿದ ಮೇಲೆ
ಕಂಬನಿಗೆ ಬೇರೆ ಅರ್ಥ
ಹುಡುಕಲು ಹೇಗೆ ಸಾಧ್ಯ!!

ಚೆಳದಿಂಗಳ ಬೆಳಕು ಕೂಡಾ
ಮೈಯನ್ನೆಲ್ಲ ಸುಡುತಿರುವಾಗ
ಉರಿಬಿಸಿಲ ಹಾದಿಯಲ್ಲಿ
ನಡೆಯುವುದು ಹೇಗೆ ಸಾಧ್ಯ!!

ಒಡೆದಿರುವ ಕನ್ನಡಿಯ
ಜೋಡಿಸಿ ನೋಡಿದರೆ
ಅಂದವಾದ ಪ್ರತಿಬಿಂಬ
ಕಾಣುವುದು ಹೇಗೆ ಸಾಧ್ಯ!!

ಕಳೆದಿರುವ ಕ್ಷಣವನ್ನು
ನೆನೆದು ಮರುಗಿದರೆ
ಮರೆಯಾದ ಇನಿಯ ನೀ
ಮರಳಲು ಹೇಗೆ ಸಾಧ್ಯ!!

- ಪಿ.ಜಿ.ಜ್ಯೋತಿ

08 Oct 2016, 04:54 pm

ಚಂದ್ರ

ಮಾಯದಾ ಚಂದ್ರನ
ಪ್ರೀತಿಯ ಮಾಯೆಯು!!
ಮೋಡದಾ ಮೇಲಿನ
ಕನಸಿನ ಛಾಯೆಯು!!

ಕತ್ತಲ ಆಲಿಂಗನ
ಮುತ್ತಿದೆ ತನು ಮನ!!
ಪ್ರಣಯದ ತಲ್ಲಣ
ಕೂಗಿದೆ ನಲ್ಲನ!!

ಉಸಿರಿನ ಗಾಳಿಯು
ಸೋಕಿ ರೋಮಾಂಚನ!!
ತಾರೆಯ ಬಳಗದಿ
ಬೆಳಕಿನ ಸಿಂಚನ!!

ಒಲವಿನ ಭಾವದಿ
ತುಂಬಿದೆ ಯವ್ವನ!!
ವಿರಹವ ಸರಿಸಲು
ಚಂದ್ರನ ಆಗಮನ!!

- ಪಿ.ಜಿ.ಜ್ಯೋತಿ

08 Oct 2016, 04:53 pm