Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಗಜಲ್

ಅತಂತ್ರ ಬದುಕಿನ ದಾರಿಯಲಿ....

ಎನ್ನೆದೆಗೊರಗಿ ಮಗುವಾಗಿ ಮಲಗಿ ನೋಡೊಮ್ಮೆ ಸಾಕು
ಎದೆಗೂಡಲ್ಲಿ ಕದಲುವ ಮೌನಮಿಡಿತ ಆಲಿಸೊಮ್ಮೆ ಸಾಕು

ನಿನ್ನ ಕೇಶರಾಶಿಯಲಿ ಎನ್ನ ಬೆರುಳುತುದಿ ಮೀಟುತಿರಲಿ ಪ್ರೇಮರಾಗ
ಹೃದಯ ಹಾಡು ಮೂಕಾಗಿ ರೋಧಿಸುವುದು ಆಲಿಸೊಮ್ಮೆ ಸಾಕು

ಇಲ್ಲಿ ತೊಟ್ಟಿಕ್ಕುವ ರಕುತದಲಿ ಕೆಂಗುಲಾಬಿ ಬಿರಿಯುತಿದೆ
ಕಾವ್ಯ ಕೆಂದುಟಿಗಳಿಂದ ಸ್ರವಿಸುವ ರಕ್ತಗಾನ ಆಲಿಸೊಮ್ಮೆ ಸಾಕು

ಬೊಗಸೆಯಿಂದ ಸೋರಿ ಹೋಗುತಿದೆ ಮರಳಿನಂತೆ ಬದುಕು
ಮರಳಗಾಡಿನಲ್ಲಿ ನಿಟ್ಟುಸಿರುಗಳು ಬೇಯುವ ಸದ್ದು ಆಲಿಸೊಮ್ಮೆ ಸಾಕು

ನಿನ್ನಲ್ಲಿ ನೂರಾರು ಕನಸಗಳು, ಸಾವಿರಾರು ಪ್ರಶ್ನೆಗಳು ಅಲೆಮಾರಿ ಬದುಕಿನ ಚಿಂತೆ 
ಬಿರುಗಾಳಿಯಲೆಗೆ ತತ್ತರಿಸುವ ಹಾಯದೋಣಿ ಶಬುಧ ಆಲಿಸೊಮ್ಮೆ ಸಾಕು

ದುಃಖದುಮ್ಮಾನಗಳು ಬಂದು ಹೋಗುವಂತೆ, ಸುಖಸಮ್ಮಾನಗಳು ಸರಿದ್ಹೋಗುತ್ತವೆ
ಕಾಲಡಿ ಕುಸಿಯುವ ಅತಂತ್ರ ದಾರಿಯಲಿ ಗುರಿಯತ್ತ ಪಯಣಿಸುವ ಹೆಜ್ಜೆ ಸಪ್ಪಳ ಆಲಿಸೊಮ್ಮೆ ಸಾಕು.

- ashfaq peerzade

03 Jul 2016, 09:01 pm

ಪ್ರತಿರೋಧನೆ

"ಪ್ರತಿರೋಧನೆ"

ಅವಳೆದೆಯ ಇಳಿಬಿದ್ದ
ಮಾಂಸದ ಮುದ್ದೆಗಳಂತೆ 
ಗತ ವೈಭವದ ಪ್ರೀತಿ

ಬೆರಳು ಬೆಚ್ಚಗಿನ
ಬಯಕೆಗಳು ತಣ್ಣಗಾಗಿ
ಚಿರ ನಿದ್ರೆಗೆ ಜಾರಿವೆ

ಕಾವು ಕಳೆದಕೊಂಡ ಕಾಯ 
ಪಡೆದ, ಕಳೆದುಕೊಂಡದ್ದರ 
ಕುರಿತು ಲೆಕ್ಕಾಚಾರ ನಡೆಸಿದೆ

ಸೋತ ಕಂಗಳ ಕಣ್ಣೀರು
ಮೈಮೇಲಿನ ಗೀರು,
ಗಾಯದ ಗುರ್ತುಗಳು
ಎದುರಿಟ್ಟುಕೊಂಡು
ಪಂಚನಾಮೆಗೆ ತೊಡಗಿದೆ

ಭಗ್ನಾವಶೇಷ ಹೃದಯ
ಗುಮ್ಮಟದಲ್ಲಿ ಈಗ
ಬರೀ ಪ್ರತಿಕಾರದ ಧ್ವನಿ
ಪ್ರತಿರೋಧಿಸುತಿದೆ.

