Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಯಾಕೇ ಚಿನ್ನ ನನ್ನ ಮುಂದೆ ಬಂದೆ
ನಾನು ತುಂಬ ಒಳ್ಳೆಯವನಾಗಿದ್ದೇ
ನಿನ್ನ ಮುದ್ದಾದ ನಗುವನು ಕಂಡು
ನಾ ಇಂದು ಪ್ರೀತೀಲಿ ಬಿದ್ದೆ
ನಿನಗಾಗಿಯೇ ಎಂದೂ ನಾನಿರಲು
ನನ್ನೊಳಗೆ ಎಂದೂ ನೀನಿರಲು
ಆ ಹೂವು ಕೂಡ ನಾಚುತಿಹುದು
ನಿನ್ನ ಮುಖದಲೋಂದು ನಗುವಿರಲು
- ಚಂದ್ರು ಕುಮಟಾ
27 Jun 2016, 11:16 pm
ಹಾರುವಾಗ ಹಕ್ಕಿಯಾದೆ
ಈಜುವಾಗ ಮಿನಾದೆ
ಕವಿಯ ಕೈಯಲ್ಲಿ ಕವಿತೆಯಾದೆ
ಪ್ರೀತಿಯ ಕೈಗೆ ಸಿಕ್ಕಿನಾನು ಪ್ರೇಮಿಯಾದೆ.
- sagar
27 Jun 2016, 09:22 am
ಜೀವನ ವೆಂಬ ಗಣಿತ ಶಾಸ್ತ್ರ ದಲ್ಲಿ
ಕೆಟ್ಟದನ್ನು ಕಳೆದು
ಒಳ್ಳಯದನ್ನು ಕುಡಿಸಿ
ಪ್ರೀತಿಯಿಂದ ಭಾಗಿಸಿ
ಸ್ನೇಹ ದಿಂದಾ ಗುಣಿಸಿದಾಗ ಬರುವ ಮೊತ್ತವೇ
ನಮ್ಮಬದುಕಿನ ಸಾಧನೆ.
- sagar
27 Jun 2016, 09:15 am
ಸುಂದರ ರಾತ್ರಿಯಲ್ಲಿ
ಸೊಗಸಾದ ನಿದ್ದೆ ಬಂದು
ನಿಮಱಲ ಮನಸ್ಸಿನಲ್ಲಿ
ನಾಳೆಯ ನಯನದಲಿ
ಸವಿಸುಂದರ ಕನಸು ಮೂಡಿ ಬರಲಿ
- Mareppa manegar
26 Jun 2016, 11:42 pm
ಉಸಿರ ಸೆಳೆತಕೆ ಸಿಕ್ಕ
ಪುಟ್ಟ ನೆನಪು ಮೆಲ್ಲ
ಮಾತನಾಡಿತು ಮೊನ್ನೆ..
ಪ್ರೇಮ ಪಲ್ಲವಿಸಿದ ಆ
ಮರುಗಳಿಗೆ ನಾ ನಿನ್ನ
ಎದೆಯ ಸೇರಿದೆನೆಂದು..
ಮಂಜುನಾಥ್ ಹಂದೆ
- Manjunath
26 Jun 2016, 10:32 pm
ಮಿಂಚು ಹೊಡೆಯಿತು ಮೋಡ ಸರಿಯಿತು ತಂಪಾದ ಗಾಳಿ ಬೀಸಿತು
ಮನವು ತಣಿಯಿತು ವನವು ನೆನೆಯಿತು
ಜೋರಾದ ಮಳೆಯು ಸುರಿಯಿತು
ಕೆರೆಯು ತುಂಬಿತು ಕಪ್ಪೆಯು ಜಿಗಿಯಿತು
ಸಮುದ್ರವು ಉಕ್ಕಿ ಹರಿಯಿತು
ಹೂವು ಅರಳಿತು ನೋವು ಕರಗಿತು
ಮಣ್ಣು ಪರಿಮಳ ಬೀರಿತು
- ಚಂದ್ರು ಕುಮಟಾ
26 Jun 2016, 08:29 pm
ಕ್ಷಣ ಕ್ಷಣ ನಿನ್ನ ನೆನಪು
ಮರೆತು ಬಿಟ್ಟಾ ಗೆಳತಿ ಆ ಸವಿ ಕನಸು
ನಿನ್ನ ಪ್ರೀತಿಯ ಮರೆತಿಲ್ಲ ನನ್ನ ಮನಸ್ಸುˌˌˌˌˌˌˌˌ
- ಪುನೀತ್ ಸಿ
26 Jun 2016, 07:53 pm
ಅಂದು ಎಲ್ಲಿ ನೋಡಿ ದರಲ್ಲಿ ಗುಡಿ ಗೋಪರಗಳು .
ಇಂದು ಎಲ್ಲಿ ನೋಡಿ ದರಲ್ಲಿ ಮೊಬೈಲ್ ಟವರ್ ಗಳು .
ಅಂದು ಎಲ್ಲಿ ಕೇಳಿದರಲ್ಲಿ ಗುಡಿ ಗೋಪುರದಲ್ಲಿ
ಘಂಟಾ ನಾದ
ಇಂದು ಎಲ್ಲಿ ಕೇಳಿದರಲ್ಲಿ ಮೊಬೈಲ್ ರಿಂಗ್ ನ ನಿನಾದ
- gireesha
25 Jun 2016, 03:43 pm
ಒಂಟಿತನಕೆ ಜಂಟಿಯಾಗಿ ನಿಂತಳು
ನನ್ನೀ ಬದುಕಿಗೆ ಜೊತೆಯಾಗಿ ಬಂದಳು
ನಡುಗುವ ಚಳಿಗೆ ಹೊದಿಕೆಯಾದಳು
ಸುಡುವ ಬಿಸಿಲಿಗೆ ನೆರಳಾದಳು
ಇವೆಲ್ಲವೂ ಬರೀ ಕನಸಾಗಿದ್ದರೆ ಕಣ್ ತೆರೆಯಲಾರೆ
ನನಸಾಗಿದ್ದರೆ ಕಣ್ ಮುಚ್ಚಲಾರೆ..!!!!
- ಸಾಗರ್ ಸಿದ್ದು
25 Jun 2016, 12:59 pm
ನನ್ನ ಕಣ್ಣಿನಲ್ಲೇ ಎಲ್ಲಾ ಕನಸುಗಳ
ಕೊನೆಯ ಅಂತ್ಯಕ್ರಿಯೆ
ನಡೆಯುತ್ತಿದ್ದರು ನೋಡುತ್ತ
ಸುಮ್ಮನೆ ಕುಳಿತಿರುವ
ಆ ದೇವರಿಗೆ ಕರುಣೆ ಇಲ್ಲವಾ....?
- ವಿನಯ ಸೋಗೋಡು(ಹೊಸನಗರ)
25 Jun 2016, 08:36 am