ಹರಿಯುತಿದೆ ಜಲಧಾರೆಯಂತೆ ಕವಿತೆಗಳ ಸಾಲು ಮೆಲ್ಲ ಮೆಲ್ಲನೆ
ನೀಡಿದೆ ಪುಲಕವನಿಂದು ಸದ್ದಿಲ್ಲದೆ,
ಸಂಗಮದ ತವಕದಲಿ ತನ್ನ ಮೈಮರೆತು,
ಸಾಗುತಿದೆ ಪಯಣದ ಹಾದಿಯಲಿ ತನಗರಿಯದೆ,
ಒಡಲನು ಸೇರುವ ಆತುರದಿ,
ಮಿಡಿಸುತಿದೆ ಕವಿತೆಗಳ ಸಿಂಚನ,
ಮೂಡಿಸುತಿದೆ ಹೊಸ ಹೊಸ ಭಾವನೆಗಳ ಕಲ್ಪನ.
ಯೋಧನ ಅಂತ್ಯಕ್ರಿಯೆಯಲ್ಲಿಯೂ ಜಾತಿ ಪದ್ಧತಿ ಯಾತಕ್ಕಾಗಿ
ಹುಟ್ಟು ನಮ್ಮದಲೢ
ಸಾವು ನಮ್ಮದಲೢ
ಭೂಮಿ ನಮ್ಮದಲೢ
ಈ ಪ್ರಕೃತಿ ನಮ್ಮದಲೢ
ಆದ್ರೆ ನಮ್ಮದು ಅಂತ ನಮ್ಮ ಜೊತೆ ಇರೋದು ಉಳಿಯೋದು
ಕೇವಲ ನಂಬಿಕೆ ಸ್ನೇಹ ಮಾತ್ರ.
ನಿನ್ನ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತ ಹಿಂದೆನೆ ಬರುತ್ತಿದ್ದೆ...
ಗಮನಿಸಿದರು ಕೂಡ ನೀ ಪರಿಚಯವಿಲ್ಲದ ಹಾಗೆ ಮುಂದೆನೆ ಸಾಗುತ್ತಿದ್ದೆ...
ಉಸಿರಾಡುವುದನ್ನ ಬಿಟ್ಟು ಕನ್ನ ಸನ್ನೆಯಲ್ಲಿ ನಾ ಪ್ರಶ್ನೆ ಕೇಳುತ್ತಿದ್ದೆ...
ಉತ್ತರ ಕೊಡದೆ ನೀ ಬರೀ ಅಹಂಕಾರವನ್ನು ಬೀರುತ್ತಿದ್ದೆ...
ಓ ಮನವೇ,
ನೀ ಮೌನಿ ಯಾಕಿಂದು?
ವ್ಯಥೆ ಕಾಡುತಿದೆಯೋ,
ನಿನಗೆ ನೋವಾಗಿದೆಯೋ?
ನನಗಂತೂ ಅರಿಯಲಾಗುತ್ತಿಲ್ಲವೇ..
ನಿನ್ನ ಭಾವಗಳೆಲ್ಲಾ ಮರೆಯಾಗಿಹುದೋ,
ಅಲ್ಲ ಮುನಿದುಕೊಂಡಿವೆಯೋ?
ನನಗೊಂದೂ ಅರ್ಥೈಸಲಾಗುತ್ತಿಲ್ಲವೇ..
ಅರೆ! ಕಂಬನಿಯೇಕೆ ಹನಿಯಲು
ಈ ಪರಿ ರೋಧಿಸುತಿಹುದು
ಯಾಕೆಂದು ತಿಳಿಯಲಾಗುತ್ತಿಲ್ಲವೇ..
ನನಗೋದಲಾಗದ ನಿನ್ನ
ಅಕ್ಷಿಗಳರಿತುಕೊಂಡವೇ
ಇದು ನ್ಯಾಯವೇ ಮನವೇ?
ಇದು ನ್ಯಾಯವೇ?
ಇದೇನು ಸುರಿಯುತಿರುವವಲ್ಲ
ಈ ಸಮನೆ 'ಸೋ' ಎಂದು
ಮೋಡಗಳು ಮುರಿದು-ಹರಿದು
ನಾ ಮಾತ್ರ ಪರನಾದೆನಾ ನಿನಗೆ
ನಾ ಮಾತ್ರ ಪರನಾದೆನಾ ನಿನಗೆ?
ಎನಗಿಲ್ಲವೇ ಹಕ್ಕು-ಹೊಣೆಗಾರಿಕೆ ನಿನ್ನದು
ಮುರಿಯೇ ಮೌನವ ಮನವೇ
ಹಂಚು ಭಾವಗಳ ಮನವೇ
ಮುರಿಯೇ ಮೌನವ ಓ ನನ್ನ ಮನವೇ ...