- ashfaq peerzade

03 Jul 2016, 08:56 pm

ಬದುಕು

ಬದುಕು ಕನಸುಗಳ ಸಂತೆ
ನೋವು ನಲಿವುಗಳ ಕಂತೆ
ಕಷ್ಟಗಳು ಬಂದಾಗ ಚಿಂತೆ
ಸವಾಲುಗಳನ್ನು ಸ್ವೀಕರಿಸಿದ್ದಾಗ ಈ ಜೀವನ ಯಾ 'ಕಂತೆ '
ಗೆದ್ದು ನಲಿದಾಗ ಮತ್ತೇನು ಅಂತೆ

ಈ ಅಂತೆ ಕಂತೆಗಳ ಮಧ್ಯೆ ಕುಂತು ಮಾಡದಿರು ಚಿಂತೆ
ಯಾವಾಗಲೂ ಒಳ್ಳೆಯದಾಗುವುದು ಎಂದು ಯೋಚಿಸಿ ಮಾಡು ಚಿಂತನೆ .

- ಎ ಜಿ ಶರಣ್

03 Jul 2016, 02:50 pm

ಅಮ್ಮಾ. ..

ಅಮ್ಮಾ ಅಮ್ಮ ಎಂದೆಂದಿಗೂ ನೀ ನನ್ನ ಸ್ನೇಹದ ಸಮುದ್ರನೂ....
ನನ್ನ ಹೆತ್ತ ಅಮ್ಮ ನೀನು ನನ್ನ ಪ್ರಾಣನೂ....
ಪುಟ್ಟ ಇರುವಾಗ ನನ್ನ ಮುದ್ದಾಗಿ ಬೆಳೆಸಿದ ಅಮ್ಮಾ....
ನೋವುಗಳನ್ನು ಸಹಿಸಿದ ಪಾಪ ನನ್ನ ಅಮ್ಮಾ
ಅಮ್ಮ ಎಂದು ಒಮ್ಮೆ ಕರೆಯಲು ಯಾರಿಗಿಲ್ಲ ಆಸೆ,
ಈ ಜನ್ಮವು ನನಗುಂಟು ಅಮ್ಮನ ಸೇವೆ ಮಾಡಲೂ.........

- Habeebulla

03 Jul 2016, 07:21 am

ಜೀವನ

ಅತ್ತು ಬಂದನೇನು ಈ ಜಗದೊಳಗೆ
ನಕ್ಕು ನಲಿದಳು ಜನ್ಮ ಕೊಟ್ಟವಳು
ಹುಟ್ಟಿ ಬೆಳದೇನು ಒಡಹುಟ್ಟಿದವರೊಂದಿಗೆ
ಕುಣಿದು ಕುಪ್ಪಳಿಸಿದೆ ಬಂಧು ಮಿತ್ರರ ಜೊತೆ
ಕಲಿತು ಬೆರತೆ ಈ ಸಮಾಜದಲ್ಲಿ
ಮರತೇನು ಕೆಲವೊಂದು
ತೂಗಿದೆ ಜೀವನದ ಜೋಕಾಲಿ
ದಾಟಿದೆನು ಯವ್ವನ ಮುಪ್ಪು
ಅತ್ತು ಬಂದೇನು ,ಬಿಟ್ಟು ಹೋಗುವಾಗ
ಅಳುವರು ನನ್ನವರು
ಕೆಟ್ಟವನಾದರೆ ಕೊಚ್ಚೆಯೆಂದು ಕಡೆಗಣಿಸುವರು
ಒಳ್ಳೆಯವನಾದರೆ ನೆನೆಯುತ್ತಾ
ಅಚ್ಚಳಿಯದೆ ಉಳಿಸುವರು ನಿನ್ನ ಹೆಸರು
ಏನಾದರೂ ಆಗಲಿ ಬದುಕಿರುವಾಗಲೇ
ಸಾಧಿಸು ಒಳ್ಳೆಯ ತನವ.
ಎ ಜಿ ಶರಣ್

