ನಾನೊಬ್ಬ ಪುಟ್ಟ ಕನಸುಗಾರ.
ಮನಸ್ಸು ಭಾವನೆಗಳ ಆಗರ
ಮಿಡಿಯುವ ಹೃದಯ ಪ್ರೀತಿಯ ಸಾಗರ...!!
ನನಗಿದೆ ಜೀವದ ಗೆಳೆಯರ ಸಹಕಾರ
ಜೊತೆಗೆ ಪಾಪ-ಪುಣ್ಯದ ಲೆಕ್ಕಚಾರ
ನನ್ನ ಕಾಯುವುದು ಹೆತ್ತವರ ಪರೋಪಕಾರ
ಇದು ದೇವರು ನನಗಿತ್ತ ವರ
ಓದಿದ ನಿಮಗೆಲ್ಲ ನನ್ನ ನಮಸ್ಕಾರ......
ಪ್ರತಿ ಮುಂಜಾನೆಯ
ಹೂ ನಗುವಿನ
ನನ್ನಯ ಕಿರು ನಗೆಯಲ್ಲಿ
ನಿನ್ನದೆ ನೆನಪು
ಪ್ರತಿ ಗೋಧೂಳಿಯ
ತಂಗಾಳಿಯ ಹಿತದಲ್ಲಿ
ನನ್ನಯ ಮುಗುಳು ನಗುವಲ್ಲಿ
ನಿನ್ನದೆ ನೆನಪು
ಪ್ರತಿ ರಾತ್ರಿ ಚಂದ್ರೋದಯದ
ನಕ್ಷತ್ರಗಳ ನಗುವಲಿ
ನನ್ನಯ ನಿರಾಸೆಯ. ನಗುವಲ್ಲಿ
ನಿನ್ನದೆ ನೆನಪು
ನಿನ್ನ ಕಣ್ಣಿನ ಒಂದು
ವಾರೆನೋಟವೇ....!!
ಸಾಕು ಗೆಳತಿ...!!
ನನ್ನ ಮನದ ಪ್ರೀತಿಯ
ಕಾರಂಜಿ ಚಿಮ್ಮಿ-ಹೊಮ್ಮಿ..!!
ಹೊರಬರಲು....!!
ನೀನು ಮುಂಗುರುಳ
ಸರಿಸಿ ನೋಡುವ...!!
ಆ...ಕಳ್ಳನೋಟ...!!
ನನ್ನ. ಕೆಣಕಿ-ಕೆಣಕಿ....!
ಕಾಡುತ್ತಿದೆ....!!
ಕನಸಿನೂರಲ್ಲೂ ಬಂದು
ನಿದ್ದೆ..ಕದ್ದಿರುವೆಯಲ್ಲೆ..!!
ಮುತ್ತಿನೂರಲ್ಲಿ ಮಿಂದು
ಮತ್ತೇರಿಸುವೆಯಲ್ಲೆ...!!
ನಿನ್ನ ಮರೆಯಲಾಗದೆ
ನಾ ಪರಿತಪಿಸುತ್ತಿರುವೆ...!!
ಬಂದುಬಿಡು ಗೆಳತಿ..!!
ನನ್ನ ಪ್ರೀತಿಯ ಪಲ್ಲಕ್ಕಿಗೆ..!!
ಮೆರೆಸಿ ಮೋಹಿಸುವೆ..!!
ಜೇನು ಕಡಲಲ್ಲಿ....!!!
ಹೇ ನಿನಗಾಗಿಯೇ,
ನನ್ನ ಜಪವು ನಿನಗಾಗಿಯೇ
ನನ್ನ ಧ್ಯಾನ ಮೌನವು ನಿನಗಾಗಿಯೇ
ನನ್ನ ಉಸಿರೇ ನೀನಾಗಿರುವೆ.
ಹೇ ನಿನಗಾಗಿಯೇ,
ನಿನ್ನ ಗುಂಗಿನಲ್ಲಿಯೇ ಕಳೆದಿರುವೆ ನಾ ದಿನವೆಲ್ಲವ
ಬಳಿಬಾರದೆ ಕೃಪೆತೋರದೆ ಏಕೆ ಹೀಗೆ ಕಾಡಿರುವೇ
ಹೇ ನನ್ನಾಣೆ ನೀ ನನಗಾಗಿಯೇ.
ಹೇ ನಿನಗಾಗಿಯೇ,
ನಾ ಕಾಯುತ್ತಾ ಆಗಿರುವೆ ನಿರುದ್ಯೋಗಿ, ನಿನ್ನ ನೆನಪಲ್ಲಿಯೇ ಮರೆತಿರುವೆ ನಾ ನನ್ನ ಜವಾಬ್ದಾರಿ
ಬಿಟ್ಟು ಹೋಗಿರುವವರು ನನ್ನೆಲ್ಲ ಒಡನಾಡಿಗಳು
ನಿನ್ನ ಹಂಬಲವೇ ಆಗಿಹುದು ನನ್ನ ದಿನಚರಿ
ತುಳಿಯುವೆನು ನಾ ನನ್ನ ಹುಟ್ಟೂರಿನ
ಹಾದಿ ನಿನ್ನ ಜೊತೆಗೂಡಿ .
ಹೇ ನಿನಗಾಗಿಯೇ ,
ನಾ ಕೈಚೆಲ್ಲಿಹೆ ಬಯಸದೆ ಬಂದ ಅವಕಾಶಗಳ
ಪ್ರೀತಿಸಿರುವೆ ನಾ ನಿನ್ನ ಪ್ರೇಮಯಾಗಿ
ಕಠಿಣವಾಗಿಹುದು ನನ್ನ ಮುಂದಿನ ಹಾದಿ
ಕಾಯುತ್ತಾಇರುವೆ ನಾ ನಿನಗಾಗಿ
ನೀನೆಂದು ನನಗಾಗಿಯೇ, ಇದು ನಿಜವೇ.
ಹೇ ನೀ ನನಗಾಗಿಯೇ,
ನನ್ನ ಬಾಳಿನಬಂಡಿ ಸುಂದರವಾಗಿ ಸಾಗಲು
ಇನ್ನಾದರೂ ಮುನಿಸು ಬಿಟ್ಟು ಬಾ ನನ್ನ ಕೈ ಹಿಡಿದು
ನನ್ನ ಆಲಂಗಿಸು ಓ ನನ್ನ ನೆಚ್ಚಿನ
ಸರ್ಕಾರಿ ಕೆಲಸವೇ, ನಾನೆ ನಿನ್ನೊಲವಿನ ಆಕಾಂಕ್ಷಿ .