ಬಯಸದೇ ಬಂದೆ ನೀ ನನ್ನ ಕಣ್ಣು ಮುಂದೆ
ಆಮಂತ್ರೀಸದೇ ಬಂದೇ ನನ್ನ ಪ್ರೇಮದ ಗುಡಿಗೆ
ಬಿತ್ತಿದೆ ಒಲವಿನ ಬೀಜವ
ಪ್ರೇಮದ ಮುಂಗಾರು ಶುರುವಾಗುವ ಹೊತ್ತಿಗೆ
ಮರೆಯಾದೆ ಏಕೆ? ಇಂದು ನೀ
ಪ್ರೇಮದ ಲತೆ ಹೂ ಬಿಡುವ ಮುಂಚೆಯೇ
ಹೇ ನನ್ನ ಮಾಯಜಿಂಕೆಯೇ.
ಏನೆಂದು ಬರೆಯಲಿ
ಏನೆಂದು ತಿಳಿಸಲಿ
ನೀ ನನ್ನೊಂದಿಗೆ ಇದ್ದ
ಮಧುರ ಕ್ಷಣಗಳನು ಬರೆಯಲಾ
ನೀ ಇಲ್ಲವೆಂಬ ವಿಷಾದವನು ಹೇಳಲಾ
ಈ ನನ್ನ ಅರ್ಥವಿಲ್ಲದ ಜೀವನಕೆ
ಜೀವ ತುಂಬಲು ಮರಳಿ ಬಾ ಎನ್ನಲಾ......
ಈ ನನ್ನ ಪ್ರಶ್ನೆಗಳಿಗೆ ಉತ್ತರಗಳನು ತಾ ಎಂದು ಅಪೇಕ್ಷಿಸಲಾ.....
ಬಾ ಮರಳಿ ಬಂದು ನನ್ನ ನೋಡು...
ಎಲ್ಲಿಯವರೆಗೂ ಈ ನಿನ್ನ ಮೌನ ಬೆಂಕಿಯಲ್ಲಿ ಬೆಂದು ಹೋಗುತ್ತಿದೆ ನನ್ನೀ ಮನ
ನೀಡಬಾರದೆ ಇನ್ನೊಮ್ಮೆ ಈ ಮನಸ್ಸಿಗೆ ಮರು ಜನನ
ಕಾಯುತ್ತಿರುವೆ ಗೆಳತಿ ನೀ ಬರುವ ದಾರಿಯನ್ನ
ಮರೆಯಬೇಡ ನೀ ನನ್ನ ಪ್ರೀತಿಯನ್ನ
ತಾಳಲಾರೇನು ನಾನು ಈ ನೋವನ್ನ
ಅರಿಯದೆ ಮಾಡಿದೆ ನಿನ್ನ ಪ್ರೀತಿಯನ್ನ ಮಾಡಬೇಡ ನನಗೆ ನೀ ಮೋಸವನ್ನ
ಆ ದೇವರು ಕೂಡಾ ಕ್ಷಮಿಸೊಲ್ಲ ನಿನ್ನ