- ಎ ಜಿ ಶರಣ್

02 Jul 2016, 08:08 am

ಆಲದ ಮರ

ಧರೆಗೆ ನಿನ್ನ ಬಲಿಷ್ಠ ಬೇರುಗಳನು ನಾಟಿ
ಜೀವ ಜಂತುಗಳಿಗೆ ಆಶ್ರಿತನಾಗಿ
ರವಿ ಕಿರಣಕೆ ಬೆನ್ನೊಡ್ಡಿ
ತನ್ನ ವಿಶಾಲ ಬಾಹುಗಳನು ಚಾಚಿ
ನೀ ಬೆಳೆದು ನಿಂತಿರುವ ಪರಿ
ಅದು ವಿಸ್ಮಯವೇ ಸರಿ

- Khaleel Mangalore

02 Jul 2016, 09:28 am

ವೇದನೆ

ದುಖಃಕ್ಕೆ ಕಣ್ಣೀರೆ ಆಸನವೋ,
ಪ್ರೀತಿಗೇ ನೀನೆ ಶಾಸನವೋ,
ಹಳೆ ನೆನಪಲಿ ಬರೆದೆ ಈ ಕವನವ,
ಬಾಳಲಿ ಬಂದು ನೀಡು ನೀ ಅಮೃತವ.

- Abhilash

01 Jul 2016, 08:40 pm

ಪ್ರೀತಿಯ ಡೊಂಬರಾಟ

ಅವಳು ಮಾಡಿ ಹೊರಟಳು
ಪ್ರೀತಿಯಲಿ ಮಾಟ
ಜೊತೆ ಜೊತೆಯಲಿ ಮರೆಯಾಯಿತು
ಅವಳ ನೆನಪಿನ ಕಾಟ
ಸವಿಯುತಿರುವೆನೀಗ ಅವಳನು ಮರೆತು
ಸಂತೃಪ್ತಿಯಲಿ ಊಟ

- Khaleel Mangalore

01 Jul 2016, 07:29 pm

ಕೊಳಲು

ಕೊಳಲನೂದುವೆನು ಗೆಳತಿ ನಾನು
ಕೊಳಲನೂದುವೆನು||
ನಿನ್ನ ನೆನೆಯುತ
ಕೊಳಲ ನುಡಿಸುತ
ಜಗವ ಮರೆಯುವೆನು||

- Khaleel Mangalore

01 Jul 2016, 10:09 am

ಜೀವನ. ....

ಜೀವನ ಮರಣಕ್ಕಿಂತ ಭೀಕರವಾಗಿತ್ತಲ್ಲವೋ...
ಜೀವನ ಮರಣಕ್ಕಿಂತ ಭಯಂಕರವಾಗಿತ್ತಲ್ಲವೋ...
ಜೀವನ ಮರಣಕ್ಕಿಂತ ಮನುಷ್ಯನ ಕಷ್ಟಪಡಿಸುತ್ತಲ್ಲವೋ...

ಮರಣವು ನನ್ನನ್ನು ನಷ್ಟದಲ್ಲಿಟ್ಟಿದ್ರೆ ನನಗೆ ಅರಿವು ಇರುತ್ತಿತ್ತು
ಆದರೆ ನನ್ನನ್ನು ನಷ್ಟದಲ್ಲಿಟ್ಟದ್ದು ಮರಣವೂ ಅಲ್ಲ ಜೀವನಾಗಿತ್ತು
ಮರಣಕ್ಕಿಂತ ಭಯಾನಕವಾಗಿದೆ ನನ್ನನ್ನು ನಷ್ಟದಲ್ಲಿಟ್ಟ ಜೀವನ.

- Habeebulla

01 Jul 2016, 06:57 am