ಒಬ್ಬಂಟಿಯಾಗಿ ಕುಳಿತಿರುವೆ ನಾನು,
ಕಟ್ಟಲು ಯತ್ನಿಸುತಾ ಕಣ್ಣೀರಿಗೆ ಅಣೆಕಟ್ಟನು, ಎಷ್ಟು ತಡೆದರೂ ನಿಲ್ಲದು ಕಣ್ಣೀರ ಧಾರೆ,
ಅದಕೆ ಕಾರಣ ನಿನ್ನ ಅಗಲಿಕೆಯೆ ನೀರೆ,
ನೀ ಬಂದು ಸೇರಲಾರೆಯಾ ನನ್ನ,
ಕಣ್ಣೀರೆಲ್ಲಾ ಬತ್ತಿ ಬರಡಾಗುವಾ ಮುನ್ನ,
ಕಳಿಸಿರುವೆ ಕಣ್ಣೀರ ಹೊಳೆಯಾ ನಿನ್ನ ತವರ ಅಂಗಳಕೆ, ಅದ ನೋಡಿ ಓಡೋಡಿ ಬಾ,
ಓ ನನ್ನ ಬಾಳ ಬೆಳಕೆ...
ಎಲ್ಲಾ ಕ್ಷಣನು ನಿನ್ನ ಜೂತೆ ಇರೂಕೆ ಆಗೋಲ್ಲ
ಆದ್ರೆ ಪ್ರತಿ ಕ್ಷಣ ನಿನ್ನ ನೆನಪು ಇಲ್ದೆ
ಬದುಕೊಕೆ ಆಗೋಲ್ಲ......
ನಿನು ಒಬ್ಬಳೇ ನಡಕೊಂಡು ಹೂಗುವಾಗ
ನಿನ ಜೂತೆ ನಾನಿಲ್ಲ ಅನಕೊಬೆಡ
ಸುಮ್ಮನೆ ತಿರುಗಿ ನೊಡು
ನಿನ್ನ ನೆರಳು ನಾನಾಗಿರತಿನಿ.....
ಮನ, ಓ ನನ್ನ ಪ್ರೀತಿಯ ಮನ,
ನೆನಪಿದೆಯಾ ನಿನಗೆ ಆ ದಿನ,
ಪ್ರಿಯತಮೆಯಾ ಕುರಿತು ಬರೆದಾಗ ನಾ ಕವನ,
ನೀ ಮಾಡಿದ್ದೆಯಲ್ಲಾ ನನ್ನ ಮೇಲೆ ಕದನ,
ಅದಕ್ಕಾಗಿ ಹೇಳಿದ್ದೆ ಅಂದು ನಿನಗೆ ನಾ,
ಬರೆಯುವೆನೆಂದು ನಿನ್ನ ಮೇಲೂ ಕವನ,
ಇಂದು ಬಂದಿದೆ ನೋಡು ಆ ಸುಮಧುರ ದಿನ,
ನಿನಗಾಗಿ ಬರೆದೆ ನನ್ನ ಕವನ,
ಇನ್ನಾದರೂ ನಂಬುವೆಯಾ ನೀ ನನ್ನ,
ನೀನಿಲ್ಲದಾ ಜೀವನ, ಮಣ್ಣಿಲ್ಲದಾ ಮಸಣ..